ಸೋಲಾರ್ ಶರ್ಟ್ ಹಾಕಿ. ಕೂಲ್ ಕೂಲ್ ಆಗಿ
ಬೇಸಗೆಯಲ್ಲಿ ಬಿಸಿಲಿನ ತಾಪಕ್ಕೆ ಅಂಗಿಯನ್ನು ಬಿಚ್ಚಿಟ್ಟು ಫ್ಯಾನಿನಡಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುವವರೆ ಬಹಳಷ್ಟು ಮಂದಿ. ಆದರೆ ಇನ್ನು ಮುಂದೆ ನೀವು ಅಂಗಿಯನ್ನು ಬಿಚ್ಚಿಡಬೇಕಾಗಿಲ್ಲ. ಬದಲಾಗಿ ಹೊಸ ಅಂಗಿಯನ್ನು ಹಾಕಿಕೊಂಡರಾಯಿತು.ಅಂಗಿಯನ್ನು ಹಾಕಿಕೊಂಡೇ ಎ.ಸಿ ರೂಮಿನ ಅನುಭವವನ್ನು ಪಡೆಯಬಹುದು.
ಬೇಸಗೆಯ ಬಿಸಿಲಿನ ಝಳಕ್ಕೆ ಕಂಗೆಟ್ಟ ಜನತೆಗೆ ಹೊಸ ಸೋಲಾರ್ ಅಂಗಿ ಬಂದಿದೆ. ಈ ಅಂಗಿಯನ್ನು ಧರಿಸಿದ್ರೆ ಒಳಗಡೆ ಕೂಲ್ ಕೂಲ್ ವಾತವಾರಣ ಸೃಷ್ಟಿಯಾಗಿ ಸೆಕೆಯ ಅನುಭವ ಆಗೋದಿಲ್ವಂತೆ. ಹಾಗಾದ್ರೆ ಆ ಆಂಗಿಯ ವಿಶೇಷತೆ ಏನು? ಆ ಅಂಗಿಯನ್ನು ಕಂಡು ಹುಡುಕಿದ್ದು ಯಾರು? ಬೆಲೆ ಎಷ್ಟು ಎಂಬುದಕ್ಕೆ ಒಂದೊಂದೆ ಪುಟವನ್ನು ನೋಡಿಕೊಂಡು ಹೋಗಿ.
ಇದನ್ನೂ ಓದಿ : ವಿಶ್ವದ ದೊಡ್ಡ ಸೋಲಾರ್ ಬೋಟ್ ಹೇಗಿದೆ ಗೊತ್ತಾ ?

ಬೇಸಗೆಯ ಬಿಸಿಲಿಗೆ ತಂಪು ನೀಡಲು ಬಂದಿದೆ ಸೋಲಾರ್ ಶರ್ಟ್
ಈ ಸೋಲಾರ್ ಅಂಗಿ ಎರಡು ಪದರಗಳನ್ನು ಒಳಗೊಂಡಿದ್ದು,ಈ ಅಂಗಿಯೊಳಗೆ ಸೋಲಾರ್ ಸೆಲ್‌ಗಳಿವೆ. ಅಂಗಿಯ ಒಳಗಡೆ ಇರುವ ಸೋಲಾರ್ ಫ್ಯಾನ್‌ಗಳು ಕಂಪ್ಯೂಟರ್ ಒಳಗಡೆ ಬಳಸುವ ಫ್ಯಾನ್‌ಗಿಂತಲೂ ಸಣ್ಣಗಿದೆ. ಶರ್ಟ್ ಗಾತ್ರಕ್ಕೆ ಅನುಗುಣವಾಗಿ ಎರಡು ಮೂರು ಚಿಕ್ಕ ಪುಟ್ಟ ಸೋಲಾರ್ ಫ್ಯಾನ್‌ಗಳನ್ನು ಒಳಗೊಂಡಿದೆ.

ಬೇಸಗೆಯ ಬಿಸಿಲಿಗೆ ತಂಪು ನೀಡಲು ಬಂದಿದೆ ಸೋಲಾರ್ ಶರ್ಟ್
ಸೋಲಾರ್ ಸೆಲ್‌ಗಳ ಸಹಾಯದಿಂದ ಈ ಅಂಗಿ ಸುಮಾರು 400 ವಾಟ್ ಶಕ್ತಿ ಉತ್ಪಾದಿಸುತ್ತದೆ. ಈ ಶರ್ಟ್ ಉತ್ಪಾದಿಸುವ ವಿದ್ಯುತ್ ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ಸಹ ಚಾರ್ಜ್ ಮಾಡಬಹುದು.

ಬೇಸಗೆಯ ಬಿಸಿಲಿಗೆ ತಂಪು ನೀಡಲು ಬಂದಿದೆ ಸೋಲಾರ್ ಶರ್ಟ್
ಅಂಗಿಯನ್ನು ಧರಿಸಿದಾತ 5.5 ಅಡಿಗಿಂತ ಎತ್ತರದ ವ್ಯಕ್ತಿಯಾದರೆ ಅನಾಯಾಸವಾಗಿ 400 ವ್ಯಾಟ್ ಶಕ್ತಿ ಸಂಗ್ರಹಹಿಸಬಹುದು.

ಬೇಸಗೆಯ ಬಿಸಿಲಿಗೆ ತಂಪು ನೀಡಲು ಬಂದಿದೆ ಸೋಲಾರ್ ಶರ್ಟ್
ಸೋಲಾರ್ ಅಂದ್ರೆ ಯಾವಾಗ್ಲೂ ಬಿಸಿಲಿನಲ್ಲೇ ಇರಬೇಕೆಂಬ ನಿರ್ಬಂಧ ಇದೆ. ಆದರೆ ಈ ಸೋಲಾರ್ ಶರ್ಟ್‌ಗೆ ಅದಕ್ಕಿಂತ ಭಿನ್ನ. ಶರ್ಟ್ ಧರಿಸಿ ಇದರ ಮೇಲೆ ಬಿಸಿಲು ಬಿದ್ದರೆ ಸಾಕು ಇದು ತಂಪಾದ ಅನುಭವ ನೀಡಲು ಸಿದ್ಧವಾಗಿ ಬಿಡುತ್ತದೆ.

ಬೇಸಗೆಯ ಬಿಸಿಲಿಗೆ ತಂಪು ನೀಡಲು ಬಂದಿದೆ ಸೋಲಾರ್ ಶರ್ಟ್
ಸೋಲಾರ್ ಸೆಲ್‌ಗಳನ್ನೊಳಗೊಂಡ ಈ ಶರ್ಟ್ ಬೆಲೆ ರೂ.1,600. ಇದರಿಂದ ಶರೀರದ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗುದಿಲ್ಲ ಎಂದು ಹೇಳುತ್ತಾರೆ ವಿಜ್ಞಾನಿಗಳು.

ಬೇಸಗೆಯ ಬಿಸಿಲಿಗೆ ತಂಪು ನೀಡಲು ಬಂದಿದೆ ಸೋಲಾರ್ ಶರ್ಟ್
ಬೆಂಗಾಲ್ ಎಂಜಿನಿಯರಿಂಗ್ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ಪೋಟೋವೋಲ್ಟಿಕ್ ಸಂಶೋಧಕ ಶಾಂತಿಪಾದ ಚೌಧುರಿ ಈ ಸೋಲಾರ್ ಫ್ಯಾನ್ ಕಂಡುಹಿಡಿದಿದ್ದಾರೆ.


Click it and Unblock the Notifications








