Home
ಸುದ್ದಿಜಾಲ

ಶಾಕಿಂಗ್ ನ್ಯೂಸ್: ರಿಲಾಯನ್ಸ್ ಜಿಯೋ 4G ಉಚಿತ ಸೇವೆ ಸ್ಟಾಪ್

ಶೀಘ್ರದಲ್ಲಿ ಜಿಯೋ ಗ್ರಾಹಕರು, ಉಚಿತ ಸೇವೆಗಳ ಡಿಸ್‌ಕನೆಕ್ಟ್‌ ಕುರಿತ ಮೆಸೇಜ್‌ ಅನ್ನು ಪಡೆಯುತ್ತೀರಿ. ವೆರಿಫಿಕೇಶನ್ ಪೂರ್ಣಗೊಳಿಸಿದ ಕಾರಣ ಜಿಯೋ 4G ಉಚಿತ ಸೇವೆಯನ್ನು ಡಿಸ್‌ಕನೆಕ್ಟ್ ಮಾಡಲಿದೆ.

By Suneel

ರಿಲಾಯನ್ಸ್ ಜಿಯೋ 4G ಡಾಟಾ ಸೇವೆಯನ್ನು ದೇಶದಾದ್ಯಂತ ಜನರು ಉಚಿತ ವಾಯ್ಸ್ ಕರೆ, ಇಂಟರ್ನೆಟ್ ಆಕ್ಸೆಸ್‌ಗಾಗಿ ಎಂಜಾಯ್‌ ಮಾಡುತ್ತಿದ್ದಾರೆ. ಅಲ್ಲದೇ ಬಹುಸಂಖ್ಯಾತರು ವೆಲ್ಕಮ್‌ ಆಫರ್‌ ಅನ್ನು ಖುಷಿ ಖುಷಿ ಆಗಿ ಬಳಸುತ್ತಿದ್ದಾರೆ. ಆದರೆ ಇನ್ಮುಂದೆ ಜಿಯೋದ ಈ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಹೌದು, ಮುಕೇಶ್ ಅಂಬಾನಿ ಮಾಲೀಕತ್ವದ ರಿಲಾಯನ್ಸ್ ಜಿಯೋ 4G ಸೇವೆಯನ್ನು ದೇಶದಾದ್ಯಂತ ತಡೆಹಿಡಿಯಲಿದೆ.

ಅಲ್ಲಾ ಇಷ್ಟುದಿನ ರಿಲಾಯನ್ಸ್ ಜಿಯೋ(Jio) ಉಚಿತ ಇಂಟರ್ನೆಟ್ ಆಕ್ಸೆಸ್, ಉಚಿತ ವಾಯ್ಸ್ ಕರೆ ಮತ್ತು ವೆಲ್ಕಮ್‌ ಆಫರ್ ನೀಡಿ, ಇದೇ ಆಫರ್‌ ಅನ್ನು 2017 ಮಾರ್ಚ್‌ವರೆಗೆ ವಿಸ್ತರಣೆ ಮಾಡುವ ಬಗ್ಗೆ ಹೇಳಿತ್ತು. ಆದರೆ ಈಗ ಏಕಾಏಕಿ 4G ಸೇವೆಯನ್ನು ತಡೆಹಿಡಿಯಲು ನಿರ್ಧರಿಸಿರುವುದಾದರೂ ಏಕೆ ಎಂಬ ಪ್ರಶ್ನೆ ಎಲ್ಲರಿಗೂ ಬರದೇ ಇರದು. ಏಕೆ ಎಂದು ತಿಳಿಯಲು ಮುಂದೆ ಓದಿರಿ.

'ಜಿಯೋಮನಿ' ವ್ಯಾಲೆಟ್ ಆಪ್‌: ಹಣ ಇಲ್ಲದಿದ್ದರೂ ದಿನ ಕಳೆಯಬಹುದು!

 ಕಾರಣ ವೆರಿಫಿಕೇಶನ್ ಪೂರ್ಣಗೊಳಿಸುವುದು ಮುಖ್ಯವಾಗಿದೆ

ಕಾರಣ ವೆರಿಫಿಕೇಶನ್ ಪೂರ್ಣಗೊಳಿಸುವುದು ಮುಖ್ಯವಾಗಿದೆ

ಜಿಯೋ ಸಡೆನ್‌ ಆಗಿ ಈ ತೀರ್ಮಾನ ಕೈಗೊಳ್ಳಲು ಮೊದಲ ಕಾರಣವೆಂದರೆ, ಹಲವರು ತಮ್ಮ ದೃಢೀಕರಣ ಪರಿಶೀಲನೆಯಲ್ಲಿ ಅನುತ್ತೀರ್ಣಗೊಂಡಿದ್ದಾರೆ. ಜಿಯೋ, ಉಚಿತ ಸಿಮ್‌ ಅನ್ನು ಗ್ರಾಹಕರಿಗೆ ಕೇವಲ ಆಧಾರ್ ಕಾರ್ಡ್ ಪ್ರೂಫ್‌'ನೊಂದಿಗೆ ವಿತರಿಸಿದೆ.

ರಿಲಾಯನ್ಸ್ ಜಿಯೋ ತನ್ನ ಗ್ರಾಹಕರಿಗೆ ರಿಲಾಯನ್ಸ್ ಡಿಜಿಟಲ್ ಸ್ಟೋರ್‌ಗಳಿಗೆ ಭೇಟಿ ನೀಡಿ ಫಿಂಗರ್‌ಪ್ರಿಂಟ್ ವೆರಿಫೈ ಮಾಡಲು ವಿನಂತಿಸಿತ್ತು. ಆದರೆ ಬಹುಸಂಖ್ಯಾತರು ದೃಢೀಕರಣದಲ್ಲಿ ಅನುತ್ತೀರ್ಣಗೊಂಡಿರುವುದು ಕಾರಣವಾಗಿದೆ.

ಜಿಯೋ ಈಗಾಗಲೇ ತನ್ನ ಬಳಕೆದಾರರಿಗೆ ಎಚ್ಚರಿಸಿದೆ

ಜಿಯೋ ಈಗಾಗಲೇ ತನ್ನ ಬಳಕೆದಾರರಿಗೆ ಎಚ್ಚರಿಸಿದೆ

ಯಾವ ಜಿಯೋ ಗ್ರಾಹಕರು ದೃಢೀಕರಣ ವೆರಿಫೀಕೇಶನ್ ಮಾಡಿಲ್ಲವೋ, ಅವರಿಗೆ ಜಿಯೋ ಸಂದೇಶಗಳನ್ನು ಕಳಿಸಿ ಎಚ್ಚರಿಸಿದೆ. ಅಲ್ಲದೇ ಇವರಿಗೆ ಜಿಯೋ ಉಚಿತ ಸೇವೆಗಳನ್ನು ತಡೆಹಿಡಿಯಕಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋ ಸರ್ವೀಸ್ ಡಿಸ್‌ಕನೆಕ್ಟ್‌ ಆಗದಂತೆ ತಡೆಹಿಡಿಯುವುದು ಹೇಗೆ?

ಜಿಯೋ ಸರ್ವೀಸ್ ಡಿಸ್‌ಕನೆಕ್ಟ್‌ ಆಗದಂತೆ ತಡೆಹಿಡಿಯುವುದು ಹೇಗೆ?

ರಿಲಾಯನ್ಸ್ ಜಿಯೋ ಉಚಿತ ಸೇವೆಗಳನ್ನು ಡಿಸ್‌ಕನೆಕ್ಟ್‌ ಮಾಡದಂತೆ ತಡೆಯಲು, ಮೆಸೇಜ್ ಸ್ವೀಕರಿಸಿರುವ ಗ್ರಾಹಕರು ವಿಳಾಸ ಮತ್ತು ಐಡಿ ಪ್ರೂಫ್‌ನೊಂದಿಗೆ ಹತ್ತಿರದ ರಿಲಾಯನ್ಸ್ ಡಿಜಿಟಲ್ ಸ್ಟೋರ್‌ಗಳಿಗೆ ಭೇಟಿ ನೀಡಿ. ಫಿಂಗರ್‌ಪ್ರಿಂಟ್ ವೆರಿಫಿಕೇಶನ್ ಪ್ರಕ್ರಿಯೆ ಪೂರ್ಣಗೊಂಡ ನಂತರ, ಯಶಸ್ವಿಯಾಗಿ ಉಚಿತ ಸರ್ವೀಸ್‌ ಡಿಸ್‌ಕನೆಕ್ಟ್‌ನಿಂದ ತಪ್ಪಿಸಿಕೊಳ್ಳಬಹುದು. ಮತ್ತು ಉಚಿತ ಸೇವೆಗಳ ಎಂಜಾಯ್‌ ಅನ್ನು ಮುಂದುವರೆಸಬಹುದು.

ಡಿಸೆಂಬರ್ 3 ರ ನಂತರ ವೆಲ್ಕಮ್‌ ಆಫರ್‌ನಲ್ಲಿ ಸಿಮ್ ಲಭ್ಯವಿಲ್ಲ

ಡಿಸೆಂಬರ್ 3 ರ ನಂತರ ವೆಲ್ಕಮ್‌ ಆಫರ್‌ನಲ್ಲಿ ಸಿಮ್ ಲಭ್ಯವಿಲ್ಲ

ಸ್ಮಾರ್ಟ್‌ಫೋನ್‌ ಮತ್ತು ಇಂಟರ್ನೆಟ್ ಪ್ರಿಯರು ನೆನಪಿಟ್ಟುಕೊಳ್ಳಲೇಬೇಕಾದ ವಿಷಯವೆಂದರೆ, ಯಾರು ಜಿಯೋ ಸಿಮ್‌ ಅನ್ನು ವೆಲ್ಕಮ್ ಆಫರ್‌ನೊಂದಿಗೆ ಖರೀದಿಸಲು ಬಯಸಿದ್ದೀರೋ ಅವರು ಬಹುಬೇಗ ಸಿಮ್ ಪಡೆಯಿರಿ. ಕಾರಣ ಡಿಸೆಂಬರ್ 3 ರ ನಂತರ ಜಿಯೋ ನೀಡುವ ಸಿಮ್‌ಗೆ ವೆಲ್ಕಮ್‌ ಆಫರ್ ಲಭ್ಯವಾಗುವುದಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Shocking News: Reliance Jio to Immediately Interrupt Free 4G Services, Find Out Why? To know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+