ಚಂದ್ರನ ಅಂಗಳದಲ್ಲಿ ಬಿಯರ್ ಉತ್ಪಾದನೆ..!!

Written By:

ಚಂದ್ರನ ಅಂಗಳದಲ್ಲಿ ಬಿಯರ್ ಉತ್ಪಾದನೆ ಮಾಡಲು ಅಮೆರಿಕಾದ ವಿದ್ಯಾರ್ಥಿಗಳ ತಂಡ ಸಜ್ಜಾಗಿದೆ.! ಹೌದು, ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಟೀಂ ಇಂಡಸ್ ಆಯೋಜಿಸಿದ್ದ ಲ್ಯಾಬ್ ಟು ಮೂನ್ ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಮೆರಿಕಾ ವಿದ್ಯಾರ್ಥಿಗಳು ಈ ಹೊಸ ಪ್ರಯೋಗವನ್ನು ಅಂತರಾಷ್ಟ್ರೀಯ ತೀರ್ಪುಗಾರರ ಮುಂದಿಟ್ಟಿದ್ದಾರೆ.

ಚಂದ್ರನ ನೆಲದಲ್ಲಿ ಯೀಸ್ಟ್ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ಸಂಶೋಧನೆ ನಡೆಯಲಿದ್ದು, ಇದೇ ಸಂಶೋಧನೆಯನ್ನು ಆಧಾರವಾಗಿಟ್ಟುಕೊಂಡು, ಬಾಹ್ಯಾಕಾಶದಲ್ಲಿ ಬಿಯರ್ ಉತ್ಪಾದನೆ, ಬ್ರೆಡ್ ಸೇರಿದಂತೆ ಯೀಸ್ಟ್ ಸಂಬಂಧಿತ ಆಹಾರ ಪದಾರ್ಥಗಳು ಹಾಗೂ ಔಷಧಗಳ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಲಿದೆ ಎಂದು ಮೆರಿಕಾ ವಿದ್ಯಾರ್ಥಿ ವಿಜ್ಞಾನಿಗಳು ಹೇಳಿದ್ದಾರೆ.

 ಚಂದ್ರನ ಅಂಗಳದಲ್ಲಿ ಬಿಯರ್ ಉತ್ಪಾದನೆ..!!

ಅಮೆರಿಕಾಕ್ಕೆ ತಲೆನೋವಾದ ಟ್ರಂಪ್ ಸ್ಮಾರ್ಟ್‌ಫೋನ್!!

ಟೀಂ ಇಂಡಸ್ ನ ಲ್ಯಾಬ್ ಟು ಮೂನ್ ಸ್ಪರ್ಧೆಯಲ್ಲಿ 3000 ತಂಡಗಳಲ್ಲಿ 25 ತಂಡಗಳು ಆಯ್ಕೆಯಾಗಿವೆ. ಚಂದ್ರನ ಅಂಗಳದಲ್ಲಿ ಬಿಯರ್ ಉತ್ಪಾದನೆಯ ಕಲ್ಪನೆ ಸ್ನೇಹಿತರೊಂದಿಗೆ ತಮಾಷೆ ಮಾತಾಗಿತ್ತು ಆದರೆ ಅದೀಗ ಪ್ರಯೋಗಕ್ಕೆ ಸಿದ್ದವಾಗಿದೆ ಎಂದು ಅಮೆರಿಕಾದ ಸ್ಯಾನ್ ಡಿಗೋನಲ್ಲಿರುವ ಕ್ಯಾಲಿಫೋರ್ನಿಯಾದ ವಿದ್ಯಾರ್ಥಿ ನೀಕಿ ಅಶಾರಿ ಸಂತಸಪಡುತ್ತಿದ್ದಾರೆ.

 ಚಂದ್ರನ ಅಂಗಳದಲ್ಲಿ ಬಿಯರ್ ಉತ್ಪಾದನೆ..!!

ಇನ್ನು ಈ ಸಂಶೋಧನೆಯ ಮಾದರಿಯನ್ನು ಅಂತಾರಾಷ್ಟ್ರೀಯ ತೀರ್ಪುಗಾರರ ಎದುರು ಮಾರ್ಚ್ನಲ್ಲಿ ಪ್ರದರ್ಶಿಸಬೇಕಾಗಿದ್ದು, ಅಲ್ಲಿ ತೀರ್ಪುಗಾರರು ಒಪ್ಪಿಗೆ ಸೂಚಿಸಿದರೆ ವಿದ್ಯಾರ್ಥಿಗಳು ಬಿಯರ್‌ ತಯಾರಿಸುವ ತಮ್ಮ ಯೋಜನೆಯನ್ನು ಮುಂದುವರೆಸಬಹುದಾಗಿದೆ.

Read more about:
English summary
It may not seem the most urgent question currently facing space science. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot