WhatsApp ನಲ್ಲಿ ಕೊನೆಗೂ ಬಂತು ಸ್ಕ್ರೀನ್ ಶೇರ್ ಫೀಚರ್ಸ್: ಗೂಗಲ್ ಮೀಟ್, ಜೂಮ್‌ನಂತ ಸೌಲಭ್ಯ!
ಪ್ರಮುಖ ಮೆಸೆಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್‌ನಲ್ಲಿ (WhatsApp) ಬಳಕೆದಾರರಿಗೆ ಹೊಸ ಅನುಭವ ಹಾಗೂ ಪ್ರಯೋಜನ ನೀಡುವ ಹಿನ್ನೆಲೆ ಹೊಸ ಹೊಸ ಫೀಚರ್ಸ್ ಅನ್ನು ಆಗಾಗ್ಗೆ ಪರಿಚಯಿಸಿಕೊಂಡು ಬರಲಾಗುತ್ತಿದೆ. ಈ ನಡುವೆ ಪ್ರಮುಖ ಹಾಗೂ ಇಂದಿನ ಸಮಯಕ್ಕೆ ಅಗತ್ಯವಾಗಿ ಬೇಕಾಗಿದ್ದ ಫೀಚರ್ಸ್ ಅನ್ನು ಪರಿಚಯಿಸುತ್ತಿದೆ.
ಹೌದು, ವಾಟ್ಸಾಪ್‌ನಲ್ಲಿ ಇದೀಗ ವಿಡಿಯೋ ಕರೆಗಳಿಗೆ ಸ್ಕ್ರೀನ್ ಶೇರ್ ಫೀಚರ್ಸ್ (screen share feature) ಅನ್ನು ಪರಿಚಯಿಸಲಾಗುತ್ತಿದೆ. ಇದು ಗ್ರೂಪ್ ಕರೆಗಳಲ್ಲೂ(Group call) ಕೆಲಸ ಮಾಡಲಿದ್ದು, ಸಹೋದ್ಯೋಗಿಗಳೊಂದಿಗೆ ಈ ಮೂಲಕ ಮೀಟಿಂಗ್ ಅಥವಾ ಸ್ನೇಹಿತರೊಂದಿಗೆ ಪ್ರವಾಸವನ್ನು ಯೋಜಿಸಬಹುದು. ಇಷ್ಟು ಮಾತ್ರವಲ್ಲದೆ ಇನ್ನೂ ಅನೇಕಲ ವಿಷಯಗಳಿಗೆ ಈ ಫೀಚರ್ಸ್ ಬಳಕೆಗೆ ಬರಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಸ್ಕ್ರೀನ್ ಶೇರ್ ಫೀಚರ್ಸ್: ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ವಾಟ್ಸಾಪ್‌ಗಾಗಿ ಹೊಸ ಫೀಚರ್ಸ್ ಅನ್ನು ಘೋಷಣೆ ಮಾಡಿದ್ದಾರೆ. ಇದು ಬಳಕೆದಾರರಿಗೆ ವಿಡಿಯೋ ಕರೆ ಸಮಯದಲ್ಲಿ ತಮ್ಮ ಡಿಸ್‌ಪ್ಲೇಯನ್ನು ಶೇರ್ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಅಂದರೆ ಈ ಫೀಚರ್ಸ್ ಕ್ರಾಸ್-ಪ್ಲಾಟ್‌ಫಾರ್ಮ್ ಹೊಂದಿಕೆಯಾಗಲಿದ್ದು, ಬಳಕೆದಾರರು ತಮ್ಮ ಲೈವ್ ವೀಕ್ಷಣೆಯನ್ನು ಕರೆಯಲ್ಲಿರುವ ಒಬ್ಬ ಅಥವಾ ಹೆಚ್ಚಿನ ವ್ಯಕ್ತಿಗಳಿಗೆ ಸುಲಭವಾಗಿ ತೋರಿಸಲು ಇದು ಅನುವು ಮಾಡಿಕೊಡುತ್ತದೆ.
ಇನ್ನು ಕೆಲಸಕ್ಕಾಗಿ ಡಾಕ್ಯುಮೆಂಟ್‌ಗಳನ್ನು ಶೇರ್ ಮಾಡಿಕೊಳ್ಳುವುದು, ಕುಟುಂಬದೊಂದಿಗೆ ಫೋಟೋಗಳನ್ನು ಬ್ರೌಸ್ ಮಾಡುವುದು, ರಜೆಯನ್ನು ಯೋಜಿಸುವುದು ಅಥವಾ ಸ್ನೇಹಿತರೊಂದಿಗೆ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದು ಅಥವಾ ತಾಂತ್ರಿಕ ವಿಷಯಗಳ ಸಂಬಂಧ ಹಿರಿಯರಿಗೆ ಸಹಾಯ ಮಾಡುವುದು ಸೇರಿದಂತೆ ಅನೇಕ ಕೆಲಸಗಳನ್ನು ಈ ಫೀಚರ್ಸ್ ಮೂಲಕ ಮಾಡಬಹುದಾಗಿದೆ ಎಂದು ವಾಟ್ಸಾಪ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಈ ಫೀಚರ್ಸ್‌ಬಳಕೆ ಮಾಡಬೇಕು ಎಂದರೆ ವಾಟ್ಸಾಪ್ ನ ಇತ್ತೀಚಿನ ಆವೃತ್ತಿಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಿದೆ. ಇದಾದ ನಂತರ ವಿಡಿಯೋ ಕರೆ ಸಮಯದಲ್ಲಿ ಡಿಸ್‌ಪ್ಲೇನ ಕೆಳಭಾಗದಲ್ಲಿ ಹೊಸ 'ಶೇರ್' ಐಕಾನ್ ಕಾಣಿಸಿಕೊಳ್ಳುತ್ತದೆ. ಆ ಐಕಾನ್ ಅನ್ನು ಟ್ಯಾಪ್ ಮಾಡುವ ಸ್ಕ್ರೀನ್ ಶೇರ್ ಫೀಚರ್ಸ್‌ಗೆ ಎಂಟ್ರಿ ಪಡೆದುಕೊಳ್ಳಬಹುದು. ಇದಾದ ನಂತರದಲ್ಲಿ ಅದನ್ನು ಸ್ಕ್ರೀಮ್ ಮಾಡಲು ಕೆಲಸ ಆರಂಭ ಆಗುತ್ತದೆ.
ಪ್ರಮುಖ ವಿಷಯ ಏನೆಂದರೆ ಈ ಫೀಚರ್ಸ್ ಅನ್ನು ಹಂತ ಹಂತವಾಗಿ ಹೊರತರಲಾಗುತ್ತಿದೆ. ಕೆಲವರು ಇದನ್ನು ಈಗಾಗಲೇ ತಮ್ಮ ವಾಟ್ಸಾಪ್‌ನಲ್ಲಿ ನೋಡುತ್ತಿದ್ದರೆ, ಇನ್ನೂ ಹಲವು ಇದನ್ನು ಪಡೆದುಕೊಳ್ಳಲು ಸ್ವಲ್ಪ ಸಮಯ ಕಾಯಬೇಕಿದೆ. ಉಳಿದಂತೆ ಈ ಫೀಚರ್ಸ್ ವಿಡಿಯೋ ಕರೆಗಳಿಗಾಗಿ ಲ್ಯಾಂಡ್‌ಸ್ಕೇಪ್ ಮೋಡ್ ಅನ್ನು ಸಹ ಬೆಂಬಲಿಸಲಿದ್ದು, ವಿಶಾಲವಾದ ಮತ್ತು ಹೆಚ್ಚು ತಲ್ಲೀನಗೊಳಿಸುವ ವೀಕ್ಷಣೆಯ ಅನುಭವಕ್ಕಾಗಿ ಡೆಸ್ಕ್‌ಟಾಪ್ ಬಳಕೆ ಮಾಡಿಕೊಳ್ಳಬಹುದು.

ಅದರಲ್ಲೂ ಈ ವಾಟ್ಸಾಫ್ ನ ಸ್ಕ್ರೀನ್-ಶೇರ್ ಫೀಚರ್ಸ್ ಗ್ರೂಪ್ ಕರೆಗಳಲ್ಲೂ ಸಹ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ವೃತ್ತಿಪರರು ಹಲವು ರೀತಿಯಲ್ಲಿ ಇದರಿಂದ ಪ್ರಯೋಜನ ಪಡೆದುಕೊಳ್ಳಬಹುದು. ಅದರಲ್ಲೂ ಇದೇ ಫೀಚರ್ಸ್‌ಗಾಗಿ ಈ ಹಿಂದೆ ಗೂಗಲ್ ಮೀಟ್ ಮತ್ತು ಜೂಮ್ ನಂತಹ ಆಪ್‌ಗಳನ್ನು ಬಳಕೆ ಮಾಡಬೇಕಿತ್ತು. ಆದರೆ, ಈಗ ಇದೇ ಪ್ರಯೋಜನ ವಾಟ್ಸಾಪ್‌ನಲ್ಲೇ ಸಿಗುತ್ತಿರುವುದರಿಂದಾಗಿ ಬಹಳಷ್ಟು ಜನರು ಸಂತಸಗೊಂಡಿದ್ದಾರೆ.
ಈ ನಡುವೆ ವಾಟ್ಸಾಪ್ ಆಪ್‌ನ ಯುಐಗೆ ಬದಲಾವಣೆಯನ್ನು ಮಾಡಲಿದೆ ಎನ್ನಲಾಗಿದೆ. ಅದೂ ಸಹ ಕರೆ ನೋಟಿಫಿಕೇಶನ್ ಸಂಬಂಧ. ಈ ಬಗ್ಗೆ WABetaInfo ವರದಿ ಮಾಡಿದ್ದು , ವಾಟ್ಸಾಪ್ ಆಂಡ್ರಾಯ್ಡ್ ಬೀಟಾ (Android Beta) ಪರೀಕ್ಷಕರಿಗೆ ಹೊಸ ಕರೆ ಅಧಿಸೂಚನೆಗಳ ಇಂಟರ್ಫೇಸ್ ಅನ್ನು ಪರಿಚಯಿಸಿದೆಯಂತೆ. ಈ ಸೌಲಭ್ಯ ವಾಟ್ಸಾಪ್ ಬೀಟಾ ಅಪ್ಡೇಟ್ ಆವೃತ್ತಿ 2.23.16.14 ನೊಂದಿಗೆ, ಆಪ್ ಹೊಸ ಇಂಟರ್ಫೇಸ್‌ನೊಂದಿಗೆ ಪ್ರಯೋಗಿಸುತ್ತಿದೆ ಎಂದು ಮಾಹಿತಿ ನೀಡಿದೆ.
ಈ ಫೀಚರ್ಸ್ ನಲ್ಲಿ ಒಳಬರುವ ಕರೆಯನ್ನು ಸ್ವೀಕರಿಸಲು ಅಥವಾ ನಿರಾಕರಿಸಲು ಅನುಮತಿಸುವ ಬಟನ್‌ಗಳ ಆಯ್ಕೆ ವಿಶೇಷವಾಗಿ ಲಭ್ಯ ಇರಲಿವೆ. ಪ್ರತಿ ಬಟನ್‌ನಿಂದ ನಿರ್ವಹಿಸಲಾದ ಕ್ರಿಯೆಯನ್ನು ಬಳಕೆದಾರರಿಗೆ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಈ ಕರೆ ನೋಟಿಫಿಕೇಶನ್‌ನ ಹೊಸ ಇಂಟರ್ಫೇಸ್ ಫೀಚರ್ಸ್ ಸದ್ಯಕ್ಕೆ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಎಲ್ಲರಿಗೂ ಸಿಗಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications








