2ನೇ ಮಹಾಯುದ್ಧದಲ್ಲಿ ಗೂಢಲಿಪೀಕರಣಕ್ಕೆ ಬಳಸುತ್ತಿದ್ದ ಮಷಿನ್ 'ಇಬೇ'ನಲ್ಲಿ ಪತ್ತೆ

By Suneel
|

2ನೇ ಮಹಾಯುದ್ಧದ ಸಮಯದಲ್ಲಿ ಸಂವಹನಕ್ಕಾಗಿ ಯಾವ ಮಾಧ್ಯಮವನ್ನು ಬಳಸುತ್ತಿದ್ದರು ಎಂಬುದು ಬಹುಶಃ ಯಾರಿಗೂ ತಿಳಿದಿರಲ್ಲ. 30 ಕ್ಕೂ ಹೆಚ್ಚು ದೇಶಗಳು ಯುದ್ಧದಲ್ಲಿ ತೊಡಗಿದ್ದರು ಸಹ ಅಲ್ಲಿ ಜರ್ಮನ್‌ನ ಹಿಟ್ಲರ್'ನನ್ನು ಪ್ರಮುಖವಾಗಿ 2ನೇ ಮಹಾಯುದ್ಧದ ಇತಿಹಾಸದಲ್ಲಿ ನೆನೆಯಲಾಗುತ್ತದೆ.

2 ನೇ ಮಹಾಯುದ್ಧದ ನೆಡೆದದ್ದು 71 ವರ್ಷಗಳ ಹಿಂದೆ. ಆ ಸಮಯದಲ್ಲಿ ಹಿಟ್ಲರ್‌ ತನ್ನ ಸೇನಾಪತಿಗಳಿಗೆ ವಯಕ್ತಿಕ ಮೆಸೇಜ್‌ಗಳನ್ನು ಕಳುಹಿಸಿಲು ಬಳಸುತ್ತಿದ್ದ 'ಗೂಢಲಿಪೀಕರಣ ಮಷಿನ್' ಈಗ ಇ-ಕಾಮರ್ಸ್ "ಇಬೇ (eBay)' ನಲ್ಲಿ ಕಾಣಿಸಿಕೊಂಡಿದೆ. ಈ ಮಷಿನ್ ಜರ್ಮನ್‌ ಭಾಷೆಯಲ್ಲಿನ ಮೆಸೇಜ್‌ಗಳನ್ನು ಸಿಕ್ರೇಟ್‌ ಕೋಡ್‌ ಆಗಿ ಬದಲಿಸಿ ಸೇನಾಪತಿಗಳಿಗೆ ನೀಡುತ್ತಿತ್ತಂತೆ.

ವಿಶೇಷ ಅಂದ್ರೆ ಎರಡನೇ ಮಹಾಯುದ್ಧದಂತ ಬೃಹತ್‌ ಘೋರ ಘಟನೆಯಲ್ಲಿ ನಾಶವಾಗದೆ ಉಳಿದಿರುವುದೇ ಈ ಮಷಿನ್‌ ಬಗ್ಗೆ ಕುತೂಹಲ ಮೂಡಲು ಕಾರಣವಾಗಿದೆ. ಪ್ರಸ್ತುತ ಇ-ಕಾಮರ್ಸ್‌ ಸೈಟ್‌ 'ಇಬೇ'ನಲ್ಲಿ 9.50 pounds (ಸುಮಾರು 925 ರೂಪಾಯಿಗಳು)ಗೆ ಪತ್ತೆಯಾಗಿದೆ.

'ಕಪ್ಪು ಕುಳಿ' ಬಗೆಗಿನ ಅದ್ಭುತ ಸತ್ಯಾಂಶಗಳು

1

1

ಬ್ರಿಟನ್‌ನ ಬ್ಲೆಚ್ಲಿ ಪಾರ್ಕ್‌ ಪ್ರದೇಶದ 'ದಿ ನ್ಯಾಷನಲ್‌ ಮ್ಯೂಸಿಯಂ ಆಪ್‌ ಕಂಪ್ಯೂಟಿಂಗ್‌"ನ ಸ್ವಯಂಸೇವಕರು ಲೊರೆನ್ಜ್‌ ಮಷಿನ್‌ ಅನ್ನು 'ಇಬೇ' ನಲ್ಲಿ ಪತ್ತೆಹಚ್ಚಿದ್ದಾರೆ. ಐತಿಹಾಸಿಕ 'ಟೆಲಿಗ್ರಾಂ ಮಷಿನ್' ಎಂದೇ ಪ್ರಸಿದ್ದವಾದ 'ಲಾರೆನ್ಜ್ ಮಷಿನ್' 'ಇಬೇ' ಇ-ಕಾಮರ್ಸ್‌ ಸೈಟ್‌ನಲ್ಲಿ ಬೆಲೆ 9.50 ಪೌಂಡ್ಸ್‌ ಟ್ಯಾಗ್‌ನಲ್ಲಿದೆ.

2

2

ಇಬೇ ಸೈಟ್‌ ಅನ್ನು ಸ್ಕ್ಯಾನ್‌ ಮಾಡುವಾಗ 'ದಿ ನ್ಯಾಷನಲ್‌ ಮ್ಯೂಸಿಯಂ ಆಫ್‌ ಕಂಪ್ಯೂಟಿಂಗ್‌'ನ ಸ್ಯಯಂ ಸೇವಕರೊಬ್ಬರು 'ಲಾರೆನ್ಜ್ ಮಷಿನ್' ಟೆಲಿಪ್ರಿಂಟರ್‌ನ ಫೋಟೋಗ್ರಾಫ್‌ ಅನ್ನು ನೋಡಿದ್ದಾರೆ. ನಂತರದಲ್ಲಿ ಇದೇ ರೀತಿಯ ಮಷಿನ್‌ ಇತರೆ ಎಲ್ಲಾದರೂ ದೊರೆಯುವುದೇ ಎಂದು ಪರಿಶೀಲಿಸಿದಾಗ ವಾಸ್ತವವಾಗಿ ಇದೇ ಮೂಲತಃ ಒರಿಜಿನಲ್‌ ಮಷಿನ್‌ ಎಂದು ತಿಳಿಯಲಾಗಿದೆ.

3

3

ಜಾನ್‌ ವೆಟ್ಟರ್‌ ಎಂಬುವವರು ಹಿಟ್ಲರ್ ಸೇನಾದಿಪತಿಗಳಿಗೆ ಗೂಢಲಿಪೀಕರಣ ಮೆಸೇಜ್‌ ಕಳುಹಿಸಿಲು ಬಳಸುತ್ತಿದ್ದ ಈ ಮಷಿನ್‌ ಅನ್ನು 10 ಪೌಂಡ್‌ಗೆ ಖರೀದಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

4

4

ಟೆಲಿಪ್ರಿಂಟರ್, ಹೋಲಿಕೆಯಲ್ಲಿ ಟೈಪ್‌ ರೈಟರ್‌ನಂತೆ ಕಾಣುತ್ತದೆ. ಆದರೆ ಇದು ಜರ್ಮನ್‌ನಲ್ಲಿ ಸರಳ ಮೆಸೇಜ್‌ಗಳನ್ನು ಕಳುಹಿಸಲು ಬಳಸಲಾಗುತ್ತಿತ್ತಂತೆ.

5

5

ಮೆಸೇಜ್‌ಗಳನ್ನು ಗೂಢಲಿಪೀಕರಣಕ್ಕೆ ಬದಲಿಸಲು ಲಾರೆನ್ಜ್ ಮಷಿನ್‌ 12 ಪ್ರತ್ಯೇಕ ಚಕ್ರಗಳನ್ನು ಬಳಸಿ ಕೋಡ್‌ ಆಗಿ ಬದಲಿಸುತ್ತಿತ್ತಂತೆ.

6

6

ಬಕಿಂಗ್‌ಘಾಮ್ಸೈರ್‌ ಮ್ಯೂಸಿಯಂ ಪ್ರಸ್ತುತದಲ್ಲಿ ಮಷಿನ್‌ನ ಪ್ರಮುಖ ಭಾಗವಾದ ಮೊಟಾರ್‌ ಅನ್ನು ಪತ್ತೆಹಚ್ಚುವಂತೆ ಜನರಲ್ಲಿ ಬೇಡಿಕೊಂಡಿದೆ.

7

7

ಟೆಲಿಪ್ರಿಂಟರ್‌ ಅನ್ನು ಸ್ವಯಂ ಸೇವಕರು ಮ್ಯೂಸಿಯಂಗೆ ತಂದಿದ್ದು, ಎರಡನೇ ಮಹಾಯುದ್ಧ ಸಮಯದಲ್ಲಿ ಅಧಿಕೃತ ನಂಬರ್‌ ಅನ್ನು ಜರ್ಮನ್‌ ಮಿಲಿಟರಿಯಿಂದ ಪಡೆದಿರುವುದನ್ನು ಪತ್ತೆ ಹಚ್ಚಿದ್ದಾರೆ.

8

8

'ದಿ ನ್ಯಾಷನಲ್‌ ಮ್ಯೂಸಿಯಂ ಆಫ್‌ ಕಂಪ್ಯೂಟಿಂಗ್‌'ನ ಅಧ್ಯಕ್ಷರಾದ 'ಆಂಡಿ ಕ್ಲಾರ್ಕ್', " ಲೊರೆನ್ಜ್‌ ಸುರಕ್ಷಿತ ಪ್ರದೇಶದಲ್ಲಿ ನಿಯೋಜಿತಗೊಂಡಿದ್ದು, ' ಲಾರೆನ್ಜ್ ಪ್ರಖ್ಯಾತ ಪೋರ್ಟೆಬಲ್‌ಎನಿಗ್ಮಾ ಮಷಿನ್‌ಗಿಂತ ದೊಡ್ಡದಾಗಿದೆ'" ಎಂದು ಹೇಳಿದ್ದಾರೆ. ಎಲ್ಲರೂ ಸಹ ಎನಿಗ್ಮಾ ಬಗ್ಗೆ ತಿಳಿದಿದ್ದಾರೆ. ಆದರೆ ಲಾರೆನ್ಜ್ ಮಷಿನ್‌ ಚಾತುರ್ಯ ಸಂವಹನಕ್ಕೆ ಬಳಕೆಯಾಗಿದೆ ಎಂದು ಕ್ಲಾರ್ಕ್‌ ಹೇಳಿದ್ದಾರೆ.

9

9

"ಮಷಿನ್ ನಮಗೆ ಗೂಢಲಿಪೀಕರಣ ಕೋಡ್‌ ಹೇಗೆ ಎಂಬುದನ್ನ ತಿಳಿಸಲು ಉಪಯೋಗವಾಗುತ್ತದೆ. ಇದರಿಂ ಪ್ರತಿ ಪ್ರಕ್ರಿಯೆಗಳನ್ನು ಸಹ ತಿಳಿಯಬಹುದಾಗಿದೆ. ಲಾರೆನ್ಜ್, ಕಪ್ಪು ಕೋಟಿಂಗ್‌ ಹೊಂದಿದ‌ ಎಲೆಕ್ಟ್ರಿಕ್‌ ಮೋಟಾರ್‌ನಂತೆ ಕಾಣುತ್ತದೆ. ಆದರೆ ಇದರ ಪ್ರಮುಖ ಭಾಗ ಮೊಟಾರ್‌ ಮಿಸ್ ಆಗಿದ್ದು ಅದನ್ನು ಮ್ಯೂಸಿಯಂ ಸ್ವಯಂ ಸೇವಕರು ಹುಡುಕುತ್ತಿದ್ದಾರೆ" ಎಂದು ಆಂಡಿ ಕ್ಲಾರ್ಕ್‌ ಹೇಳಿದ್ದಾರೆ.

Best Mobiles in India

English summary
Secret German WWII Code Encrypting Machine Found on eBay. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X