Apple: ಆಪಲ್ ಡಿವೈಸ್ ಬಳಕೆದಾರರಿಗೆ ಸರ್ಕಾರದಿಂದ ಗಂಭೀರ ಎಚ್ಚರಿಕೆ! ಮೊದಲು ಈ ಕೆಲಸ ಮಾಡಿ
ಆಪಲ್ ಡಿವೈಸ್‌ಗಳು (Apple devices) ಎಂದರೆ ಸಾಮಾನ್ಯವಾಗಿ ಭದ್ರತೆಗೆ ಹೆಸರುವಾಸಿ. ಆದರೆ ಸ್ಕ್ಯಾಮರ್‌ಗಳು ಈ ಭದ್ರತೆಯನ್ನೇ ಬುಡಮೇಲು ಮಾಡುವ ಕೆಲಸವನ್ನು ಆಗಾಗ್ಗೆ ಮಾಡುತ್ತಲೇ ಇರುತ್ತಾರೆ. ಈ ಕಾರಣಕ್ಕೆ ಇದೀಗ ಸರ್ಕಾರ ಆಪಲ್‌ನ ಕೆಲವು ಡಿವೈಸ್ ಬಳಕೆದಾರರಿಗೆ ಗಂಭೀರ ಎಚ್ಚರಿಕೆ ನೀಡಿದೆ.
ಹೌದು, ಯಾರೆಲ್ಲಾ ಐಫೋನ್, ಐಪ್ಯಾಡ್ ಮತ್ತು ಮ್ಯಾಕ್ (iPhone, iPad and Mac) ಡಿವೈಸ್‌ಗಳನ್ನು ಬಳಕೆ ಮಾಡುತ್ತಿದ್ದಾರೋ ಅವರಿಗೆ ಸರ್ಕಾರ ಈಗ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೆ ನಿಮ್ಮ ಡಿವೈಸ್‌ಗಳನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಅನ್ನೋ ಮಾಹಿತಿಯನ್ನೂ ಸಹ ಈ ವೇಳೆ ತಿಳಿಸಿದೆ. ಹಾಗಿದ್ರೆ, ಆಪಲ್ ಡಿವೈಸ್ ಬಳಕೆದಾರು ಏನು ಮಾಡಬೇಕು? ಯಾವೆಲ್ಲಾ ಡಿವೈಸ್‌ಗಳಲ್ಲಿ ಭದ್ರತಾ ಸಮಸ್ಯೆ ಎದುರಾಗಿದೆ? ಅನ್ನೋ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಆಪಲ್ ಡಿವೈಸ್ ಬಳಕೆದಾರರಿಗೆ ಸರ್ಕಾರದ ಎಚ್ಚರಿಕೆ: ಭಾರತದಲ್ಲಿನ ಆಪಲ್ ಬಳಕೆದಾರರು ಈ ವಾರ ಭಾರತ ಸರ್ಕಾರದ ನೋಡಲ್ ಭದ್ರತಾ ಸಂಸ್ಥೆಯಿಂದ ಮಹತ್ವದ ನೋಟಿಫಿಕೇಶನ್ ಅನ್ನು ಸ್ವೀಕರಿಸಿದ್ದಾರೆ. ಏಪ್ರಿಲ್ 2, 2024 ಈ ಸಂಬಂಧ ಗಂಭೀರ ಎಚ್ಚರಿಕೆಯನ್ನು ನೀಡಲಾಗಿದ್ದು, ಹೆಚ್ಚಿನ ತೀವ್ರತೆಯ ರೇಟಿಂಗ್ ಅನ್ನು ಹೊಂದಿದೆ. ಈ ಭದ್ರತಾ ಸಮಸ್ಯೆ ಐಫೋನ್‌ಗಳು ಮತ್ತು ಮ್ಯಾಕ್‌ಗಳು ಸೇರಿದಂತೆ ಆಪಲ್ ಡಿವೈಸ್‌ಗಳ ನಿರ್ಣಾಯಕ ಘಟಕಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ತಿಳಿಸಿದೆ.
ಯಾವೆಲ್ಲಾ ಡಿವೈಸ್‌ಗಳು ಈಗ ಸಮಸ್ಯೆ ಎದುರಿಸುತ್ತಿವೆ?:
ಆಪಲ್ ಸಫಾರಿ ಆವೃತ್ತಿ 17.4.1 ಮತ್ತು ಹಿಂದಿನದು
ಆಪಲ್ ಮ್ಯಾಕ್ ಓಎಸ್ ವೆಂಚುರಾ ಆವೃತ್ತಿ 13.6.6 ಮತ್ತು ಹಿಂದಿನದು
ಆಪಲ್ ಮ್ಯಾಕ್ ಓಎಸ್ ಸೊನೊಮಾ ಆವೃತ್ತಿ 14.4.1 ಮತ್ತು ಹಿಂದಿನದು
ಆಪಲ್ ವಿಷನ್ ಓಎಸ್ ಆವೃತ್ತಿ 1.1.1 ಮತ್ತು ಹಿಂದಿನದು
ಆಪಲ್ ಐಓಎಸ್ ಮತ್ತು ಐಪ್ಯಾಡ್ ಓಎಸ್ ಆವೃತ್ತಿ 17.4.1 ಮತ್ತು ಹಿಂದಿನದು
ಆಪಲ್ ಐಓಎಸ್ ಮತ್ತು ಐಪ್ಯಾಡ್ ಓಎಸ್ ಆವೃತ್ತಿ 16.7.7 ಮತ್ತು ಹಿಂದಿನದು

ಗಮನಿಸಬೇಕಾದ ವಿಷಯ ಏನೆಂದರೆ ಈಗ ಕಂಡುಕೊಳ್ಳಲಾಗಿರುವ ಭದ್ರತಾ ಸಮಸ್ಯೆಯು ವಿವಿಧ ಆಪಲ್ ಸಾಫ್ಟ್‌ವೇರ್ ಆವೃತ್ತಿಗಳಿಗೆ ವಿಸ್ತರಿಸುತ್ತದೆ ಎನ್ನಲಾಗಿದೆ. ಇದು ಇತ್ತೀಚಿನ ಡಿವೈಸ್‌ಗಳಾದ ಐಫೋನ್ 15 ಪ್ರೊ ಮ್ಯಾಕ್ಸ್ ಮತ್ತು ವಿಷನ್ ಪ್ರೊ ಹೆಡ್‌ಸೆಟ್‌ಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಇದರೊಂದಿಗೆ ಐಪ್ಯಾಡ್ ಮತ್ತು ಐಪ್ಯಾಡ್ ಪ್ರೊ ಮಾದರಿಗಳ ಶ್ರೇಣಿಯನ್ನು ಸಹ ಈ ಲಿಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇಷ್ಟೇ ಅಲ್ಲದೆ ಐಫೋನ್ 8, 8 ಪ್ಲಸ್ ಮತ್ತು ಐಫೋನ್ X (iPhone 8, 8 Plus and iPhone X) ನಂತಹ ಹಳೆಯ ಐಫೋನ್ ಮಾದರಿಗಳ ಬಳಕೆದಾರರು ಈ ದುರ್ಬಲತೆಯ ಬಗ್ಗೆ ಗಮನ ಹರಿಸಬೇಕು ಎಂದೂ ಸಹ ಹೇಳಲಾಗಿದೆ.
ಈ ದುರ್ಬಲತೆಯಿಂದ ಆಗುವ ಸಮಸ್ಯೆ ಏನು?: ಸಿಇಆರ್‌ಟಿ-ಇನ್ (CERT-In) ಪ್ರಕಾರ ಈ ಭದ್ರತಾ ದೋಷದಿಂದಾಗಿ ದಾಳಿಕೋರರು ಅವರು ಗುರಿಪಡಿಸಿದ ಸಿಸ್ಟಮ್‌ನಲ್ಲಿ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಸಕ್ರಿಯಗೊಳಿಸುತ್ತದೆ. ಆಪಲ್ ಡಿವೈಸ್‌ಗಳಲ್ಲಿನ ದುರ್ಬಲತೆಯು ವೆಬ್‌ಆರ್‌ಟಿಸಿ ಮತ್ತು ಕೋರ್‌ಮೀಡಿಯಾದಲ್ಲಿನ ಬೌಂಡ್-ಆಫ್-ಬೌಂಡ್ ರೈಟ್ ಸಮಸ್ಯೆಗಳಿಂದ ಉಂಟಾಗುತ್ತದೆ. ನಿರ್ದಿಷ್ಟವಾಗಿ ರಚಿಸಲಾದ ವಿನಂತಿಯನ್ನು ಪ್ರವೇಶಿಸಲು ಬಲಿಪಶುವನ್ನು ಮನವೊಲಿಸುವ ಮೂಲಕ ಸ್ಕ್ಯಾಮರ್‌ಗಳು ಈ ದುರ್ಬಲತೆಯ ಲಾಭವನ್ನು ಪಡೆಯುತ್ತಾರೆ ಎಂದು ಎಚ್ಚರಿಸಲಾಗಿದೆ.

ಈ ಸಮಸ್ಯೆಯಿಂದ ನಿಮ್ಮ ಆಪಲ್ ಡಿವೈಸ್‌ಗಳನ್ನು ರಕ್ಷಿಸಿಕೊಳ್ಳುವುದು ಹೇಗೆ?: ಯಾರೆಲ್ಲಾ ಮೇಲೆ ಉಲ್ಲೇಖಿಸಿದ ಡಿವೈಸ್‌ಗಳನ್ನು ಬಳಕೆ ಮಾಡುತ್ತಿದ್ದಾರೋ ಅವರು ತಮ್ಮ ಆಪಲ್ ಡಿವೈಸ್‌ಗಳನ್ನು ಇತ್ತೀಚಿನ ಸಾಫ್ಟ್‌ವೇರ್ ಆವೃತ್ತಿಗಳಿಗೆ ತ್ವರಿತವಾಗಿ ನವೀಕರಿಸಬೇಕಿದೆ. ಇದರಿಂದಾಗಿ ದುರುದ್ದೇಶಪೂರಿತ ಸ್ಕ್ಯಾಮರ್‌ಗಳಿಗೆ ಗುರಿಯಾಗುವ ಅಪಾಯವನ್ನು ತಗ್ಗಿಸಬಹುದಾಗಿದೆ. ಅದಾಗ್ಯೂ ಇನ್ನೂ ಹೆಚ್ಚಿನ ಭದ್ರತಾ ಸೌಲಭ್ಯ ಬೇಕು ಎಂದರೆ ಹೊಸ ಫೋನ್‌ಗೆ ಅಪ್‌ಗ್ರೇಡ್ ಆಗಬಹುದಾಗಿದೆ.


Click it and Unblock the Notifications








