Home
ಸುದ್ದಿಜಾಲ

ನಿಮ್ಮ ಬಳಿ ಬಿಟ್‌ಕಾಯಿನ್ ಇದೆಯಾ?..ಹಾಗಿದ್ರೆ ಎಚ್ಚರ ಎಚ್ಚರ ಎಚ್ಚರ!

ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ರಿಪ್ಟೋ ಕರೆನ್ಸಿ ಸದ್ದು ಜೋರಾಗಿಯೇ ಇದೆ. ಅದರಲ್ಲಿಯೂ ಡಿಜಿಟಲ್ ಕಾಯಿನ್‌ಗಳಲ್ಲೇ ನಂಬರ್ ಒನ್ ಎನಿಸಿಕೊಂಡಿರುವ 'ಬಿಟ್‌ಕಾಯಿನ್' ಮೇಲೆ ಎಲ್ಲರ ಕಣ್ಣು. ಸ್ಕ್ಯಾಮರ್‌ಗಳು ಬಿಟ್‌ಕಾಯಿನ್‌ ಸೇರಿದಂತೆ ಇತರೆ ಕ್ರಿಪ್ಟೋ ಕರೆನ್ಸಿ ಹ್ಯಾಕ್ ಮಾಡಲು ಗೂಗಲ್ ಜಾಹಿರಾತುಗಳ ದಾರಿ ಕಂಡು ಕೊಂಡಿದ್ದಾರೆ ಎಂದು ಚೆಕ್ ಪಾಯಿಂಟ್ ರಿಸರ್ಚ್ (CPR) ನ ಹೊಸ ವರದಿ ಯೊಂದರಿಂದ ತಿಳಿದು ಬಂದಿದೆ.

ಗೂಗಲ್‌

ಹೌದು, ಚೆಕ್ ಪಾಯಿಂಟ್ ರಿಸರ್ಚ್ ವರದಿಯಂತೆ ಟ್ರಿಕ್ ವೆಬ್‌ಸೈಟ್‌ಗಳನ್ನು ತೆರೆಯಲು ಮತ್ತು ಅವರ ಕ್ರಿಪ್ಟೋಕರೆನ್ಸಿ ಹೋಲ್ಡಿಂಗ್‌ಗಳನ್ನು ಕನ್ನಹಾಕಲು ಜನರನ್ನು ಮರುಳು ಮಾಡಲು ಸ್ಕ್ಯಾಮರ್‌ಗಳು ಗೂಗಲ್‌ ಆಡ್ಸ್‌ ಬಳಸುತ್ತಿದ್ದಾರೆ ಎನ್ನಲಾಗಿದೆ. ಹಾಗೆಯೇ ಸ್ಕ್ಯಾಮರ್‌ಗಳು ಈಗ ತಮ್ಮ ಫಿಶಿಂಗ್ ವೆಬ್‌ಸೈಟ್ ಅನ್ನು ಗೂಗಲ್‌ ಸರ್ಚ್ ನಲ್ಲಿ ಗೂಗಲ್‌ ಜಾಹೀರಾತುಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಚೆಕ್ ಪಾಯಿಂಟ್ ರಿಸರ್ಚ್ (CPR) ನ ಹೊಸ ವರದಿಯು ಇಂತಹ ದುರುದ್ದೇಶಪೂರಿತ ಲಿಂಕ್‌ನ ಬಗ್ಗೆ ತಿಳಿದಿರುವಂತೆ ಹೊಸ ವರದಿಯು ಬಳಕೆದಾರರನ್ನು ಎಚ್ಚರಿಸುತ್ತದೆ.

ವೆಬ್‌ಸೈಟ್

ಸ್ಕ್ಯಾಮರ್‌ಗಳ ಗೂಗಲ್‌ ಜಾಹೀರಾತುಗಳು ಜನಪ್ರಿಯ ಕ್ರಿಪ್ಟೋ ವ್ಯಾಲೆಟ್‌ಗಳನ್ನು ಅನುಕರಿಸುವ ಫಿಶಿಂಗ್ ವೆಬ್‌ಸೈಟ್‌ಗಳಿಗೆ ಜನರನ್ನು ಮರುನಿರ್ದೇಶಿಸುತ್ತದೆ ಎಂದು CPR ಉಲ್ಲೇಖಿಸುತ್ತದೆ. ಬೋಗಸ್ ವೆಬ್‌ಸೈಟ್ ಸಂದರ್ಶಕರನ್ನು ತಮ್ಮ ವ್ಯಾಲೆಟ್ ಪಾಸ್‌ಫ್ರೇಸ್ ಮತ್ತು ಖಾಸಗಿ ಪ್ರೈವೆಟ್‌ ಕೀ ಶೇರ್ ಮಾಡಲು ಮೋಸಗೊಳಿಸಲು ಪ್ರಯತ್ನಿಸುತ್ತದೆ. ಸ್ಕ್ಯಾಮರ್‌ಗಳು ರುಜುವಾತುಗಳನ್ನು ಪಡೆದ ನಂತರ, ಅವರು ನಿರ್ದಿಷ್ಟ ಕ್ರಿಪ್ಟೋ ವ್ಯಾಲೆಟ್‌ನಲ್ಲಿರುವ ಹಿಡುವಳಿಗಳನ್ನು ಸೈಫನ್ ಮಾಡುತ್ತಾರೆ.

ಶೇರ್

ಚೆಕ್ ಪಾಯಿಂಟ್ ರಿಸರ್ಚ್ ಹೈಲೈಟ್ ಮಾಡಿದ ಕೆಲವು ಕೀವರ್ಡ್‌ಗಳು ಫ್ಯಾಂಟಮ್, ಮೆಟಾಮಾಸ್ಕ್ ಮತ್ತು ಪ್ಯಾನ್‌ಕೇಕ್ ಸ್ವಾಪ್‌ನಂತಹ ಜನಪ್ರಿಯ ವ್ಯಾಲೆಟ್‌ಗಳನ್ನು ಒಳಗೊಂಡಿವೆ. ಚೆಕ್ ಪಾಯಿಂಟ್ ರಿಸರ್ಚ್ ಶೇರ್ ಮಾಡಿಕೊಂಡ ಸ್ಕ್ರೀನ್‌ಶಾಟ್‌ಗಳಲ್ಲಿ ನೋಡಬಹುದಾದಂತೆ, ಮೂಲ ಕ್ರಿಪ್ಟೋ ವ್ಯಾಲೆಟ್‌ನಂತೆ ನಿಖರವಾಗಿ ಹೆಸರಿಸಲಾದ ಫಿಶಿಂಗ್ ವೆಬ್‌ಸೈಟ್‌ಗೆ ಜಾಹೀರಾತುಗಳನ್ನು ಮರುನಿರ್ದೇಶಿಸುತ್ತದೆ.

ಸ್ಕ್ಯಾಮರ್‌ಗಳಿಂದ

ಡಿಜಿಟಲ್ ವ್ಯಾಲೆಟ್ Phantom ನ ಅಧಿಕೃತ ವೆಬ್‌ಸೈಟ್ phantom.app ಆಗಿದ್ದರೆ, ಗೂಗಲ್‌ ಜಾಹೀರಾತುಗಳಲ್ಲಿ ಸ್ಕ್ಯಾಮರ್‌ಗಳಿಂದ ಪ್ರಚಾರ ಮಾಡಲಾದ ನಕಲಿ ವೆಬ್‌ಸೈಟ್ phantom.gui ಅಥವಾ ಅಂತಹ ವಿಸ್ತರಣೆಗಳಿಗೆ ಮರುನಿರ್ದೇಶಿಸುತ್ತದೆ ಎಂದು ಹೇಳಲಾಗಿದೆ. ಗೂಗಲ್‌ ಜಾಹೀರಾತುಗಳಿಂದ ತಮ್ಮ ವೆಬ್‌ಸೈಟ್‌ಗೆ ಸಂದರ್ಶಕರನ್ನು ಮರುನಿರ್ದೇಶಿಸುವಲ್ಲಿ ಸ್ಕ್ಯಾಮರ್‌ಗಳು ಯಶಸ್ವಿಯಾದರೆ, ಅವರು ತಮ್ಮ ಪಾಸ್‌ಫ್ರೇಸ್ ಅನ್ನು ಕದಿಯಲು ಪ್ರಯತ್ನಿಸುತ್ತಾರೆ.

ವೆಬ್‌ಸೈಟ್

ಗೆಸ್ಟ್‌ ಈಗಾಗಲೇ ಕ್ರಿಪ್ಟೋ ವ್ಯಾಲೆಟ್ ಹೊಂದಿದ್ದರೆ, ವೆಬ್‌ಸೈಟ್ ಪಾಸ್‌ಫ್ರೇಸ್ ಅನ್ನು ನಮೂದಿಸಲು ಅವರನ್ನು ಕೇಳುತ್ತದೆ. ಅವರು ಹೊಸದನ್ನು ತೆರೆಯಲು ಬಯಸಿದರೆ, ವಿಕ್ಟಿಮ್‌ ತನ್ನ ಪಾಸ್‌ಫ್ರೇಸ್ ಅನ್ನು ಮೊದಲ ಬಾರಿಗೆ ಸ್ಕ್ಯಾಮರ್‌ನ ನೋಟ್‌ಪ್ಯಾಡ್‌ನಲ್ಲಿ ನಮೂದಿಸುತ್ತಾರೆ. ಕ್ರಿಪ್ಟೋ ಕರೆನ್ಸಿ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಕ್ರಿಪ್ಟೋ ಕರೆನ್ಸಿ ಎಂದರೇನು?

ಕ್ರಿಪ್ಟೋ ಕರೆನ್ಸಿ ಎಂದರೇನು?

ಅತೀ ಸರಳವಾಗಿ ಹೇಳುವುದಾದರೇ ಕ್ರಿಪ್ಟೋ ಕರೆನ್ಸಿ ಎಂದರೇ ಡಿಜಿಟಲ್ ಕರೆನ್ಸಿ. ಇದು ಇಂಟರ್ನೆಟ್ ಆಧಾರಿತವಾಗಿದ್ದು, ವಿನಿಮಯಕ್ಕೆ ಹೆಚ್ಚಾಗಿ ಬಳಕೆ ಮಾಡುತ್ತಾರೆ. ನಾಣ್ಯ ಅಥವಾ ನೋಟಿನ ರೂಪದಲ್ಲಿ ಇದು ಲಭ್ಯವಾಗುವುದಿಲ್ಲ. ಡಿಜಿಟಲ್ ತಂತ್ರಜ್ಞಾನ ಬಳಸಿ ವ್ಯವಹಾರ ಮಾಡಲಾಗುತ್ತದೆ.

ಬ್ಲಾಕ್‌ ಚೈನ್ ತಂತ್ರಜ್ಞಾನ

ಬ್ಲಾಕ್‌ ಚೈನ್ ತಂತ್ರಜ್ಞಾನ

ಬ್ಲಾಕ್‌ ಚೈನ್ ಎಂಬ ತಂತ್ರಜ್ಞಾನ ಬಳಸಿ ಕ್ರಿಪ್ಟೋ ಕರೆನ್ಸಿಗೆ ಡಿಜಿಟಲ್ ರಕ್ಷಣೆ ನೀಡಲಾಗಿರುತ್ತದೆ. ಕಂಪ್ಯೂಟರ್ ನೆಟ್‌ವರ್ಕ್‌ ಕೂಡಾ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ರಿಪ್ಟೋ ಕರೆನ್ಸಿಯನ್ನು ನೀಡುವ ಹಲವು ಖಾಸಗಿ ಸಂಸ್ಥೆಗಳಿವೆ ಕಾರ್ಯನಿರ್ವಹಿಸುತ್ತಿವೆ. ಆದ್ರೆ, ಸರ್ಕಾರಗಳು ಈ ವ್ಯವಹಾರ ನಡೆಸೋದಿಲ್ಲ ಮತ್ತು ಭಾಗಿಯಾಗುವುದಿಲ್ಲ.

ಪ್ರಮುಖ ಕ್ರಿಪ್ಟೋ ಕರೆನ್ಸಿಯ ವಿಧಗಳು:

ಪ್ರಮುಖ ಕ್ರಿಪ್ಟೋ ಕರೆನ್ಸಿಯ ವಿಧಗಳು:

* ಬಿಟ್‌ ಕಾಯಿನ್
* ಎಥೆರಿಯಮ್
* ಎಕ್ಸ್ಆರ್‌ಪಿ
* ಟೆದರ್
* ಡಾಗ್ ಕಾಯಿನ್
* ಬಿಟ್‌ ಕಾಯಿನ್‌ ಕ್ಯಾಶ್‌

ಅತ್ಯಂತ ಜನಪ್ರಿಯ ಕ್ರಿಪ್ಟೋ ಕರೆನ್ಸಿ

ಅತ್ಯಂತ ಜನಪ್ರಿಯ ಕ್ರಿಪ್ಟೋ ಕರೆನ್ಸಿ

ಹಲವು ಬಗೆಯ ಕ್ರಿಪ್ಟೋ ಕರೆನ್ಸಿಗಳಿವೆ. ಆದರೆ ಬಿಟ್ ಕಾಯಿನ್ ಹೆಚ್ಚು ಜನಪ್ರಿಯ ಹಾಗೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇತ್ತೀಚಿಗೆ ಪ್ರಮುಖ ಐದು ಕ್ರಿಪ್ಟೋ ಕರೆನ್ಸಿಗಳ ಲಿಸ್ಟ್‌ನಲ್ಲಿ ಡಾಗ್ ಕಾಯಿನ್ ಕಾಣಿಸಿಕೊಂಡಿದೆ. ಈ ಡಾಗ್ ಕಾಯಿನ್ 2013ರಲ್ಲಿ ಪರಿಚಿತವಾಗಿದೆ.

Best Mobiles in India

English summary
Scammers Are Using Google Ads For Stealing Cryptocurrency: Report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+