ನೀವು ಫೇಸ್‌ಬುಕ್ ಬಳಕೆ ಮಾಡುತ್ತೀರಾ: ಹಾಗಿದ್ರೆ ಎಚ್ಚರ ಹಣ ಕಳೆದುಕೊಳ್ಳಬೇಕಾದೀತು!
ಪ್ರಮುಖ ಸಾಮಾಜಿಕ ಮಾಧ್ಯಮ ಆಗಿರುವ ಮೆಟಾ ಒಡೆತನದ ಫೇಸ್‌ಬುಕ್ ಅನ್ನು ಬಹುಪಾಲು ಮಂದಿ ಬಳಕೆ ಮಾಡುತ್ತಾರೆ. ಈ ಪ್ಲಾಟ್‌ಫಾರ್ಮ್ ಮೂಲಕ ಜನರು ಮಾಹಿತಿ ಹಾಗೂ ಮನರಂಜನೆ ಸೇವೆ ಪಡೆದುಕೊಳ್ಳುತ್ತಿದ್ದು, ಈ ನಡುವೆ ಪೇಸ್‌ಬುಕ್ ಬಳಕೆದಾರರು ಆತಂಕಕ್ಕೆ ಒಳಗಾಗುವಂತೆ ಮಾಡುವ ಮಾಹಿತಿಯೊಂದು ಹೊರಬಿದ್ದಿದೆ.
ಹೌದು, ಫೇಸ್‌ಬುಕ್ ಬಳಕೆದಾರರು ಎಷ್ಟೇ ಹುಷಾರಾಗಿದ್ದರೂ ಸಹ ಮೋಸದ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಲೇ ಇವೆ. ಅದರಂತೆ ಇದೀಗ ವಂಚಕರು ನಿಮ್ಮ ಹಣ ಕದಿಯಲು ನಕಲಿ ಪರಿಶೀಲಿಸಿದ ಪ್ರೊಫೈಲ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ನೀವು ಫೇಸ್‌ಬುಕ್ ಬಳಕೆ ಮಾಡುತ್ತೀರಿ ಎಂದಾದರೆ ಕಡ್ಡಾಯವಾಗಿ ಈ ವಿಷಯಗಳ ಕಡೆ ಗಮನಹರಿಸಲೇ ಬೇಕು. ಇಲ್ಲವಾದರೆ ನೀವು ಸಹ ಹಣ ಕಳೆದುಕೊಳ್ಳುವುದು ಪಕ್ಕಾ. ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

ಫೇಸ್‌ಬುಕ್‌ನಲ್ಲಿ ಹೇಗೆ ಮೋಸ ಮಾಡಲಾಗುತ್ತಿದೆ?: ಸಾಮಾನ್ಯವಾಗಿ ಸಾಮಾಜಿಕ ಖಾತೆಗಳು ಅಧಿಕೃತ ಎಂದು ತಿಳಿಯಲು ಆ ಖಾತೆ ಹೆಸರಿನ ಮುಂದೆ ವಿಶಿಷ್ಟ ಗುರುತುಗಳು ಇರುತ್ತವೆ. ಇವುಗಳನ್ನೇ ಬಂಡವಾಳ ಮಾಡಿಕೊಂಡ ವಂಚಕರು ನಕಲಿ ಪರಿಶೀಲಿಸಿದ ಪ್ರೊಫೈಲ್ ಬಳಕೆ ಮಾಡಿಕೊಂಡು ಬಳಕೆದಾರರಿಗೆ ಸಂದೇಶ ಕಳುಹಿಸುವ ಮೂಲಕ ಹಣ ವಂಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರೊಫೈಲ್ ಮೂಲಕ ಸಂಶಯಾಸ್ಪದ ಲಿಂಕ್ ಕಳುಹಿಸಲಾಗುತ್ತಿದ್ದು, ಇದು ಬಳಕೆದಾರರ ಬ್ಯಾಂಕ್ ಖಾಲಿಮಾಡುವ ಸಾಮರ್ಥ್ಯ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ತಜ್ಞ ಮ್ಯಾಟ್ ನವರಾ ಅವರು ಬ್ಲೂ ಟಿಕ್‌ನೊಂದಿಗೆ ಪರಿಶೀಲಿಸಲಾದ ಪ್ರೊಫೈಲ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಈ ಖಾತೆಗಳ ಮೂಲಕ ಸಾಮಾಜಿಕ ಮಾಧ್ಯಮ ನಿರ್ವಾಹಕರಿಗೆ ಅವರ ವೈಯಕ್ತಿಕ ಮಾಹಿತಿಯನ್ನು ಹಾಗೂ ಹಣವನ್ನು ಕದಿಯಲು ಸಂಶಯಾಸ್ಪದ ಲಿಂಕ್‌ನೊಂದಿಗೆ ಸಂದೇಶ ಕಳುಹಿಸಲಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ.
ಸ್ಕ್ರೀನ್‌ಶಾಟ್‌ನಲ್ಲಿ ಕಂಡುಬರುವ ಮಾಹಿತಿ ಏನೆಂದರೆ ಸ್ಕ್ಯಾಮರ್‌ಗಳು ಭದ್ರತಾ ಸಮಸ್ಯೆಗಳ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಫೇಸ್‌ಬುಕ್ ಖಾತೆಗಳನ್ನು ನಿರ್ವಹಿಸಲು ಅಸ್ತಿತ್ವದಲ್ಲಿರುವ ಟೂಲ್ಸ್‌ಗಳನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಇಲ್ಲಿ ನೀಡಲಾದ ಲಿಂಕ್ ಬಳಕೆ ಮಾಡಿಕೊಂಡು ಹೊಸ ಟೂಲ್ಸ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಈ ಮೂಲಕ ಹೆಚ್ಚು ಜನರನ್ನು ತಲುಪಿ ಎಂದು ಉಲ್ಲೇಖಿಸಲಾಗಿದೆ.

ಈ ಪೋಸ್ಟ್ ಸುಮಾರು 950 ಪ್ರತಿಕ್ರಿಯೆಗಳನ್ನು ಮತ್ತು 140 ಕ್ಕೂ ಹೆಚ್ಚು ಕಾಮೆಂಟ್ ಪಡೆದುಕೊಂಡಿರುವುದನ್ನು ನಾವು ಗಮನಿಸಬಹುದು. ಜೊತೆಗೆ ಈ ಪೋಸ್ಟ್ ಅನ್ನು 92 ಬಾರಿ ಶೇರ್ ಮಾಡಿಕೊಳ್ಳಲಾಗಿದೆ. ಯಾಕೆಂದರೆ ಈ ಪ್ರೊಫೈಲ್ ಮತ್ತು ಪೋಸ್ಟ್ ನೋಡಿದರೆ ಮೋಸ ಹೋಗುತ್ತಿದ್ದೇವೆ ಎಂಬ ಅರಿವು ಯಾರಿಗೂ ಸಹ ಬರುವುದಿಲ್ಲ. ಇದರಿಂದಾಗಿ ಬಳಕೆದಾರರು ತುಂಬಾ ಕೂಲಂಕಷವಾಗಿ ಈ ಬಗ್ಗೆ ತಿಳಿದುಕೊಳ್ಳಬೇಕಿದೆ.
ಇಲ್ಲಿ ನೀಡಲಾದ ಲಿಂಕ್ ಕ್ಲಿಕ್ ಮಾಡಿದರೆ ಏನಾಗುತ್ತದೆ?: ಈ ಪ್ರೊಫೈಲ್ ಮೂಲಕ ಕಳುಹಿಸಲಾಗುವ ಮೆಸೆಜ್‌ನಲ್ಲಿ ಇರುವ ಲಿಂಕ್‌ನಲ್ಲಿ ಮಾಲ್‌ವೇರ್ ಇರಲಿದ್ದು, ಬಳಕೆದಾರರ ಎಲ್ಲಾ ಡೇಟಾವನ್ನು ಖದಿಯುತ್ತದೆ. ಜೊತೆಗೆ ಸಂಪೂರ್ಣ ಡಿವೈಸ್ ಅನ್ನು ವಂಚಕರು ತನ್ನ ಕಂಟ್ರೋಲ್‌ಗೆ ತೆಗೆದುಕೊಳ್ಳುವ ಮೂಲಕ ಬಳಕೆದಾರರಿಗೆ ಎಚ್ಚರಿಕೆ ನೀಡಲು ಸಹಾಯ ಮಾಡಲಿದೆ. ಇದರಿಂದಾಗಿ ಅಧಿಕೃತ ಖಾತೆಗಳಿಂದ ಸ್ವೀಕಾರ ಮಾಡಿದ ಯಾವುದೇ ಮೆಸೆಜ್ ಅನ್ನು ಓಪನ್ ಮಾಡುವ ಮುನ್ನ ಯೋಚನೆ ಮಾಡಿ.
ಫೇಸ್‌ಬುಕ್ ಈ ನಕಲಿ ಖಾತೆಗೆ ಹೇಗೆ ಬ್ಯಾಡ್ಜ್ ನೀಡಿದೆ?: ಈ ನಕಲಿ ಖಾತೆಗೆ ಫೇಸ್‌ಬುಕ್ ಯಾಕೆ ಬ್ಯಾಡ್ಜ್ ನೀಡಿದೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ವಿಷಯ ಏನೆಂದರೆ ಸ್ಕ್ಯಾಮರ್ ಪರಿಶೀಲಿಸಿದ ಪ್ರೊಫೈಲ್ ಅನ್ನು ಹ್ಯಾಕ್ ಮಾಡಿರಬಹುದು ಅಥವಾ ಪ್ರೊಫೈಲ್ ಚಿತ್ರ ಮತ್ತು ಬಳಕೆದಾರರ ಹೆಸರನ್ನು ಬದಲಾಯಿಸಿರಬಹುದು ಎಂದು ತಿಳಿದುಬಂದಿದೆ. ಈ ಹಿಂದೆಯೂ ಸಹ ಇದೇ ರೀತಿಯ ಅದೆಷ್ಟೋ ಮೋಸದ ಘಟನೆಗಳು ಜರುಗಿವೆ.

ಇನ್ನು ಟ್ವಿಟರ್‌ನ ಪಾವತಿಸಿದ ಪರಿಶೀಲನಾ ಬ್ಯಾಡ್ಜ್ ವಿರುದ್ಧ ಕೆಲವು ತಜ್ಞರು ಈ ಕಾರಣಕ್ಕಾಗಿಯೇ ವಿರೋಧ ಮಾಡುತ್ತಾ ಬಂದಿದ್ದಾರೆ. ಬ್ಲೂ ಟಿಕ್‌ಗಳನ್ನು ಖರೀದಿಸಲು ಎಲ್ಲಾ ಬಳಕೆದಾರರು ಅವಕಾಶವನ್ನು ಪಡೆದರೆ, ಸ್ಕ್ಯಾಮರ್‌ಗಳು ಪ್ರೊಫೈಲ್ ಅನ್ನು ಪರಿಶೀಲಿಸಲು ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಇತರರನ್ನು ವಂಚಿಸಲು ಸುಲಭವಾಗಿ ಮಾರ್ಗ ಕಲ್ಪಿಸಿಕೊಟ್ಟಂತೆ ಆಗುತ್ತವೆ ಎನ್ನುವುದು ತಜ್ಞರ ಆತಂಕ.


Click it and Unblock the Notifications








