ಹಾಡುಗಳ ಬಗ್ಗೆ ಕ್ವಿಕ್ ಆಗಿ ಮಾಹಿತಿ ಪಡೆಯಲು ಈ ಆಪ್‌ಗಳು ನೆರವಾಗಲಿವೆ!
ಪ್ರಸ್ತುತ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಏನೇ ಮಾಹಿತಿ ಬೇಕಿದ್ದರೂ ತಕ್ಷಣವೇ ನೆನಪಿಗೆ ಬರುವುದು ಗೂಗಲ್ ಸರ್ಚ್. ಬೇಕಾದ ಮಾಹಿತಿಯನ್ನು ತಿಳಿಯಲು ಗೂಗಲದ ಸರ್ಚ್‌ನಲ್ಲಿ ಟೈಪ್ ಮಾಡಿಬಿಡುತ್ತಾರೆ. ಯಾವುದೇ ಚಿತ್ರದ ಬಗ್ಗೆ ಮಾಹಿತಿ ಬೇಕಿದ್ದರೂ ಗೂಗಲ್ ಇಮೇಜ್‌ನಲ್ಲಿ ಆ ಬಗ್ಗೆ ಕಂಡು ಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಎಲ್ಲೊ ಒಂದು ಮ್ಯೂಸಿಕ್ ಕೇಳಿರುತ್ತಿರಾ ಆದರೆ ಅದು ಯಾವ ಸಿನಿಮಾದ್ದು ಮತ್ತು ಅದನ್ನು ಹಾಡಿದವರು ಯಾರು ಗೊತ್ತಿರುವುದಿಲ್ಲ. ಆಗ ಮ್ಯೂಸಿಕ್ ಪ್ಲೇ ಮಾಡುವ ಮೂಲಕ ಥಟ್ ಅಂತಾ ಮಾಹಿತಿ ತಿಳಿಯಬಹುದಾಗಿದೆ.

ಹೌದು, ಸರ್ಚ್ ಇಂಜಿನ್ ದೈತ್ಯ ಎಂದೆನಿಸಿಕೊಂಡಿರುವ ಗೂಗಲ್ ಈಗಾಗಲೇ ಸಾಕಷ್ಟು ಅಪ್‌ಡೇಟ್ ಕಂಡಿದೆ. ಹೀಗಾಗಿ ಬಳಕೆದಾರರಿಗೆ ಮಾಹಿತಿ ಹುಡುಕಾಟಕ್ಕೆ ಈಗ ಮತ್ತಷ್ಟು ಅನುಕೂಲಕರ ಫೀಚರ್ಸ್‌ಗಳು ಸೇರಿವೆ. ಈ ಲಿಸ್ಟ್‌ಗೆ ಈಗ ವಾಯಿಸ್ ಸರ್ಚ್ ಸಹ ಸೇರ್ಪಡೆ ಆಗಿದೆ. ಆಂಡ್ರಾಯ್ಡ್ ಓಎಸ್ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಅಸಿಸ್ಟಂಟ್ ಕಾರ್ಯನಿರ್ವಹಿಸಿದರೇ, ಇನ್ನು ಐಓಎಸ್ ಓಎಸ್ ಆವೃತ್ತಿಯ ಆಪಲ್ ಐಫೋನ್‌ಗಳಲ್ಲಿ ಸಿರಿ ವಾಯಿಸ್ ಅಸಿಸ್ಟಂಟ್ ಆಧಾರದ ಮೇಲೆ ಮಾಹಿತಿ ಸರ್ಚ್ ಮಾಡಲಿದೆ. ಪ್ರಸ್ತುತ ಹಾಡುಗಳ/ಮ್ಯೂಸಿಕ್‌ನ ಬಗ್ಗೆ ತ್ವರಿತವಾಗಿ ಮಾಹಿತಿ ಪಡೆದುಕೊಳ್ಳಲು ಈ ತಾಣಗಳು ಉತ್ತಮ ಅನಿಸಿವೆ.

ಬಳಕೆದಾರರು ಮಾಹಿತಿ ತಿಳಿಯಬೇಕಾದ ಹಾಡಿನ ಅಥವಾ ಮ್ಯೂಸಿಕ್ ಅನ್ನು ಪ್ಲೇ ಮಾಡಿದರೇ ಸಾಕು ನಿಮ್ಮ ಫೋನ್‌ನಲ್ಲಿರುವ 'ವಾಯಿಸ್ ಅಸಿಸ್ಟಂಟ್' ಫೀಚರ್ ತಕ್ಷಣವೇ ಅದನ್ನು ಗ್ರಹಿಸಿ ಅದರ ಮಾಹಿತಿಯನ್ನು ಒದಗಿಸಿಬಿಡುತ್ತದೆ. ವಾಯಿಸ್ ಅಸಿಸ್ಟಂಟ್ ಹೊರತುಪಡಿಸಿ ಇತರೆ ಪ್ಲಾಟ್‌ಫಾರ್ಮ್ ಮೂಲಕವೂ ಸಹ ಹಾಡಿನ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ವಾಯಿಸ್ ಅಸಿಸ್ಟಂಟ್ ಮೂಲಕ ಮ್ಯೂಸಿಕ್‌ನ ಮಾಹಿತಿಯನ್ನು ಪಡೆಯುವುದು ಹೇಗೆ ಮತ್ತು ವಾಯಿಸ್ ಅಸಿಸ್ಟಂಟ್ ಸರಿಯಾಗಿ ಸರ್ಚ್ ಮಾಡದಿದ್ದರೇ ಬೇರೆ ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಮಾಹಿತಿ ಪಡೆಯಬಹುದು ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ವಾಯಿಸ್ ಅಸಿಸ್ಟಂಟ್ ಮೂಲಕ
ನೀವು ತಿಳಿಯಬೇಕೆಂದು ಕೊಂಡಿರುವ ಮ್ಯೂಸಿಕ್ ಅಥವಾ ಹಾಡಿನ ಮಾಹಿತಿ ಪಡೆಯುವುದು ಈಗ ಸುಲಭ. ಗೂಗಲ್ ಅಸಿಸ್ಟಂಟ್ ಅಥವಾ ಐಫೋನ್ ಸಿರಿಗಳ ನೆರವಿನಿಂದ ವಾಯಿಸ್ ಗ್ರಹಿಕೆಯ ಮೇಲೆ ಹಾಡಿನ ಪೂರ್ಣ ಮಾಹಿತಿ ಲಭ್ಯವಾಗಲಿದೆ. ಹಾಡು ಪ್ಲೇ ಮಾಡಿದರೇ ತಕ್ಷಣ ಈ ವಾಯಿಸ್ ಸರ್ಚ್‌ಗಳು ಹಾಡನ್ನು ಗ್ರಹಿಸಿಕೊಂಡು ಆ ಕುರಿತು ಮಾಹಿತಿ ಒದಗಿಸುತ್ತವೆ. ಹೌದು, ಮ್ಯೂಸಿಕ್ ಟ್ರಾಕ್ ಸರ್ಚ್ ಮಾಡುವಾಗ ಕೆಲವೊಮ್ಮೆ ಗೂಗಲ್ ಅಸಿಸ್ಟಂಟ್ ಮತ್ತು ಆಪಲ್ ಸಿರಿ ವಾಯಿಸ್ ಅಸಿಸ್ಟಂಟ್‌ಗಳು ಸಾಂಗ್ ಟ್ರಾಕ್ ಮಾಡುವಲ್ಲಿ ಕೈ ಕೊಡುತ್ತವೆ. ಆಗ ನಿಮ್ಮ ನೆರವಿಗೆ ಬರಲಿವೆ ಥರ್ಡ್‌ಪಾರ್ಟಿ ಮ್ಯೂಸಿಕ್ ಸರ್ಚ್ ಆಪ್‌ಗಳು. ಇವುಗಳಲ್ಲಿ ಕೆಲವು ಐಓಎಸ್ ಮತ್ತು ಅಂಡ್ರಾಯ್ಡ್ ಎರಡು ಓಎಸ್‌ಗಳಿಗೂ ಬೆಂಬಲ ನೀಡುತ್ತವೆ.

Shazam app- ಶಾಜಮ್ ಆಪ್
ಈ ಶಾಜಮ್ ಆಪ್ ಮ್ಯೂಸಿಕ್ ಕುರಿತು ಸರ್ಚ್ ಮಾಡುವ ಆಪ್ ಆಗಿದ್ದು, ಸೌಂಡ್ ಅನ್ನು ಗ್ರಹಸಿ ಮ್ಯೂಸಿಕ್‌ನ ಮಾಹಿತಿ ನೀಡುತ್ತದೆ. ಶಾಜಮ್ ಆಪ್ ಥರ್ಡ್ ಪಾರ್ಟಿ ಆಪ್ ಆಗಿದ್ದು, ಆಂಡ್ರಾಯ್ಡ್ ಮತ್ತು ಆಪಲ್‌ನ ಐಓಎಸ್ ಮಾದರಿಯ ಎರಡು ಡಿವೈಸ್‌ಗಳಲ್ಲಿಯೂ ಬೆಂಬಲ ನೀಡಲಿದೆ. ಸರಳ ಆಯ್ಕೆಗಳನ್ನು ನೀಡಲಾಗಿದ್ದು, ಸರ್ಚ್ ಮಾಡುವುದು ಸುಲಭ ಎನಿಸಲಿದೆ.

SoundHound- ಸೌಂಡ್‌ಹೌಂಡ್
ಸೌಂಡ್‌ಹೌಂಡ್ ಆಪ್ ಸಹ ಮ್ಯೂಸಿಕ್ ಟ್ರಾಕ್ ಫೈಂಡ್‌ಔಟ್ ಮಾಡುವ ಅತ್ಯುತ್ತಮ ಆಪ್ ಆಗಿದ್ದು, ಇದು ಸಹ ಸಾಂಗಿನ ಸೌಂಡ್ ಅನ್ನು ಗ್ರಹಿಸಿ, ಆ ಸಾಂಗ್‌ನ ಪೂರ್ಣ ಮಾಹಿತಿ ಒದಗಿಸುತ್ತದೆ. ಆದರೆ ಇದು ಕೇವಲ ಐಓಎಸ್ ಮಾದರಿ ಡಿವೈಸ್‌ಗಳಿಗೆ ಮಾತ್ರ ಬೆಂಬಲ ನೀಡಲಿದೆ. ಹೀಗಾಗಿ ಆಂಡ್ರಾಯ್ಡ್ ಓಎಸ್ ಬಳಕೆದಾರರಿಗೆ ಈ ಥರ್ಡ್‌ಪಾರ್ಟಿ ಆಪ್ ಅಲಭ್ಯ.


Click it and Unblock the Notifications








