ಶಿಪ್ಪೋ:ಮೆದುಳಿನಿಂದ ನಿಯಂತ್ರಿಸಬಲ್ಲ ಕೃತಕ ಬಾಲ!

Posted By: Staff
ಶಿಪ್ಪೋ:ಮೆದುಳಿನಿಂದ ನಿಯಂತ್ರಿಸಬಲ್ಲ ಕೃತಕ ಬಾಲ!

ಮೆದುಳಿನಿಂದ ನಿಯಂತ್ರಿಸಬಲ್ಲ ಕೃತಕ ಕಿವಿಯ ಅನ್ವೇಷಣೆ ನಂತರ ನ್ಯೂರೋ ತಂತ್ರಜ್ಞಾನ ಸಂಸ್ಥೆಯು ಮತ್ತೊಂದು ಆವಿಷ್ಕಾರ ಮಾಡಿದ್ದು ಮಾನವನ ಮೆದುಳಿನ ಆಲ್ಫಾ ಹಾಗೂ ಬೀಟಾದ ಕಂಪನಗಳ ಹಾಗೂ ಹೃದಯದ ಬಡಿತದ ಅನುಗುಣವಾಗಿ ಪ್ರತಿಕ್ರಿಯೆ ನೀಡಬಲ್ಲ ಶಿಪ್ಪೋ ಹೆಸರಿನ ಬೆಕ್ಕಿನ ಬಾಲವನ್ನು ಕಂಡುಹಿಡಿದಿದ್ದಾರೆ. ಅಂದಹಾಗೇ ಈ ಬಾಲವನ್ನು ನ್ಯೂರೋದ ವೆಬ್‌ಸೈಟ್‌ನಲ್ಲಿ ಖರೀದಿಸಬಹುದಾಗಿದೆ.

ಅಂದಹಾಗೆ ಈ ಬಾಲವನ್ನು ಉಪೋಯೋಗಿ ಸುವುದಾದರು ಹೇಗೆ ಎಂದು ಆಲೋಚಿಸುತ್ತಿದ್ದೀರ...? ಇದೇನು ಅಂತಹ ಕಷ್ಟದ ಕೆಲಸವೇನು ಅಲ್ಲ ಬಾಲವನ್ನು ನಿಮ್ಮ ಸೊಂಟಕ್ಕೆ ಕಟ್ಟಿಕೊಳ್ಳಬೇಕು ಅಷ್ಟೇ, ಬಾಲಕ್ಕೆ ಸೆನ್ಸರ್‌ಗಳನ್ನು ಅಳವಡಿಸಲಾಗಿದ್ದು ಈ ಮೂಲಕ ಬಳಕೆದಾರರ ಮನಃಸ್ಥಿತಿ ಅರಿಯಲು ನೆರವಾಗುತ್ತದೆ. ಅಂದಹಾಗೆ ಬೆಕ್ಕಿನ ಬಾಲವು ಸ್ಮಾರ್ಟ್‌ಪೋನ್‌ ನೊಂದಿಗೆ ಸಹಕರಿಸಬಲ್ಲ ಆಪ್‌ ಕೂಡ ಒಳಗೊಂಡಿದ್ದು ಈ ಮೂಲಕ ಸಮೀಪದಲ್ಲಿನ ಶಿಪ್ಪೋ ಬಳಕೆದಾರರನ್ನು ಪತ್ತೆ ಹಚ್ಚಲೂ ಕೂಡ ನೆರವಾಗುತ್ತದೆ.

ಸ್ಲಾಷ್‌ ಗೇರ್‌ನ ವರದಿಗಳ ಪ್ರಕಾರ ಈ ಆಪ್‌ ವ್ಯಕ್ತಿಯು ಗಾಬರಿಯಾದಲ್ಲಿ ಅದನ್ನು ಗುರ್ತಿಸಬಲ್ಲ ಸಾಮರ್ತ್ಯ ಹೊಂದಿದೆ ಎಂದು ತಿಳಿಸಿದೆ. ಅಂದಗೆ ಈ ವಿಡಿಯೋ ತುಣುಕನ್ನು ವೀಕ್ಷಿಸಿ ಕೃತಕ ಬಾಲ ಹೇಗೆ ರೋಮಾಂಚನ ಹಾಗೂ ಶಾಂತಿಯ ಸಂದರ್ಭಗಳಲ್ಲಿ ಯಾವರೀತಿ ವರ್ತಿಸುತ್ತದೆ ಎಂಬುದು ನಿಮಗೇ ತಿಳಿಯುತ್ತದೆ.

Read In English...

GPS ತಂತ್ರಜ್ಞಾನದ “ಶೂ” ಬಂದಿದೆ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot