‘India first PM’ ಎಂದು ಟೈಪ್ ಮಾಡಿದರೆ ಗೂಗಲ್ ತೋರಿಸುವುದೇ ಬೇರೆ..! ನೀವು ಮಾಡಿ..!
ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗುತ್ತಿರುವ ಸಂದರ್ಭದಲ್ಲಿಯೇ ಹೊಸದೊಂದು ಸುದ್ದಿಯೂ ರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಭಾರತದ ಮೊದಲ ಪ್ರಧಾನಿ ಯಾರು ಎಂದರೆ ನೆಹರು ಹೆಸರು ತೋರಿಸುತ್ತಿರುವ ಗೂಗಲ್. ಫೋಟೋ ಮಾತ್ರ ಸದ್ಯದ ಪ್ರಧಾನಿ ಮೋದಿ ಅವರ ಫೋಟೋವನ್ನು ತೋರಿಸಿದೆ. ಸದ್ಯ ಈ ಸುದ್ದಿಯೂ ವೈರಲ್ ಆಗಿದ್ದು, ಪ್ರತಿಯೊಬ್ಬರು ಇದನೇ ಗೂಗಲ್‌ನಲ್ಲಿ ಟೈಪಿಸಿ ನೋಡುತ್ತಿದೆ.

ಗೂಗಲ್ ಸರ್ಚ್ ಇಂಜಿನ್‍ನಲ್ಲಿ India first pm' (ಭಾರತದ ಮೊದಲ ಪ್ರಧಾನಿ) ಎಂದು ಟೈಪ್ ಮಾಡಿ ಹುಡುಕಿದರೆ. ಜವಾಹರಲಾಲ್ ನೆಹರೂ ಹೆಸರು ಬಂದಿದೆ. ಆದರೆ ಅದರಲ್ಲಿ ಫೋಟೋ ಮಾತ್ರ ಪ್ರಧಾನಿ ನರೇಂದ್ರ ಮೋದಿಯವರದ್ದು ಕಾಣಿಸಿಕೊಂಡಿದೆ. ಇದರಿಂದಾಗಿ ಕಾಂಗ್ರೆಸ್ ಕೆರಳಿದರೆ, ಬಿಜಿಪಿ ಸಂತೋಷ ವ್ಯಕ್ತಪಡಿಸಿದೆ.
ಹಲವರು ಇದನ್ನು ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಆಪ್‌ಲೋಡ್ ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ಹಲವರು ಮಾಡುತ್ತಿರುವ ಕಾರಣ ಎಚ್ಚೆತ್ತು ಕೊಂಡ ಗೂಗಲ್ ಸದ್ಯ ಪರಿಸ್ಥಿತಿಯನ್ನು ಸರಿ ಮಾಡಲು ಮುಂದಾಗಿದೆ, ಇದಕ್ಕಾಗಿಯೇ ಎರರ್ ತೋರಿಸುತ್ತಿದೆ ಎನ್ನಲಾಗಿದೆ.
ಓದಿರಿ: ಶಿಯೋಮಿಗೆ ತಿರುಮಂತ್ರ : ಫ್ಲಾಷ್ ಸೇಲಿನಲ್ಲಿ ರೂ.2500ಕ್ಕೆ ಸ್ಯಾಮ್‌ಸಂಗ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್..!
ಈ ಹಿಂದೆಯೂ ಹಲವು ಭಾರೀ ಗೂಗಲ್ ಸರಿಯಾದ ಮಾಹಿತಿಯನ್ನು ನೀಡದೆ, ಬಳಕೆದಾರರನ್ನು ಹಾದಿ ತಪ್ಪಿಸುವ ಕಾರ್ಯವು ನಡೆದಿದೆ. ಆದರೆ ಇದಕ್ಕೆ ಉತ್ತರ ನೀಡುವ ಗೂಗಲ್, ಬಳಕೆದಾರರು ನೀಡುವ ಕೀವರ್ಡ್ ಟಾಗ್ಸ್ ಗೆ ಅನುಗುಣವಾಗಿ ಮಾಹಿತಿಗಳು ದೊರೆಯಲಿದೆ ಎಂದಿದೆ.
ಇದು ಗೂಗಲ್ ಅಥವಾ ವಿಕೀಪೀಡಿಯಾದ ತಪ್ಪಿನಿಂದ ಆಗಿದೆ ಎನ್ನಲಾಗಿದ್ದು, ನೆಹರು ಚಿತ್ರದ ಬದಲಿಗೆ ಮೋದಿ ಫೋಟೋವನ್ನು ತೋರಿಸಿದೆ ಎನ್ನಲಾಗಿದೆ. ಸದ್ಯದ ದಿನದಲ್ಲಿ ಮೋದಿ ಫೋಟೋಗಾಗಿ ಗೂಗಲ್ ಮಾಡುವವರ ಸಂಖ್ಯೆಯೇ ಅಧಿಕವಾಗಿದೆ. ಈ ಹಿನ್ನಲೆಯಲ್ಲಿ ಈ ಪ್ರಮಾದವು ಜರುಗಿದೆ ಎನ್ನಲಾಗಿದೆ.


Click it and Unblock the Notifications