ತನಗೇ ಗೊತ್ತಿಲ್ಲದಂತೆ ಆತ ಕಳೆದುಕೊಂಡಿದ್ದು 11.5 ಲಕ್ಷ ರೂ.ಗಳು!
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣವೊಂದರಲ್ಲಿ ಹೊಸ ರೀತಿಯ ವಂಚನೆ ದಾರಿಯೊಂದು ಬೆಳಕಿಗೆ ಬಂದಿದೆ. ಅಲ್ಲಿನ ಬ್ಯಾಂಕ್ ಆಫ್ ಇಂಡಿಯಾದ ಒಂದು ಬ್ಯಾಂಕ್ ಶಾಖೆಯಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದ ಓರ್ವ ವ್ಯಕ್ತಿ ಇತ್ತೀಚೆಗೆ ತನ್ನ ಬ್ಯಾಂಕ್ ಖಾತೆಯಿಂದ ತನಗೆ ಗೊತ್ತಿಲ್ಲದೇ 11.5 ಲಕ್ಷ ರೂ. ಕಳೆದುಕೊಂಡಿದ್ದ. ಆ ವ್ಯಕ್ತಿ ನೀಡಿದ ದೂರನ್ನು ತನಿಖೆ ನಡೆಸಲು ಮುಂದಾದ ಈ ಘಟನೆಗೆ ಕಾರಣ ಏನು ಎಂದು ಹುಡುಕಿ ಹೊರಟ ಪೊಲೀಸರಿಗೆ ಹೊಸ ವಂಚನೆಯು ಬೆಚ್ಚಿಬೀಳಿಸಿದೆ.

ದೇಶದಲ್ಲಿ ಜನರು ಡಿಜಿಟಲ್ ಹಣಕಾಸಿನ ವ್ಯವಹಾರದ ಕಡೆ ಮುಖಮಾಡುತ್ತಿರುವ ಈ ಸಮಯದಲ್ಲಿ ಡಿಜಿಟಲ್ ಮೋಸಗಳು ಹೆಚ್ಚುತ್ತಿವೆ. ಡಿಜಿಟಲ್ ಬಗೆಗೆ ಸ್ಪಷ್ಟ ಮಾಹಿತಿ ಇಲ್ಲದೇ ಇರುವುದರಿಂದ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಬ್ಯಾಂಕ್ ಗ್ರಾಹಕರಿಗೆ ಮಾತ್ರವಲ್ಲದೇ, ಬ್ಯಾಂಕ್ ವ್ಯವಸ್ಥೆಗೂ ಮೋಸ ಮಾಡಿರುವ ಪ್ರಕರಣದಂತೆ ಈ ಪ್ರಕರಣ ಕಂಡುಬಂದಿದೆ. ಬ್ಯಾಂಕ್ ಗ್ರಾಹಕರ ಹೆಸರಿನಲ್ಲಿ ಮೊಬೈಲ್ ನಂಬರ್ ಬದಲಾಯಿಸಿಕೊಂಡು ವಂಚನೆಯನ್ನು ನಡೆಸಲಾಗಿದೆ ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ವಂಚನೆ ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರಿಗೆ ಮೊದಮೊದಲು ವಂಚನೆ ನಡೆದದ್ದು ಹೇಗೆ ಎಂದು ಎಂಬುದನ್ನು ತಿಳಿಯುವುದು ಕಷ್ಟವಾಗಿದೆ. ಆದರೆ, ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಮತ್ತು ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದ ನಂತರ ಗ್ರಾಹಕನ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿ ಆತನಿಗೆ ವಂಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದರೆ, ಆ ವ್ಯಕ್ತಿ ತನಗೆ ಗೊತ್ತಿಲ್ಲದೇ 11.5 ಲಕ್ಷ ರೂ. ಕಳೆದುಕೊಂಡಿದ್ದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ವಂಚನೆ ನಡೆದಿರುವುದು ಹೇಗೆ?
11.5 ಲಕ್ಷ ರೂ. ವಂಚಿಸಿರುವ ವಂಚಕರು ಈಗ ಹಣ ಕಳೆದುಕೊಂಡಿರುವ ವ್ಯಕ್ತಿಯನ್ನು ಮೊದಲೇ ಗುರುತಿಸಿ ಆತನ ಬ್ಯಾಂಕ್ ಅಕೌಂಟ್ ಅನ್ನು ಟ್ರ್ಯಾಪ್ ಮಾಡಿದ್ದಾರೆ.ಯಾವುದೇ ಬ್ಯಾಂಕ್ ಅಕೌಂಟ್ ಅನ್ನು ನೇರವಾಗಿ ಟ್ರ್ಯಾಪ್ ಮಾಡಲು ಸಾಧ್ಯವಿಲ್ಲದಿರುವುದರಿಂದ, ಆತನ ಬಗ್ಗೆ ತಮಗೆ ಲಭ್ಯವಿರುವ ಕೆಲ ವೈಯಕ್ತಿಕ ಮಾಹಿತಿಯಿಂದ ಆತನ ಬ್ಯಾಂಕ್ ಅಕೌಂಟ್ ಅನ್ನು ಟ್ರ್ಯಾಪ್ ಮಾಡಿದ್ದಾರೆ. ವಂಚಕರು ಹೀಗೆ ಆತನ ಬ್ಯಾಂಕ್ ಅಕೌಂಟ್ ಅನ್ನು ಟ್ರ್ಯಾಪ್ ಮಾಡಲು ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯವೂ ಕೂಡ ಕಾರಣವಾಗಿದೆ.

ವೈಯಕ್ತಿಕ ಮಾಹಿತಿ ದೋಖಾ!
ಈಗ ಹಣ ಕಳೆದುಕೊಂಡಿರುವ ವ್ಯಕ್ತಿಯ ಬಗ್ಗೆ ಯಾವುದೋ ಥರ್ಡ್ ಪಾರ್ಟಿ ಮಾರಾಟಗಾರರಿಂದ ವೈಯಕ್ತಿಕ ಮಾಹಿತಿಗಳನ್ನು (ಮೊಬೈಲ್ ನಂಬರ್, ಆಧಾರ್, ಐಡಿ ಕಾರ್ಡ್) ಖರೀದಿಸಿದ್ದಾರೆ. ಆ ನಂತರ ಅವರ ಬಳಿ ಇರುವ ಆತನ ವೈಯಕ್ತಿಕ ಮಾಹಿತಿಗಳ ಸಹಾಯದಿಂದ ಆತನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಆತನ ಬ್ಯಾಂಕ್ ಅಕೌಂಟ್ ಎಲ್ಲಿದೆ?, ಆತನ ಖಾತೆಯಲ್ಲಿ ಹಣ ಎಷ್ಟಿರಬಹುದು ಎಂದು ಅಂದಾಜಿಸಿ ನಂತರ ವಂಚನೆಗೆ ಇಳಿದಿದ್ದಾರೆ. ಜತೆಗೆ ಹೆಚ್ಚಿನ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕಲು ಹ್ಯಾಕರ್‌ಗಳ ಸಂಪರ್ಕವನ್ನು ಹೊಂದಿದ್ದಾರೆ.

ಆತನ ಬ್ಯಾಂಕ್ ಖಾತೆ ಟಾರ್ಗೆಟ್!
ಹೀಗೆ ಆ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರ, ಆತನ ಬ್ಯಾಂಕ್ ಖಾತೆಯನ್ನು ಟಾರ್ಗೆಟ್ ಮಾಡುತ್ತಾರೆ. ಆತನ ವೈಯಕ್ತಿಕ ಮಾಹಿತಿಯನ್ನು ಸಂಪೂರ್ಣವಾಗಿ ಪಡೆದ ನಂತರ ವಂಚಕರು ನೇರವಾಗಿ ಬ್ಯಾಂಕ್‌ನಲ್ಲಿ ತಮ್ಮ ಮುಂದಿನ ಹಂತವನ್ನು ಮುಂದುವರೆಸಿದ್ದಾರೆ. ತಾವೂ ವಂಚಿಸುತ್ತಿರುವ ಗ್ರಾಹಕರ ಹೆಸರಿನಲ್ಲಿ ಮೊಬೈಲ್ ನಂಬರ್ ಬದಲಾಯಿಸುವ ಕುರಿತು ಮನವಿಯನ್ನು ಬ್ಯಾಂಕ್‌ಗೆ ಸಲ್ಲಿಸುತ್ತಾರೆ. ಬ್ಯಾಂಕ್ ಅಧಿಕಾರಿಗಳು ಸರಿಯಾಗಿ ಪರೀಶೀಲನೆ ನಡೆಸದೇ ಮೊಬೈಲ್ ನಂಬರ್ ಬದಲಾಯಿದ ತಕ್ಷಣ ವಂಚಕರಿಗೆ ಹಬ್ಬ.!

ಹೊಸ ಸಂಖ್ಯೆಯೊಂದಿಗೆ ವಹಿವಾಟು
ಆತನ ಬ್ಯಾಂಕ್ ಖಾತೆಗೆ ಜೋಡಣೆಯಾಗಿದ್ದ ಮೊಬೈಲ್ ಸಂಖ್ಯೆ ಬ್ಯಾಂಕ್‌ನಲ್ಲಿ ಬದಲಾದ ತಕ್ಷಣವೇ ವಂಚಕರು ಹಣ ವಹಿವಾಟನ್ನು ಮಾಡುತ್ತಾರೆ. ಆನ್‌ಲೈನ್ ವಹಿವಾಟುವಿನ OTP ಅವರು ನೀಡಿದ ಹೊಸ ಮೊಬೈಲ್ ಸಂಖ್ಯೆಗೆ ಬರುವುದರಿಂದ ಆ ವ್ಯಕ್ತಿಯ ಅಕೌಂಟ್‌ನಲ್ಲಿನ ದುಡ್ಡು ಖಾಲಿಯಾಗುವುದು ಆತನಿಗೇ ತಿಳಿದಿಲ್ಲ. ಬ್ಯಾಂಕ್ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡದೇ ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿರುವುದು ಇದಕ್ಕೆ ಕಾರಣ. ಅಥವಾ ಅಥವಾ ವಂಚಕರ ಜತೆ ಬ್ಯಾಂಕ್ ಅಧಿಕಾರಿಗಳು ಭಾಗಿಯಾಗಿದ್ದಾಗ ಮಾತ್ರ ಇದು ಸಾಧ್ಯ

ನೆಟ್‌ಬ್ಯಾಂಕಿಂಗ್ ಬಳಕೆ
ಆ ವಂಚಕರು ಪ್ರತಿ ವಹಿವಾಟಿಗೂ ನೆಟ್‌ಬ್ಯಾಂಕಿಂಗ್ ಮೊರೆ ಹೋಗುತ್ತಾರೆ. ಏಕೆಂದರೆ ನೆಟ್‌ಬ್ಯಾಂಕಿಂಗ್‌ಗೆ OTP ಮಾತ್ರ ಅವಶ್ಯವಾಗಿದ್ದು, ಅದು ಹೊಸ ನಂಬರ್‌ಗೆ ಬರುವುದರಿಂದ ವಂಚಕರಿಗೆ ಬಹಳ ಸುಲಭವಾಗುತ್ತದೆ.ಓದಿರಿ:ಶಾಕಿಂಗ್ ನ್ಯೂಸ್!..ಭಾರತದಲ್ಲಿ ಶೀಘ್ರವೇ 'ವಾಟ್ಸ್ಆಪ್' ಬ್ಯಾನ್?!ಇದರಿಂದ ನಿಮಗೆ ನಿಮ್ಮ ಅಕೌಂಟ್‌ನಲ್ಲಿ ದುಡ್ಡು ಖಾಲಿಯಾಗುತ್ತಿರುವ ಒಂದು ಸಣ್ಣ ಸುಳಿವು ಕೂಡ ಸಿಗುವುದಿಲ್ಲ. ಒಂದು ಬಾರಿ ಬ್ಯಾಂಕ್‌ನಲ್ಲಿ ಮೊಬೈಲ್ ನಂಬರ್ ಬದಲಾಯಿತೆಂದರೆ ಸಾಕು. ಆ ನಂತರ ವಂಚಕರು ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ಸಂಪೂರ್ಣವಾಗಿ ಎಗರಿಸುತ್ತಾರೆ.

ನಿಮಗೂ ಇರಲಿ ಎಚ್ಚರ
ಈ ಮೇಲಿನ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿದೆ. ಹಾಗಾಗಿ, ಆ ವ್ಯಕ್ತಿಗೆ ಹಣ ವಾಪಸ್ ಸಿಗುವ ಸಂಭವ ಹೆಚ್ಚಿರುತ್ತದೆ. ಆದರೆ, ವಂಚಕರಿಗೆ ನಿಮ್ಮ ವೈಯಕ್ತಿಕ ಮಾಹಿತಿಯೋ ಕೂಡ ಟಾರ್ಗೆಟ್ ಆಗಿರುತ್ತದೆ. ಇದನ್ನು ಅವರು ಈ ಆನ್‌ಲೈನಿನ ಪ್ರಪಂಚದಲ್ಲಿ ನಿಮ್ಮ ಮಾಹಿತಿಯನ್ನು ಕದಿಯುತ್ತಿದ್ದಾರೆ. ಹಾಗಾಗಿ, ಆದ್ದರಿಂದ, ನೀವು ನಿಮ್ಮ ಖಾಸಾಗಿ ಮಾಹಿತಿಯನ್ನು ಆನ್‌ಲೈನಿನಲ್ಲಿ ಹಂಚಿಕೊಳ್ಳುವ ಮೊದಲು ಎಚ್ಚರವಾಗಿರಿ. ಇಲ್ಲವಾದರೆ, ನಿಮ್ಮ ಹಣ ನಿಮಗೆ ಕಾಣದಂತೆ ಮಾಯವಾಗಬಹುದು ಎಚ್ಚರ.!


Click it and Unblock the Notifications








