ಈ ಅಪಾಯದ ಬಗ್ಗೆ ಐಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಸರ್ಕಾರ! ತಕ್ಷಣವೇ ಈ ಕೆಲಸ ಮಾಡಿ
ಆಪಲ್ ಡಿವೈಸ್‌ಗಳೆಂದರೆ (Apple device) ಭದ್ರತೆಗೆ ಹೆಸರುವಾಸಿ. ಆದರೂ ಸ್ಕ್ಯಾಮರ್‌ಗಳು ಈ ಎಲ್ಲಾ ತರಹದ ಭದ್ರತಾ ಗೋಡೆಗಳನ್ನು ದಾಟಿ ಬರುವ ಸಾಮರ್ಥ್ಯ ಪಡೆದಿದ್ದಾರೆ. ಈ ಕಾರಣಕ್ಕೆ ಸೈಬರ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಬೆಳವಣಿಗೆ ನಡುವೆ ಈಗ ಐಫೋನ್ ಬಳಕೆದಾರರಿಗೆ ಸರ್ಕಾರ ಗಂಭೀರ ಎಚ್ಚರಿಕೆ ನೀಡಿದೆ.
ಹೌದು, ಸಂಭಾವ್ಯ ಸೈಬರ್ ಬೆದರಿಕೆಗಳಿಂದ ಎಚ್ಚರವಾಗಿರಲು ಇತ್ತೀಚಿನ ಸಾಫ್ಟ್‌ವೇರ್‌ನೊಂದಿಗೆ ತಮ್ಮ ಡಿವೈಸ್‌ಗಳನ್ನು ತ್ವರಿತವಾಗಿ ನವೀಕರಿಸಲು CERT-In ಆಪಲ್ ಬಳಕೆದಾರರನ್ನು ಕೇಳಿದೆ. ಅಂದರೆ ಐಫೋನ್‌ಗಳು, ಮ್ಯಾಕ್‌ಬುಕ್ ಗಳನ್ನು ಈ ವೇಳೆ ಅಪ್‌ಡೇಟ್ ಮಾಡಬೇಕಿದೆ. ಹಾಗಿದ್ರೆ, ಏನಿದು ಭದ್ರತಾ ಸಮಸ್ಯೆ?, ಯಾವೆಲ್ಲಾ ಡಿವೈಸ್‌ಗಳಿಗೆ ಇದರಿಂದ ಬೆದರಿಕೆ ಇದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಆಪಲ್ ಡಿವೈಸ್ ಬಳಕೆದಾರರಿಗೆ ಎಚ್ಚರಿಕೆ: ಈಗಷ್ಟೇ ಆಪಲ್ ತನ್ನ ಮುಂದಿನ ಸರಣಿಯ ಐಫೋನ್ 15 (iPhone 15) ಫೋನ್‌ಗಳನ್ನು ಅನಾವರಣ ಮಾಡಿದ್ದು, ಸಾಕಷ್ಟು ಜನರು ಈ ಫೋನ್‌ಗಳನ್ನು ಖರೀದಿ ಮಾಡಲು ಮುಗಿಬಿದ್ದಾರೆ. ಆದರೆ, ಈಗಾಗಲೇ ಹಳೇ ಸರಣಿಯ ಐಫೋನ್ ಬಳಕೆದಾರರ ತೊಂದರೆಗೆ ಸಿಲುಕುವ ಆತಂಕದಲ್ಲಿದ್ದಾರೆ. ಅಂದರೆ CERT-In ಆಪಲ್ ಡಿವೈಸ್‌ಗೆ ಹೆಚ್ಚಿನ ಭದ್ರತಾ ಅಪಾಯದ ಎಚ್ಚರಿಕೆ ನೀಡಿದ್ದು, ಬೆಬ್‌ಕಿಟ್ ಬ್ರೌಸರ್ ಎಂಜಿನ್‌ನಲ್ಲಿ ದುರ್ಬಲತೆಯನ್ನು ಪತ್ತೆ ಮಾಡಲಾಗಿದೆ. ಈ ದುರ್ಬಲತೆ ಅನಧಿಕೃತ ಪ್ರವೇಶ ಮತ್ತು ಸೂಕ್ಷ್ಮ ಡೇಟಾದ ಕಳ್ಳತನವನ್ನು ಅನುಮತಿಸಬಹುದು ಎಂದು ತಿಳಿಸಲಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಿಭಾಗವಾದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In), ಆಪಲ್ ಡಿವೈಸ್ ಬಳಕೆದಾರರಿಗೆ ಈ ಗಂಭೀರ ಎಚ್ಚರಿಕೆ ರವಾನಿಸಿದೆ. ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ಉಲ್ಲೇಖ ಮಾಡಿದೆ. ಅಂದರೆ ಈ ಮಾಹಿತಿಯನ್ನು ತಿಳಿಸದೆ ಇದ್ದರೆ ಬಳಕೆದಾರರ ಫೋನ್‌ಗಳಿಗೆ ಅನಧಿಕೃತ ಪ್ರವೇಶ ಮತ್ತು ಸೂಕ್ಷ್ಮ ಡೇಟಾದ ಕಳ್ಳತನವನ್ನು ಅನುಮತಿಸಬಹುದು ಎಂದು ಬರೆಯಲಾಗಿದೆ.
ಸಫಾರಿ ಮತ್ತು ಇತರ ಬ್ರೌಸರ್‌ಗಳು ಬಳಕೆ ಮಾಡುವ ವೆಬ್‌ಕಿಟ್ ಬ್ರೌಸರ್ ಎಂಜಿನ್ ಗಂಭೀರವಾದ ಭದ್ರತಾ ದೋಷಗಳನ್ನು ಹೊಂದಿದೆ ಎಂದು CERT-In ಕಂಡುಕೊಂಡಿದೆ. ಅದರಲ್ಲೂ ಇದು ಐಫೋನ್ ಮತ್ತು ಆಪಲ್ ವಾಚ್ (iPhone, Apple Watch) ನಂತಹ ಆಪಲ್ ಡಿವೈಸ್‌ಗಳ ಬಳಕೆದಾರರಿಗೆ ತೀವ್ರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ತಿಳಿಸಲಾಗಿದೆ. ದುರುದ್ದೇಶಪೂರಿತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಲು ಅಥವಾ ದುರುದ್ದೇಶಪೂರಿತ ಲಗತ್ತುಗಳನ್ನು ಓಪನ್ ಮಾಡಲು ಈ ದುರ್ಬಲತೆ ದಾರಿ ಮಾಡಿಕೊಡಲಿದೆ ಎಂದು ಹೇಳಲಾಗಿದೆ.
ಇದರೊಂದಿಗೆ ಸ್ಕ್ಯಾಮರ್‌ಗಳು ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಫೈಲ್‌ಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದ್ದು, ಬಳಕೆದಾರರ ಡಿವೈಸ್‌ನಲ್ಲಿ ಮಾಲ್‌ವೇರ್ ಅನ್ನು ಸ್ಥಾಪಿಸುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಉಲ್ಲೇಖ ಮಾಡಲಾಗಿದೆ. ಇನ್ನು ಆಪಲ್ ಉತ್ಪನ್ನಗಳಲ್ಲಿ ಹಲವಾರು ದುರ್ಬಲತೆಗಳು ವರದಿಯಾಗಿವೆ. ಇದು ಆಕ್ರಮಣಕಾರರಿಗೆ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು, ಸವಲತ್ತುಗಳ ಹೆಚ್ಚಳ ಅಥವಾ ಉದ್ದೇಶಿತ ವ್ಯವಸ್ಥೆಯಲ್ಲಿ ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಅಧಿಕೃತ ಮಾಹಿತಿಯಲ್ಲಿ ತಿಳಿಸಲಾಗಿದೆ.
ಇದನ್ನು ಸುಲಭವಾಗಿ ಕೇಳುವುದಾದರೆ, ಆಪಲ್ ಡಿವೈಸ್ ಬಳಕೆದಾರರು ಯಾವ ಲಿಂಕ್‌ಗಳನ್ನು ಕ್ಲಿಕ್ ಮಾಡುತ್ತಾರೆ ಅಥವಾ ಅವರು ಯಾವ ಲಗತ್ತುಗಳನ್ನು ಓಪನ್ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಅರಿವು ಇಲ್ಲದಿದ್ದರೆ ಅವರ ವೈಯಕ್ತಿಕ ಮಾಹಿತಿ ಬೇರೆಯವರ ಪಾಲಾಗುತ್ತದೆ. ಜೊತೆಗೆ ಆ ಡಿವೈಸ್‌ಗಳು ಮಾಲ್‌ವೇರ್ ದಾಳಿಗೆ ಒಳಗಾಗಿ ಬೇರೆಯವರ ಕಂಟ್ರೋಲ್‌ಗೆ ಹೋಗುತ್ತವೆ ಎಂಬ ಅಪಾಯದ ಬಗ್ಗೆ ಹೇಳಲಾಗಿದೆ.
ಯಾವೆಲ್ಲಾ ಡಿವೈಸ್‌ಗಳಲ್ಲಿ ಈ ಅಪಾಯವಿದೆ?: CERT-In ತನ್ನ ವರದಿಯಲ್ಲಿ ಉಲ್ಲೇಖ ಮಾಡಿದಂತೆ iOS 16.7 ಆವೃತ್ತಿಗಿಂತ ಹಿಂದಿನ ಆವೃತ್ತಿಯಲ್ಲಿ ರನ್ ಆಗುವ ಡಿವೈಸ್‌ಗಳು ಈ ಸಮಸ್ಯೆಗೆ ಸಿಲುಕಲಿವೆ. ಅದರಲ್ಲೂ ಆಪಲ್ ಮ್ಯಾಕ್ ಓಎಸ್ ಮಾಂಟೆರಿ ಆವೃತ್ತಿ ವಿಭಾಗದಲ್ಲಿ 12.7 ಕ್ಕಿಂತ ಮೊದಲು, ಆಪಲ್ ಮ್ಯಾಕ್ ಓಎಸ್ ವೆಂಚುರಾ ಆವೃತ್ತಿ ವಿಭಾಗದಲ್ಲಿ 13.6 ಕ್ಕಿಂತ ಮೊದಲು, ಆಪಲ್ ವಾಚ್ ಓಎಸ್ ಆವೃತ್ತಿಯಲ್ಲಿ 9.6.3 ಗೆ ಮುಂಚಿನ ಆವೃತ್ತಿಯಲ್ಲಿ ರನ್ ಆಗುವ ಡಿವೈಸ್‌ಗಳು ಈಗಲೇ ಅಪ್‌ಡೇಟ್ ಆಗಬೇಕಿದೆ.

ಹಾಗೆಯೇ 16.7 ರ ಹಿಂದಿನ ಆಪಲ್ ಐಓಎಸ್ ಆವೃತ್ತಿಗಳು ಮತ್ತು 16.7 ರ ಹಿಂದಿನ ಐಪ್ಯಾಡ್ ಓಎಸ್ ಆವೃತ್ತಿ, 17.0.1 ರ ಹಿಂದಿನ ಆಪಲ್ ಐಓಎಸ್ ಆವೃತ್ತಿಗಳು ಮತ್ತು 17.0.1 ರ ಹಿಂದಿನ ಐಪ್ಯಾಡ್ ಓಎಸ್ ಆವೃತ್ತಿಗಳು, 16.6.1 ರ ಹಿಂದಿನ ಆಪಲ್ ಸಫಾರಿ ಆವೃತ್ತಿಗಳಲ್ಲಿ ಈ ಭದ್ರತಾ ದೋಷ ಕಾಣಿಸಿಕೊಂಡಿದ್ದು, ಈ ಓಎಸ್‌ನಲ್ಲಿ ರನ್ ಆಗುವ ಎಲ್ಲಾ ಡಿವೈಸ್‌ಗಳನ್ನು ತಕ್ಷಣವೇ ಅಪ್‌ಡೇಟ್ ಮಾಡಿಕೊಳ್ಳಲು ಸೂಚಿಸಲಾಗಿದೆ.


Click it and Unblock the Notifications








