Home
ಸುದ್ದಿಜಾಲ

ಶಾರ್ಪ್ ಆಕ್ವೋಸ್ ಸೆನ್ಸ್ 8 ಸ್ಮಾರ್ಟ್‌ಫೋನ್ ಲಾಂಚ್‌; ಫೀಚರ್ಸ್‌ ಏನು? ಬೆಲೆ ಎಷ್ಟು?

ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಭಿನ್ನ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಅದರಂತೆ ಈಗ ಶಾರ್ಪ್ ಆಕ್ವೋಸ್ ಸೆನ್ಸ್ 8 (Sharp Aquos Sense 8) ಎಂದು ಕರೆಯಲಾಗುವ ಸ್ಮಾರ್ಟ್‌ಫೋನ್‌ ಅನಾವರಣ ಆಗಿದ್ದು, ಜಾಗತಿಕವಾಗಿ ಬಹಳ ಸದ್ದು ಮಾಡಿದೆ.

ಹೌದು, ಶಾರ್ಪ್ ಆಕ್ವೋಸ್ ಸೆನ್ಸ್ 8 ಅನ್ನು ಲಾಂಚ್ ಮಾಡಲಾಗಿದ್ದು, ಈ ಸ್ಮಾರ್ಟ್‌ಫೋನ್‌ ಸಿಂಗಲ್ ಸ್ಟೋರೇಜ್ ವೇರಿಯಂಟ್‌ ಆಗಿದೆ. ಇದರೊಂದಿಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್‌ 13 ಅನ್ನು ರನ್‌ ಮಾಡಲಿದೆ. ಹಾಗಿದ್ರೆ ಯಾವುದು ಈ ಹೊಸ ಫೋನ್‌, ಫೀಚರ್ಸ್‌ ಹೇಗಿದೆ?, ಲಾಂಚ್‌ ಆಗಿದ್ದು ಎಲ್ಲಿ?, ಈ ಫೋನ್‌ನ ಬೆಲೆ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ.

ಶಾರ್ಪ್ ಆಕ್ವೋಸ್ ಸೆನ್ಸ್ 8 ಸ್ಮಾರ್ಟ್‌ಫೋನ್ ಲಾಂಚ್‌;ಫೀಚರ್ಸ್‌ ಏನು? ಬೆಲೆ ಎಷ್ಟು?

ಶಾರ್ಪ್ ಆಕ್ವೋಸ್ ಸೆನ್ಸ್ 8 ಡಿಸ್‌ಪ್ಲೇ ವಿವರ : ಈ ಫೋನ್‌ 6.1 ಇಂಚಿನ ಪೂರ್ಣ ಹೆಚ್‌ಡಿ+ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಇದು 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಇದ್ದು, IGZO OLED ಡಿಸ್‌ಪ್ಲೇ ಮೂಲಕ ಅತ್ಯಂತ ಆಕರ್ಷಕವಾಗಿದೆ. ಇದರೊಂದಿಗೆ 90Hz ರಿಫ್ರೆಶ್ ರೇಟ್‌ನೊಂದಿಗೆ ಈ ಫೋನ್‌ ಕಾಣಿಸಿಕೊಂಡಿದ್ದು, 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಮೂಲಕ ಉತ್ತಮ ವೀಕ್ಷಣೆ ಅನುಭವ ನೀಡಲಿದೆ.

ಶಾರ್ಪ್ ಆಕ್ವೋಸ್ ಸೆನ್ಸ್ 8 ಪ್ರೊಸೆಸರ್‌ ವಿವರ: ಶಾರ್ಪ್ ಈ ವರ್ಷದ ಆರಂಭದಲ್ಲಿ ಅಕ್ವೋಸ್ ಸೆನ್ಸ್ 8 ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜನ್‌ 1 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, 6GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ. ಇದು ಆಂಡ್ರಾಯ್ಡ್ 13 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ರನ್‌ ಆಗಲಿದೆ. ಇನ್ನು ಕಂಪನಿಯು ಮೂರು ಪ್ರಮುಖ ಓಎಸ್‌ ನವೀಕರಣಗಳು ಮತ್ತು ಐದು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ಭರವಸೆ ನೀಡುತ್ತದೆ.

ಶಾರ್ಪ್ ಆಕ್ವೋಸ್ ಸೆನ್ಸ್ 8 ಕ್ಯಾಮೆರಾ ರಚನೆ: ಕ್ಯಾಮೆರಾ ವಿಭಾಗದಲ್ಲಿ ಅಕ್ವೋಸ್ ಸೆನ್ಸ್ 8 ಡ್ಯುಯಲ್ ರಿಯರ್‌ ಕ್ಯಾಮೆರಾವನ್ನು ಆಯ್ಕೆ ಪಡೆದುಕೊಂಡಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್‌ ಮತ್ತು ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ 8 ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಹೊಂದಿದ್ದು, ಕ್ಯಾಮೆರಾ ಪ್ರಿಯರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸರ್‌ ಆಯ್ಕೆ ನೀಡಲಾಗಿದೆ.

ಶಾರ್ಪ್ ಆಕ್ವೋಸ್ ಸೆನ್ಸ್ 8 ಬ್ಯಾಟರಿ ಹಾಗೂ ಇತರೆ: ಈ ವಿಶೇಷ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಬರೋಬ್ಬರಿ 10 ಗಂಟೆಗಳ ಬ್ಯಾಟರಿ ಬ್ಯಾಕಪ್‌ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಉಳಿದಂತೆ ಈ ಫೋನ್ 5G, ವೈ-ಫೈ 5, NFC ಮತ್ತು ಬ್ಲೂಟೂತ್ ಆವೃತ್ತಿ 5.1 ಕನೆಕ್ಟಿವಿಟಿಯನ್ನು ಬೆಂಬಲಿಸುತ್ತದೆ. ಭದ್ರತೆಗಾಗಿ, ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌, 3.5mm ಹೆಡ್‌ಫೋನ್ ಜ್ಯಾಕ್, IP68 ರೇಟಿಂಗ್ ಮತ್ತು MIL-STD-810G ಪ್ರಮಾಣೀಕರಣದೊಂದಿಗೆ ಈ ಫೋನ್‌ ಪ್ಯಾಕ್‌ ಆಗಿದೆ.

ಶಾರ್ಪ್ ಆಕ್ವೋಸ್ ಸೆನ್ಸ್ 8 ಸ್ಮಾರ್ಟ್‌ಫೋನ್ ಲಾಂಚ್‌;ಫೀಚರ್ಸ್‌ ಏನು? ಬೆಲೆ ಎಷ್ಟು?

ಶಾರ್ಪ್ ಆಕ್ವೋಸ್ ಸೆನ್ಸ್ 8 ಬೆಲೆ ಹಾಗೂ ಲಭ್ಯತೆ : ಈ ವಿಶೇಷ ಫೋನ್‌ ಅನ್ನು ಜಪಾನ್‌ನಲ್ಲಿ ಮಾತ್ರ ಲಾಂಚ್‌ ಮಾಡಲಾಗಿದೆ. ಈ ಹೊಸ ಶಾರ್ಪ್ ಆಕ್ವೋಸ್ ಸೆನ್ಸ್ 8 ಸ್ಮಾರ್ಟ್‌ಫೋನ್ ಸಾಧನವು ಕೋಬಾಲ್ಟ್ ಬ್ಲ್ಯಾಕ್, ಲೈಟ್ ಕಾಪರ್ ಮತ್ತು ಪೇಲ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಜಪಾನ್‌ನಲ್ಲಿ JPY 62,150 ಬೆಲೆ ಹೊಂದಿದ್ದು, ಭಾರತೀಯ ಮೌಲ್ಯದ ಪ್ರಕಾರ ಇದು ಸರಿಸುಮಾರು 34,700 ರೂ.ಗಳಾಗಿದೆ.

Best Mobiles in India

English summary
Sharp has launched the Aquos Sense 8, a single storage variant of the smartphone powered by a Qualcomm Snapdragon chipset and running Android 13.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+