'ಜಿಯೋಮನಿ' ವ್ಯಾಲೆಟ್ ಆಪ್‌: ಹಣ ಇಲ್ಲದಿದ್ದರೂ ದಿನ ಕಳೆಯಬಹುದು!

Written By:

ರಿಲಾಯನ್ಸ್ ಜಿಯೋ ಆಪ್‌ಗಳ ಕ್ಷೇತ್ರದಲ್ಲು ಸಹ ಇತರೆ ಪ್ರಖ್ಯಾತ ಆಪ್‌ಗಳಿಗೆ ಸೆಡ್ಡು ಹೊಡೆಯಲು ಆಪ್‌ಗಳ ಬಂಡಲ್‌ ಅನ್ನೇ ಹೊರತಂದಿದೆ. ವಿಶೇಷ ಅಂದ್ರೆ ಪೇಟಿಎಂ, ಫ್ರೀಚಾರ್ಜ್‌, ಮೊಬಿಕ್‌ವಿಕ್‌ ಆಪ್‌ಗಳಿಗೆ ಸ್ಪರ್ಧೆ ನೀಡಲು ರಿಲಾಯನ್ಸ್ ಜಿಯೋ 'ಜಿಯೋಮನಿ (JioMoney)' ಆಪ್‌ ಅನ್ನು ಪರಿಚಯಿಸಿದೆ.500, 1000 ನೋಟುಗಳ ಬ್ಯಾನ್‌ ಆದ ಈ ಸಂದರ್ಭದಲ್ಲಿ ಜಿಯೋಮನಿ ಹೆಚ್ಚು ಉಪಯೋಗಕಾರಿಯು ಆಗಿದೆ.

ಜಿಯೋಮನಿ ಆಪ್‌ ಆಂಡ್ರಾಯ್ಡ್ ಮತ್ತು ಐಓಎಸ್‌ಗಳಿಗೆ ಲಭ್ಯವಿದ್ದು, ವ್ಯಾಲೆಟ್ ರೀತಿಯ ಸೇವೆ ನೀಡಲಿದೆ. ಜಿಯೋಮನಿ ಬಳಕೆದಾರರಿಗೆ ಮೊಬೈಲ್ ರೀಚಾರ್ಜ್‌ ಮಾಡಲು, ಶಾಪಿಂಗ್‌ಗಾಗಿ, ಹಣ ವರ್ಗಾಯಿಸಲು, ಆಕರ್ಷಕ ಕೂಪನ್‌ಗಳ ಆಫರ್‌ ಪಡೆಯಲು ಸಹಾಯಕವಾಗಿದೆ. ಆಪ್‌ ಹಲವು ಡಿಸ್ಕೌಂಟ್ ಕೂಪನ್‌ಗಳನ್ನು ಆಫರ್‌ ಮಾಡುತ್ತದೆ. ಬಳಕೆದಾರರಿಗೆ ತಮ್ಮ ಹಣ ಉಳಿಸಲು ಸಹಾಯಕವಾಗಿದೆ. ಇಂದಿನ ಲೇಖನದಲ್ಲಿ ಜಿಯೋಮನಿ ಆಫ್‌ ಬಳಸಿ, ಕ್ಯಾಶ್‌ಲೆಸ್ ದಿನಗಳನ್ನು ಕಳೆಯುವುದು ಹೇಗೆ, ಆನ್‌ಲೈನ್‌ ಪೇಮೆಂಟ್ ಮಾಡಿ ಹಣ ಗಳಿಸುವುದು ಹೇಗೆ ಎಂದು ತಿಳಿಯಿರಿ

ರಿಲಾಯನ್ಸ್ ಜಿಯೋ ಡಿಟಿಎಚ್ VS ಏರ್‌ಟೆಲ್ ಡಿಟಿಎಚ್: ಯಾವುದು ಉತ್ತಮ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋಮನಿ ಆಪ್‌ ಡೌನ್‌ಲೋಡ್ ಮಾಡಿ

ಜಿಯೋಮನಿ ಆಪ್‌ ಡೌನ್‌ಲೋಡ್ ಮಾಡಿ

ಐಓಎಸ್ ಮತ್ತು ಆಂಡ್ರಾಯ್ಡ್ ಗಳಿಗೆ ಲಭ್ಯವಿರುವ, ಜಿಯೋಮನಿ ಆಪ್‌ ಅನ್ನು ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ.

ಆಪ್‌ ಓಪನ್‌ ಮಾಡಿ ರಿಜಿಸ್ಟರ್ ಮಾಡಿ

ಆಪ್‌ ಓಪನ್‌ ಮಾಡಿ ರಿಜಿಸ್ಟರ್ ಮಾಡಿ

ಆಪ್‌ ಯಶಸ್ವಿಯಾಗಿ ನಿಮ್ಮ ಸ್ಮಾರ್ಟ್‌ಫೋನಲ್ಲಿ ಇನ್‌ಸ್ಟಾಲ್‌ ಆದ ನಂತರ, ಆಪ್‌ ಓಪನ್ ಮಾಡಿ ನಿಮ್ಮ ವಿವರಗಳು, ಮೊಬೈಲ್‌ ನಂಬರ್ ಮತ್ತು ಪಾಸ್‌ವರ್ಡ್‌ ನೀಡಿ ರಿಜಿಸ್ಟರ್ ಮಾಡಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಿಜಿಸ್ಟರ್ ಕ್ಲಿಕ್ ಮಾಡಿ, ಓಟಿಪಿ ವೆರಫೈ ಮಾಡಿ

ರಿಜಿಸ್ಟರ್ ಕ್ಲಿಕ್ ಮಾಡಿ, ಓಟಿಪಿ ವೆರಫೈ ಮಾಡಿ

ಆಪ್‌ನಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಲಿಂಗ, ಪಾಸ್‌ವರ್ಡ್‌ ಎಂಟರ್ ಮಾಡಿ, ಪುನಃ ಪಾಸ್‌ವರ್ಡ್ ಎಂಟರ್ ಮಾಡಿ ಖಚಿತ ಪಡಿಸಿ. ನಂತರ "I agree to Terms and Conditions' ಟಿಕ್‌ ಮಾಡಿ ರಿಜಿಸ್ಟರ್ ಆಪ್ಶನ್‌ ಟ್ಯಾಪ್‌ ಮಾಡಿ. ನಂತರ ಒನ್‌ ಟೈಮ್‌ ಪಾಸ್‌ವರ್ಡ್‌ನ ಮೆಸೇಜ್‌ ಪಡೆಯುತ್ತೀರಿ. ಈ ಪಾಸ್‌ವರ್ಡ್‌ ಅನ್ನು ಖಾತೆ ಖಚಿತಪಡಿಸಲು ನೀಡಿ.

4 ಡಿಜಿಟ್‌ನ mPIN ಮತ್ತು ಲಾಗಿನ್ ಸೆಟ್‌ ಮಾಡಿ

4 ಡಿಜಿಟ್‌ನ mPIN ಮತ್ತು ಲಾಗಿನ್ ಸೆಟ್‌ ಮಾಡಿ

4 ಡಿಜಿಟ್‌ನ mPIN ಸೆಟ್‌ ಮಾಡಿ, ಪುನಃ ನಂಬರ್ ಎಂಟರ್ ಮಾಡುವುದರಿಂದ ಯಶಸ್ವಿ ಆಗಿ ಜಿಯೋಮನಿ ಆಪ್‌ ರಿಜಿಸ್ಟರ್ ಮಾಡಬಹುದು. ನಂತರ ನಿಮ್ಮಲ್ಲಿ ಕ್ಯಾಶ್ ಇರಲಿ, ಇಲ್ಲದಿರಲಿ, ಜಿಯೋಮನಿ ಬಳಸಿ, ಬಿಲ್ ಪಾವತಿಸುವುದು, ರೀಚಾರ್ಜ್‌ ಮಾಡುವುದು, ಶಾಪಿಂಗ್ ಅನ್ನು ಕ್ಯಾಶ್‌ ಇಲ್ಲದೆಯು ಮಾಡಿ. ಕೆಲವೊಮ್ಮೆ ಕ್ಯಾಶ್‌ ಬ್ಯಾಕ್‌ ಮತ್ತು ಡಿಸ್ಕೌಂಟ್ ಇರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
JioMoney: How to Use the Reliance Jio Wallet App and Lead a Cashless Day With Ease. To know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot