Home
ಸುದ್ದಿಜಾಲ

BPL ಕಾರ್ಡ್‌ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್! ಆಹಾರ ಇಲಾಖೆಗೆ ಹಣಕಾಸು ಇಲಾಖೆ ಹೇಳಿದ್ದೇನು?

ಕರ್ನಾಟಕದಲ್ಲಿ ಐದು ಗ್ಯಾರಂಟಿಗಳ ಕಾರಣದಿಂದಾಗಿ ರೇಷನ್‌ ಕಾರ್ಡ್‌ಗೆ (Ration card) ಅರ್ಜಿ ಸಲ್ಲಿಸುವವರ ಹಾಗೂ ತಿದ್ದುಪಡಿ ಮಾಡಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಈಗ ಹಲವಾರು ಜನರು ಶಾಕ್‌ ಆಗುವ ಸುದ್ದಿಯೊಂದು ಹೊರಬಿದ್ದಿದೆ.

ಹೌದು, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಖಾತರಿ ಯೋಜನೆಗಳಿಗೆ ಹೆಚ್ಚಿನ ಫಲಾನುಭವಿಗಳು ಸೇರ್ಪಡೆಯಾಗುವ ನಿರೀಕ್ಷೆಯಿದ್ದು, ಬಿಪಿಎಲ್ ಕಾರ್ಡ್‌ಗಳನ್ನು (BPL Card) ವಿಭಜಿಸಲು ಅವಕಾಶ ನೀಡದಂತೆ ಹಣಕಾಸು ಇಲಾಖೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಒತ್ತಾಯಿಸಿದೆ. ಹಾಗಿದ್ರೆ, ಏನಿದು ಹೊಸ ವಿಷಯ?, ಇದರಿಂದ ಯಾರಿಗೆಲ್ಲಾ ಸಮಸ್ಯೆ ಹಾಗೂ ರೇಷನ್‌ ಕಾರ್ಡ್‌ ಗೆ ಅರ್ಜಿ ಸಲ್ಲಿಕೆ ಮಾಡಿದ್ರೆ ಅದರ ಸ್ಟೇಟಸ್‌ ನೋಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

BPL ಕಾರ್ಡ್‌ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್!

ಕಾರ್ಡ್‌ಗಳ ದುರುಪಯೋಗಕ್ಕೆ ಕಡಿವಾಣ: ಬಡತನ ರೇಖೆಗಿಂತ ಕೆಳಗಿನ ಕಾರ್ಡ್‌ಗಳ ದುರುಪಯೋಗವನ್ನು ನಿರ್ಬಂಧಿಸಲು ಸರ್ಕಾರ ಪ್ರಮುಖ ಹೆಜ್ಜೆ ಇಡಲು ಮುಂದಾಗಿದೆ. ಅಂದರೆ ಬಿಪಿಎಲ್ ಕಾರ್ಡ್‌ಗಳನ್ನು ವಿಭಜಿಸಲು ಅವಕಾಶ ನೀಡದಂತೆ ಹಣಕಾಸು ಇಲಾಖೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ತಿಳಿಸಿದೆ. ಈಗಾಗಲೇ ಕರ್ನಾಟಕವು 1.2 ಕೋಟಿ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದು, ಈ ಮೂಲಕ ಅನ್ನಭಾಗ್ಯ, ಗೃಹಲಕ್ಷ್ಮಿ (Annabhagya, Gruhalakshmi) ಅಡಿಯಲ್ಲಿ ಕುಟುಂಬದ ಮುಖ್ಯಸ್ಥರಿಗೆ ಹಣ ನೀಡಲಾಗುತ್ತಿದೆ. ಈ ಕಾರಣಕ್ಕೆ ಈಗ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಸಹ ಹೆಚ್ಚಾಗಿದೆ.

ಪ್ರಸ್ತುತ ಇರುವ ಕಾರ್ಡ್‌ನಲ್ಲಿ ಈಗಾಗಲೇ ಹೆಸರಿರುವ ಕುಟುಂಬದ ಸದಸ್ಯರಿಗೆ ಹೊಸ ಕಾರ್ಡ್‌ಗಳನ್ನು ಫ್ರೀಜ್ ಮಾಡುವಂತೆ ನಾವು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಒತ್ತಾಯಿಸಿದ್ದೇವೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಅಧಿಕಾರಿಗಳ ಪ್ರಕಾರ 2,000 ರೂಪಾಯಿಗಳ ಆರ್ಥಿಕ ಸಹಾಯವನ್ನು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದವರು ಬಳಸುವುದರಿಂದ, ಫಲಾನುಭವಿಗಳು 0-5% ಜಿಎಸ್‌ಟಿಯನ್ನು ಆಕರ್ಷಿಸುವ ಅಗತ್ಯ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಸರ್ಕಾರಕ್ಕೆ ಲಾಭವೂ ಹೌದು ಎಂದಿದ್ದಾರೆ.

ಬಾಕಿ ಉಳಿದಿರುವ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಕ್ರಮ: ಈ ನಡುವೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೆ.29 ರಂದು ಸರ್ಕಾರಿ ಆದೇಶ ಹೊರಡಿಸಿದ್ದು, ಹೊಸ ಪಡಿತರ ಚೀಟಿಗಾಗಿ ಬಾಕಿ ಉಳಿದಿರುವ 2.96 ಲಕ್ಷ ಅರ್ಜಿಗಳನ್ನು ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಅರ್ಜಿಗಳು ಮಾರ್ಚ್ 2023 ರಿಂದ ಬಾಕಿ ಉಳಿದಿವೆ. ಒಮ್ಮೆ ಅದನ್ನು ತೆರವುಗೊಳಿಸಿದರೆ, ಖಾತರಿ ಯೋಜನೆಗಳಿಗೆ ಹೆಚ್ಚಿನ ಫಲಾನುಭವಿಗಳನ್ನು ಸೇರಿಸುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ನಿಮ್ಮ ಹೊಸ ಅರ್ಜಿಯ ಸ್ಟೇಟಸ್‌ ಹೇಗಿದೆ ಎಂದು ತಿಳಿಯೋಣ ಬನ್ನಿ.

- ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ರೆ ನೀವು ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕಿದೆ. ಇದಕ್ಕಾಗಿ ನೀವು https://ahara.kar.nic.in/lpg/ ಲಿಂಕ್‌ ಅನ್ನು ಬಳಕೆ ಮಾಡಬಹುದು.
- ಇದಾದ ನಂತರದಲ್ಲಿ ನೀವು ಯಾವ ಎರಡು ಡಿವಿಸನ್‌ ಆಯ್ಕೆ ಇರುವ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ನೀವು ಯಾವ ಜಿಲ್ಲೆಗೆ ಸೇರಿದ್ದೀರೋ ಆಯಾ ಜಿಲ್ಲೆಯ ವಿಭಾಗದ ಮೇಲೆ ಕ್ಲಿಕ್‌ ಮಾಡಿ.

BPL ಕಾರ್ಡ್‌ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್!

- ಇಷ್ಟು ಮಾಡಿದ ಮೇಲೆ ಹೊಸ ಪಡಿತರ ಚೀಟಿಗೆ ಸಲ್ಲಿಸಲಾದ ಅರ್ಜಿಯ ಸ್ಥಿತಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ. ಈ ವೇಳೆ ನೀವು ಗ್ರಾಮೀಣ ಭಾಗದವರೋ ಅಥವಾ ಪಟ್ಟಣದವರೋ ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಬೇಕಾಗುತ್ತದೆ.
- ನಂತರದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾಗ ನಿಮಗೆ ನೀಡಲಾದ ಹಿಂಬರಹದ ಸಂಖ್ಯೆಯನ್ನು ನಮೂದು ಮಾಡಲು ಕೇಳುತ್ತದೆ. ಹೀಗಾಗಿ ಆ ಸಂಖ್ಯೆಯನ್ನು ನಮೂದು ಮಾಡಿ ಮುಂದುವರೆಯಿರಿ ಎಂಬ ಆಯ್ಕೆ ಮೇಲೆ ಟ್ಯಾಪ್‌ ಮಾಡಿದ್ರೆ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು.

Best Mobiles in India

English summary
As more beneficiaries are expected to join the state government's guarantee schemes in the coming days, the finance department has urged the food and civil supplies department not to allow distribution of BPL cards. .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+