ಅಮೆರಿಕಾಕ್ಕೆ ತಲೆನೋವಾದ ಟ್ರಂಪ್ ಸ್ಮಾರ್ಟ್‌ಫೋನ್!!

Written By:

ಪ್ರಂಪಂಚದಲ್ಲಿಯೇ ಪ್ರಭಲ ರಾಷ್ಟ್ರ ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾಕ್ಕೆ ಸ್ಮಾರ್ಟ್‌ಫೊನ್ ವಿಷಯದಲ್ಲಿಯೂ ಚಿಂತೆ ಮೂಡಿಸಿದ್ದಾರೆ.! ಹೌದು, ಅಮೆರಿಕಾ ಸರ್ಕಾರದ ಅಧೀನದ ಫುಲ್‌ ಸೆಕ್ಯೂರ್ ಸ್ಮಾರ್ಟ್‌ಫೋನ್‌ ಬಳಸದೆ ದೇಶಕ್ಕೆ ತಲೆನೋವು ತಂದಿದ್ದಾರೆ.!!

ಅಮೆರಿಕಾದಲ್ಲಿ ಯಾರೆ ಚುನಾಯಿತ ಅಧ್ಯಕ್ಷರಾದರೂ ಅವರಿಗೆ ಸರ್ಕಾರದಿಂದ ಫುಲ್‌ ಸೆಕ್ಯೂರ್ ಆಗಿರುವ ಫೋನ್ ನೀಡಲಾಗುತ್ತದೆ. ಆದರೆ, ಪ್ರಸ್ತುತ ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ಇನ್ನು ಸಹ ತಮ್ಮ ಹಳೆ ಸೆಕ್ಯೂರ್ ಆಗಿರದ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಅನ್ನೇ ಉಪಯೋಗಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ.

ಅಮೆರಿಕಾಕ್ಕೆ ತಲೆನೋವಾದ ಟ್ರಂಪ್ ಸ್ಮಾರ್ಟ್‌ಫೋನ್!!

ನೋಕಿಯಾ ಆಂಡ್ರಾಯ್ಡ್ ಜನರಿಗೆ ಹುಚ್ಚು ಹಿಡಿಸಿದೆ!! ಏಕೆ ಗೊತ್ತಾ?

ಪ್ರಪಂಚದಲ್ಲಿಯೇ ಅತ್ಯುತ್ತಮ ತಂತ್ರಜ್ಞಾನವನ್ನು ಹೊಂದಿರುವ ಅಮೆರಿಕಾ ತಮ್ಮ ಅಧ್ಯಕ್ಷರಿಗಾಗಿಯೇ ಅತ್ಯದ್ಬುತ ಸ್ಮಾರ್ಟ್‌ಫೋನ್‌ ಒಂದನ್ನು ತಯಾರಿಸುತ್ತದೆ. ತನ್ನ ಶತ್ರು ರಾಷ್ಟಗಳ ತಂತ್ರಜ್ಞಾನದಿಂದಲೂ ಈ ಫೋನ್‌ ಹ್ಯಾಕ್‌ ಆಗದಂತೆ ತಡೆಯುವ ತಂತ್ರಜ್ಞಾನವನ್ನು ಇದು ಹೊಂದಿರುತ್ತದೆ. ಇನ್ನು ಇದನ್ನು ನಿರ್ವಹಣೆ ಮಾಡಲೆಂದೆ ಒಂದು ತಂಡ ಸಹ ರಚನೆಯಾಗಿರುತ್ತದೆ.!

ಅಮೆರಿಕಾಕ್ಕೆ ತಲೆನೋವಾದ ಟ್ರಂಪ್ ಸ್ಮಾರ್ಟ್‌ಫೋನ್!!

ಅಮೆರಿಕಾದಂತಹ ಬೃಹತ್ ರಾಷ್ಟದ ಅಧ್ಯಕ್ಷರು ಬಹುತೇಕ ಎಲ್ಲಾ ಅಧಿಕಾರವನ್ನು ಹೊಂದಿರುತ್ತಾರೆ. ದೇಶದ ಎಲ್ಲಾ ಆಗುಹೋಗುಗಳ ಮಾಹಿತಿ ಅಧ್ಯಕ್ಷರ ಬಳಿ ಇರುತ್ತದೆ. ಇನ್ನು ಶತ್ರು ರಾಷ್ಟ್ರಗಳು ಅಧ್ಯಕ್ಷರ ಫೋನ್‌ ಹ್ಯಾಕ್ ಮಾಡಿ ದೇಶದ ಭದ್ರತೆಗೆ ಏಟು ನೀಡುವ ಅಪಾಯವಿರುವುದರಿಂದ ಅಮೆರಿಕಾಕ್ಕೆ ಟ್ರಂಪ್‌ ಅವರ ಮೇಲೆ ಚಿಂತೆಯಾಗಿದೆ.

English summary
US President Donald Trump has not abandoned his old Android smartphone. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot