Home
ಸುದ್ದಿಜಾಲ

Free laptops: ಭಾರತ ಸರ್ಕಾರದಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್? ನಕಲಿಯೋ?..ಅಸಲಿಯೋ?

ಉಚಿತವಾಗಿ ಲ್ಯಾಪ್‌ಟಾಪ್‌ ಕೊಡುತ್ತಾರೆ ಅಂದರೆ ಯಾರು ತಾನೆ ಬೇಡ ಅನ್ನುತ್ತಾರೆ ಅಲ್ವಾ. ಭಾರತ ಸರ್ಕಾರವು ಪ್ರಧಾನ ಮಂತ್ರಿ ಉಚಿತ ಲ್ಯಾಪ್‌ಟಾಪ್ ಯೋಜನೆಯನ್ನು ಪ್ರಾರಂಭಿಸಿದೆ, ಇದು ವಿಶೇಷವಾಗಿ ಎಲ್ಲಾ ಭಾರತ ರಾಜ್ಯಗಳಿಗೆ ಅನ್ವಯಿಸಲಿದ್ದು, ಎಲ್ಲಾ ಅರ್ಹ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಉಚಿತ ಲ್ಯಾಪ್‌ಟಾಪ್ (Free laptops) ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಹೌದು, ಉಚಿತ ಲ್ಯಾಪ್‌ಟಾಪ್‌ ಹೆಸರಲ್ಲಿ ಸ್ಕ್ಯಾಮರ್‌ಗಳು ಈ ರೀತಿಯ ಸಂದೇಶವನ್ನು ಎಲ್ಲೆಡೆ ಶೇರ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಭಾರತ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಿದೆ. ಇದಕ್ಕಾಗಿ ಕೆಲವು ವಿವರಗಳೊಂದಿಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಆಫರ್ ಅನ್ನು ಪಡೆಯಬಹುದು ಎಂದು ಸ್ಕ್ಯಾಮರ್‌ಗಳು ಬಳಕೆದಾರರಿಗೆ ಒತ್ತಾಯಿಸುತ್ತಿದ್ದಾರೆ. ಹಾಗಿದ್ರೆ, ಏನಿದು ಹೊಸ ಸ್ಕ್ಯಾಮ್‌, ಇದರಿಂದ ಹೇಗೆ ಎಚ್ಚೆತ್ತುಕೊಳ್ಳಬೇಕು ಎಂಬ ವಿವರಕ್ಕಾಗಿ ಈ ಲೇಖನ ಓದಿರಿ.

ಭಾರತ ಸರ್ಕಾರದಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್?

ವಿದ್ಯಾರ್ಥಿಗಳೇ ಎಚ್ಚರ: ಭಾರತದ ವಿದ್ಯಾರ್ಥಿಗಳನ್ನು ಟಾರ್ಗೆಟ್‌ ಮಾಡಿರುವ ಸ್ಕ್ಯಾಮರ್‌ಗಳು ಉಚಿತ ಲ್ಯಾಪ್‌ಟಾಪ್‌ ಹೆಸರಲ್ಲಿ ನಕಲಿ ವೆಬ್‌ಸೈಟ್‌ ಲಿಂಕ್‌ ಅನ್ನು ನೀಡಿದ್ದು, ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳು ಇದರಲ್ಲಿ ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಇದರ ಬಗ್ಗೆ ಪಿಐಬಿ ಪರಿಶೀಲನೆ ನಡೆಸಲಾಗಿ ಇದು ನಕಲಿ ಎಂದು ತಿಳಿದುಬಂದಿದ್ದು, ಈ ಮೂಲಕ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳುವಂತೆ ಸೂಚಿಸಲಾಗಿದೆ.

ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡುತ್ತಿಲ್ಲ: ಪ್ರಧಾನ ಮಂತ್ರಿ ಉಚಿತ ಲ್ಯಾಪ್‌ಟಾಪ್ ಯೋಜನೆ 2023-24 ಎಂಬ ಈ ಸ್ಕ್ಯಾಮ್ ಕೆಲವು ತಿಂಗಳ ಹಿಂದೆಯೂ ಜರುಗಿತ್ತು. ಅದೇ ರೀತಿ ಈಗ ಮತ್ತೊಮ್ಮೆ ಸ್ಕ್ಯಾಮರ್‌ಗಳು ತಮ್ಮ ವರಸೆ ತೋರಿಸಲು ಬಂದಿದ್ದಾರೆ. ಈ ನಕಲಿ ಪೋಸ್ಟರ್ ಅನ್ನು ಪಿಐಬಿ ಫ್ಯಾಕ್ಟ್ ಚೆಕ್ ಗುರುತಿಸಿದ್ದು, ಇದು ಭಾರತದ ಶಿಕ್ಷಣ ಸಚಿವಾಲಯವು ಈ ರೀತಿಯ ಯಾವುದೇ ಉಚಿತ ಲ್ಯಾಪ್‌ಟಾಪ್ ಯೋಜನೆಯನ್ನು ನಡೆಸುತ್ತಿಲ್ಲ ಎಂದು ಟ್ವಿಟರ್‌ ಮೂಲಕ ದೃಢಪಡಿಸಿದೆ.

ಇನ್ನು ಸ್ಕ್ಯಾಮರ್‌ಗಳು ನೀಡಿರುವ ಲಿಂಕ್‌ ಹಾಗೂ ಅಲ್ಲಿ ಉಲ್ಲೇಖ ಮಾಡಲಾಗಿರುವ ಎಲ್ಲಾ ಮಾಹಿತಿಗಳಲ್ಲಿ ವ್ಯಾಕರಣ ದೋಷ ಸಹ ಕಂಡುಬಂದಿದ್ದು, ಈ ಮೂಲಕ ಹಲವಾರು ಜನರು ಆರಂಭದಲ್ಲೇ ಇದು ಸ್ಕ್ಯಾಮ್‌ ಎಂದು ಕಂಡುಕೊಂಡಿದ್ದಾರೆ. ಹಾಗಿದ್ರೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ಸಂದೇಶದಲ್ಲಿ ಏನೆಲ್ಲಾ ಉಲ್ಲೇಖ ಮಾಡಲಾಗಿದೆ ಎಂಬುದನ್ನು ಗಮನಿಸೋಣ ಬನ್ನಿ.

ಭಾರತ ಸರ್ಕಾರದಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್?

ಭಾರತ ಸರ್ಕಾರವು ಪ್ರಧಾನ ಮಂತ್ರಿ ಉಚಿತ ಲ್ಯಾಪ್‌ಟಾಪ್ ಯೋಜನೆಯನ್ನು ಪ್ರಾರಂಭಿಸಿದೆ, ಇದು ವಿಶೇಷವಾಗಿ ಎಲ್ಲಾ ಭಾರತ ರಾಜ್ಯಗಳಿಗೆ ಅನ್ವಯಿಸಲಿದ್ದು, ಎಲ್ಲಾ ಅರ್ಹ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ www.pmflsgovt.in ಮೂಲಕ ಉಚಿತ ಲ್ಯಾಪ್‌ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಉಲ್ಲೇಖ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೆ ಭಾರತ ಸರ್ಕಾರವು XI, XII, BA-1st, BA-2nd, BA-3rd, BA-4th, BA-5th, ಮತ್ತು BA-6th ಸೆಮಿಸ್ಟರ್‌ನ ಎಲ್ಲಾ ವಿದ್ಯಾರ್ಥಿಗಳು ಪ್ರಧಾನ ಮಂತ್ರಿ ಉಚಿತ ಲ್ಯಾಪ್‌ಟಾಪ್ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು ಎಂದು ಘೋಷಿಸಿದೆ.

2023-24ರ ಶೈಕ್ಷಣಿಕ ವರ್ಷಕ್ಕೆ ನೋಂದಣಿ ಫಾರ್ಮ್ ಅನ್ನು ಸಲ್ಲಿಸಬೇಕು ಮತ್ತು ಅವರು ಪ್ರಧಾನ ಮಂತ್ರಿ ಉಚಿತ ಲ್ಯಾಪ್‌ಟಾಪ್ ಯೋಜನೆಯ ಲಿಂಕ್ ಅನ್ನು ಪಡೆಯುವುದರಿಂದ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಬೇಕು. ಅವರು ಲಾಗಿನ್ ಆಗಬೇಕು ಮತ್ತು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಬೇಕು. ಆದ್ದರಿಂದ ಪ್ರಧಾನ ಮಂತ್ರಿ ಉಚಿತ ಲ್ಯಾಪ್‌ಟಾಪ್ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಈ ಅಧಿಕೃತ ವೆಬ್‌ಸೈಟ್ ನಲ್ಲಿ ಎಲ್ಲಾ ವಿವರ ಭರ್ತಿ ಮಾಡಿ ಎಂದು ತಿಳಿಸಲಾಗಿದೆ.

ಹಾಗೆಯೇ ಭಾರತ ಸರ್ಕಾರವು ಲೆನೊವೊ ಇಂಟೆಲ್‌ ಸೆಲೆರೊನ್‌ ಡ್ಯುಯಲ್‌ ಕೋರ್ (8GB/256 GB SSD/ವಿಂಡೋಸ್‌ 11) ಲ್ಯಾಪ್‌ಟಾಪ್ ಅನ್ನು ನೀಡಲು ಮಾಡಲು ನಿರ್ಧರಿಸಿದೆ. ಹಾಗೂ ಪ್ರಧಾನಮಂತ್ರಿ ಉಚಿತ ಲ್ಯಾಪ್‌ಟಾಪ್ ಯೋಜನೆಯು 2023-24ರ ಶೈಕ್ಷಣಿಕ ಅವಧಿಯೊಂದಿಗೆ ಬ್ಯಾಂಕ್ ಖಾತೆಗೆ ಇದರ ಮೊತ್ತ ನೀಡಲಾಗುತ್ತದೆ ಎಂದು ಗೊಂದಲ ಇರುವ ಮೆಸೆಜ್‌ ಅನ್ನು ನೀಡಿದೆ.

ಭಾರತ ಸರ್ಕಾರದಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್?

ಇದರಿಂದ ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳು ಮೋಸ ಹೋಗಿದ್ದು, ಇನ್ನು ಮುಂದಿನ ದಿನಗಳಲ್ಲಾದರೂ ನೀವು ಎಚ್ಚೆತ್ತುಕೊಳ್ಳಿ. ಅದು ಹೇಗೆ ಎಂದರೆ ಯಾವುದೇ ವಿಷಯದಲ್ಲಾದರೂ ಉಚಿತವಾಗಿ ನೀಡಲಾಗುತ್ತವೆ ಎಂಬ ಮಾಹಿತಿ ನಿಮಗೆ ಬಂದರೆ ಅದನ್ನು ಹಲವಾರು ಬಾರಿ ಪರಿಶೀಲನೆಗೆ ಒಳಪಡಿಸಿ. ಜೊತೆಗೆ ಸಂಬಂಧಿಸಿದ ಇಲಾಖೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ. ಇದರೊಂದಿಗೆ ಅನಧಿಕೃತವಾಗಿ ಈ ರೀತಿಯ ಮೆಸೆಜ್‌ನೊಂದಿಗೆ ಬರುವ ಯಾವುದೇ ಲಿಂಕ್‌ ಅನ್ನು ಕ್ಲಿಕ್‌ ಮಾಡಬೇಡಿ.

Best Mobiles in India

English summary
Scammers are out to cheat people through fake websites claiming that the Indian government is offering free laptops.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+