Home
ಸುದ್ದಿಜಾಲ

ಈ ಎರಡು ಐಫೋನ್‌ಗಳಿಗೆ ಆಪಲ್‌ನಿಂದ ಉಚಿತ ರಿಪೇರಿ ಭಾಗ್ಯ!

ವಿಶ್ವ ಟೆಕ್ ಮಾರುಕಟ್ಟೆಯ ದಿಗ್ಗಜ ಆಪಲ್​ ಸಂಸ್ಥೆ ವಿವಿಧ ಶ್ರೇಣಿಯ ಐಫೋನ್‌ ಸರಣಿಗಳಿಂದ ಗುರುತಿಸಿಕೊಂಡಿದ್ದು, ಇತ್ತೀಚಿಗೆ ಬಹುನಿರೀಕ್ಷಿತ 'ಐಫೋನ್ 11' ಸರಣಿ ಬಿಡುಗಡೆ ಮಾಡಿ ಸುದ್ಧಿಯಲ್ಲಿದೆ. ಆದ್ರೆ ಇದೀಗ ಸಂಸ್ಥೆಯು 'ಐಫೋನ್ 6' ಮತ್ತು 'ಐಫೋನ್ 6 ಪ್ಲಸ್‌' ಖರೀದಿಸಿದ ಗ್ರಾಹಕರಿಗೆ ಒಂದು ಅಚ್ಚರಿಯನ್ನು ನೀಡಿದೆ. ಅದೆನೆಂದರೇ ಈ ಐಫೋನ್‌ಗಳಿಗೆ ಉಚಿತವಾಗಿ ಸರ್ವೀಸ್‌ ಮಾಡಿಕೊಡುವುದಾಗಿ ತಿಳಿಸಿದೆ.

ಐಫೋನ್​ 6S

ಹೌದು, ಜನಪ್ರಿಯ ಆಪಲ್ ಸಂಸ್ಥೆಯು ತನ್ನ 'ಐಫೋನ್​ 6S' ಹಾಗೂ 'ಐಫೋನ್​ 6S ಪ್ಲಸ್'​ ಮಾಡೆಲ್‌ಗಳಿಗೆ ಇದೀಗ ಉಚಿತ ಸರ್ವೀಸ್‌ ಮಾಡುವುದಾಗಿ ತಿಳಿಸಿದೆ. ಯಾಕೆ ಅಂತೀರಾ?. ಏಕೆಂದರೇ ಅಕ್ಟೋಬರ್‌ 2018 ರಿಂದ ಆಗಸ್ಟ್‌ 2019ರ ನಡುವಿನ ಅವಧಿಯಲ್ಲಿ ಉತ್ಪಾದಿಸಲಾದ 'ಐಫೋನ್​ 6S' ಹಾಗೂ 'ಐಫೋನ್​ 6S ಪ್ಲಸ್'​ ಮಾದರಿಯ ಕೆಲವು ಐಫೋನ್‌ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ.

ಐಫೋನ್​ 6S ಪ್ಲಸ್

ಆಪಲ್ ಸಂಸ್ಥೆಯ 'ಐಫೋನ್​ 6S' ಹಾಗೂ 'ಐಫೋನ್​ 6S ಪ್ಲಸ್'​ ಮಾಡೆಲ್‌ನ ಕೆಲವು ಐಫೋನ್‌ಗಳಲ್ಲಿ ಕಾಂಪೋನೆಂಟ್​ಗಳು ಸರಿಯಾಗಿ ಕೆಲಸ ಮಾಡದೇ ಇರುವ ಕಾರಣ ಸಮಸ್ಯೆಗಳು ಕಾಣಿಸಿಕೊಂಡಿವೆ ಎನ್ನಲಾಗಿದ್ದು, ಹೀಗಾಗಿ ತಾಂತ್ರಿಕ ದೋಷ ಕಂಡುಬಂದಿರುವ ಐಫೋನ್‌ಗಳಿಗೆ 'ಆಪಲ್ ಸರ್ವೀಸ್ ಪ್ರೋಗ್ರಾಂ' ನಲ್ಲಿ ಅಗತ್ಯ ಸರ್ವಿಸ್​ ಸೌಲಭ್ಯ ಒದಗಿಸುವುದಾಗಿ ತಿಳಿಸಿದೆ. ಆದರೆ ಈ ಉಚಿತ ಸರ್ವೀಸ್‌ ಕೆಲವು ಆಯ್ದ ಸಿರೀಸ್‌ನ ಐಫೋನ್‌ಗಳಿಗೆ ಮಾತ್ರ.

ಸರ್ವೀಸ್ ಲಭ್ಯ

ಅಕ್ಟೋಬರ್‌ 2018 ರಿಂದ ಆಗಸ್ಟ್‌ 2019ರ ನಡುವೆ 'ಐಫೋನ್​ 6S' ಹಾಗೂ 'ಐಫೋನ್​ 6S ಪ್ಲಸ್'​ ಖರೀದಿಸಿದ ಗ್ರಾಹಕರು, ತಮ್ಮ ಐಫೋನ್‌ಗೆ ಸರ್ವೀಸ್ ಲಭ್ಯ ಇದೆಯೆ ಎಂದು ಆಪಲ್ ಸಪೋರ್ಟ್‌ ಪೇಜ್‌ನಲ್ಲಿ ಚೆಕ್ ಮಾಡಿಕೊಳ್ಳಬಹುದು. 'ಆಪಲ್ ಸರ್ವೀಸ್ ಪ್ರೋಗ್ರಾಂ' ಕೆಲವು ಷರತ್ತು ಮತ್ತು ನಿಬಂಧನೆಗಳನ್ನು ಹೊಂದಿದ್ದು, ಕೆಲವೊಂದು ದೋಷಗಳ ರಿಪೇರಿಗೆ ಶುಲ್ಕ ಅನ್ವಯವಾಗುತ್ತದೆ ಎನ್ನಲಾಗಿದೆ.

 ಐಫೋನ್ 6s

ಆಪಲ್ ಐಫೋನ್ 6s, ಫೋನ್ 750 x 1334 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, 4.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಆಪಲ್ A9 ಪ್ರೊಸೆಸರ್ ಜೊತೆ iOS 13.1.2 ಓಎಸ್‌ಗೆ ಅಪ್‌ಗ್ರೇಡ್‌ ಸೌಲಭ್ಯವನ್ನು ಹೊಂದಿದೆ. ಹಿಂಬದಿಯಲ್ಲಿ 12ಎಂಪಿಯ ಕ್ಯಾಮೆರಾ ನೀಡಿದ್ದು, ಸೆಲ್ಫಿಗಾಗಿ 5ಎಂಪಿಯ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ಈ ಐಫೋನ್ 16GB+2GB RAM, 32GB+2GB RAM, 64GB+2GB RAM ಮತ್ತು 128GB+2GB RAM ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ.

ಐಫೋನ್ 6s ಪ್ಲಸ್‌

ಆಪಲ್ ಐಫೋನ್ 6s ಪ್ಲಸ್‌, ಫೋನ್ 5.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 1080 x 1920 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದು ಸಹ ಆಪಲ್ A9 ಪ್ರೊಸೆಸರ್ ಜೊತೆ iOS 13.1.2 ಓಎಸ್‌ಗೆ ಅಪ್‌ಗ್ರೇಡ್‌ ಸೌಲಭ್ಯವನ್ನು ಹೊಂದಿದೆ. ಹಿಂಬದಿಯಲ್ಲಿ 12ಎಂಪಿಯ ಕ್ಯಾಮೆರಾ ನೀಡಿದ್ದು, ಸೆಲ್ಫಿಗಾಗಿ 5ಎಂಪಿಯ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ಈ ಐಫೋನ್ 16GB+2GB RAM, 32GB+2GB RAM, 64GB+2GB RAM ಮತ್ತು 128GB+2GB RAM ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ.

Best Mobiles in India

English summary
Apple has said the issue affects not all iPhone 6S and iPhone 6S Plus variants but only a select few. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+