ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಮತ್ತು ಇದೀಗ ಡಾ.ಶಾವ್ನಾ ಪಾಂಡ್ಯಾ!!

ವಿಶ್ವಾದಾದ್ಯಂತ 3200 ಅರ್ಜಿ ಸಲ್ಲಿಕೆಯಲ್ಲಿ ಕೇವಲ ಇಬ್ಬರು ಮಾತ್ರ ಆಯ್ಕೆಯಾಗಿದ್ದು ಆ ಇಬ್ಬರಲ್ಲಿ ಭಾರತೀಯ ಮೂಲದ ಶಾವ್ನಾ ಪಾಂಡ್ಯಾ ಕೂಡ ಒಬ್ಬರಾಗಿದ್ದಾರೆ.

|

ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ಭಾರತೀಯ ಮಹಿಳೆಯರಾದ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಅವರಂತೆ ಮತ್ತೊರ್ವ ಭಾರತೀಯ ಮೂಲದ ಮಹಿಳೆ ಡಾ.ಶಾವ್ನಾ ಪಾಂಡ್ಯಾ ಅವರು ಬಾಹ್ಯಾಕಾಶಕ್ಕೆ ಹಾರಲಿದ್ದಾರೆ.

ಭಾರತೀಯ ಮೂಲದ ಅಮೆರಿಕ ಪ್ರಜೆಯಾಗಿರುವ 32 ವರ್ಷದ ಡಾ.ಶಾವ್ನಾ ಪಾಂಡ್ಯಾ ಅವರು 2018 ರಲ್ಲಿ ಎಂಟು ಬಾಹ್ಯಾಕಾಶ ಯಾತ್ರಿಗಳ ತಂಡದೊಂದಿಗೆ ಅಮೆರಿಕದ ಸಿಟಿಜನ್ ಸೈನ್ಸ್ ಅಸ್ಟ್ರೋನಾಟ್, ಸಿಎಸ್​ಎ ಯೋಜನೆಯಡಿ ಬಾಹ್ಯಾಕಾಶ ಯಾನ ಆರಂಭಿಸಲಿದ್ದಾರೆ. ವಿಶ್ವಾದಾದ್ಯಂತ 3200 ಅರ್ಜಿ ಸಲ್ಲಿಕೆಯಲ್ಲಿ ಕೇವಲ ಇಬ್ಬರು ಮಾತ್ರ ಆಯ್ಕೆಯಾಗಿದ್ದು ಆ ಇಬ್ಬರಲ್ಲಿ ಭಾರತೀಯ ಮೂಲದ ಶಾವ್ನಾ ಪಾಂಡ್ಯಾ ಕೂಡ ಒಬ್ಬರಾಗಿದ್ದಾರೆ.

ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಮತ್ತು ಇದೀಗ ಡಾ.ಶಾವ್ನಾ ಪಾಂಡ್ಯಾ!!

ಯೂಟ್ಯೂಬ್ ನೂತನ ಆಪ್ ಡೌನ್‌ಲೋಡ್ ಮಾಡಿಕೊಳ್ಳಲೇಬೇಕು!! ಯಾಕೆ ಗೊತ್ತಾ?

ಭೂಮಿಗಿಂತ ಹೊರಗಿನ ವಿಶೇಷ ಪರಿಸರದಲ್ಲಿ ಮಾನವನ ದೇಹ ಹೇಗೆ ಕಾರ್ಯ ನಿರ್ವಹಿಸುತ್ತದೆ. ಮತ್ತು ಮಾನವನ ದೇಹದಲ್ಲಿ ಯಾವೆಲ್ಲಾ ಬದಲಾವಣೆಗಳಾಗುತ್ತವೆ, ದೇಹ ಹೇಗೆ ಸ್ಪಂದಿಸುತ್ತದೆ ಎಂಬ ಕುರಿತು ಬಾಹ್ಯಾಕಾಶದಲ್ಲಿ ವಿಶೇಷ ಅಧ್ಯಯನವನ್ನು ಈ ತಂಡ ಕೈಗೊಳ್ಳಲಿದೆ.

ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಮತ್ತು ಇದೀಗ ಡಾ.ಶಾವ್ನಾ ಪಾಂಡ್ಯಾ!!

ಯುನಿವರ್ಸಿಟಿ ಆಫ್ ಅಲ್ಬರ್ಟಾ ದಲ್ಲಿ ನ್ಯೂರೋಸೈನ್ಸ್ ವಿಷಯದಲ್ಲಿ ನಲ್ಲಿ ಬಿ.ಎಸ್​ಸಿ ಪದವಿ, ಇಂಟರ್​ನ್ಯಾಷನಲ್ ಸ್ಪೇಸ್ ಯುನಿವರ್ಸಿಟಿಯಲ್ಲಿ ಬಾಹ್ಯಾಕಾಶ ವಿಜ್ಞಾನದಲ್ಲಿ ಎಂ.ಎಸ್​ಸಿ ಪದವಿ ಪಡೆದಿರುವ ಶಾವ್ನಾ ಫ್ರೆಂಚ್, ಸ್ಪಾನಿಷ್ ಮತ್ತು ರಷ್ಯನ್ ಭಾಷೆಗಳನ್ನು ಸಹ ಬಲ್ಲವರಾಗಿದ್ದಾರೆ. ಪ್ರಸ್ತುತ ಇವರು ಕೆನಡಾದಲ್ಲಿ ನೆಲೆಸಿದ್ದು, ಅಪರೂಪಕ್ಕೆ ಭಾರತಕ್ಕೆ ಬರುವ ಶಾವ್ನಾ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಹೋಗುತ್ತಿರುತ್ತಾರಂತೆ.

Best Mobiles in India

Read more about:
English summary
32-year-old neurosurgeon from Alberta in Canada, will soon become the third woman of Indian origin to fly in space. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X