ಟಾಟಾಸ್ಕೈ, ಏರ್‌ಟೆಲ್‌, ಡಿಶ್‌ಟಿವಿ, ಡಿ2ಹೆಚ್‌ STB ಬಾಕ್ಸ್‌: ಯಾವುದು ಯೋಗ್ಯ?

|

ದೇಶದ ಡಿಟಿಎಚ್ ವಲಯದಲ್ಲಿ ಈಗಾಗಲೇ ಅನೇಕ ಮಹತ್ತರ ಬದಲಾವಣೆಗಳು ನಡೆದಿವೆ. ಚಾನೆಲ್‌ಗಳ ದರ ಪಟ್ಟಿಯಲ್ಲಿಯೂ ಹಲವು ಏರಿಳಿತಗಳು ಕಂಡಿದ್ದು, ಸೆಟ್‌ಟಾಪ್ ಬಾಕ್ಸ್‌ ಜೊತೆಗೆ ನೂತನ ಟಿವಿ ಕನೆಕ್ಷನ್ ಡಿವೈಸ್‌ಗಳು ಲಗ್ಗೆ ಇಟ್ಟಿವೆ. ಸದ್ಯ ಮಾರುಕಟ್ಟೆಯಲ್ಲಿ ಟಾಟಾಸ್ಕೈ ಮತ್ತು ಏರ್‌ಟೆಲ್ ಲೀಡ್‌ನಲ್ಲಿ ಕಾಣಿಸಿಕೊಂಡಿವೆ. ಹಾಗೆಯೇ ಡಿಶ್‌ ಟಿವಿ ಡಿಟಿಎಚ್, ಡಿ2ಎಚ್‌ ಸಹ ಹೊಸತನ ಫೀಚರ್ಸ್‌ಗಳಿಂದ ಗುರುತಿಸಿಕೊಂಡಿವೆ.

ಸ್ಮಾರ್ಟ್‌ಟಿವಿಗಳ

ಪ್ರಸ್ತುತ ಸ್ಮಾರ್ಟ್‌ಟಿವಿಗಳ ಬಳಕೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಹೆಚ್‌ಡಿ ಕನೆಕ್ಷನ್ ಆಯ್ಕೆಯತ್ತ ಹೆಚ್ಚಿನ ಗ್ರಾಹಕರು ಮನಸು ಮಾಡುತ್ತಾರೆ. ಅದಾಗ್ಯೂ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌ಗಳಿಗೂ ಬೇಡಿಕೆ ಕುಗ್ಗಿಲ್ಲ. ಡಿಟಿಎಚ್ ಪೂರೈಕೆದಾರ ಸಂಸ್ಥೆಗಳ ಆಕರ್ಷಕ ಪ್ರೈಸ್‌ನಲ್ಲಿ ಹೆಚ್ಚು ಪ್ರಯೋಜನ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಹೆಜ್ಜೆಗಳನ್ನು ಇಟ್ಟಿವೆ. ಟಾಟಾಸ್ಕೈ, ಏರ್‌ಟೆಲ್, ಡಿಶ್‌ಟಿವಿ ಹಾಗೂ ಡಿ2ಎಚ್‌ ಈ ಸಂಸ್ಥೆಗಳ ಸೆಟ್‌ಅಪ್‌ ಬಾಕ್ಸ್‌ಗಳ ದರ ಮಾಹಿತಿ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಟಾಟಾಸ್ಕೈ ಕನೆಕ್ಷನ್

ಟಾಟಾಸ್ಕೈ ಕನೆಕ್ಷನ್

ಡಿಟಿಎಚ್ ವಲಯದಲ್ಲಿಯೇ ಅಗ್ರಸ್ಥಾನದಲ್ಲಿರುವ ಟಾಟಾಸ್ಕೈ ಒಟ್ಟು ನಾಲ್ಕು ಎಸ್‌ಟಿಬಿಗಳನ್ನು ನೀಡುತ್ತಿದೆ. ಟಾಟಾ ಸ್ಕೈ ಎಸ್‌ಡಿ ಎಸ್‌ಟಿಬಿ 1,499ರೂ, ಟಾಟಾ ಸ್ಕೈ 4ಕೆ ಎಸ್‌ಟಿಬಿ ಬೆಲೆಯು 6,400ರೂ, ಟಾಟಾ ಸ್ಕೈ ಎಸ್‌ಟಿಬಿ ಟಾಟಾ ಸ್ಕೈ + ಹೆಚ್‌ಡಿ ಬೆಲೆ 9,300ರೂ ಹಾಗೂ ಟಾಟಾ ಸ್ಕೈ ಎಸ್‌ಟಿಬಿ ಟಾಟಾ ಸ್ಕೈ ಬಿಂಜ್ + 3,999.ರೂ. ಆಗಿದೆ.

ಡಿಶ್‌ಟಿವಿ ಕನೆಕ್ಷನ್

ಡಿಶ್‌ಟಿವಿ ಕನೆಕ್ಷನ್

ಡಿಶ್ ಟಿವಿ ತನ್ನ ಗ್ರಾಹಕರಿಗೆ ಮೂರು ಸೆಟ್-ಟಾಪ್ ಬಾಕ್ಸ್‌ಗಳನ್ನು ನೀಡುತ್ತಿದೆ. ಅಗ್ಗದ ಬೆಲೆ 1,490 ರೂಗಳಿಗೆ ಸ್ಟ್ಯಾಂಡರ್ಡ್ ಡೆಫಿನಿಷನ್ ಗುಣಮಟ್ಟವನ್ನು ನೀಡುತ್ತದೆ. ಹಾಗೆಯೇ ಹೆಚ್‌ಡಿ ವಿಡಿಯೋ ಗುಣಮಟ್ಟದ ಸೆಟ್‌ಅಪ್‌ ಬಾಕ್ಸ್‌ ಅನ್ನು 1,590ರೂ.ಗಳಿಗೆ ನೀಡುತ್ತದೆ. ನಂತರ ಹಾಗೆಯೇ DishSMRT HUB ಬೆಲೆಯು 2,499ರೂ. ಆಗಿದೆ. ಇದು ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳು ಮತ್ತು ಆಟಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸುತ್ತದೆ.

ಏರ್‌ಟೆಲ್ ಕನೆಕ್ಷನ್-

ಏರ್‌ಟೆಲ್ ಕನೆಕ್ಷನ್-

ಜನಪ್ರಿಯ ಏರ್‌ಟೆಲ್ ಕಂಪನಿಯು ಸಹ ಮೂರು ರೀತಿಯ ಸೆಟ್‌ಟಾಪ್‌ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಅವುಗಳಲ್ಲಿ ಬೇಸಿಕ ಎಸ್‌ಡಿ-ಸ್ಟ್ಯಾಂಡರ್ಡ್ ಡೆಫಿನಿಷನ್ ಬಾಕ್ಸ್ ಬೆಲೆ 1,100 ರೂ. ಆಗಿದೆ. ಹಾಗೆಯೇ ಹೆಚ್‌ಡಿ ಎಸ್‌ಟಿಬಿಯನ್ನು ಡಿಟಿಎಚ್ ಆಪರೇಟರ್‌ನಿಂದ ಕೇವಲ 200ರೂ. ಹೆಚ್ಚು ಪಾವತಿಸುವ ಮೂಲಕ ಪಡೆಯಬಹುದು, ಇದರ ಬೆಲೆ 1,300ರೂ. ಆಗಿದೆ. ಹಾಗೆಯೇ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್ 3,639ರೂ. ಆಗಿದೆ.

ಡಿ2ಹೆಚ್‌ ಕನೆಕ್ಷನ್‌

ಡಿ2ಹೆಚ್‌ ಕನೆಕ್ಷನ್‌

ಡಿ 2 ಹೆಚ್ ತನ್ನ ಗ್ರಾಹಕರಿಗೆ ನಾಲ್ಕು ವಿಭಿನ್ನ ಎಸ್‌ಟಿಬಿಗಳನ್ನು ನೀಡುತ್ತಿದೆ. ಮೊದಲನೆಯದು ಡಿಜಿಟಲ್ ಸೆಟ್-ಟಾಪ್ ಬಾಕ್ಸ್ ಮತ್ತು ಇದು 1,499 ರೂ. ಎರಡನೆಯದು ಡಿಜಿಟಲ್ ಎಚ್ಡಿ ಸೆಟ್-ಟಾಪ್ ಬಾಕ್ಸ್ ಮತ್ತು ಇದು 1,599 ರೂ. ಮೂರನೆಯದು ಎಚ್ಡಿ ಆರ್ಎಫ್ ಸೆಟ್-ಟಾಪ್ ಬಾಕ್ಸ್ ಮತ್ತು ಇದು 1,799 ರೂ. ಅತ್ಯಂತ ದುಬಾರಿ ಎಸ್‌ಟಿಬಿ ಮ್ಯಾಜಿಕ್ ಸ್ಟಿಕ್‌ನೊಂದಿಗೆ ಎಚ್‌ಡಿ ಆರ್ಎಫ್ ಸೆಟ್ ಟಾಪ್ ಬಾಕ್ಸ್ ಆಗಿದ್ದು, ಬೆಲೆಯು 2,198 ರೂ.ಆಗಿದೆ.

Best Mobiles in India

English summary
Different DTH operators offer different types of Set-Top Boxes and all of them are priced at different rates.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X