Home
ಸುದ್ದಿಜಾಲ

Google Chrome: ಗೂಗಲ್ ಕ್ರೋಮ್ ಬಳಕೆದಾರರೇ ಎಚ್ಚರ.. ದೊಡ್ಡ ಅಪಾಯದ ಬಗ್ಗೆ ಕೇಂದ್ರ ಸರ್ಕಾರದಿಂದ ಎಚ್ಚರಿಕೆ!

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ ಅಥವಾ ಲ್ಯಾಪ್‌ಟಾಪ್‌ ಹಾಗೂ ಇನ್ನಿತರೆ ಡಿವೈಸ್‌ಗಳಲ್ಲಿ ಹೆಚ್ಚಾಗಿ ಬಳಕೆ ಮಾಡುವ ಸರ್ಚ್‌ ಇಂಜಿನ್‌ ಎಂದರೆ ಅದು ಗೂಗಲ್ ಕ್ರೋಮ್ (Google Chrome). ಆದರೆ ಈಗ ಇದರಲ್ಲೂ ತಮ್ಮ ಗೇಮ್ ಆಡಲು ಮುಂದಾಗಿರುವ ಸ್ಕ್ಯಾಮರ್‌ಗಳು ನಿಮ್ಮ ಖಾಸಗಿತನಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

ಹೌದು, ಗೂಗಲ್ ಕ್ರೋಮ್ ಬಳಸುವ ಹಲವು ಬಳಕೆದಾರರು ದೊಡ್ಡ ಮಟ್ಟದ ಭದ್ರತಾ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-IN) ಈ ಬಗ್ಗೆ ಎಚ್ಚರಿಕೆ ರವಾನಿಸಿದೆ. ಹಾಗಿದ್ರೆ, ಏನಿದು ಸಮಸ್ಯೆ, ಬಹುಪಾಲು ಜನರು ಬಳಕೆ ಮಾಡುವ ಕ್ರೋಮ್‌ನಲ್ಲಿ ಅಂತಹುದ್ದೇನಿದೆ? ಎಂಬ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಗೂಗಲ್ ಕ್ರೋಮ್ ಬಳಕೆದಾರರೇ ಎಚ್ಚರ.. ಅಪಾಯದ ಬಗ್ಗೆ ಕೇಂದ್ರ ಸರ್ಕಾರದಿಂದ ಎಚ್ಚರಿಕೆ!

ಗೂಗಲ್‌ ಕ್ರೋಮ್‌ನಲ್ಲಿ ಸಮಸ್ಯೆ: ಸಾಮಾನ್ಯವಾಗಿ ಸರ್ಕಾರ ಆಗಾಗ್ಗೆ ಗೂಗಲ್‌ ಕ್ರೋಮ್‌ ಅನ್ನು ಅಪ್‌ಡೇಟ್‌ ಮಾಡಿ ಎಂದು ಹೇಳುತ್ತಲೇ ಇರುತ್ತದೆ. ಇದಕ್ಕೆ ಕಾರಣ ಸ್ಕ್ಯಾಮರ್‌ಗಳ ಬೆದರಿಕೆಯಿಂದ ಬಳಕೆದಾರರನ್ನು ಪಾರು ಮಾಡಲು. ಆದರೆ, ಸಾಕಷ್ಟು ಜನರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಅದಾಗ್ಯೂ ಇನ್ನೂ ಒಂದಷ್ಟು ಜನ ಶೀಘ್ರದಲ್ಲೇ ಎಚ್ಚೆತ್ತುಕೊಂಡು ಅಪ್‌ಡೇಟ್‌ ಮಾಡುವ ಕೆಲಸಕ್ಕೆ ಮುಂದಾಗುತ್ತಾರೆ. ಆದರೆ, ಹಳೆಯ ಬ್ರೌಸರ್‌ಗಳನ್ನು ಬಳಸುವ ಬಳಕೆದಾರರು ಈಗ ಇನ್ನೂ ಹೆಚ್ಚಿನ ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ.

ಸರ್ಕಾರ ನೀಡಿದ ಮಾಹಿತಿ ಪ್ರಕಾರ ಗೂಗಲ್‌ ಕ್ರೋಮ್‌ ಬ್ರೌಸರ್ ಅನ್ನು ಸಾಧ್ಯವಾದಷ್ಟು ಬೇಗ ನವೀಕರಿಸಬೇಕಿದೆ. ಹೊಸ ನವೀಕರಣಗಳಲ್ಲಿ ಗೂಗಲ್ ಹಲವು ಭದ್ರತಾ ಫೀಚರ್ಸ್‌ ಅನ್ನು ನೀಡಿದ್ದು, ಈ ಕಾರಣದಿಂದಾಗಿ ಬಳಕೆದಾರರು ವಿವಿಧ ರೀತಿಯ ಸೈಬರ್ ಬೆದರಿಕೆಗಳಿಂದ ಬಚಾವ್‌ ಆಗಬಹುದು ಎಂದು ಹೇಳಲಾಗಿದೆ. ಜೊತೆಗೆ ನವೀಕರಿಸದ ಹಳೆಯ ಸಾಫ್ಟ್‌ವೇರ್ ಅನ್ನು ಸೈಬರ್ ಅಪರಾಧಿಗಳು ಸುಲಭವಾಗಿ ಹ್ಯಾಕ್ ಮಾಡಬಹುದು ಎಂದೂ ಸಹ ತಿಳಿಸಲಾಗಿದೆ.

ಗೂಗಲ್ ಕ್ರೋಮ್ ಬಳಕೆದಾರರೇ ಎಚ್ಚರ.. ಅಪಾಯದ ಬಗ್ಗೆ ಕೇಂದ್ರ ಸರ್ಕಾರದಿಂದ ಎಚ್ಚರಿಕೆ!

ಇನ್ನು ಹ್ಯಾಕರ್‌ಗಳು ನಿಮ್ಮ ಡಿವೈಸ್‌ ಅನ್ನು ಹ್ಯಾಕ್ ಮಾಡಿದರೆ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಲು ಮತ್ತು ಬ್ಯಾಂಕ್ ವಿವರಗಳನ್ನು ಸಂಗ್ರಹಿಸಲು ಹಾಗೂ ನಿಮ್ಮ ಖಾತೆಯಿಂದ ಹಣವನ್ನು ಕದಿಯಲು ಅನುವು ಮಾಡಿಕೊಟ್ಟಂತೆ ಆಗುತ್ತದೆ. ಆದ್ದರಿಂದ ಬಳಕೆದಾರರು ತಮ್ಮ ಡಿವೈಸ್‌ ಅನ್ನು ಸಾಧ್ಯವಾದಷ್ಟು ಬೇಗ ನವೀಕರಿಸಬೇಕು ಎಂದು ಒತ್ತಿ ಹೇಳಲಾಗಿದೆ.

ಸರ್ಕಾರವು ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ, ಲಿನಕ್ಸ್ ಮತ್ತು ಮ್ಯಾಕ್‌ಗಾಗಿ ಆವೃತ್ತಿ 119.0.6045.159 ಮತ್ತು ವಿಂಡೋಸ್‌ಗಾಗಿ ಆವೃತ್ತಿ 119.0.6045.159/.160 ನಲ್ಲಿ ಭದ್ರತಾ ಸಮಸ್ಯೆಗಳು ಕಂಡುಬಂದಿವೆಯಂತೆ. ಈ ಎರಡು ಆವೃತ್ತಿಗಳು CVE-2023-5997 ಮತ್ತು CVE-2023-6112 ದೋಷಗಳನ್ನು ಒಳಗೊಂಡಿದ್ದು, ಈ ಆವೃತ್ತಿಗಳನ್ನು ಬಳಸುವ ಬಳಕೆದಾರರು ತಮ್ಮ ಗೂಗಲ್ ಕ್ರೋಮ್ ಅನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ನವೀಕರಿಸಬೇಕು ಎಂದ ತಿಳಿಸಲಾಗಿದೆ.

ಅಂದರೆ ಗೂಗಲ್ ಕ್ರೋಮ್‌ನ ಮೇಲಿನ ಆವೃತ್ತಿಗಳನ್ನು ಬಳಕೆ ಮಾಡುವ ಬಳಕೆದಾರರ ಡಿವೈಸ್‌ಗಳಲ್ಲಿ ಸೈಬರ್ ಅಪರಾಧಿಗಳು ಸುಲಭವಾಗಿ ಅನಿಯಂತ್ರಿತ ಕೋಡ್‌ಗಳನ್ನು ಇನ್‌ಸ್ಟಾಲ್‌ ಮಾಡಬಹುದಂತೆ. ಈ ಕಾರಣಕ್ಕೆ ಸೈಬರ್ ಅಪರಾಧಿಗಳು ಇಂತಹ ಹಳೆಯ ಆವೃತ್ತಿಗಳ ಬಳಕೆದಾರರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಸೂಚನೆಯಲ್ಲಿ ತಿಳಿಸಲಾಗಿದ್ದು, ನೀವು ಏನಾದರೂ ಈ ಆವೃತ್ತಿಯಲ್ಲಿ ನಿಮ್ಮ ಡಿವೈಸ್ ಬಳಕೆ ಮಾಡುತ್ತಿದ್ದರೆ ಈ ಕ್ಷಣವೇ ಅಪ್‌ಡೇಟ್‌ ಮಾಡಿ.

ಗೂಗಲ್ ಕ್ರೋಮ್ ಬಳಕೆದಾರರೇ ಎಚ್ಚರ.. ಅಪಾಯದ ಬಗ್ಗೆ ಕೇಂದ್ರ ಸರ್ಕಾರದಿಂದ ಎಚ್ಚರಿಕೆ!
ಅದರಲ್ಲೂ ಸ್ಕ್ಯಾಮರ್‌ಗಳು ಫಿಶಿಂಗ್ ಮೇಲ್‌ಗಳನ್ನು ಕಳುಹಿಸಬಹುದು. ನೀವು ಅಂತಹ ಮೇಲ್‌ಗಳನ್ನು ತೆರೆದರೆ ಅಥವಾ ಮೇಲ್‌ನಲ್ಲಿ ಒದಗಿಸಲಾದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿದರೆ ಈ ಹ್ಯಾಕರ್‌ಗಳು ನಿಮ್ಮ ಡಿವೈಸ್‌ ಅನ್ನು ಕಂಟ್ರೋಲ್‌ ಅನ್ನು ಸುಲಭವಾಗಿ ಪಡೆದುಕೊಳ್ಳಲಿದ್ದಾರೆ. ಈ ರೀತಿಯ ಲಿಂಕ್‌ಗಳು ನಿಮ್ಮನ್ನು ಅಪಾಯಕಾರಿ ಮಾಲ್‌ವೇರ್ ತುಂಬಿರುವ ಪುಟಗಳಿಗೆ ಕೊಂಡೊಯ್ಯಲಿದೆ. ಆದರೆ, ಅಪ್‌ಡೇಟ್‌ ಮಾಡಿದ್ರೆ ಈ ಸಮಸ್ಯೆಯಿಂದ ಪಾರಾಗಬಹುದಾಗಿದೆ.

ಅದಾಗ್ಯೂ ಗೂಗಲ್ ಕ್ರೋಮ್ ಹೊರತುಪಡಿಸಿ ಇತರ ಬ್ರೌಸರ್‌ಗಳ ಬಳಕೆದಾರರು ತಮ್ಮ ಬ್ರೌಸರ್‌ಗಳು, ಡಿವೈಸ್‌ಗಳು ಮತ್ತು ಇತರ ಆಪ್‌ಗಳನ್ನು ಆಗಾಗ್ಗೆ ನವೀಕರಿಸಲು ಸಲಹೆ ನೀಡಲಾಗುತ್ತದೆ. ಇತ್ತೀಚೆಗೆ, ಮೊಜಿಲ್ಲಾ ಫೈರ್‌ಫಾಕ್ಸ್ ಬ್ರೌಸರ್‌ನಲ್ಲಿಯೂ ಹಲವಾರು ದುರ್ಬಲತೆಗಳು ಕಂಡುಬಂದಿದ್ದವು. 115.5.0 ಕ್ಕಿಂತ ಮೊದಲ ಫೈರ್‌ಫಾಕ್ಸ್‌ನ ESR ಆವೃತ್ತಿಗಳು, 120 ಕ್ಕಿಂತ ಮೊದಲ ಫೈರ್‌ಫಾಕ್ಸ್‌ನ ಐಓಎಸ್‌ ಆವೃತ್ತಿಗಳು ಮತ್ತು 115.5 ಕ್ಕಿಂತ ಹಿಂದಿನ ಮೊಜಿಲ್ಲಾ ಥಂಡರ್‌ಬೋಲ್ಟ್‌ ಆವೃತ್ತಿಗಳಲ್ಲಿ ದೋಷಗಳು ಕಂಡುಬಂದಿದ್ದವು.

ಈ ಆವೃತ್ತಿಗಳನ್ನು ಬಳಸುವ ಬಳಕೆದಾರರು ಇದೇ ರೀತಿಯ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಆದ್ದರಿಂದ, ಫೈರ್‌ಫಾಕ್ಸ್‌ ನ ಮೇಲಿನ ಆವೃತ್ತಿಗಳನ್ನು ಬಳಸುವ ಬಳಕೆದಾರರು ತಮ್ಮ ಬ್ರೌಸರ್‌ಗಳನ್ನು ಕಡ್ಡಾಯವಾಗಿ ನವೀಕರಿಸಬೇಕಿದೆ. ಇದನ್ನು ನೀವು ನಿರ್ಲಕ್ಷ್ಯ ಮಾಡಿದ್ರೆ ನಿಮ್ಮ ಡಿವೈಸ್‌ಗಳು ಬೇರೆಯವರ ಕಂಟ್ರೋಲ್‌ಗೆ ಹೋಗಲಿದ್ದು, ಈ ಮೂಲಕ ನೀವು ವಿವಿಧ ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕುವಂತೆ ಆಗಲಿದೆ.

Best Mobiles in India

English summary
Google Chrome are facing a high level of security threat. The Government's Computer Emergency Response Team (CERT-IN) has issued an alert in this regard.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+