ಸಾಮಾಜಿಕ ತಾಣದಲ್ಲಿ ಸದ್ದುಮಾಡುತ್ತಿರುವ ಶಿವಣ್ಣ ಕಾಫಿ ಟ್ರೆಂಡ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಕಿಲ್ಲಿಂಗ್ ವೀರಪ್ಪನ್ ಭರ್ಜರಿಯಾಗಿಯೇ ತನ್ನ ಆರಂಭವನ್ನು ಪ್ರಾರಂಭಿಸಿದ್ದು ದಿನದಿಂದ ದಿನಕ್ಕೆ ಸಿನಿಮಾ ಖ್ಯಾತಿಯನ್ನು ಗಳಿಸಿಕೊಳ್ಳುತ್ತಿದೆ. ವೀರಪ್ಪನ್ ಫೈಲ್ ಅನ್ನು ಅಧ್ಯಯನ ಮಾಡುತ್ತಾ ಶಿವಣ್ಣ ಕಾಫಿ ಕುಡಿಯುತ್ತಿರುವ ಟ್ರೆಂಡ್ ಈಗ ಸಾಮಾಜಿಕ ತಾಣದಲ್ಲಿ ಭರ್ಜರಿಯಾಗಿಯೇ ಅಬ್ಬರಿಸುತ್ತಿದ್ದು ಅವರ ಸ್ಟೈಲ್ ಅನ್ನು ಹಿರಿಯರು ಕಿರಿಯರು ಎನ್ನದೆ ಎಲ್ಲರೂ ಹಿಂಬಾಲಿಸುತ್ತಿದ್ದಾರೆ.
ಓದಿರಿ: ಸೂಪರ್ ಹೀರೋಗಳ ಸೆಲ್ಫಿ ಹೇಗಿರುತ್ತವೆ ಎಂದು ನೋಡಿದ್ದೀರಾ!!
ಇಂದಿನ ನಮ್ಮ ಲೇಖನದಲ್ಲಿ ಕಿಲ್ಲಿಂಗ್ ವೀರಪ್ಪನ್ ಕಾಫಿ ಟ್ರೆಂಡ್ ಹೇಗೆ ವೈರಲ್ ಆಗಿದೆ ಎಂಬುದನ್ನು ಫೋಟೋದ ಮೂಲಕ ತೋರಿಸುತ್ತಿದ್ದು ಜನರು ಶಿವಣ್ಣನನ್ನು ಹೇಗೆ ಅನುಸಕರಿಸಿದ್ದಾರೆ ಎಂಬುದನ್ನು ನೋಡಬಹುದಾಗಿದೆ. ಹಾಗಿದ್ದರೆ ತಡಮಾಡದೇ ನಮ್ಮ ಸ್ಲೈಡರ್ ಪರಿಶೀಲಿಸಿ.

ಕಿಲ್ಲಿಂಗ್ ವೀರಪ್ಪನ್ ಝಲಕ್
ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರವಾಗಿದೆ ಕಿಲ್ಲಿಂಗ್ ವೀರಪ್ಪನ್.

ಪೋಲೀಸ್ ಅಧಿಕಾರಿ
ಚಿತ್ರದಲ್ಲಿ ಶಿವಣ್ಣ ವೀರಪ್ಪನ್ ಅನ್ನು ಹಿಡಿಯುವ ಪೋಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದು ಅವರ ಖಾಕಿ ಖದರ್ ಮತ್ತು ಕಾಫಿ ಕಪ್ ಹಿಡಿದುಕೊಂಡಿರು ಸ್ಟೈಲ್ ಪ್ರಧಾನವಾಗಿದೆ.

ಕಾಫಿ ಟ್ರೆಂಡ್
ಸಿನಿಮಾ ಹೀರೋಗಳನ್ನು ಅವರ ಅಭಿಮಾನಿಗಳು ಅನುಸರಿಸುವುದು ಹೊಸದೇನಲ್ಲ. ಈಗ ಶಿವಣ್ಣ ಕಾಫಿ ಸ್ಟೈಲ್ ಅನ್ನು ಜನರು ಅನುಸರಿಸುತ್ತಿದ್ದು ಅವರ ಸ್ಟೈಲ್ ಸಖತ್ ಫೇಮಸ್ ಆಗುತ್ತಿದೆ.

ಸಾಮಾಜಿಕ ತಾಣದಲ್ಲೂ ಫೇಮಸ್
ಫೇಸ್‌ಬುಕ್ ಟ್ವಿಟ್ಟರ್ ಮೊದಲಾದ ತಾಣದಲ್ಲಿ ಶಿವಣ್ಣ ಕಾಫಿ ಸ್ಟೈಲ್ ಟ್ರೆಂಡ್ ಆಗಿಬಿಟ್ಟಿದೆ.

ಚಿತ್ರಕ್ಕೆ ಸಾಥ್
ಸಾಮಾಜಿಕ ತಾಣದಲ್ಲಿ ಶಿವಣ್ಣ ಕಾಫಿ ಖದರ್ ಚಿತ್ರದ ಯಶಸ್ಸಿಗೆ ಕಾರಣವಾಗುತ್ತಿದೆ.

ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ
ಚಿತ್ರವು ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿಕೊಳ್ಳುತ್ತಿದ್ದು ಶಿವಣ್ಣ ಅಭಿನಯ ನಿಜಕ್ಕೂ ಪ್ರಶಂಸನೀಯ

ಚಿತ್ರದ ತಾರಾಗಣ
ಶಿವಣ್ಣನೊಂದಿಗೆ ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿ ಸಂದೀಪ್ ಭಾರದ್ವಾಜ್, ಯಜ್ಞಾ ಶೆಟ್ಟಿ, ಸಂಚಾರಿ ವಿಜಯ್ ಮತ್ತು ಪಾರುಲ್ ಯಾದವ್ ಅಭಿನಯಿಸಿದ್ದಾರೆ.

ಸಿನಿ ತಾರೆಯರ ಕಾಫಿ ಟ್ರೆಂಡ್
ಜನಸಾಮಾನ್ಯರಲ್ಲದೆ ಸಿನಿ ತಾರೆಯರೂ ಶಿವಣ್ಣ ಅಭಿನಯದ ಕಾಫಿ ಟ್ರೆಂಡ್‌ಗೆ ಬೆಂಬಲವನ್ನು ನೀಡಿದ್ದಾರೆ.

ಚಿತ್ರದ ಡಬ್ಬಿಂಗ್
ಚಿತ್ರವು ತೆಲುಗು, ಹಿಂದಿ ಮತ್ತ ತಮಿಳು ಭಾಷೆಗಳಲ್ಲಿ ತಯಾರಾಗುತ್ತಿದೆ.

ವರ್ಮಾರ ಪ್ರಥಮ ಚಿತ್ರ
ಕನ್ನಡದಲ್ಲಿ ರಾಮ್ ಗೋಪಾಲ್ ವರ್ಮಾ ತಯಾರಿಸುತ್ತಿರುವ ಪ್ರಥಮ ಕನ್ನಡ ಚಿತ್ರವಾಗಿದೆ ಕಿಲ್ಲಿಂಗ್ ವೀರಪ್ಪನ್.


Click it and Unblock the Notifications








