ಕೋವಿಡ್‌ ಲಸಿಕೆ ಹಾಕಿಸಿಕೊಂಡ ಫೋಟೊ ಶೇರ್ ಮಾಡಿ 5000ರೂ.ಗೆಲ್ಲಿ; ಅದು ಹೇಗೆ ಗೊತ್ತಾ?

|

ದೇಶದಲ್ಲಿ ಕರೋನಾ ಎರಡನೇ ಅಲೆ ತೀವ್ರವಾಗಿದೆ. ಕೋವಿಡ್ ಮೇಲೆ ನಿಯಂತ್ರಣ ಸಾಧಿಸಬೇಕಿದ್ದರೇ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಕೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೋವಿಡ್‌-19 ಲಸಿಕಾ ಅಭಿಯಾನವನ್ನು (ವ್ಯಾಕ್ಸಿನೇಷನ್) ಚುರುಕುಗೊಳಿಸಿದೆ. ಹಂತ ಹಂತವಾಗಿ ಲಸಿಕೆ ಅಭಿಯಾನವನ್ನು ನಡೆಸಿದ್ದು, ಸದ್ಯ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಭ್ಯ ಮಾಡಿದೆ. ಫ್ರಂಟ್ಲೈನ್‌ನಲ್ಲಿ ಕೆಲಸ ಮಾಡುವ ಕೊರೊನಾ ವಾರಿಯರ್ಸ್‌ಗೂ ಲಸಿಕೆ ನೀಡಲಾಗುತ್ತಿದೆ. ಇದರೊಂದಿಗೆ ಸರ್ಕಾರ ಲಸಿಕೆ ಹಾಕಿಸಿಕೊಂಡವರಿಗೆ ಭರ್ಜರಿ ಕ್ಯಾಶ್‌ ಪ್ರೈಸ್‌ ಸಹ ಘೋಷಿಸಿದೆ.

ಲಸಿಕೆ

ಹೌದು, ಕೋವಿಡ್ ಲಸಿಕೆ ಹಾಕಿಸಿಕೊಂಡ ಫೋಟೊವನ್ನು ಶೇರ್‌ ಮಾಡಿದವರಿಗೆ ಸರ್ಕಾರದಿಂದ 5000ರೂ. ಕ್ಯಾಶ್ ಬಹುಮಾನ ಲಭ್ಯವಾಗಲಿದೆ. ಸರ್ಕಾರ ಮನೆಯಲ್ಲಿಯೇ ಕುಳಿತು 5000ರೂ. ಗೆಲ್ಲುವ ಸುವರ್ಣಾವಕಾಶ ಒದಗಿಸಿದೆ. ಪ್ರಸ್ತುತ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಲಸಿಕೆ ನೀಡಲಾಗುತ್ತಿದೆ. ಹಾಗಾದರೇ ಲಸಿಕೆ ಹಾಕಿಸಿಕೊಂಡು 5,000 ರೂಪಾಯಿ ನಗದು ಬಹುಮಾನ ಪಡೆಯುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಬಹುಮಾನ ಪಡೆಯಲು ಹೀಗೆ ಮಾಡಿ

ಬಹುಮಾನ ಪಡೆಯಲು ಹೀಗೆ ಮಾಡಿ

ಲಸಿಕೆಯ ಫೋಟೋವನ್ನು ಉತ್ತಮ ಟ್ಯಾಗ್‌ಲೈನ್‌ನೊಂದಿಗೆ ಹಂಚಿಕೊಳ್ಳುವ ವ್ಯಕ್ತಿಗೆ 5,000ರೂಪಾಯಿ ನಗದು ಬಹುಮಾನ ಸಿಗುತ್ತದೆ. My Gov India ತನ್ನ ಲಿಂಕ್ ಅನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ, ಅಲ್ಲಿ ನೀವು ನಿಮ್ಮ ಫೋಟೋವನ್ನು ಹಂಚಿಕೊಳ್ಳಬಹುದು.

ಹತ್ತು ಟ್ಯಾಗ್‌ಲೈನ್‌ಗೆ ಬಹುಮಾನ

ಹತ್ತು ಟ್ಯಾಗ್‌ಲೈನ್‌ಗೆ ಬಹುಮಾನ

ಸರ್ಕಾರ ನೀಡಲಾದ ಈ ಲಿಂಕ್‌ನಲ್ಲಿ ಲಸಿಕೆ ಫೋಟೋ ಹಂಚಿಕೊಳ್ಳುವುದು. ಆದರೆ ಎಲ್ಲರಿಗೂ ಕ್ಯಾಶ್ ಬಹುಮಾನ ಸಿಗುವುದಿಲ್ಲ. ಪ್ರತಿ ತಿಂಗಳು 10 ಆಯ್ದ ಟ್ಯಾಗ್‌ಲೈನ್‌ಗಳಿಗೆ ಸರ್ಕಾರದಿಂದ 5000 ರೂ. ನೀಡಲಾಗುತ್ತದೆ. ಈ ಮೂಲಕ ಜನರನ್ನು ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸುವುದು.

ಫೋಟೊ ಶೇರ್ ಮಾಡಲು ಹೀಗೆ ಮಾಡಿ

ಫೋಟೊ ಶೇರ್ ಮಾಡಲು ಹೀಗೆ ಮಾಡಿ

ಈ ಕಂಟೆಸ್ಟ್‌ನಲ್ಲಿ ಭಾಗವಹಿಸಲು ನೀವು ಮೊದಲು myGov.in ಪೋರ್ಟಲ್‌ಗೆ ಹೋಗಬೇಕು. ಇಲ್ಲಿ ನೀವು ಲಾಗಿನ್ ಟು ಪಾರ್ಟಿಸಿಪೇಟ್ ಟ್ಯಾಬ್ (Login to Participate tab) ಕ್ಲಿಕ್ ಮಾಡಬೇಕು. ಇದರ ನಂತರ, ನೋಂದಣಿ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.

ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಲು ಈ ಕ್ರಮ ಅನುಸರಿಸಿ:

ಕೋವಿಡ್ ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಲು ಈ ಕ್ರಮ ಅನುಸರಿಸಿ:

ಹಂತ: 1 ಕೋವಿನ್ ವೆಬ್‌ಸೈಟ್‌ಗೆ ಹೋಗಿ.
ಹಂತ: 2 ನಿಮ್ಮ 10-ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಒಟಿಪಿ ಬಳಸಿ ಸೈನ್ ಇನ್ ಮಾಡಿ.
ಹಂತ: 3 ಒಮ್ಮೆ ಲಾಗ್ ಇನ್ ಮಾಡಿದ ನಂತರ, ನಿಮ್ಮ ಮೊಬೈಲ್ ಸಂಖ್ಯೆಯ ಮೂಲಕ ನೋಂದಾಯಿಸಲಾದ ಎಲ್ಲ ಸದಸ್ಯರ ಪಟ್ಟಿ ಕಾಣಿಸುತ್ತದೆ. ಎರಡೂ ಭಾರಿ ಲಸಿಕೆಗಳನ್ನು ಪಡೆದವರು ಹಸಿರು ಬಣ್ಣದಲ್ಲಿ ಪ್ಲ್ಯಾಸ್ಟೆಡ್ ಮಾಡಿದ ‘ವ್ಯಾಕ್ಸಿನೇಟೆಡ್' ಬ್ಯಾನರ್‌ ಕಾಣಲಿದೆ.
ಹಂತ: 4 ‘ಪ್ರಮಾಣಪತ್ರ' ಎಂಬ ಬಟನ್ ಬಲಭಾಗದಲ್ಲಿ ಕಾಣಲಿದೆ. ಅದನ್ನು ಕ್ಲಿಕ್ ಮಾಡಿದಾಗ, ಪ್ರಮಾಣಪತ್ರದ ಪಿಡಿಎಫ್ ಹೊಸ ಟ್ಯಾಬ್ / ವಿಂಡೋದಲ್ಲಿ ತೆರೆಯಬೇಕು. ನಂತರ ನೀವು ಬ್ರೌಸರ್ ವಿಂಡೋದ ಮೇಲಿನ ಬಲ ಮೂಲೆಯಲ್ಲಿರುವ ಡೌನ್‌ಲೋಡ್ ಬಟನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಪಿಡಿಎಫ್ ಅನ್ನು ಸೇವ್‌ ಮಾಡಬಹುದು.

ಇದಲ್ಲದೆ
ಹಂತ: 5 ಇದಲ್ಲದೆ ನೀವು ಆರೋಗ್ಯಾ ಸೇತು ಅಪ್ಲಿಕೇಶನ್‌ಗೆ ಹೋಗಬಹುದು ಮತ್ತು ಕೋವಿನ್ ಟ್ಯಾಬ್> ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಕ್ಲಿಕ್ ಮಾಡಿ.
ಹಂತ: 6 ನಿಮ್ಮ ಪಟ್ಟಿಯಲ್ಲಿ ನೋಂದಾಯಿತ ಸದಸ್ಯರ ಹೆಸರಿನ ಪಕ್ಕದಲ್ಲಿಯೇ ಕೋವಿನ್ ಪೋರ್ಟಲ್‌ನಲ್ಲಿ ಕಂಡುಬರುವ ಫಲಾನುಭವಿ ಐಡಿಯನ್ನು ನಮೂದಿಸಿ. COVID-19 ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಲು ‘ಪ್ರಮಾಣಪತ್ರ ಪಡೆಯಿರಿ' ಮತ್ತು ನಂತರ ‘ಡೌನ್‌ಲೋಡ್ ಪಿಡಿಎಫ್' ಕ್ಲಿಕ್ ಮಾಡಿ.

ಈ ಹಂತಗಳನ್ನು ಅನುಸರಿಸುವ ಮೂಲಕ ನೀವು ಕೋವಿಡ್‌ ಲಸಿಕೆ ಪಡೆದಿರುವ ಪ್ರಮಾಣಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

Best Mobiles in India

Read more about:
English summary
To share the photo at this link. Every month 10 selected taglines persons will be given Rs 5000 from the government.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X