Home
ಸುದ್ದಿಜಾಲ

Self healing display: ಫೋನ್‌ನ ಡಿಸ್‌ಪ್ಲೇ ಒಡೆದು ಹೋದ್ರೆ ಇನ್ಮುಂದೆ ಚಿಂತೆ ಬೇಡ, ತಾನೇ ಸರಿಮಾಡಿಕೊಳ್ಳುತ್ತೆ!

ಡಿಸ್‌ಪ್ಲೇಗಳೂ (display) ಸ್ಮಾರ್ಟ್‌ಡಿವೈಸ್‌ಗಳಿಗೆ ಅಗತ್ಯವಾದ ವಸ್ತುಗಳಾಗಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಭಿನ್ನ ವಿಭಿನ್ನ ಆಯ್ಕೆಯ ಡಿಸ್‌ಪ್ಲೇಗಳು ಲಭ್ಯ ಇದ್ದು, ಇವುಗಳ ಮೂಲ ಬಳಕೆದಾರರು ಹೊಸ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ಡಿಸ್‌ಪ್ಲೇ ವಿಚಾರದಲ್ಲಿ ವಿಶೇಷವಾದ ಅನ್ವೇಷಣೆಯೊಂದನ್ನು ಮಾಡಲಾಗಿದ್ದು ಇನ್ಮುಂದೆ ಡಿಸ್‌ಪ್ಲೇ ಒಡೆದರೂ ಸಹ ಬಳಕೆದಾರರು ಚಿಂತೆ ಮಾಡುವ ಹಾಗಿಲ್ಲ.

ಹೌದು, ಸ್ಮಾರ್ಟ್‌ಫೋನ್‌ (Smartphone) ಸೇರಿದಂತೆ ಅನೇಕ ಸ್ಮಾರ್ಟ್‌ಟಿವಿಗಳು ವಿವಿಧ ರೀತಿಯ ಡಿಸ್‌ಪ್ಲೇ ಹೊಂದಿರುತ್ತವೆ. ನಾವು ಸ್ಮಾರ್ಟ್‌ಫೋನ್‌ ವಿಚಾರಕ್ಕೆ ಬರುವುದಾದರೆ ಫೋನ್‌ ಡಿಸ್‌ಪ್ಲೇ ಯನ್ನು ಬೇಗನೇ ಹಾಳು ಮಾಡಿಬಿಡುತ್ತೇವೆ. ಅದರಲ್ಲೂ ಸಾಕಷ್ಟು ಜನರು ಫೋನ್‌ ಅನ್ನು ಕೈತಪ್ಪಿ ಬೀಳಿಸುವುದು ಸಾಮಾನ್ಯ ಸಂಗತಿ. ಆದರೂ ಸಹ ಒಡೆದ ಡಿಸ್‌ಪ್ಲೇನಲ್ಲೇ ಆ ಫೋನ್‌ ಅನ್ನು ಬಳಕೆ ಮಾಡುವವರಿದ್ದಾರೆ. ಆದರೆ, ಇನ್ಮುಂದೆ ಈ ರೀತಿಯ ಸಮಸ್ಯೆಗಳು ಇರುವುದಿಲ್ಲ. ಡಿಸ್‌ಪ್ಲೇ ಒಡೆದರೂ (cracked display) ಸಹ ಹೊಸ ಡಿಸ್‌ಪ್ಲೇಯನ್ನು ಹಾಕಿಸುವ ಅವಶ್ಯಕತೆಯೇ ಇರುವುದಿಲ್ಲ.

ಫೋನ್‌ನ ಡಿಸ್‌ಪ್ಲೇ ಒಡೆದು ಹೋದ್ರೆ  ಚಿಂತೆ ಬೇಡ,ತಾನೇ ಸರಿಮಾಡಿಕೊಳ್ಳುತ್ತೆ...

ಡಿಸ್‌ಪ್ಲೇ ತಂತಾನೇ ಸರಿಯಾಗುತ್ತದೆ: ನಿಮಗೆ ಸ್ಟಾರ್‌ಫಿಶ್‌ ಬಗ್ಗೆ ಗೊತ್ತಿರಬಹುದು. ಅದನ್ನು ತುಂಡುಗಳಾಗಿ ಕತ್ತರಿಸಿದರೂ ಸಹ ಆ ಭಾಗಗಳನ್ನು ಪುನರುತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಸ್ಟಾರ್‌ಫಿಶ್ ನಂತೇ ಕೆಲವು ಪ್ರಾಣಿಗಳು ಈ ಸಾಮರ್ಥ್ಯವನ್ನು ಹೊಂದಿವೆ. ಇದೇ ರೀತಿ ಈಗ ನಿಮ್ಮ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ಸಹ ಅಕಸ್ಮಾತ್‌ ಆಗಿ ಒಡೆದುಹೋದರೆ ಅದು ತಂತಾನೇ ಸರಿ ಮಾಡಿಕೊಳ್ಳುತ್ತದೆ.

ಫೋನ್‌ನ ಡಿಸ್‌ಪ್ಲೇಯಲ್ಲಿನ ಬಿರುಕುಗಳು ಮತ್ತು ಗೀರುಗಳು ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆದಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಆಕಸ್ಮಿಕವಾಗಿ ಫೋನ್ ಕೈಯಿಂದ ಬಿದ್ದರೆ ಅಥವಾ ಬೇರೆ ಯಾವುದಾದರೂ ವಸ್ತು ಫೋನ್ ಮೇಲೆ ಬಿದ್ದರೆ ಮೊದಲು ಹಾಳಾಗುವುದು ಡಿಸ್‌ಪ್ಲೇ. ದುರಂತ ಏನೆಂದರೆ ಕೆಲವರು ಹೊಸ ಡಿಸ್‌ಪ್ಲೇ ಹಾಕಿಸಿಕೊಂಡರೆ ಇನ್ನೂ ಕೆಲವರು ಇರುವುದರಲ್ಲೇ ತೃಪ್ತಿ ಪಡುವುದು ಸಾಮಾನ್ಯ ವಿಷಯವಾಗಿದೆ.

ಆದರೆ ಇನ್ಮುಂದೆ ಈ ರೀತಿಯ ಸಮಸ್ಯೆಗಳು ಕಡಿಮೆ ಆಗಲಿವೆ ಎಂದು ತಿಳಿದುಬಂದಿದೆ. ಯಾಕೆಂದರೆ ಈ ಸಮಸ್ಯೆಯನ್ನು ಪರಿಹರಿಸಲು ಹೊಸ ತಂತ್ರಜ್ಞಾನವನ್ನು ಕಂಡುಕೊಳ್ಳಲಾಗಿದೆ ಅದಕ್ಕೆ ಸ್ವಯಂ-ಸರಿಪಡಿಸಿಕೊಳ್ಳುವ ಡಿಸ್‌ಪ್ಲೇ (Self-healing screen) ಎದು ಕರೆಯಲಾಗಿದೆ. ಅಂದರೆ ಡಿಸ್‌ಪ್ಲೇಗಳು ಒಡೆದುಹೋದರೆ ವಾತಾವರಣದಲ್ಲಿನ ಗಾಳಿ ಹಾಗೂ ಆವಿ ಹೊಸ (Air, steam) ಮೇಲ್ಮೈಯನ್ನು ರೂಪಿಸಲಿದೆಯಂತೆ. ಈ ವಿಷಯ ಕೇಳಿ ನಿಮಗೆ ಶಾಕ್‌ ಆಗಿರಬಹುದು. ಆದರೆ, ಇದನ್ನು ಮುಂದಿನ ದಿನಗಳಲ್ಲಿ ನೀವೇ ಕಣ್ಣಾರೆ ನೋಡಬಹುದಾಗಿದೆ.

ನಿಮಗೆ ಸುಲಭವಾಗಿ ಅರ್ಥವಾಗುವ ಹಾಗೆ ಹೇಳುವುದಾದರೆ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ಒಡೆದುಹೋದರೆ ಅವು ತಂತಾನೇ ಸರಿಯಾಗುತ್ತವೆ. ಈ ವಿಶೇಷ ತಂತ್ರಜ್ಞಾನವನ್ನು ನ್ಯಾನೊ-ಕೋಟಿಂಗ್ ಅಥವಾ ಸ್ವಯಂ-ಸರಿಪಡಿಸಿಕೊಳ್ಳುವ ಡಿಸ್‌ಪ್ಲೇ ಎಂದು ಕರೆಯಲಾಗುತ್ತದೆ. ಈ ರೀತಿಯ ಡಿಸ್‌ಪ್ಲೇಗಳನ್ನು ತಯಾರಿಸುವ ಕೆಲಸ ಈಗಾಗಲೇ ಆರಂಭ ಆಗಿದ್ದು, ಕೆಲವೇ ವರ್ಷಗಳಲ್ಲಿ ಈ ತಂತ್ರಜ್ಞಾನವನ್ನು ಸ್ಮಾರ್ಟ್ ಫೋನ್‌ಗಳಲ್ಲಿ ಸೇರಿಸುವ ನಿರೀಕ್ಷೆಯಿದೆ.

ಟೆಕ್ ವಿಭಾಗದಲ್ಲಿ ಈ ರೀತಿಯ ಹೊಸ ಅನ್ವೇಷಣೆಗಳು ಇದೇ ಮೊದಲಲ್ಲ. ಈ ಹಿಂದೆ ಅಂದರೆ 2013ರಲ್ಲಿ ಎಲ್ ಜಿ ಕಂಪನಿ ಇದೇ ತಂತ್ರಜ್ಞಾನವನ್ನು ಘೋಷಿಸಿತ್ತು. ಈ ಮೂಲಕ ಎಲ್‌ಜಿ ಕರ್ವ್ಡ ಸ್ಮಾರ್ಟ್‌ಫೋನ್ ಅನ್ನು ಲಾಂಚ್‌ ಮಾಡುವ ಬಗ್ಗೆ ತಿಳಿಸಿತ್ತು. ಇನ್ನು ಈ ಹೊಸ ಡಿಸ್ಪ್ಲೇ ವಿಚಾರಕ್ಕೆ ಬಂದರೆ ಡಿಸ್‌ಪ್ಲೇ ಮೇಲಿನ ಸಣ್ಣ ಗೀರುಗಳು ಮತ್ತು ಬಿರುಕುಗಳನ್ನು ಮಾತ್ರ ನ್ಯಾನೊ ಕೋಟಿಂಗ್ ಸಿಸ್ಟಮ್ ಮೂಲಕ ಸರಿಪಡಿಸಬಹುದಂತೆ. ಆದರೆ, ದೊಡ್ಡ ಪ್ರಮಾಣದಲ್ಲಿ ಹಾಳಾದರೆ ಇದು ಕಾರ್ಯನಿರ್ವಹಿಸುವುದಿಲ್ಲ ಎಂದು ಸಿಸಿಎಸ್‌ ಇನ್ಸೈಟ್ನ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಈಗಾಗಲೇ ಸ್ಮಾರ್ಟ್‌ಫೋನ್ ಕಂಪನಿಗಳಾದ ಆಪಲ್‌ ಮತ್ತು ಮೊಟೊರೊಲಾ (Apple, Motorola) ಈ ತಂತ್ರಜ್ಞಾನಕ್ಕೆ ಪೇಟೆಂಟ್‌ಗಳನ್ನು ಪಡೆದುಕೊಂಡಿವೆ. ಸ್ವಯಂ-ಸರಿಪಡಿಸಿಕೊಳ್ಳುವ ಡಿಸ್‌ಪ್ಲೇಗಳೊಂದಿಗೆ ಫೋನ್‌ಗಳನ್ನು ಐದು ವರ್ಷಗಳಲ್ಲಿ ಬಿಡುಗಡೆಯಾಗುವ ಮಾಹಿತಿ ಇದೆ. ಗಮನಿಸಬೇಕಾದ ವಿಷಯ ಏನೆಂದರೆ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಫೋನ್‌ಗಳ ಡಿಸ್‌ಪ್ಲೇಯನ್ನು ರಕ್ಷಿಸಲು ಸ್ಕ್ರೀನ್ ಗಾರ್ಡ್‌ಗಳನ್ನು ಬಳಸುತ್ತಾರೆ. ಆದಾಗ್ಯೂ, ಸ್ಕ್ರೀನ್ ಗಾರ್ಡ್‌ಗಳು ಸೀಮಿತ ರಕ್ಷಣೆಯನ್ನು ಮಾತ್ರ ನೀಡಬಲ್ಲವು.ಇನ್ನು ಸ್ವಯಂ-ಸರಿಪಡಿಸಿಕೊಳ್ಳುವ ಡಿಸ್‌ಪ್ಲೇ ತಂತ್ರಜ್ಞಾನವು ಸ್ಕ್ರೀನ್ ಗಾರ್ಡ್‌ಗಳಿಗಿಂತ ಸ್ವಲ್ಪ ಉತ್ತಮವಾಗಿರುತ್ತದೆ.

ಫೋನ್‌ನ ಡಿಸ್‌ಪ್ಲೇ ಒಡೆದು ಹೋದ್ರೆ  ಚಿಂತೆ ಬೇಡ,ತಾನೇ ಸರಿಮಾಡಿಕೊಳ್ಳುತ್ತೆ...

ಯಾವ ಫೋನ್‌ಗಲ್ಲಿ ಈ ಸೌಲಭ್ಯ ಸಿಗಲಿದೆ?: ಆಪಲ್‌ನ ಮುಂಬರುವ ಫೋಲ್ಡಬಲ್ ಫೋನ್ (Apple foldable phone) ಈ ತಂತ್ರಜ್ಞಾನವನ್ನು ಬಳಸಿಳ್ಳಲಿದೆ ಎಂದು ತಿಳಿದುಬಂದಿದೆ. ಆದರೆ ಈ ರೀತಿಯ ಡಿಸ್‌ಪ್ಲೇಗಳನ್ನು ತಯಾರು ಮಾಡಲು ಭಾರೀ ಹಣ ವ್ಯವ ಮಾಡಬೇಕಿದೆ. ಈ ಕಾರಣಕ್ಕೆ ಸ್ವಯಂ-ಸರಿಪಡಿಸಿಕೊಳ್ಳುವ ಡಿಸ್‌ಪ್ಲೇ ಪ್ರೀಮಿಯಂ ಫೋನ್‌ಗಳಲ್ಲಿ ಆರಂಭದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.

Best Mobiles in India

English summary
Self-healing display to be used in upcoming premium phones, this display will repair itself even if cracked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+