Subscribe to Gizbot

ಒಂಭತ್ತರ ಬಾಲಕಿಯ ಕಾಲು ಸುಟ್ಟ ಐಫೋನ್ ಕೇಸ್

Written By:

ಐಫೋನ್ ಕೇಸ್ 9 ರ ಹರೆಯದ ಶಾಲಾ ಹುಡುಗಿಯ ತ್ವಚೆಯ ಮೇಲೆ ಸುಟ್ಟ ಕಲೆಯನ್ನು ಉಂಟುಮಾಡಿದ್ದು ಇದರಲ್ಲಿರು ಟಾಕ್ಸಿಕ್ ದ್ರವ ಇದಕ್ಕೆ ಕಾರಣವಾಗಿರಬಹುದು ಎಂಬುದಾಗಿ ತಿಳಿದು ಬಂದಿದೆ.

ಓದಿರಿ: ಐಫೋನ್ 6 ಬ್ಯಾಟರಿ ಸುಧಾರಿಸಲು ಸರಳ ಸಲಹೆಗಳು

ರಾತ್ರಿ ಮಲಗಿದ್ದ ವೇಳೆಯಲ್ಲಿ ಈ ಅವಘಡ ಸಂಭವಿಸಿದ್ದು ಒಲಿವಿಯಾ ತನ್ನ ಫೋನ್‌ನ ರಕ್ಷಣೆಗಾಗಿ ಬಳಸಿದ್ದ ಫೋನ್ ಕೇಸ್ ಆಕೆಯಲ್ಲಿ ಭಯವನ್ನುಂಟು ಮಾಡಿದೆ. ಪ್ಲಾಸ್ಟಿಕ್ ಕೇಸ್ ದಪ್ಪನೆಯ ದ್ರಾವಣವನ್ನು ಹೊಂದಿದ್ದು ಇದು ಸ್ಪಾರ್ಕ್ ಅನ್ನು ಒಳಗೊಂಡಿದೆ ಮತ್ತು ತ್ವಚೆಗೆ ಹಾನಿಯನ್ನುಂಟು ಮಾಡಿದೆ. ಆಕೆಯ ಕಾಲಿನಲ್ಲಿ ಈ ಕೇಸ್ ಸುಟ್ಟ ಕಲೆಯನ್ನುಂಟು ಮಾಡಿದೆ. ಬನ್ನಿ ಇಂದಿನ ಲೇಖನದಲ್ಲಿ ಈ ದಾರುಣ ಕಥೆಯ ವಿವರವನ್ನು ಅರಿಯೋಣ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದುಷ್ಪರಿಣಾಮ

ರಾಸಾಯನಿಕ ಪ್ರಕ್ರಿಯೆ

ಒಲಿವಿಯಾ ಬೆಳಗ್ಗೆ ಎದ್ದಾಗ ತನ್ನ ಕಾಲುಗಳ ಮೇಲೆ ಉಂಟಾಗಿರುವ ರಾಸಾಯನಿಕ ಪ್ರಕ್ರಿಯೆಯ ದುಷ್ಪರಿಣಾಮವನ್ನು ಕಂಡು ಮಗಳು ಮತ್ತು ತಾಯಿ ಹೌಹಾರಿದ್ದಾರೆ.

ಸುಟ್ಟ ಗಾಯ

ಕೇಸ್‌ ಕಾಲುಗಳಿಗೆ ತಗುಲಿ

ಆಕೆ ಮಲಗಿದ್ದಾಗ ಕೇಸ್‌ ಆಕೆಯ ಕಾಲುಗಳಿಗೆ ತಗುಲಿ ಸುಟ್ಟ ಗಾಯವುಂಟಾಗಿದೆ. ಐಫೋನ್ ಕೇಸ್‌ನ ಪರಿಣಾಮವನ್ನು ನಿಮಗಿಲ್ಲಿ ಕಾಣಬಹುದಾಗಿದೆ.

ಕಾಲುಗಳಲ್ಲಿ ಉರಿತ

ಉರಿತ

ಮಧ್ಯರಾತ್ರಿ ಮಗು ಎದ್ದು ತನ್ನ ಕಾಲುಗಳಲ್ಲಿ ಉರಿತವುಂಟಾಗುತ್ತಿರುವುದಾಗಿ ಆಕೆ ತನ್ನ ತಾಯಿಯ ಬಳಿ ಹೇಳಿದ್ದು ಮಗು ನಿದ್ದೆಯಲ್ಲಿ ಕನವರಿಸುತ್ತಿದೆ ಎಂದು ತಾಯಿ ಸುಮ್ಮನಾಗಿದ್ದಾರೆ.

ನಂಬಲು ಅಸಾಧ್ಯವಾದ ಘಟನೆ

ತೀವ್ರ ರಾಸಾಯನಿಕ ಪರಿಣಾಮ

ವೈದ್ಯರು ಇದೊಂದು ತೀವ್ರ ರಾಸಾಯನಿಕ ಪರಿಣಾಮ ಎಂದು ಹೇಳಿದ್ದು ಫೋನ್ ಕೇಸ್ ಈ ರೀತಿ ಮಾಡಿದೆ ಎಂಬುದು ನಿಜಕ್ಕೂ ನಂಬಲು ಅಸಾಧ್ಯವಾದ ಘಟನೆಯಾಗಿದೆ ಎಂದು ಹೇಳಿದ್ದಾರೆ.

ಸುಟ್ಟ ಗಾಯ

ರಾಸಾಯನಿಕ ಕೆಮಿಕಲ್ ಬರ್ನ್

ರಾಸಾಯನಿಕ ಕೆಮಿಕಲ್ ಬರ್ನ್ ಇದಾಗಿದ್ದು ಆಕೆ ತುಂಬಾ ಹೆದರಿದ್ದಾಳೆ. ಫೋನ್‌ನ ಆಕಾರದಲ್ಲೇ ಆಕೆಯ ಕಾಲುಗಳಲ್ಲಿ ಸುಟ್ಟ ಗಾಯ ಗುರುತನ್ನು ಉಂಟುಮಾಡಿದೆ.

ಫೋನ್ ಕೇಸ್

ನ್ಯೂ ಲುಕ್ ಸ್ಟೋರ್‌

ಒಲಿವಿಯಾ ನ್ಯೂ ಲುಕ್ ಸ್ಟೋರ್‌ನಿಂದ ಫೋನ್ ಕೇಸ್ ಅನ್ನು ಖರೀದಿಸಿದ್ದು ತನ್ನ ಐಫೋನ್‌ನೊಂದಿಗೆ ಮಲಗುವ ರೂಢಿಯನ್ನು ಆಕೆ ಮಾಡಿಕೊಂಡಿದ್ದಳು.

ಅನುಭವ

ಕಾಲು ಉರಿ

ಬೆಳಗ್ಗೆ ಎದ್ದಾಗ ಕಾಲು ಉರಿಯುತ್ತಿರುವ ಅನುಭವ ಆಕೆಗೆ ಉಂಟಾಗಿದ್ದು ಪುಟ್ಟ ಹುಡುಗಿ ಇದರಿಂದ ತುಂಬಾ ಹೆದರಿದ್ದಾಳೆ.

ಮನವರಿಕೆ

ಫೋನ್ ಕೇಸ್‌ ದ್ರಾವಣ

ಫೋನ್ ಕೇಸ್‌ನಲ್ಲಿರುವ ದ್ರಾವಣವು ಆಕೆಯ ತ್ವಚೆಯ ಮೇಲೆ ಲೀಕ್ ಆಗಿ ಗುರುತನ್ನು ಉಂಟುಮಾಡಿದೆ ಎಂಬುದು ಒಲಿವಿಯಾಗೆ ಆಮೇಲೆ ಮನವರಿಕೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
A schoolgirl has been left scarred for life after her snow globe style iPhone case leaked a toxic liquid that burned through her skin.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot