Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ಬಳಕೆದಾರರೇ ನಿಮ್ಮ ಫೋನ್‌ ನಂಬರ್‌ ಬಗ್ಗೆ ತಿಳಿದಿರಲಿ ಈ ವಿಚಾರ! DoT ಎಚ್ಚರಿಕೆ ಏನು?

ಫೋನ್‌ ಬಳಕೆದಾರರು ಹೆಚ್ಚಾಗುತ್ತಿದ್ದಂತೆ ಮೋಸದ ಜಾಲ ಸಹ ವಿಸ್ತರಣೆ ಆಗುತ್ತಾ ಹೋಗುತ್ತಿದೆ. ಈ ನಡುವೆ ಸರ್ಕಾರ ಹಾಗೂ ಸಂಬಂಧಿಸಿದ ಟೆಲಿಕಾಂ ಕಂಪೆನಿಗಳು ಬಳಕೆದಾರರಿಗೆ ಭದ್ರತೆ ನೀಡುವ ಹಿನ್ನೆಲೆ ವಿವಿಧ ರೀತಿಯ ಮಾಹಿತಿಗಳನ್ನು ಆಗಾಗ್ಗೆ ನೀಡುತ್ತಲೇ ಬರುತ್ತಿರುತ್ತವೆ. ಈ ನಡುವೆ ಮಗದೊಮ್ಮೆ ಫೋನ್‌ ಬಳಕೆದಾರರಿಗೆ DoT ಗಂಭೀರ ಎಚ್ಚರಿಕೆ ನೀಡಿದೆ.

ಹೌದು, ದೇಶದ ಮೊಬೈಲ್ ಬಳಕೆದಾರರಿಗೆ ದೂರಸಂಪರ್ಕ ಇಲಾಖೆ (DoT) ಪ್ರಮುಖ ಎಚ್ಚರಿಕೆ ರವಾನಿಸಿದೆ. ಅಂದರೆ ದುರುದ್ದೇಶಪೂರಿತ ಕರೆಗಳ ಬಗ್ಗೆ ಹೆಚ್ಚುತ್ತಿರುವ ಬಗ್ಗೆ ಈ ಬಗ್ಗೆ ಉಲ್ಲೇಖ ಮಾಡಿದೆ. ಅಷ್ಟೇ ಅಲ್ಲದೆ ಮೋಸದ ಕರೆ ಮಾಡಿ ಸ್ಕ್ಯಾಮರ್‌ಗಳು ನಿಮ್ಮ ಕರೆಯನ್ನು ಕಡಿತಗೊಳಿಸುತ್ತೇವೆ ಎಂದೂ ಸಹ ಕೆಲವರಿಗೆ ಬೆದರಿಕೆ ಹಾಕಲಾಗಿದೆ. ಪರಿಣಾಮ ತಕ್ಷಣವೇ ಎಚ್ಚೆತ್ತುಕೊಂಡಿರುವ ದೂರಸಂಪರ್ಕ ಇಲಾಖೆ ಬಳಕೆದಾರರು ಎಚ್ಚರಿಕೆಯಿಂದ ಇರಲು ಕೆಲವು ಸಲಹೆಗಳನ್ನು ನೀಡಿದೆ.

ಸ್ಮಾರ್ಟ್‌ಫೋನ್‌ ಬಳಕೆದಾರರೇ ನಿಮ್ಮ ಫೋನ್‌ ನಂಬರ್‌ ಬಗ್ಗೆ ತಿಳಿದಿರಲಿ ಈ ವಿಚಾರ!

ದೂರಸಂಪರ್ಕ ಇಲಾಖೆಯಿಂದ ಎಚ್ಚರಿಕೆ: ಭಾರತದಲ್ಲಿ ದೂರಸಂಪರ್ಕ ವಲಯಕ್ಕೆ ನೀತಿಗಳು, ಕಾರ್ಯಕ್ರಮಗಳು ಮತ್ತು ನಿಯಂತ್ರಕ ಚೌಕಟ್ಟುಗಳನ್ನು ರೂಪಿಸಲು ನೋಡಲ್ ಏಜೆನ್ಸಿಯಾಗಿರುವ DoT ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತದೆ. ಈ ಮೂಲಕ ದೇಶದ ಯಾವೊಬ್ಬ ಪ್ರಜೆಗೂ ಸಮಸ್ಯೆ ಆಗಬಾರದು ಎಂದು ತಿಳಿಸುತ್ತದೆ. ಆದರೆ, ಸ್ಕ್ಯಾಮರ್‌ಗಳು ರಂಗೋಲಿ ಕೆಳಗೆ ನುಸುಳಿ ಜನರಿಗೆ ಮೋಸ ಮಾಡುತ್ತಲೇ ಬರುತ್ತಿದ್ದಾರೆ. ಈ ಕಾರಣಕ್ಕೆ ಈಗ ಕೆಳಗಿನ ಈ ಎಚ್ಚರಿಕೆಗಳನ್ನು ನೀಡಿದೆ.

-ಸಂಪರ್ಕ ಕಡಿತಗೊಳಿಸುವ ಬಗ್ಗೆ ಬೆದರಿಕೆ ಹಾಕಿ ದೇಶದ ಯಾವುದೇ ನಾಗರಿಕರಿಗೆ DoT ಕರೆಗಳನ್ನು ಮಾಡುವುದಿಲ್ಲ.
-ನಾಗರಿಕರು ಏನಾದರೂ ಒಮ್ಮೆ ಈ ರೀತಿಯ ಕರೆಗಳನ್ನು ಸ್ವೀಕರಿಸಿದ್ದೇ ಆದರೆ ಎಚ್ಚರಿಕೆಯಿಂದ ವ್ಯವಹರಿಸಿ. ಹಾಗೆಯೇ ಯಾವುದೇ ಕಾರಣಕ್ಕೂ ಅಂತಹ ಕರೆಗಳ ಜೊತೆಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಶೇರ್‌ ಮಾಡಿಕೊಳ್ಳಬೇಡಿ.

ಸ್ಮಾರ್ಟ್‌ಫೋನ್‌ ಬಳಕೆದಾರರೇ ನಿಮ್ಮ ಫೋನ್‌ ನಂಬರ್‌ ಬಗ್ಗೆ ತಿಳಿದಿರಲಿ ಈ ವಿಚಾರ!

ಪರಿಶೀಲನೆ ಮಾಡಿ: ನೀವು ಯಾವುದೇ ಸಂಪರ್ಕ ಕಡಿತಗೊಳಿಸುವ ಬೆದರಿಕೆ ಕರೆ ಸ್ವೀಕರಿಸಿದ್ದೇ ಆದರೆ ತಕ್ಷಣವೇ ಹೆದರಿಕೊಂಡು ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ನಿಮ್ಮ ಸೇವಾ ಪೂರೈಕೆದಾರರೊಂದಿಗೆ ಅಂತಹ ಕರೆಗಳ ದೃಢೀಕರಣವನ್ನು ಪರಿಶೀಲಿಸಿ ನಂತರ ಮುಂದುವರೆಯಿರಿ. ಜೊತೆಗೆ DoT ಈ ರೀತಿಯ ಕರೆ ಮಾಡುವುದಿಲ್ಲ ಎನ್ನುವುದೂ ಸಹ ನಿಮ್ಮ ಮನಸ್ಸಿನಲ್ಲಿ ಇರಲಿ.

ಗಂಭೀರವಾಗಿ ಪರಿಗಣಿಸಬೇಡಿ: ಪ್ರಮುಖವಾದ ವಿಷಯ ಏನೆಂದರೆ ಫೋನ್ ಕರೆಗಳ ಮೂಲಕ ಸಂಪರ್ಕ ಕಡಿತದ ಎಚ್ಚರಿಕೆ ನೀಡಿದ್ದೇ ಆದರೆ ಅಂತಹ ಯಾವುದೇ ಕರೆ ಸಹ ಅನುಮಾನಾಸ್ಪದ ಎಂದು ಪರಿಗಣಿಸಬೇಕು. ಇಲ್ಲವಾದರೆ ಮೋಸ ಹೋಗೋದು ಖಚಿತವಾಗಲಿದೆ.
ವರದಿ ಮಾಡಿ: ಇದರೊಂದಿಗೆ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ ಆಗಿರುವ https://cybercrime.gov.in ನಲ್ಲಿ ನಿಮ್ಮ ಫೋನ್‌ಗೆ ಬಂದ ಯಾವುದೇ ಅನುಮಾನಾಸ್ಪದ ಕರೆಗಳನ್ನು ವರದಿ ಮಾಡುವ ಮೂಲಕ ಮುಂದೆ ಆಗುವ ಸಮಸ್ಯೆಗಳಿಗೆ ಮುಕ್ತಿಯಾಡುವ ಕೆಲಸ ಮಾಡಬಹುದು.

ಸ್ಮಾರ್ಟ್‌ಫೋನ್‌ ಬಳಕೆದಾರರೇ ನಿಮ್ಮ ಫೋನ್‌ ನಂಬರ್‌ ಬಗ್ಗೆ ತಿಳಿದಿರಲಿ ಈ ವಿಚಾರ!

ಇದರೊಂದಿಗೆ ನೀವು ಯಾವುದೇ ಕರೆ ಅಥವಾ ಮಸೆಜ್‌ನಲ್ಲಿ ಜಾಗರೂಕರಾಗಿರಿ. ಮಾಹಿತಿಯನ್ನು ಪರಿಶೀಲಿಸುವ ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ತ್ವರಿತವಾಗಿ ವರದಿ ಮಾಡುವ ಪ್ರಾಮುಖ್ಯತೆಯನ್ನು ಈ ವೇಳೆ DoT ಒತ್ತಿಹೇಳಿದ್ದು, ಈ ರೀತಿಯ ಮೋಸದ ಕರೆಗಳನ್ನು ಪರಿಹರಿಸಲು ಮತ್ತು ಸಂಭಾವ್ಯ ಶೋಷಣೆಯಿಂದ ನಾಗರಿಕರನ್ನು ರಕ್ಷಣೆ ಮಾಡಲು ಇಲಾಖೆಯು ಕಾನೂನು ಜಾರಿ ಸಂಸ್ಥೆಗಳೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಾ ಬರುತ್ತಿದೆ.

ಈ ಎಲ್ಲಾ ಬೆಳವಣಿಗೆ ನಡುವೆ ವಾಟ್ಸಾಪ್‌ ಅಥವಾ ಇತರೆ ಇಂಟರ್ನೆಟ್‌ ಕರೆ ಮೂಲಕವೂ ಸ್ಕ್ಯಾಮರ್‌ಗಳು ಮೋಸ ಮಾಡುವ ಕೆಲಸವನ್ನು ಹಿಂದಿನಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ನಿಮ್ಮ ಫೋನ್‌ಗೆ ಈ ರೀತಿಯ ಅನಾಮಿಕ ಕರೆ ಬಂದರೆ ಯಾವುದೇ ಕಾರಣಕ್ಕೂ ಸ್ವೀಕಾರ ಮಾಡಬೇಡಿ. ಸಾಮಾನ್ಯ ಕರೆಗಿಂತ ಈ ಇಂಟರ್ನೆಟ್‌ ಕರೆ ಮೂಲಕ ಜನರನ್ನು ಬೇಗನೇ ಯಾಮಾರಿಸುವ ಕಲೆಯನ್ನು ಸ್ಕ್ಯಾಮರ್‌ಗಳು ಕರಗತ ಮಾಡಿಕೊಂಡಿದ್ದಾರೆ. ಯಾಕೆಂದರೆ ಇಲ್ಲಿ ಅವರನ್ನು ಟ್ರ್ಯಾಕ್‌ ಮಾಡುವುದು ಇಲಾಖೆಗಳಿಗೆ ಕಷ್ಟದ ಕೆಲಸ.

Best Mobiles in India

English summary
The Department of Telecommunications (DoT) has issued an important warning to mobile users in the country. It is hereby informed to be aware of increasing number of malicious calls.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+