Home
ಸುದ್ದಿಜಾಲ

IPL: ಐಪಿಎಲ್ ಟಿಕೆಟ್ ಖರೀದಿಸುವಾಗ ಎಚ್ಚರ! 86,000 ರೂ. ಕಳೆದುಕೊಂಡ ಬೆಂಗಳೂರು ಮಹಿಳೆ

ಆನ್‌ಲೈನ್‌ ವಂಚನೆಯನ್ನು (Online fraud) ಯಾವ ರೀತಿಯಲ್ಲಿ ಮಾಡುತ್ತಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಈ ಮೂಲಕ ಸಾಕಷ್ಟು ಜನರಿಗೆ ವಂಚನೆ ಮಾಡಿ ಅವರಿಂದ ಸಾಕಷ್ಟು ಹಣವನ್ನು ವಸೂಲಿ ಮಾಡಲಾಗುತ್ತಿದೆ. ಅಂತಹುದೇ ಘಟನೆ ಈಗ ಬೆಂಗಳೂರಿಂದ ವರದಿಯಾಗಿದೆ. ಈ ಘಟನೆಯಲ್ಲಿ ಮಹಿಳೆ 86,000ರೂ. ಕಳೆದುಕೊಂಡಿದ್ದಾರೆ.

ಹೌದು, ಬೆಂಗಳೂರಿನ ಮಹಿಳೆಯೊಬ್ಬರು ಐಪಿಎಲ್‌‌ ಮ್ಯಾಚ್‌ನ ಟಿಕೆಟ್‌ (IPL Match Ticket) ಖರೀದಿ ಮಾಡಲು ಮುಂದಾಗಿ ಈಗ ಇಷ್ಟು ಮೊತ್ತದ ಹಣವನ್ನು ಕ್ಷಣ ಮಾತ್ರದಲ್ಲಿ ಕಳೆದುಕೊಂಡಿದ್ದಾರೆ. ಹಾಗಿದ್ರೆ, ಈ ಘಟನೆ ನಡೆದಿದ್ದು, ಹೇಗೆ ನೀವು ಈ ರೀತಿಯ ಘಟನೆಗಳಿಂದ ಎಚ್ಚರಿಕೆ ವಹಿಸುವುದು ಹೇಗೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಐಪಿಎಲ್ ಟಿಕೆಟ್ ಖರೀದಿಸುವಾಗ ಎಚ್ಚರ! 86,000 ರೂ.ಕಳೆದುಕೊಂಡ ಬೆಂಗಳೂರು ಮಹಿಳೆ

ಮಹಿಳೆಗೆ ಮೋಸ: ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಕ್ಕಾಗಿ ಟಿಕೆಟ್ ಖರೀದಿಸಲು ಬೆಂಗಳೂರು ಮೂಲದ ಮಹಿಳೆ ಮುಂದಾಗಿದ್ದಾರೆ. ಈ ವೇಳೆ ಮಹಿಳೆ ಆನ್‌ಲೈನ್‌ನಲ್ಲಿ ಟಿಕೆಟ್‌ಗಾಗಿ ಹುಡುಕುತ್ತಿದ್ದಾಗ ಐಪಿಎಲ್ ಕ್ರಿಕೆಟ್ ಟಿಕೆಟ್ (IPL Cricket Tickets) ಎಂಬ ಫೇಸ್‌ಬುಕ್‌ ಖಾತೆಯನ್ನು ನೋಡಿದ್ದಾರಂತೆ. ಆದರೆ, ಅದನ್ನೇ ಅಧಿಕೃತ ಎಂದು ನಂಬಿಕೊಂಡು ಭಾರೀ ಹಣ ಕಳೆದುಕೊಂಡಿದ್ದಾರೆ.

43 ವರ್ಷದ ಈ ಮಹಿಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯವನ್ನು (Royal Challengers Bangalore-Kolkata Knight Riders) ವೀಕ್ಷಿಸಲು ಬಯಸಿದ್ದರು. ಹೇಗಾದರೂ ಮಾಡಿ ಮ್ಯಾಚ್‌ ಅನ್ನು ಲೈವ್‌ ಆಗಿ ನೋಡಲೇ ಬೇಕು ಎಂಬ ಆಸೆಯಿಂದ ಎಲ್ಲಾ ಕಡೆ ಟಿಕೆಟ್‌ಗಾಗಿ ಸರ್ಚ್‌ ಮಾಡಿದ್ದಾರೆ. ಅದರಂತೆ ಇವರಿಗೆ ಐಪಿಎಲ್ ಕ್ರಿಕೆಟ್ ಟಿಕೆಟ್ ಹೆಸರಿನ ಫೇಸ್‌ಬುಕ್ ಖಾತೆ ಕಾಣಿಸಿಕೊಂಡಿದೆ. ಅಲ್ಲಿ ಟಿಕೆಟ್‌ ಅನ್ನು ಸೇಲ್‌ ಮಾಡಲಾಗುತ್ತದೆ ಎಂದು ತಿಳಿಸಿದ್ದ ಪರಿಣಾಮ ಅದನ್ನು ನಂಬಿಕೊಂಡು ಖಾತೆಯಲ್ಲಿ ಉಲ್ಲೇಖ ಮಾಡಲಾಗಿದ್ದ ನಂಬರ್‌ಗೆ ಕರೆ ಮಾಡಿದ್ದಾಳೆ.

ಐಪಿಎಲ್ ಟಿಕೆಟ್ ಖರೀದಿಸುವಾಗ ಎಚ್ಚರ! 86,000 ರೂ.ಕಳೆದುಕೊಂಡ ಬೆಂಗಳೂರು ಮಹಿಳೆ

ಕರೆ ಮಾಡಿದ ವೇಳೆ ಇವರು ನಮಗೆ 20 ಟಿಕೆಟ್‌ಗಳು ಬೇಕು ಎಂದು ಹೇಳಿದ್ದಾರೆ. ಇದಕ್ಕೆ ಮುಂಗಡವಾಗಿ ಪಾವತಿಸಿದರೆ ಸೀಟ್‌ಗಳನ್ನು ಕಾಯ್ದಿರಿಸಬಹುದೆಂದು ಸ್ಕ್ಯಾಮರ್‌ ತಿಳಿಸಿದ್ದಾನೆ. ಇದನ್ನೇ ನಂಬಿದ ಮಹಿಳೆ ಮುಂಗಡವಾಗಿ 8,000 ರೂ. ಗಳನ್ನು ಪಾವತಿ ಮಾಡಿದ್ದಾರೆ. ಇದಾದ ಬಳಿಕ ಇಷ್ಟು ಹಣ ಆಗುವುದಿಲ್ಲ ಇನ್ನೂ ಹೆಚ್ಚಿನ ಹಣ ಪಾವತಿ ಮಾಡಬೇಕು ಎಂದು ಮತ್ತೇ 11,000 ರೂ.ಗಳನ್ನು ಪಡೆದಿದ್ದಾನೆ.

ಇದೆಲ್ಲಾ ಆದ ಮೇಲೆ 8,170ರೂ. ಗಳನ್ನು ಪಾವತಿ ಮಾಡಿದ್ದಾರೆ. ಈ ಪಾವತಿ ಪ್ರಕ್ರಿಯೆ ಹೀಗೆ ಮುಂದುವರೆದಿದೆ. ಅದರಂತೆ ಒಮ್ಮೆ 14,999ರೂ.ಗಳು ಮತ್ತು ಮತ್ತೊಮ್ಮೆ 21,000 ರೂ.ಗಳನ್ನು ಪಾವತಿ ಮಾಡಿದ್ದಾರೆ. ಹೀಗೆ ಈ ಪಾವತಿ ಮಾಡಿ ಎನ್ನುತ್ತಿದ್ದ ಅನಾಮಿಕನ ಮೇಲೆ ಕೊನೆಗೂ ಡೌಟ್‌ ಬಂದಿದೆ. ನಂತರ ಟಿಕೆಟ್ ಕೊಡಿ ಇಲ್ಲ ಹಣವನ್ನು ಮರುಪಾವತಿ ಮಾಡಿ ಎಂದಾಗ ಆತ ತಾಂತ್ರಿಕ ಸಮಸ್ಯೆಯಿದ್ದು, ಹೆಚ್ಚಿನ ಹಣ ಕಳುಹಿಸಿದ್ರೆ ಮರುಪಾವತಿ ಮಾಡುವುದಾಗಿ ತಿಳಿಸಿದ್ದಾನೆ.

ಐಪಿಎಲ್ ಟಿಕೆಟ್ ಖರೀದಿಸುವಾಗ ಎಚ್ಚರ! 86,000 ರೂ.ಕಳೆದುಕೊಂಡ ಬೆಂಗಳೂರು ಮಹಿಳೆ

ಈ ವೇಳೆ ಮಹಿಳೆಯನ್ನು 16,000 ರೂ. ಹಣ ಪಾವತಿ ಮಾಡಬೇಕು ಎಂದು ಕೇಳಿದ್ದಾನೆ. ಈತನ ಈ ರೀತಿಯ ವರ್ತನೆ ಅತಿರೇಕವಾದ ಹಿನ್ನೆಲೆ ಮೋಸ ಹೋಗಿದ್ದೇನೆ ಎಂದು ಕಂಡುಕೊಂಡಿದ್ದಾರೆ. ಮರುದಿನ ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಈ ರೀತಿಯ ವಂಚನೆಗಳು ನಿತ್ಯವೂ ನಡೆಯುತ್ತಿದ್ದು, ಜನರು ಎಚ್ಚೆತ್ತುಕೊಳ್ಳಬೇಕಿದೆ.

- ನೀವು ಯಾವುದೇ ಮಾಹಿತಿ ಅಥವಾ ಸಹಾಯ ಪಡೆಯಲು ಅಧಿಕೃತ ಸೈಟ್‌ಗೆ ಮಾತ್ರ ಭೇಟಿ ನೀಡಿ. ಅದರಲ್ಲೂ ಹಣದ ವಿಚಾರವಾಗಿ ಯಾರೇ ನಿಮ್ಮ ಜೊತೆಗೆ ಆನ್‌ಲೈನ್‌ ಮೂಲಕ ವ್ಯವಹಾರ ಮಾಡಿದ್ರೆ ಅದನ್ನು ನಂಬಬೇಡಿ. ಈ ಮೂಲಕ ನೀವು ಕಷ್ಟ ಪಟ್ಟು ಕೂಡಿಟ್ಟ ಹಣವನ್ನು ಬೇರೆಯವರ ಪಾಲಾಗದಂತೆ ಕಾಪಾಡಿಕೊಳ್ಳಬಹುದು.

- ಅದರಲ್ಲೂ ಐಪಿಎಲ್‌ ವಿಚಾರವನ್ನು ಮುಂದೆ ಇಟ್ಟುಕೊಂಡು ಜನರಿಗೆ ಮೋಸ ಮಾಡುವ ಪ್ರಕರಣ ಈಗಂತೂ ಜಾಸ್ತಿಯಾಗಿಯೇ ಇದೆ. ಈ ಕಾರಣಕ್ಕೆ ನೀವು ಸಾಮಾಜಿಕ ಜಾಲತಾಣದಲ್ಲಿ ಸಿಗುವ ಅಥವಾ ಮೆಸೆಜ್‌ ಮೂಲಕ ಬರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ.

- ಆನ್‌ಲೈನ್‌ನಲ್ಲಿ ಸಿಗುವ ಫೋನ್‌ ನಂಬರ್‌ಗಳಿಗೆ ಎಂದಿಗೂ ಕರೆ ಮಾಡಬೇಡಿ. ಬದಲಾಗಿ ನಿಖರ ಸೈಟ್‌ಗೆ ಹೋಗಿ ಅಲ್ಲಿ ಉಲ್ಲೇಖ ಮಾಡಲಾಗಿರುವ ಫೋನ್‌ ನಂಬರ್‌ ಅಥವಾ ಜಿಮೇಲ್‌ ಮೂಲಕ ಸಂಬಂಧಿಸಿದವರನ್ನು ಸಂಪರ್ಕ ಮಾಡಿ ಸೇವೆ ಪಡೆದುಕೊಳ್ಳಿ.

Best Mobiles in India

English summary
woman from Bengaluru has lost Rs. 86,000 while going to buy IPL tickets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+