Home
ಸುದ್ದಿಜಾಲ

Sennheiser: ಭಾರತದಲ್ಲಿ ಸೆನ್‌ಹೈಸರ್ ಮೊಮೆಂಟಮ್ ಟ್ರೂ ವೈರ್‌ಲೆಸ್ 4 ಲಾಂಚ್‌! ಬೆಲೆ 20 ಸಾವಿರ

ಸೆನ್ಹೈಸರ್ (Sennheiser) ಆಗಾಗ್ಗೆ ಸುಧಾರಿತ ಫೀಚರ್ಸ್‌ ಜೊತೆಗೆ ವಿಶೇಷ ಧರಿಸಬಹುದಾದ ಡಿವೈಸ್‌ಗಳನ್ನು ಅನಾವರಣ ಮಾಡುತ್ತಲೇ ಇರುತ್ತದೆ. ಅದರಂತೆ ಈಗ ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್‌ಲೆಸ್ 4 ಇಯರ್‌ಬಡ್ಸ್‌ (Sennheiser Momentum True Wireless 4 Earbuds) ಅನ್ನು ಅನಾವರಣ ಮಾಡಿದೆ.

ಹೌದು, ಭಾರತದಲ್ಲಿ ಈಗ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್‌ಲೆಸ್ 4 ಇಯರ್‌ಬಡ್ಸ್‌ ಅನ್ನು ಲಾಂಚ್‌ ಮಾಡಲಾಗಿದೆ. ತನ್ನ ಇತ್ತೀಚಿನ ಉನ್ನತ ದರ್ಜೆಯ ಡಿವೈಸ್‌ ಆಗಿ ಇದು ಗುರುತಿಸಿಕೊಳ್ಳಲಿದೆ. ಜೊತೆಗೆ ಬಳಕೆದಾರರಿಗೆ ಉತ್ತಮ ಸೌಂಡ್‌ ಅನುಭವವನ್ನು ನೀಡಲು ಈ ಇಯರ್‌ಬಡ್ಸ್‌ ಅದ್ಭುತ ಫೀಚರ್ಸ್‌ ಆಯ್ಕೆ ಪಡೆದಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಏನು?, ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ಸೆನ್‌ಹೈಸರ್ ಮೊಮೆಂಟಮ್ ಟ್ರೂ ವೈರ್‌ಲೆಸ್ 4 ಲಾಂಚ್‌!

ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್‌ಲೆಸ್ 4 ಇಯರ್‌ಬಡ್ಸ್: ಈ ಡಿವೈಸ್‌ ಸ್ನಾಪ್‌ಡ್ರಾಗನ್ ಸೌಂಡ್ ಟೆಕ್ನಾಲಜಿ, ಕ್ವಾಲ್ಕಾಮ್ ಆಪ್ಟಿಎಕ್ಸ್ ಲಾಸ್‌ಲೆಸ್ ಟೆಕ್ನಾಲಜಿ ಮತ್ತು ಔರಾಕಾಸ್ಟ್ ಮತ್ತು ಅಲ್ಟ್ರಾ-ಲೋ-ಲೇಟೆನ್ಸಿ ಮೋಡ್‌ನಂತಹ ಇತರ ಸುಧಾರಿತ ಫೀಚರ್ಸ್‌ ಆಯ್ಕೆ ಪಡೆದಿದ್ದು, ಇದರರ್ಥ ನೀವು ಸಂಗೀತವನ್ನು ಕೇಳುತ್ತಿದ್ದರೆ, ಚಲನಚಿತ್ರಗಳನ್ನು ವೀಕ್ಷಿಸುತ್ತಿದ್ದರೆ ಅಥವಾ ಗೇಮ್‌ಗಳನ್ನು ಆಡುತ್ತಿದ್ದರೆ ಬೇರೆಯದೇ ಲೋಕಕ್ಕೆ ತಲುಪಿದಂತೆ ಆಗಲಿದೆ.

ವೇಗದ ಮತ್ತು ವಿಶ್ವಾಸಾರ್ಹ ಸಂಪರ್ಕಗಳಿಗಾಗಿ ಇಯರ್‌ಬಡ್ಸ್‌ ಬ್ಲೂಟೂತ್ ಆವೃತ್ತಿ 5.4 ಅನ್ನು ಬಳಕೆ ಮಾಡಲಿದ್ದು, ಕ್ವಾಲ್ಕಾಮ್ S5 ಸೌಂಡ್‌ ಜನ್ 2 ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ ಮತ್ತು aptX ಲಾಸ್‌ಲೆಸ್‌ ಮತ್ತು aptX ಅಡಾಪ್ಟಿವ್ ಆಡಿಯೊವನ್ನು ಇದು ಬೆಂಬಲಿಸಲಿದ್ದು, ಇದನ್ನು ಇನ್ನಷ್ಟು ಉತ್ತಮಗೊಳಿಸಲು ಹೆಚ್ಚಿನ ನವೀಕರಣದ ಆಯ್ಕೆಯನ್ನೂ ಸಹ ನೀಡಲಾಗಿದೆ.

ಭಾರತದಲ್ಲಿ ಸೆನ್‌ಹೈಸರ್ ಮೊಮೆಂಟಮ್ ಟ್ರೂ ವೈರ್‌ಲೆಸ್ 4 ಲಾಂಚ್‌!

ಇದರ ವೈರ್‌ಲೆಸ್ ಸಂಪರ್ಕವು ಪ್ರಬಲವಾಗಿದೆ ಮತ್ತು ಸ್ಪಷ್ಟವಾಗಿದೆ. ಇಯರ್‌ಬಡ್ಸ್‌ ಕ್ವಾಲ್‌ಕಾಮ್ ಆರ್‌ಎಫ್ ಫ್ರಂಟ್ ಎಂಡ್ (ಆರ್‌ಎಫ್‌ಎಫ್‌ಇ) ತಂತ್ರಜ್ಞಾನ ಮತ್ತು ಸೆನ್ಹೈಸರ್ ಟ್ರೂ ರೆಸ್ಪಾನ್ಸ್ ಟ್ರಾನ್ಸ್‌ಡ್ಯೂಸರ್ ತಂತ್ರಜ್ಞಾನವನ್ನು ಬಳೆ ಮಾಡುತ್ತದೆ. ಅಂದರೆ ನೀವು ಚಲಿಸುತ್ತಿರುವಾಗಲೂ ಇದು ನಿಮಗೆ ವೇಗವಾದ ಮತ್ತು ಹೆಚ್ಚು ಸ್ಥಿರವಾದ ಸಂಪರ್ಕಗಳನ್ನು ನೀಡಲಿದೆ.

ಸುಧಾರಿತ ತಂತ್ರಜ್ಞಾನದ ಜೊತೆಗೆ, ಮೊಮೆಂಟಮ್ ಟ್ರೂ ವೈರ್‌ಲೆಸ್ 4 ವರ್ಧಿತ ಅಕೌಸ್ಟಿಕ್ಸ್ ಅನ್ನು ನೀಡುತ್ತದೆ. ಆರು ಮೈಕ್ರೊಫೋನ್ ರಚನೆಯು ಸೌಂಡ್ ಪಿಕಪ್ ಮತ್ತು ಶಬ್ದ ರದ್ದತಿಯನ್ನು ಸುಧಾರಿಸುತ್ತದೆ. ನೀವು ಕೇಳುತ್ತಿರುವುದನ್ನು ಆಧರಿಸಿ ಅಡಾಪ್ಟಿವ್ ಈಕ್ವಲೈಜರ್ ಸೌಂಡ್‌ ಅನ್ನು ಸರಿಹೊಂದಿಸುತ್ತದೆ ಮತ್ತು ಸೌಂಡ್‌ ವೈಯಕ್ತೀಕರಣ ಮತ್ತು ಸೌಂಡ್‌ ಪರಿಶೀಲನೆಯಂತಹ ಜನಪ್ರಿಯ ಫೀಚರ್ಸ್‌ ಅನ್ನು ಸ್ಮಾರ್ಟ್ ಕಂಟ್ರೋಲ್ ಆಪ್‌ನಲ್ಲಿ ಸೇರಿಸಲಾಗಿದೆ. ಇಯರ್‌ಬಡ್ಸ್‌ ಫಿಟ್ ಕಿಟ್‌ನೊಂದಿಗೆ ಬರಲಿದ್ದು, ನಿಮ್ಮ ಕಿವಿಗಳಿಗೆ ಪರಿಪೂರ್ಣವಾದ ಫಿಟ್ ಅನ್ನು ನೀಡಲಿದೆ.

ಭಾರತದಲ್ಲಿ ಸೆನ್‌ಹೈಸರ್ ಮೊಮೆಂಟಮ್ ಟ್ರೂ ವೈರ್‌ಲೆಸ್ 4 ಲಾಂಚ್‌!

ಬ್ಯಾಟರಿ ಬಾಳಿಕೆ ಕೂಡ ಉತ್ತಮವಾಗಿದೆ. ಒಂದೇ ಚಾರ್ಜ್‌ನಲ್ಲಿ ನೀವು 7.5 ಗಂಟೆಗಳವರೆಗೆ ಆಲಿಸಬಹುದು ಮತ್ತು ಚಾರ್ಜಿಂಗ್ ಕೇಸ್ ನಿಮಗೆ 30 ಗಂಟೆಗಳವರೆಗೆ ಬ್ಯಾಕಪ್‌ ಅನ್ನು ನೀಡಲಿದೆ. ತ್ವರಿತ ಚಾರ್ಜಿಂಗ್ ಆಯ್ಕೆ ಸಹ ಇದ್ದು, ಕೇವಲ 8 ನಿಮಿಷಗಳ ಚಾರ್ಜಿಂಗ್‌ನಿಂದ ನೀವು ಗಂಟೆಗೂ ಹೆಚ್ಚು ಕಾಲ ಮ್ಯೂಸಿಕ್‌ ಆಲಿಸಬಹುದಾಗಿದೆ. ಇದಕ್ಕಾಗಿ ಯುಎಸ್‌ಬಿ ಟೈಪ್‌ ಸಿ ಮತ್ತು ವೈರ್‌ಲೆಸ್ ಚಾರ್ಜಿಂಗ್ ಆಯ್ಕೆ ನೀಡಲಾಗಿದೆ.ಇದರೊಂದಿಗೆ ಈ ಇಯರ್‌ಬಡ್ಸ್‌ ಸೆನ್ಹೈಸರ್ ವಿಶೇಷ ಬ್ಯಾಟರಿ ಸಂರಕ್ಷಣಾ ಮೋಡ್‌ನೊಂದಿಗೆ ಬಂದಿದೆ. ಇದರಿಂದ ದೀರ್ಘಾವಧಿಯ ಬ್ಯಾಟರಿ ಕಾರ್ಯಕ್ಷಮತೆ ಸಿಗಲಿದೆ. ಇದರರ್ಥ ನೀವು ಬ್ಯಾಟರಿ ಬಾಳಿಕೆಯ ಬಗ್ಗೆ ಚಿಂತಿಸದೆ ನಿಮ್ಮ ಸಂಗೀತವನ್ನು ಹೆಚ್ಚು ಕಾಲ ಆನಂದಿಸಬಹುದು.

ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್‌ಲೆಸ್ 4 ಬೆಲೆ ಹಾಗೂ ಲಭ್ಯತೆ: ಇದಕ್ಕೆ 18,990 ರೂ.ಗಳ ವಿಶೇಷ ಬೆಲೆ ನಿಗದಿ ಮಾಡಲಾಗಿದ್ದು, ಮುಂಗಡ ಕೋರಿಕೆಗೆ ಲಭ್ಯವಿದೆ. ಬುಕಿಂಗ್ ಕೊಡುಗೆಯು ಏಪ್ರಿಲ್ 24 ರಿಂದ ಮೇ 1, 2024 ರವರೆಗೆ ಸೆನ್ಹೈಸರ್‌ನ ವೆಬ್‌ಸೈಟ್, ಅಮೆಜಾನ್ ಮತ್ತು ಭಾರತದ ಇತರ ಪ್ರಮುಖ ಎಲೆಕ್ಟ್ರಾನಿಕ್ ಸ್ಟೋರ್‌ಗಳಲ್ಲಿ ಲಭ್ಯವಿದೆ. ಇದು ಬ್ಲ್ಯಾಕ್‌ ಕಾಫರ್, ಮೆಟಾಲಿಕ್ ಸಿಲ್ವರ್ ಮತ್ತು ಗ್ರ್ಯಾಫೈಟ್ ಎಂಬ ಮೂರು ಬಣ್ಣಗಳಲ್ಲಿ ಕಾಣಿಸಿಕೊಡಿದೆ.

Best Mobiles in India

English summary
Sennheiser Momentum True Wireless 4 Earbuds has now been launched in India. It will be recognized as its latest high-end device.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+