Home
ಸುದ್ದಿಜಾಲ

Pink WhatsApp: ಏನಿದು ಪಿಂಕ್‌ ವಾಟ್ಸಾಪ್‌?; ನಿಮ್ಮ ಮೊಬೈಲ್‌ಗೂ ಈ ಮೆಸೆಜ್ ಬಂದಿದೆಯಾ?

ನಿಮ್ಮ ಸ್ಮಾರ್ಟ್‌ಫೋನ್‌ಗೆ ಯಾರಾದರೂ ಪಿಂಕ್‌ ವಾಟ್ಸಾಪ್‌ಬಗ್ಗೆ ಮೆಸೆಜ್ ಕಳುಹಿಸಿದ್ದಾರಾ?, ಪಿಂಕ್‌ ವಾಟ್ಸಾಪ್‌ ಎಂಬ ಲಿಂಕ್‌ ಮೇಲೆ ನೀವೇನಾದರೂ ಕ್ಲಿಕ್‌ ಮಾಡಿದ್ದೀರಾ? ಇದನ್ನು ಮಾಡಿದ್ದೇ ಆದರೆ ನೀವು ಸ್ಕ್ಯಾಮರ್‌ಗಳ ಬಲೆಗೆ ಬಿದ್ದಿದ್ದೀರಿ ಎಂದರ್ಥ. ಈ ಬಗ್ಗೆ ಲೇಟೆಸ್ಲಿ ವರದಿ ಮಾಡಿದ್ದು, ಚಿಟಿಕೆ ಹೊಡೆಯುವುದರ ಒಳಗಾಗಿ ನಿಮ್ಮ ಖಾತೆ ಖಾಲಿಯಾಗುತ್ತದೆ ಎಂದು ಎಚ್ಚರಿಸಿದೆ.

ಹೌದು, ಇತ್ತೀಚಿಗೆ ವಾಟ್ಸಾಪ್‌ನಲ್ಲಿ ಈ ಪಿಂಕ್‌ ವಾಟ್ಸಾಪ್‌(Pink WhatsApp) ಎಂಬ ಮೆಸೆಜ್‌ ಭಾರೀ ಸದ್ದು ಮಾಡುತ್ತಿದೆ. ಕೆಲವು ಬಳಕೆದಾರರಿಗೆ ಇದು ಏನೆಂದು ಗೊತ್ತಿದ್ದು, ಉಳಿದ ಹಲವಾರು ವಾಟ್ಸಾಪ್‌ ಬಳಕೆದಾರರು ಇದರ ಬಗ್ಗೆ ಅರಿವಿಲ್ಲದೆ ಸ್ಕ್ಯಾಮರ್‌ಗಳು ಕಳುಹಿಸಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದ್ದಾರೆ. ಹಾಗಿದ್ರೆ, ಏನಿದು ಪಿಂಕ್‌ ವಾಟ್ಸಾಪ್‌?, ಇದರಿಂದ ಬಳಕೆದಾರರಿಗೆ ಆಗುವ ಸಮಸ್ಯೆ ಏನು ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳಿ.

ಏನಿದು ಪಿಂಕ್‌ ವಾಟ್ಸಾಪ್‌?; ನಿಮ್ಮ ಮೊಬೈಲ್‌ಗೂ ಈ ಮೆಸೆಜ್ ಬಂದಿದೆಯಾ?

ಪಿಂಕ್ ವಾಟ್ಸಾಪ್ ಹಗರಣ: ವಾಟ್ಸಾಪ್‌ನ ಪಿಂಕ್ ಆವೃತ್ತಿಯು ಇದೀಗ ಭಾರೀ ಚರ್ಚೆಯಲ್ಲಿದ್ದು, ಮುಂಬೈ ಪೊಲೀಸರು ಕೇಂದ್ರ ಸರ್ಕಾರದ ಸಲಹೆಯ ಆಧಾರದ ಮೇಲೆ ವಾಟ್ಸಾಪ್ ಪಿಂಕ್ ಹೆಸರಿನ ಹೊಸ ಹಗರಣದ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಅದರಂತೆ ಹೊಸ ಫೀಚರ್ಸ್‌ ನೀಡುವ ನೆಪದಲ್ಲಿ ಸ್ಕ್ಯಾಮರ್‌ಗಳು ಬಳಕೆದಾರರ ಸ್ಮಾರ್ಟ್‌ ಗ್ಯಾಜೆಟ್‌ಗಳಿಗೆ ಎಂಟ್ರಿ ಆಗುತ್ತಿದ್ದಾರೆ. ಸೈಬರ್ ಉಸ್ತುವಾರಿ ವಿನೀತ್ ಮಲಿಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಪಿಂಕ್ ವಾಟ್ಸಾಪ್ ಮೂಲಕ ಸೈಬರ್ ಅಪರಾಧಿಗಳು ಮಾಲ್‌ವೇರ್ ಕಳುಹಿಸುತ್ತಿದ್ದಾರೆ, ಇದನ್ನು ಕ್ಲಿಕ್ಕಿಸಿದ ಮೇಲೆ ಮೊಬೈಲ್ ಹ್ಯಾಕ್ ಆಗುತ್ತಿದೆ ಎಂದು ತಿಳಿಸಿದ್ದಾರೆ.

ಸ್ಕ್ಯಾಮರ್‌ಗಳು ಯಾವಾಗಲೂ ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ವಿಭಿನ್ನ ರೀತಿಯಲ್ಲಿ ಹ್ಯಾಕ್‌ ಮಾಡಲು ಮುಂದಾಗುತ್ತಲೇ ಇರುತ್ತಾರೆ. ಅದರ ಭಾಗವಾಗಿಯೇ ಈ ಪಿಂಕ್‌ ವಾಟ್ಸಾಪ್‌ ಸದ್ದು ಮಾಡುತ್ತಿದ್ದು, ಈ ರೀತಿಯ ವಂಚನೆಯ ಬಗ್ಗೆ ಜಾಗೃತರಾಗಿರಿ, ಜೊತೆಗೆ ಡಿಜಿಟಲ್ ಜಗತ್ತಿನಲ್ಲಿ ಸುರಕ್ಷಿತವಾಗಿರಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಆದರೂ ಸಹ ಕೆಲವರು ಈ ಪಿಂಕ್‌ ಮೋಡಿಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಇದು ಹೇಗೆ ಕೆಲಸ ಮಾಡುತ್ತದೆ?: ಈ ಹಗರಣದಲ್ಲಿ ವಾಟ್ಸಾಪ್‌ ಮೂಲಕ ಬಳಕೆದಾರರಿಗೆ ಲಿಂಕ್ ಅನ್ನು ಕಳುಹಿಸಲಾಗುತ್ತದೆ. ಈ ಲಿಂಕ್‌ನಿಂದ ಬಳಕೆದಾರರು ವಾಟ್ಸಾಪ್‌ ಪಿಂಕ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಲು ಕೇಳಿಕೊಳ್ಳಲಾಗುತ್ತದೆ. ಜೊತೆಗೆ ಈ ವಾಟ್ಸಾಪ್‌ನ ಪಿಂಕ್‌ ಆವೃತ್ತಿಯಲ್ಲಿ ಅನೇಕ ಹೊಸ ಮತ್ತು ಉತ್ತಮ ಫೀಚರ್ಸ್‌ಗಳನ್ನು ನೀಡಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಯಾರೇ ಆದರೂ ಈ ಲಿಂಕ್‌ ಅನ್ನು ಕ್ಲಿಕ್‌ ಮಾಡಿದ ನಂತರ ಬಳಕೆದಾರರ ಫೋನ್‌ನಿಂದ ಎಲ್ಲಾ ರೀತಿಯ ವೈಯಕ್ತಿಕ ಡೇಟಾವನ್ನು ಹ್ಯಾಕ್‌ ಮಾಡಲಾಗುತ್ತದೆ.

ಇನ್ನು ಉತ್ತರ ಪ್ರದೇಶ ಸೈಬರ್ ಪೊಲೀಸ್ ಕ್ರೈಮ್ ವಿಂಗ್ ಈ ಸಂಬಂಧ ಟ್ವೀಟ್‌ ಮಾಡಿದ್ದು, ವಾಟ್ಸಾಪ್‌ ಪಿಂಕ್‌ ಅನ್ನು ಇನ್‌ಸ್ಟಾಲ್‌ ಮಾಡಿದ ನಂತರ ಅದು ನಿಮ್ಮ ಫೋನ್ ಅನ್ನು ಜಾಹೀರಾತುಗಳ ವಿಭಾಗಕ್ಕೆ ಕರೆದೊಯ್ಯುತ್ತದೆ. ಈ ಅಪ್ಲಿಕೇಶನ್ ಅನ್ನು ಸ್ಥಾಪಿಸುವ ಬಳಕೆದಾರರು ತಮ್ಮ ಮೊಬೈಲ್‌ನ ಕಂಟ್ರೋಲ್‌ ಅನ್ನು ಕಳೆದುಕೊಳ್ಳಬಹುದು ಅಥವಾ ಮೊಬೈಲ್ ಹ್ಯಾಕ್ ಆಗಬಹುದು. ಇದರಲ್ಲಿ ಸ್ಕ್ಯಾಮರ್‌ಗಳು ಕ್ಯಾಮರಾ, ಸ್ಟೋರೇಜ್‌, ಸಂಪರ್ಕಗಳಿಗೆ ಪ್ರವೇಶವನ್ನು ಪಡೆದುಕೊಳ್ಳುತ್ತಾರೆ. ಈ ವಿವರವನ್ನು ಅವರು ದುರುಪಯೋಗಪಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಏನಿದು ಪಿಂಕ್‌ ವಾಟ್ಸಾಪ್‌?; ನಿಮ್ಮ ಮೊಬೈಲ್‌ಗೂ ಈ ಮೆಸೆಜ್ ಬಂದಿದೆಯಾ?

ವಾಟ್ಸಾಪ್‌ಬಳಕೆದಾರರು ಮಾಡಬೇಕಿರುವುದೇನು?: ನಕಲಿ ಮತ್ತು ಮಾಲ್‌ವೇರ್ ಆಪ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್ ಆಗುವುದನ್ನು ತಪ್ಪಿಸಲು ವಾಟ್ಸಾಪ್‌ನಲ್ಲಿ ಕಂಡುಬರುವ ಯಾವುದೇ ಅಪರಿಚಿತ ಲಿಂಕ್ ಅನ್ನು ಓಪನ್ ಮಾಡಬಾರದು. ಅದೆಲ್ಲಕ್ಕೂ ಮಿಗಿಲಾಗಿ ಯಾವುದೇ ಲಿಂಕ್ ಅನ್ನು ಓಪನ್‌ ಮಾಡುವ ಮುನ್ನ ಎರಡು ಬಾರಿ ಪರಿಶೀಲಿಸಿ. ಜೊತೆಗೆ ನಿಮ್ಮ ಸುರಕ್ಷತೆಗಾಗಿ ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆಪ್‌ ಸ್ಟೋರ್‌ನಲ್ಲಿ ಹೊಸ ಆಪ್‌ಗಳು ಅಥವಾ ಅಪ್‌ಡೇಟ್‌ ಆಯ್ಕೆ ಇರುತ್ತದೆ. ಹೀಗಾಗಿ ಇದನ್ನೇ ಬಳಕೆ ಮಾಡಿ.

ಇದಲ್ಲಕ್ಕೂ ಮಿಗಿಲಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯಾವುದಾದರೂ ಸುರಕ್ಷತಾ ಆಪ್‌ ಅನ್ನು ಬಳಕೆ ಮಾಡಿ. ಇದರಿಂದಾಗಿ ನಿಮ್ಮ ಫೋನ್‌ನ ಯಾವುದೇ ಅನಿರೀಕ್ಷಿತ ಚಟುವಟಿಕೆ ಕಂಡುಬಂದರೆ ಅದು ಪತ್ತೆ ಮಾಡಿ ನಿಮಗೆ ಮಾಹಿತಿ ನೀಡುತ್ತದೆ. ಇದರೊಂದಿಗೆ ವಾಟ್ಸಾಪ್‌ನ ಇತ್ತೀಚಿನ ಹೊಸ ಆವೃತ್ತಿಯನ್ನು ಬಳಕೆ ಮಾಡಲು ಪ್ಲೇ ಸ್ಟೋರ್‌ಗೆ ಹೋಗಿ ಅಪ್‌ಡೇಟ್‌ ಮಾಡಿ. ಇದರಿಂದ ನಿಮಗೆ ಹೊಸ ಪ್ರಯೋಜನಗಳು ಸಿಗಲಿವೆ.

Best Mobiles in India

English summary
Scammers are now sending a link called Pink WhatsApp on WhatsApp, through which they are hacking smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+