ಮಂಗಳದ ನೆಲದಲ್ಲಿ ಆಲೂಗಡ್ಡೆ ಕೃಷಿ

Written By:

ಮಂಗಳ ಗ್ರಹದಲ್ಲಿ ಮಾನವನ ನೆಲೆಗೆ ಬೇಕಾಗಿರುವ ಹಲವಾರು ಪರೀಕ್ಷೆಗಳು ನಡೆಯುತ್ತಲೇ ಇದೆ. ನೀರಿನ ಶೋಧನೆ, ಕೆಲವು ಅನ್ಯಜೀವಿಗಳು ಅಲ್ಲಿ ಪತ್ತೆಯಾಗಿರುವುದು, ಕಲ್ಲುಗಳು ಕಂಡುಬಂದಿರುವುದು ಹೀಗೆ ಪೂರ್ವಭಾವಿಯಾಗಿ ಅಲ್ಲಿ ಮಾನವನ ನೆಲೆ ಇತ್ತು ಎಂಬುದಕ್ಕೆ ಸಾಕ್ಷಿಗಳು ದೊರೆಯುತ್ತಿದ್ದು ಅಲ್ಲಿನ ಹವಾಮಾನ ಮನುಷ್ಯನ ಬದುಕಿಗೆ ಅನುಗುಣವಾಗಿ ಇದೆಯೇ ಇಲ್ಲವೇ ಎಂಬುದರ ಕುರಿತಾಗಿ ಶೋಧನೆಗಳು ನಡೆಯುತ್ತಿದೆ.

ಓದಿರಿ: ಸ್ಪೇಸ್‌ನಲ್ಲಿ ನಾಸಾದ ಹೂವಿನ ಕೃಷಿ

ಇಂದಿನ ಲೇಖನದಲ್ಲಿ ಇಂತಹುದೇ ಹೊಸದೊಂದು ಅನ್ವೇಷಣೆಯ ಜಾಡುಹಿಡಿದು ನಾವು ನಿಮ್ಮ ಮುಂದೆ ಬಂದಿದ್ದು ಮಂಗಳನ ನೆಲದಲ್ಲಿ ಆಲೂಗಡ್ಡೆ ಬೆಳೆಯುವ ಕ್ರಮಕ್ಕೆ ವಿಜ್ಞಾನಿಗಳು ಮುಂದಾಗಿದ್ದಾರೆ. ವಿಶ್ವದ ಅಗ್ರಮಾನ್ಯ ವಿಜ್ಞಾನಿಗಳು ಈ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅಂತರಾಷ್ಟ್ರೀಯ ಪೊಟಾಟೊ ಸೆಂಟರ್ (ಸಿಐಪಿ) ಪೆರು ಮತ್ತು ನಾಸಾ ಜೊತೆಯಾಗಿ ಈ ಕಾರ್ಯಕ್ಕೆ ಸಿದ್ಧಗೊಳ್ಳುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಂಗಳ ವಾತಾವರಣ

ಆಲೂಗಡ್ಡೆ ಕೃಷಿ

ಮಂಗಳನಲ್ಲಿ ಆಲೂಗಡ್ಡೆ ಕೃಷಿ ನಿರ್ವಹಿಸಲು ನಾವು ಉತ್ಸುಕರಾಗಿದ್ದು ಮಂಗಳದ ವಾತಾವರಣ ಬೆಳೆಗೆ ಪೂರಕವಾಗಿದೆಯೇ ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂಬುದು ಪ್ರಾಜೆಕ್ಟ್ ಮುಖ್ಯಸ್ಥರಾಗಿರುವ ಜೂಲಿಯೊ ಇ ತಿಳಿಸಿದ್ದಾರೆ.

ಹೆಚ್ಚುವರಿಯಾಗಿ ಬೆಳೆಸಲಿದೆ

ಹೆಚ್ಚುವರಿ ಕಾರ್ಬನ್ ಡಯಾಕ್ಸೈಡ್

ಬೆಳೆಗಳ ಬೆಳವಣಿಗೆಗೆ ಮಂಗಳನ ಮಣ್ಣಿನ ಪರೀಕ್ಷೆಗಳನ್ನು ನಡೆಸುತ್ತಿದ್ದು ಅಲ್ಲಿನ ಹೆಚ್ಚುವರಿ ಕಾರ್ಬನ್ ಡಯಾಕ್ಸೈಡ್ ಇದು ಎಂದಿಗಿಂತಲೂ ಆಲೂಗಡ್ಡೆ ಬೆಳೆಯನ್ನು ಹೆಚ್ಚುವರಿಯಾಗಿ ಬೆಳೆಸಲಿದೆ ಎಂಬುದು ಜೂಲಿಯೊ ಅಭಿಪ್ರಾಯವಾಗಿದೆ.

ಮಂಗಳನ ಅಂಗಳದಲ್ಲಿ ಆಹಾರ

95 ಶೇಕಡಾ ಕಾರ್ಬನ್ ಡೈಯಾಕ್ಸೈಡ್

ಮಂಗಳನ ವಾತಾವರಣದಲ್ಲಿ 95 ಶೇಕಡಾ ಕಾರ್ಬನ್ ಡೈಯಾಕ್ಸೈಡ್ ಇದೆ. ಮಾನವರಿಗಾಗಿ ಮಂಗಳನ ಅಂಗಳದಲ್ಲಿ ಆಹಾರವನ್ನು ಬೆಳೆಯುವ ಸೌಲಭ್ಯವನ್ನು ಕೂಡಲೇ ನೆರವೇರಿಸಲಾಗುವುದು ಎಂಬುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

ಹೆಚ್ಚಿನ ನ್ಯೂಟ್ರೀನ್ ಅಂಶ

ಸೂಕ್ಷ್ಮ ಪರಿಸರ

ಇಂತಹ ಸೂಕ್ಷ್ಮ ಪರಿಸರದಲ್ಲಿ ಆಲೂಗಡ್ಡೆ ಬೆಳೆಯನ್ನು ಬೆಳೆಯುವುದು ಹೆಚ್ಚು ಸವಾಲಿನದ್ದಾಗಿದ್ದು ಹೆಚ್ಚಿನ ನ್ಯೂಟ್ರೀನ್ ಅಂಶಗಳನ್ನು ಇದರಲ್ಲಿ ನಮಗೆ ಕಾಣಬಹುದಾಗಿದೆ.

ಹಾನಿಕರ

ಸಮಸ್ಯೆಗಳನ್ನು ಎದುರಿಸುತ್ತದೆ

ವಿಟಮಿನ್ ಸಿ, ಐರನ್ ಮತ್ತು ಜಿಂಕ್ ಆಲೂಗಡ್ಡೆಯಲ್ಲಿದ್ದು, ಕೆಲವೊಮ್ಮೆ ಬದಲಾದ ವಾತಾವರಣವು ಬೆಳೆಯನ್ನು ಸಾಯಿಸುವ ಮಟ್ಟಿಗೆ ಹಾನಿಕರವಾಗಿರುತ್ತವೆ. ಆದರೆ ಆಲೂಗಡ್ಡೆ ಇಂತಹ ಸಮಸ್ಯೆಗಳನ್ನು ಎದುರಿಸುತ್ತದೆ.

ಸೂಕ್ಷ್ಮ ಪರಿಸರ

ಮನುಷ್ಯರ ಬದುಕಿಗೂ ಅಲ್ಲಿ ನೆಲೆ

ಆಲೂಗಡ್ಡೆಯನ್ನೇ ಮಂಗಳನ ಸೂಕ್ಷ್ಮ ಪರಿಸರದಲ್ಲಿ ಬೆಳೆಯುತ್ತಿರುವ ನಾವು ಮನುಷ್ಯರ ಬದುಕಿಗೂ ಅಲ್ಲಿ ನೆಲೆಯನ್ನು ಆದಷ್ಟು ಬೇಗನೇ ಕಲ್ಪಿಸುತ್ತೇವೆ.

ಹಲವಾರು ಸಂಕಷ್ಟಗಳು

ಹಲವಾರು ಸಮಸ್ಯೆ

ಭೂಮಿಯಲ್ಲೇ ಈಗಾಗಲೇ ಹಲವಾರು ಸಂಕಷ್ಟಗಳು ಎದುರಾಗುತ್ತಿದ್ದು ಮಂಗಳನಲ್ಲಿ ಮಾನವನಿಗೆ ಬದುಕಲು ಪೂರಕವಾಗಿರುವ ಅಂಶಗಳನ್ನು ಒದಗಿಸುವುದರಿಂದ ಹಲವಾರು ಸಮಸ್ಯೆಗಳನ್ನು ನೀಗಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot