ವೀಡಿಯೋ ಗ್ರೀಟಿಂಗ್ಸ್ ಕಳುಹಿಸಿ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸಿ
ಇಂಟರ್‌ನೆಟ್ ಬಂದ ಮೇಲೆ ಗ್ರೀಟಿಂಗ್ಸ್ ಕಾರ್ಡ್ ಖರೀದಿಸಿ ಶುಭಾಶಯ ಹೇಳುವವರ ಸಂಖ್ಯೆ ಕಡಿಮೆಯಾಗಿದೆ. ಬಹುತೇಕ ಮಂದಿ ಇಂಟರ್‌ನೆಟ್‌ನಲ್ಲಿ ಶುಭಾಶಯ ಹೇಳುತ್ತಿದ್ದಾರೆ. ಹೀಗಾಗಿ ಒನ್ಇಂಡಿಯಾ,ತನ್ನ ಪ್ರೀತಿಯ ಓದುಗರು ಆಪ್ತರಿಗೆ ಇಂಟರ್‌ನೆಟ್‌ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಶುಭಾಶಯ ತಿಳಿಸಲು ಹೊಸ ರೀತಿಯ ಶುಭಾಶಯ ಪತ್ರವನ್ನು ತಂದಿದೆ.
ಇಂಡಿಯಾ ವಿಡಿಯೋ ಸಂಸ್ಥೆ ಮತ್ತು ಭಾರತದ ನಂ.1 ಪ್ರಾದೇಶಿಕ ಪೋರ್ಟಲ್ ಒನ್ ಇಂಡಿಯಾ ಜೊತೆಗೂಡಿ ದೇಶ ಪ್ರೇಮವನ್ನು ಸಾರುವ, ದೇಶದ ವಿವಿಧ ಸ್ಥಳ,ಕಲಾ ಪ್ರಕಾರಗಳನ್ನು ತೋರಿಸುವ ಏಳು ಸಾವಿರಕ್ಕೂ ಅಧಿಕವಿರುವ ವೀಡಿಯೋಗಳನ್ನು ರೂಪಿಸಿದೆ. ಈ ಎಲ್ಲಾ ವೀಡಿಯೋಗಳು ಭಾರತದ ತ್ರಿವರ್ಣ ಧ್ವಜದಲ್ಲಿರುವುದು ವಿಶೇಷ.ತ್ರಿವರ್ಣ ಧ್ವಜದ ಒಳಗಡೆ ನೀವು ಕರ್ಸರ್‌ನ್ನು ಇಟ್ಟರೆ ವೈವಿಧ್ಯಮಯ ವೀಡಿಯೋಗಳ ಚಿತ್ರಗಳು ಕಾಣಿಸಿಕೊಳ್ಳುತ್ತಿರುತ್ತವೆ. ಈ ಚಿತ್ರಗಳನ್ನು ನೀವು ಕ್ಲಿಕ್ ಮಾಡಿದ್ರೆ ಚಿತ್ರವನ್ನು ಸಾರುವ ವೀಡಿಯೋಗಳು ಪ್ಲೇ ಆಗುತ್ತವೆ.

www.oneindia.com/independenceday-2013 ಜಾಲತಾಣಕ್ಕೆ ಹೋಗಿ.
ತ್ರಿವರ್ಣ ಧ್ವಜದ ಕೆಳಗಡೆ ನೀಡಿರುವ ಜಾಗದಲ್ಲಿ ನಿಮ್ಮ ಹೆಸರು ಮತ್ತು ಇಮೇಲ್ ಐಡಿಯನ್ನು ದಾಖಲಿಸಿ.
ನಂತರ ಶುಭಾಶಯ ತಿಳಿಸಲು ನಿಮ್ಮ ಆಪ್ತರ ಹೆಸರು ಮತ್ತು ಅವರ ಇಮೇಲ್ ಐಡಿಯನ್ನು ಟೈಪಿಸಿ 'send' ಬಟನ್ ಒತ್ತಿ. ನಿಮ್ಮ ವೀಡಿಯೋ ಶುಭಾಶಯ ಪತ್ರ ಆಪ್ತರಿಗೆ ತಲುಪಿರುತ್ತದೆ.
ಇನ್ಯಾಕೆ ತಡ ಈಗಲೇ www.oneindia.com/independenceday ತಾಣಕ್ಕೆ ಭೇಟಿ ನೀಡಿ ಆಪ್ತರಿಗೆ ಸ್ವಾತಂತ್ರ್ಯೋತ್ಸವ ದಿನಾಚರಣೆಯ ವೀಡಿಯೋ ಶುಭಾಶಯ ಪತ್ರವನ್ನು ಕಳುಹಿಸಿ.ವಿಭಿನ್ನವಾಗಿ 67ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಿಕೊಳ್ಳಿ.
ಇದನ್ನೂ ಓದಿ: ವಿಶ್ವದ ಪ್ರಪ್ರಥಮ ಟ್ವೀಟರ್ ಹೋಟೆಲ್‌ನಲ್ಲಿ ಅಂಥ ವಿಶೇಷತೆ ಏನಿದೆ ಗೊತ್ತಾ?


Click it and Unblock the Notifications








