ಕ್ಯಾನನ್ ಇಂಕ್‌ಜೆಟ್ ಪ್ರಿಂಟರ್ ಬಳಕೆದಾರರಿಗೆ ಗಂಭೀರ ಎಚ್ಚರಿಕೆ... ತಕ್ಷಣವೇ ಎಚ್ಚೆತ್ತುಕೊಳ್ಳಿ!
ಇಂದಿನ ದಿನಗಳಲ್ಲಿ ಪ್ರಿಂಟರ್‌ಗಳು (Printers) ಅಗತ್ಯವಾದ ಡಿವೈಸ್‌ಗಳಾಗಿವೆ. ಇವುಗಳು ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಹಲವು ರೀತಿಯಲ್ಲಿ ಪ್ರಯೋಜನ ನೀಡಲಿದ್ದು, ಈ ನಡುವೆ ವಿವಿಧ ಸ್ಮಾರ್ಟ್ ಪ್ರಿಂಟರ್‌ಗಳು ಹಲವು ಫೀಚರ್ಸ್‌ನೊಂದಿಗೆ ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಅದಾಗ್ಯೂ ಈಗ ಇಂಕ್‌ಜೆಟ್ ಪ್ರಿಂಟರ್ ಬಳಕೆದಾರರಿಗೆ ಹೊಸ ಭದ್ರತಾ ಅಪಾಯದ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಹೌದು, ಈವರೆಗೂ ಸ್ಮಾರ್ಟ್‌ಫೋನ್, ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ನಲ್ಲಿ(Smartphone, computer, laptop) ಹಲವಾರು ಭದ್ರತಾ ದೋಷಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ,ಇದೀಗ ಪ್ರಿಂಟರ್ ವಿಭಾಗದಲ್ಲೂ ಭದ್ರತಾ ದೋಷಗಳು ಕಾಣಿಸಿಕೊಂಡಿವೆಯಂತೆ. ಪರಿಣಾಮ ಮನೆ, ಕಚೇರಿಯಲ್ಲಿ ಬಳಕೆ ಮಾಡುವ ಹಾಗೂ ದೊಡ್ಡ-ಸ್ವರೂಪದ ಇಂಕ್‌ಜೆಟ್ ಪ್ರಿಂಟರ್ ಬಳಕೆದಾರರಿಗೆ ಈ ಭದ್ರತಾ ಅಪಾಯದ ಬಗ್ಗೆ ಎಚ್ಚರಿಕೆ ನೀಡಲಾಗಿದೆ, ಹಾಗಿದ್ರೆ, ಏನಿದು ಸಮಸ್ಯೆ?, ಇದರಿಂದ ಆಗುವ ಅನಾನುಕೂಲಗಳೇನು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಈ ಲೇಖನ ಓದಿರಿ.

ಕ್ಯಾನನ್ ಇಂಕ್‌ಜೆಟ್ ಪ್ರಿಂಟರ್‌ನಲ್ಲಿನ (Canon Inkjet Printer) ಸಮಸ್ಯೆಗಳೇನು? ಈ ಡಿವೈಸ್‌ಗಳಲ್ಲಿ ಉಳಿಸಲಾಗಿರುವ ವೈ-ಫೈ ಸಂಪರ್ಕ ಸೆಟ್ಟಿಂಗ್‌ಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ಕಂಪನಿಯು ಬಹಿರಂಗಪಡಿಸಿದೆ. ಅದರಲ್ಲೂ ಸಾಮಾನ್ಯವಾಗಿ ಈ ರೀತಿಯ ಸ್ಟೋರೇಜ್‌ಗಳನ್ನು ಅಳಿಸಿಹಾಕಬೇಕು. ಆದರೆ, ಆ ಕೆಲಸವನ್ನು ಪ್ರಿಂಟರ್ ಮಾಡುತ್ತಿಲ್ಲ. ಪರಿಣಾಮ ಪ್ರಿಂಟರ್‌ಗಳಲ್ಲಿನ ಈ ಡೇಟಾ ಧಾರಣ ಸಮಸ್ಯೆ ಇತರರಿಗೆ ಡೇಟಾ ಪ್ರವೇಶವನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ ಎಂದು ತಿಳಿದುಬಂದಿದೆ.
ಬಳಕೆದಾರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?: ಈ ನ್ಯೂನತೆಯು ಕೆಲವು ಬಳಕೆದಾರರಿಗೆ ಭದ್ರತೆ ಮತ್ತು ಗೌಪ್ಯತೆಯ ಅಪಾಯವನ್ನು ಉಂಟು ಮಾಡಬಹುದು ಎನ್ನಲಾಗಿದೆ. ಉದಾಹರಣೆ ಸಹಿತ ಹೇಳುವುದಾದರೆ ತಾತ್ಕಾಲಿಕ ಬಳಕೆದಾರರು ಅಥವಾ ಬಳಕೆ ಮಾಡಲಾದ ಡಿವೈಸ್‌ನ ಹೊಸ ಖರೀದಿದಾರರು ಅದರ ಹಿಂದಿನ ಬಳಕೆದಾರರ ವೈ-ಫೈ ನೆಟ್‌ವರ್ಕ್‌ಗಾಗಿ ಸಂಪರ್ಕ ವಿವರಗಳನ್ನು ಪಡೆಯಲು ಅದು ಅವರಿಗೆ ಅನುಮತಿ ನೀಡುತ್ತದಂತೆ.
ಈ ಸೂಕ್ಷ್ಮ ವೈ-ಫೈ ಸಂಪರ್ಕ (Wi-Fi connection) ಮಾಹಿತಿಯು ಬಹಿರಂಗಗೊಂಡರೆ ಅದು ದುರುದ್ದೇಶಪೂರಿತ ಮೂರನೇ ವ್ಯಕ್ತಿಗೆ ಪ್ರಿಂಟರ್ ಸಂಪರ್ಕಗೊಂಡಿರುವ ನೆಟ್‌ವರ್ಕ್‌ಗೆ ಅನಧಿಕೃತ ನೆಟ್‌ವರ್ಕ್ ಪ್ರವೇಶವನ್ನು ಪಡೆಯಲು ಅನುಮತಿಸುತ್ತದೆ ಎಂದು ಹೇಳಲಾಗಿದೆ. ಅಂದರೆ ಡೇಟಾವನ್ನು ಕದಿಯಲು ಅಥವಾ ಇತರ ಗೌಪ್ಯತೆ-ಆಕ್ರಮಣಕಾರಿ ದಾಳಿಗಳನ್ನು ಮಾಡಲು ದಾಳಿಕೋರರು ಈ ನ್ಯೂನತೆಯನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಎಚ್ಚರಿಸಲಾಗಿದೆ.
ಅದರಲ್ಲೂ ಕ್ಯಾನನ್ ಪ್ರಿಂಟರ್‌ನಲ್ಲಿ ಸಂಗ್ರಹವಾಗಿರುವ ನಿರ್ದಿಷ್ಟ ಮಾಹಿತಿಯು ಮಾದರಿ ಮತ್ತು ಸಂರಚನೆಯನ್ನು ಅವಲಂಬಿಸಿ ಬದಲಾಗುತ್ತದೆ. ಈ ಪ್ರಿಂಟರ್ ಮೆಮೊರಿಯು ಸಾಮಾನ್ಯವಾಗಿ ನೆಟ್‌ವರ್ಕ್ SSID, ಪಾಸ್‌ವರ್ಡ್, ನೆಟ್‌ವರ್ಕ್ ಟೈಪ್, ನಿಯೋಜಿಸಲಾದ ಐಪಿ ವಿಳಾಸ, ಮ್ಯಾಕ್ ವಿಳಾಸ ಮತ್ತು ನೆಟ್‌ವರ್ಕ್ ಪ್ರೊಫೈಲ್ ಅನ್ನು ಒಳಗೊಂಡಿರುತ್ತದೆ.
ಕ್ಯಾನನ್ ಸಂಸ್ಥೆಯು ಈಗ ಈ ಸಮಸ್ಯೆ ಎದುರಿಸುತ್ತಿರುವ ಇಂಕ್‌ಜೆಟ್ ಪ್ರಿಂಟರ್‌ಗಳನ್ನು ಪಟ್ಟಿ ಮಾಡಿದೆ. ಅದರಲ್ಲಿ ಬಿಸಿನೆಸ್ ಇಂಕ್‌ಜೆಟ್ ಮತ್ತು ದೊಡ್ಡ-ಸ್ವರೂಪದ ಇಂಕ್‌ಜೆಟ್ ಪ್ರಿಂಟರ್ ಮಾದರಿಗಳನ್ನು ಪಟ್ಟಿ ಮಾಡಲಾಗಿದೆ. ಡೇಟಾ ಧಾರಣ ಸಮಸ್ಯೆಯು ತಮ್ಮ ಪ್ರಿಂಟರ್ ಮಾದರಿಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಪರಿಶೀಲಿಸಲು ಈ ಪಟ್ಟಿಯು ಬಳಕೆದಾರರಿಗೆ ಸಹಾಯ ಮಾಡಲಿದೆ.
ಈ ಭದ್ರತಾ ಸಮಸ್ಯೆಯಿಂದ ಸುರಕ್ಷಿತವಾಗಿರುವುದು ಹೇಗೆ?: ಮೂರನೇ ವ್ಯಕ್ತಿ ಪ್ರಿಂಟರ್‌ಗೆ ಪ್ರವೇಶ ಪಡೆಯುವ ಮೊದಲು ಬಳಕೆದಾರರು ತಮ್ಮ ವೈ-ಫೈ ಸೆಟ್ಟಿಂಗ್‌ಗಳನ್ನು ಅಳಿಸಬೇಕು ಎಂದು ಕಂಪನಿಯು ಮಾಹಿತಿ ನೀಡಿದೆ. ಡಿವೈಸ್ ಅನ್ನು ರಿಪೇರಿ ಮಾಡಿಸುವಾಗ ಅಥವಾ ಮಾರಾಟ ಮಾಡುವಾಗ ಡೇಟಾವನ್ನು ಅಳಿಸುವುದು ಕಡ್ಡಾಯವಾದ ಕೆಲಸವಾಗಿದೆ ಎಂದು ಉಲ್ಲೇಖಿಸಿದೆ.

ಅದರಲ್ಲೂ ಈ ಸಂಬಂಧ ಭದ್ರತಾ ಸಲಹೆಯನ್ನು ಕ್ಯಾನನ್ ಹಂಚಿಕೊಂಡಿದ್ದು, ಅದು ಬಳಕೆದಾರರಿಗೆ ತಮ್ಮ ವೈ-ಫೈ ಸೆಟ್ಟಿಂಗ್‌ಗಳ ಡೇಟಾವನ್ನು ಪ್ರಿಂಟರ್‌ನಿಂದ ಹೇಗೆ ಅಳಿಸುವುದು ಎಂಬುದರ ಕುರಿತು ಸೂಚನೆಗಳನ್ನು ನೀಡಲಿದೆ. ಈ ಸೂಚನೆಗಳನ್ನು ಪಾಲಿಸುವ ಮೂಲಕ ಮುಂದಿನ ದಿನಗಳಲ್ಲಿ ಆಗುವ ಸಂಭಾವ್ಯ ಸಮಸ್ಯೆಗಳಿಂದ ಪಾರಾಗಬಹುದು ಎಂದು ಹೇಳಲಾಗಿದೆ.
ಅಷ್ಟು ಮಾತ್ರವಲ್ಲದೆ ಪ್ರಿಂಟರ್‌ಗಳಲ್ಲಿ ಲಭ್ಯವಿರುವ ಮರುಹೊಂದಿಸುವ ಸೆಟ್ಟಿಂಗ್‌ಗಳಲ್ಲಿ ಎಲ್ಲವನ್ನು ಮರುಹೊಂದಿಸಿ ಆಯ್ಕೆಯನ್ನು ಬಳಕೆ ಮಾಡಲು ಕ್ಯಾನನ್ ಬಳಕೆದಾರರನ್ನು ಒತ್ತಾಯಿಸಿದೆ. ಇದರೊಂದಿಗೆ ವಾಯರ್‌ಲೆಸ್ ಲ್ಯಾನ್ ಅನ್ನು ಸಕ್ರಿಯಗೊಳಿಸಲು ಮತ್ತು ಎಲ್ಲಾ ಸೆಟ್ಟಿಂಗ್‌ಗಳನ್ನು ಮತ್ತೊಮ್ಮೆ ಮರುಹೊಂದಿಸಲು ಈ ವೇಳೆ ತಿಳಿಸಲಾಗಿದ್ದು, ಈ ಮೂಲಕ ಬಳಕೆದಾರರು ಎಚ್ಚರಿಕೆ ವಹಿಸಬೇಕಿದೆ.
ಬಳಕೆದಾರರು ಈ ರೀತಿಯ ಸಮಸ್ಯೆಗಳಿಂದ ಪಾರಾಗಲು ಸಾಧ್ಯವಾದಷ್ಟು ಪ್ರತ್ಯೇಕವಾಗಿರುವ ನೆಟ್‌ವರ್ಕ್‌ಗಳಲ್ಲಿ ಪ್ರಿಂಟರ್‌ಗಳನ್ನು ಇರಿಸಬೇಕು. ಆ ನೆಟ್‌ವರ್ಕ್‌ಗೆ ಧಕ್ಕೆಯಾಗಿದ್ದರೂ ಸಹ ಆಕ್ರಮಣಕಾರರು ಪ್ರಮುಖ ಡಿವೈಸ್‌ಗಳಿಗೆ ಪ್ರವೇಶ ಪಡೆಯುವುದನ್ನು ಇದು ತಡೆಯುತ್ತದೆ. ಇನ್ನು ತಮ್ಮ ಪ್ರಿಂಟರ್ ಮಾದರಿಗೆ ಲಭ್ಯವಿರುವಾಗಲೆಲ್ಲಾ ಫರ್ಮ್‌ವೇರ್ ನವೀಕರಣಗಳನ್ನು ಮಾಡಬೇಕು ಇದರ ಹೊರತಾಗಿ, ಕ್ಲೌಡ್ ಪ್ರಿಂಟಿಂಗ್ ಅಥವಾ ರಿಮೋಟ್ ಮ್ಯಾನೇಜ್‌ಮೆಂಟ್ ಇಂಟರ್‌ಫೇಸ್‌ಗಳಂತಹ ಸೇವೆಗಳು ಅಗತ್ಯವಿಲ್ಲದಿದ್ದರೆ ಅವುಗಳನ್ನು ಆಫ್ ಮಾಡಬೇಕು.


Click it and Unblock the Notifications








