'ಕಪ್ಪು ಕುಳಿ' ಬಗೆಗಿನ ಅದ್ಭುತ ಸತ್ಯಾಂಶಗಳು

By Suneel
|

ಕಪ್ಪು ಕುಳಿ (Black Hole)- ಕಪ್ಪು ಕುಳಿ ಎಂಬುದು ಬಾಹ್ಯಾಕಾಶದಲ್ಲಿ ಅತಿಹೆಚ್ಚು ಗುರುತ್ವಾಕರ್ಷಣೆಯನ್ನು ಹೊಂದಿರುವ ಪ್ರದೇಶವಾಗಿದೆ. ಬೆಳಕು ಸಹ ಆ ಪ್ರದೇಶದಿಂದ ಹೊರಬರಲು ಸಾಧ್ಯವಿಲ್ಲ. ಕಾರನ ಕಪ್ಪು ಕುಳಿ ಪ್ರದೇಶವು ಅತಿ ಚಿಕ್ಕ ಪ್ರದೇಶವಾಗಿದ್ದು ಎಲ್ಲವು ಅತಿಹೆಚ್ಚು ಗುರುತ್ವ ಬಲದಿಂದ ಹಿಡಿಯಲ್ಪಡುತ್ತವೆ. ನಕ್ಷತ್ರಗಳು ಸಾಯುವುದು ಇಲ್ಲೇ. ಯಾವ ಬೆಳಕು ಸಹ ಅಲ್ಲಿ ಕಂಡುಬರುವುದಿಲ್ಲ. ಮನುಷ್ಯರಂತು ಕಪ್ಪು ಕುಳಿಯನ್ನು ನೋಡಲು ಸಾಧ್ಯವೇ ಇಲ್ಲ.

ಕಪ್ಪು ಕುಳಿ ಸಂಯೋಜನೆ ಹೊಂದಿರುವುದೇ ಅಗಾಧ ಪ್ರಮಾಣದ ನಕ್ಷತ್ರಗಳ ನಾಶದಿಂದ ಎಂದು ವಿಜ್ಞಾನ ಕ್ಷೇತ್ರದ ಪ್ರಭಾವಿ ಸಿದ್ದಾಂತಗಳು ಹೇಳಿವೆ. ವಿಜ್ಞಾನಿಗಳು ಸಹ ಕಪ್ಪು ಕುಳಿಯ ಗುರುತ್ವದಿಂದ ಸೆಳೆಯಲ್ಪಡುವ ನಕ್ಷತ್ರಗಳು ಹೊರಬರದಿರುವುದರ ಬಗ್ಗೆ ಹಲವು ಸಂಶೋಧನೆಯನ್ನು ಕೈಗೊಂಡಿವೆ. ಆದರೆ ಇದುವರೆಗೆ ಸಹ ಯಾವುದೇ ಮಾಹಿತಿಯನ್ನು ಪತ್ತೆ ಹಚ್ಚಲು ಆಗಿಲ್ಲ. ಆದರೆ ಕೆಲವು ಸಂಶೋಧಕರು ಮತ್ತು ವಿಜ್ಞಾನಿಗಳು ಹೇಳಿರುವ ಕಪ್ಪು ಕುಳಿಯ ಬಗೆಗಿನ ಅದ್ಭುತ ಸತ್ಯಗಳನ್ನು ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಓದುಗರಿಗೆ ಪರಿಚಯಿಸುತ್ತಿದ್ದೇವೆ. ಬ್ಲಾಕ್ ಹೋಲ್‌ ಬಗೆಗಿನ ಅದ್ಭುತ ಸತ್ಯಾಂಶಗಳು ಏನು ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಸಂಶೋಧಕರಿಂದ ವಾಸಿಸಲು ಯೋಗ್ಯವಾದ ಗ್ರಹ ಪತ್ತೆ: 'Kepler 62f'

ಬ್ಲಾಕ್‌ ಹೋಲ್‌ ವಸ್ತುಗಳನ್ನು ಒಳಗೆ ಎಳೆಯುವುದಿಲ್ಲ

1

ಬಹುಸಂಖ್ಯಾತರು ಹಾಲಿವುಡ್‌ ಸಿನಿಮಾಗಳನ್ನು ನೋಡಿ ಬ್ಲಾಕ್‌ ಹೋಲ್‌ ಇತರೆ ವಸ್ತುಗಳನ್ನು ಎಳೆಯುತ್ತದೆ ಎಂದು ಭಾವಿಸಿದ್ದಾರೆ. ಆದರೆ ಬ್ಲಾಕ್‌ ಹೋಲ್‌ ಇತರೆ ಖಗೋಳ ಕಾಯಗಳಂತೆ ಅದು ಸಹ ಇದೆಯಷ್ಟೆ. ಸೂರ್ಯ ಬ್ಲಾಕ್‌ ಹೋಲ್‌ನಿಂದ ತನ್ನ ಸ್ಥಾನ ಬದಲಿಸಿದರು ಸಹ ಭೂಮಿ ತನ್ನ ಸಾಮಾನ್ಯ ಕಕ್ಷೆಯ ಚಲನೆಯನ್ನು ಮುಂದುವರೆಸುತ್ತದೆ.

ಚಿತ್ರ ಕೃಪೆ:NASA

ಬ್ಲಾಕ್‌ ಹೋಲ್‌ ಪತ್ತೆ ಮಾಡಿದ್ದು

2

'ಬ್ಲಾಕ್‌ ಹೋಲ್‌' ಆವಿಷ್ಕರಿಸಿದವರು ;'ಐನ್‌ಸ್ಟೈನ್‌' ಎಂದು ಸಾಮಾನ್ಯವಾಗಿ ಎಲ್ಲರೂ ತಿಳಿದಿದ್ದಾರೆ. ಆದರೆ ಬ್ಲಾಕ್‌ ಹೋಲ್‌ ಆವಿಷ್ಕರಿಸಿದವರು ವಾಸ್ತವವಾಗಿ 'Karl Schwarzschild" ರವರು. 'Karl Schwarzschild' ರವರ ರೇಡಿಯಸ್ ಅಳತೆ ಮೂಲಕ "Point of no return" ಅನ್ನು ಪತ್ತೆಹಚ್ಚಿದರು. Schwarzschild ರವರಿಗಿಂತ ಮುನ್ನ ಬ್ರಿಟನ್‌ನ ಮೈಕೆಲ್‌ ಎಂಬುವವರು "ಡಾರ್ಕ್‌ ಸ್ಟಾರ್‌" ಕಲ್ಪನೆಯನ್ನು ಗುರುತ್ವಕರ್ಷಣೆಯ ಎಳೆತದಿಂದ ಬೆಳಕು ಸಹ ವಾಪಸ್ಸು ಬರಲಾರದು ಎಂದು ಹೇಳಿದ್ದರು.

ಚಿತ್ರ ಕೃಪೆ: Public Domain

ಬ್ಲಾಕ್‌ ಹೋಲ್‌ ಎಲ್ಲವನ್ನು ಹಿಗ್ಗಿಸುತ್ತದೆ

3

ಬ್ಲಾಕ್‌ಹೋಲ್‌ ತನ್ನ ಗುರುತ್ವ ಬಲದಿಂದ ಎಲ್ಲವನ್ನು ಉದ್ದವಾಗಿ ಹಿಗ್ಗಿಸುತ್ತದೆ. ಈ ಪ್ರಕ್ರಿಯೆಯನ್ನು "spaghettification' ಎಂದು ಕರೆಯಲಾಗುತ್ತದೆ. ಬ್ಲಾಕ್‌ ಹೋಲ್‌ ಪ್ರತಿ ವಸ್ತುವನ್ನು ತನ್ನ ಕೇಂದ್ರಕ್ಕೆ ಸೆಳೆದುಕೊಂಡು ಆಕರ್ಷಣೆಯಲ್ಲಿ ವಿಭಿನ್ನತೆಯನ್ನು ಉಂಟುಮಾಡುತ್ತದೆ.

ಚಿತ್ರ ಕೃಪೆ: Public Domain

ಬ್ಲಾಕ್‌ ಹೋಲ್‌ ಹೊಸ ಬ್ರಹ್ಮಾಂಡಕ್ಕೆ ಜನ್ಮ ನೀಡುತ್ತದೆ

4

ಎಲ್ಲಾ ಭೌತ ವಿಜ್ಞಾನ ಸಿದ್ದಾಂತಗಳ ಪ್ರಕಾರ ' ಬ್ಲಾಕ್‌ ಹೋಲ್‌' ಪ್ರಸ್ತುತ ಬ್ರಹ್ಮಾಂಡದ ಪರಿಸ್ಥಿತಿ ಬದಲಿಸಿ ಹೊಸ ಬ್ರಹ್ಮಾಂಡ ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೊಸ ಬ್ರಹ್ಮಾಂಡವು ನಮ್ಮ ಬ್ರಹ್ಮಾಂಡಕ್ಕಿಂತ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿರುತ್ತದಂತೆ.

ಚಿತ್ರ ಕೃಪೆ: NASA

ಬ್ಲಾಕ್‌ ಹೋಲ್‌ ಅಕ್ಷರಶಃ ತನ್ನ ಸುತ್ತಲ ಬಾಹ್ಯಾಕಾಶವನ್ನು ಸೆಳೆಯುತ್ತದೆ

5

ಐನ್‌ಸ್ಟೈನ್‌'ರವರ ಸಾಮಾನ್ಯ ಸಾಪೇಕ್ಷತಾ ಸಿದ್ದಾಂತದ ಪ್ರಕಾರ " ಸ್ಪೇಸ್‌ ಗ್ರಿಡ್‌ ಲೈನ್‌ನ ರಬ್ಬರ್‌ ಶೀಟ್‌ನಂತೆ. ಒಂದು ವಸ್ತುವಿನಂ ತೂಕದಂತೆ ಇದು ಸಹ ಬ್ಲಾಕ್‌ ಹೋಲ್‌ನಿಂದ ಸೆಳೆಯಲ್ಪಡುತ್ತದೆ. ಬ್ಲಾಕ್‌ ಹೋಲ್‌ ಇತರೆ ಖಗೋಳ ಕಾಯಗಳಿಗಿಂತ ಸ್ಪೇಸ್‌ ಟೈಮ್ ಚೌಕಟ್ಟನ್ನು ಹೀರುತ್ತದೆ. ಬ್ಲಾಕ್‌ ಹೋಲ್‌ನಿಂದ ಬೆಳಕು ಸಹ ಹೊರ ಬರಲು ಸಾಧ್ಯವಿಲ್ಲ ಎನ್ನಲಾಗಿದೆ.

ಚಿತ್ರ ಕೃಪೆ:Cassini

ಅತ್ಯಧಿಕ ದಕ್ಷ ಶಕ್ತಿ ಉತ್ಪಾದನೆಯ ಮೂಲ

6

ಸೌರ ಮಂಡಲದಲ್ಲಿ ಸೂರ್ಯನನ್ನು ಹೊರತು ಪಡಿಸಿದರೆ ಬ್ಲಾಕ್‌ ಹೋಲ್‌ ಅತ್ಯಧಿಕ ದಕ್ಷ ಶಕ್ತಿ ಉತ್ಪಾದನೆಯ ಮೂಲವಾಗಿದೆ. ಬ್ಲಾಕ್‌ ಹೋಲ್ ಸುತ್ತ ಸುತ್ತುವ ವಸ್ತುಗಳು ವೇಗದ ಆಧಾರದಲ್ಲಿ ಸ್ಥಳ ಪಡೆಯಲಿವೆ.

ಚಿತ್ರ ಕೃಪೆ:Eso

ಸಗಿಟ್ಟೇರಿಯಸ್‌ ಎ

7

ಮಿಲ್ಕಿ ವೇ ಕೇಂದ್ರ ಭಾಗದಲ್ಲಿ ಇರುವ ಬೃಹತ್‌ ಬ್ಲಾಕ್‌ ಹೋಲ್‌ ಎಂದರೆ ಅದು 'ಸಗಿಟ್ಟೇರಿಯಸ್ ಎ'. 'ಸಗಿಟ್ಟೇರಿಯಸ್‌ ಎ ' ಬ್ಲಾಕ್‌ ಹೋಲ್‌ ಸೂರ್ಯನಿಗಿಂತ 4 ದಶಲಕ್ಷ ಪಟ್ಟು ಬೃಹತ್‌ ದೊಡ್ಡದಾಗಿದೆ. ಇದು ಬಾಹ್ಯಾಕಾಶದ ಗೆಲಾಕ್ಸಿಯನ್ನು ಹಿಡಿದಿಟ್ಟುಕೊಂಡಿದೆ. ಸಂಶೋಧಕರು ಇದು 2 ದಶಲಕ್ಷ ವರ್ಷಗಳ ಹಿಂದೆ ಸ್ಫೋಟಗೊಂಡಿದೆ ಎಂದು ತಿಳಿದಿದ್ದಾರೆ. ಆದರೆ ಇದನ್ನು ಭೂಮಿಯಿಂದಲೇ ನೋಡಬಹುದಾಗಿದೆ.

ಚಿತ್ರ ಕೃಪೆ: AP

ಬ್ಲಾಕ್‌ ಹೋಲ್‌ ಗಡಿಯಾರ ನಿಧಾನವಾಗಿ ಚಲಿಸುವಂತೆ ಮಾಡುತ್ತದೆ

8

ಎಲ್ಲರೂ ಸಹ ಈಗ ' Point of no return' ಹತ್ತಿರದಲ್ಲಿದ್ದಾರೆ. ಕಾರಣ ಬ್ಲಾಕ್‌ ಹೋಲ್‌ ನಿಂದ ಸಮಯ ಸಹ ನಿಧಾನವಾಗುತ್ತದೆ. ಉದಾಹರಣೆಗೆ ನಿಮ್ಮ ಕಾರ್ಯ ಸಮಯಕ್ಕಿಂತ ವೇಗವಾಗಿರುತ್ತದೆ ಅದನ್ನು ಗಮನಿಸಿ. ಇದನ್ನು ಟ್ವಿನ್‌ ಪ್ರಯೋಗ ವಿವರಿಸುತ್ತದೆ.

ಚಿತ್ರ ಕೃಪೆ: Flickr/Nick

ಬ್ಲಾಕ್‌ ಹೋಲ್‌ ಸಮಯದ ಜೊತೆ ಕಾಣೆಯಾಗುತ್ತದೆ

9

ಬ್ಲಾಕ್‌ ಹೋಲ್‌ ಸಮಯದ ಜೊತೆ ಮಾಯವಾಗುವ ಬಗ್ಗೆ ಪ್ರಖ್ಯಾತ ಭೌತವಿಜ್ಞಾನಿ 'ಸ್ಟೀಫನ್‌ ಹಾಕಿಂಗ್' 1974 ರಲ್ಲಿ ತನ್ನ ಸಿದ್ದಾಂತವನ್ನ ಪ್ರತಿಪಾದಿಸಿದ್ದಾರೆ. 'ಬ್ಲಾಕ್‌ ಹೋಲ್‌' , ಹಾಕಿಂಗ್‌ ರೇಡಿಯೇಷನ್‌ ಮೂಲಕ ಶಕ್ತಿ ಮಾಯವಾಗಲು ಅವಕಾಶ ನೀಡುತ್ತದೆ, ಬ್ಲಾಕ್‌ ಹೋಲ್ ಸಮಯದ ಸಂಯೋಜನೆಯೊಂದಿಗೆ ಕಣ್ಮರೆಯಾಗುತ್ತದೆ ಎನ್ನಲಾಗಿದೆ.

ಚಿತ್ರ ಕೃಪೆ: Ho NEW

ಸೈದ್ದಾಂತಿಕವಾಗಿ ಏನು ಬೇಕಾದರೂ ಬ್ಲಾಕ್‌ ಹೋಲ್‌ ಆಗಬಹುದು

10

'ಬ್ಲಾಕ್‌ ಹೋಲ್‌' ತನ್ನ ಗುರುತ್ವ ಶಕ್ತಿಯಿಂದ ದಟ್ಟ ವಸ್ತುಗಳನ್ನು ತನ್ನ ಕೇಂದ್ರಕ್ಕೆ ಸೆಳೆಯುತ್ತದೆ. ಸೂರ್ಯ 3.7 ಮೈಲಿ ವ್ಯಾಸಕ್ಕೆ ಕುಗ್ಗಿದರೆ ಇದು ಸಹ ಸಾಮಾನ್ಯ ಬಾಹ್ಯಾಕಾಶದಂತೆ ಸೆಳೆಯುತ್ತದೆ. ಆಗ ಸೂರ್ಯನು ಸಹ ಬ್ಲಾಗ್‌ ಹೋಲ್‌ ಆಗಿ ಪರಿವರ್ತನೆ ಆಗುತ್ತದೆ. ಈ ಸಿದ್ದಾಂತ ಎಲ್ಲ ವಿಷಯಕ್ಕೂ ಅನ್ವಯವಾಗುತ್ತದೆ.

ಚಿತ್ರ ಕೃಪೆ: Reuters

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

22 ಉಪಗ್ರಹಗಳನ್ನು ಒಂದೇ ಮಿಷನ್‌ನಲ್ಲಿ ಲಾಂಚ್‌ ಮಾಡಲಿರುವ ಇಸ್ರೊ

ವಿಜ್ಞಾನ ಕ್ಷೇತ್ರದಲ್ಲಿನ 15 ಭಯಾನಕ ಪ್ರಯೋಗಗಳು

ಅಶ್ಲೀಲ ವಿಷಯ ಕಳುಹಿಸಲು ವಿದ್ಯಾರ್ಥಿಯಿಂದ ಟೀಚರ್‌ ಇಮೇಲ್‌ ಹ್ಯಾಕ್

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌

ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

Read more about:
English summary
10 Amazing Facts About Black Holes That You Never Knew. Read more about this in kannada.gizbot.com
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more