ಅಗತ್ಯವಿರೋದನ್ನು ಈಗಲೇ ಖರೀದಿಸಿ; ಮೇ 31ರಿಂದ ಅಮೆಜಾನ್‌ನಲ್ಲಿ ಶಾಪಿಂಗ್ ಮಾಡುವುದು ದುಬಾರಿ!?
ಸಾಮಾನ್ಯವಾಗಿ ಯಾವುದೇ ಸ್ಮಾರ್ಟ್‌ಡಿವೈಸ್ ಅಥವಾ ಇತರೆ ವಸ್ತುಗಳನ್ನು ಖರೀದಿ ಮಾಡಲು ಬಯಸಿದಾಗ ಬಹುಪಾಲು ಮಂದಿ ಇ-ಕಾಮರ್ಸ್ ಸೈಟ್‌ಗಳಿಗೆ ಭೇಟಿ ನೀಡುವುದು ಸರ್ವೇ ಸಾಮಾನ್ಯ. ಅದರಲ್ಲೂ ಈ ಸೈಟ್‌ಗಳಲ್ಲಿ ಅತ್ಯಧಿಕ ಡಿಸ್ಕೌಂಟ್ ಸಹ ಲಭ್ಯವಾಗುವುದು ಮತ್ತಷ್ಟು ವಿಶೇಷ. ಆದರೆ, ಇನ್ಮುಂದೆ ಪ್ರಮುಖ ಇ-ಕಾಮರ್ಸ್ ತಾಣವಾದ ಅಮೆಜಾನ್‌ನಲ್ಲಿ ಖರೀದಿ ಮಾಡುವುದು ದುಬಾರಿಯಾಗಲಿದೆ.
ಹೌದು, ಅಮೆಜಾನ್‌ನಲ್ಲಿ ಹಲವಾರು ಸ್ಮಾರ್ಟ್‌ಡಿವೈಸ್‌ಗಳಿಗೆ ಅತ್ಯಧಿಕ ರಿಯಾಯಿತಿ ನೀಡುವುದು ಸಾಮಾನ್ಯ. ಜೊತೆಗೆ ಬ್ಯಾಂಕ್ ಆಫರ್, ವಿನಿಮಯ ಆಫರ್, ಇಎಂಐ ಆಫರ್ ಸೇರಿದಂತೆ ಇತರೆ ಆಫರ್‌ಗಳನ್ನೂ ಸಹ ಬಳಕೆ ಮಾಡಿಕೊಳ್ಳಬಹುದು. ಆದರೆ, ಮೇ 31 ರಿಂದ ಅಮೆಜಾನ್‌ನಲ್ಲಿ ಶಾಪಿಂಗ್ ಮಾಡುವುದು ತುಂಬಾ ದುಬಾರಿಯಾಗಲಿದ್ದು, ಈ ಮೂಲಕ ಹಲವಾರು ಗ್ರಾಹಕರಿಗೆ ಶಾಕ್ ನೀಡಿದಂತೆ ಆಗಿದೆ. ಹಾಗಿದ್ರೆ, ಏನಿದು ಬೆಲೆ ಏರಿಕೆ ವಿಚಾರ ಎಂಬ ಬಗ್ಗೆ ತಿಳಿಯೋಣ ಬನ್ನಿ.

ಕಮಿಷನ್ ಶುಲ್ಕ ಪರಿಷ್ಕರಣೆ: ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನ ಮಾರಾಟಗಾರರಿಗೆ ವಿಧಿಸುವ ಶುಲ್ಕವನ್ನು ಪರಿಷ್ಕರಿಸಿದೆ ಎಂದು ತಿಳಿದುಬಂದಿದ್ದು, ಈ ಮೂಲಕ ಗ್ರಾಹಕರ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ ಆಗುತ್ತದೆ ಎನ್ನಲಾಗಿದೆ. ಹಾಗೆಯೇ ಕಂಪನಿಯ ಪಾಲುದಾರರಾಗಿರುವ ಮಾರಾಟಗಾರರೊಬ್ಬರು ಈ ಬದಲಾವಣೆಯು ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಅಂದರೆ ಗ್ರಾಹಕರು ಅಮೆಜಾನ್‌ನಲ್ಲಿ ಹೆಚ್ಚುವರಿ ಹಣವನ್ನು ನೀಡಿ ಖರೀದಿ ಮಾಡಬೇಕಾಗುತ್ತದೆ.
ಯಾವೆಲ್ಲಾ ವರ್ಗಗಳಿಗೆ ಹೆಚ್ಚಿನ ಬೆಲೆ?: ಮಾರಾಟಗಾರರು ತಾವು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ರತಿಯೊಂದು ವಸ್ತುವಿಗೆ ಹೆಚ್ಚಿನ ಹಣ ಪಾವತಿ ಮಾಡಬೇಕು. ಅಂದರೆ ದಾಸ್ತಾನು ಸಂಗ್ರಹಣೆ, ಶಿಪ್ಪಿಂಗ್ ಮತ್ತು ರಿಟರ್ನ್ಸ್‌ಗಾಗಿ ಅವರಿಗೆ ಶುಲ್ಕ ವಿಧಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದ್ದು, ಇದರ ಜೊತೆಗೆ ರೆಫರಲ್ ಶುಲ್ಕಗಳು, ದೀರ್ಘಾವಧಿಯ ಶೇಖರಣಾ ಶುಲ್ಕಗಳು, ರಿಟರ್ನ್‌ಗಳಿಗಾಗಿ ಮರುಪಾವತಿಗಳು ಮತ್ತು ಮಾರಾಟಗಾರರಿಗೆ ಪೂರೈಸಿದ-ಅಮೆಜಾನ್ ಪಿಕಪ್ ಶುಲ್ಕಗಳಲ್ಲಿ ಕೆಲವು ಬದಲಾವಣೆಗಳನ್ನೂ ಸಹ ಮಾಡಲಾಗಿದೆ.
ಈ ಪ್ರಮುಖ ಬದಲಾವಣೆಯು ಎಲೆಕ್ಟ್ರಾನಿಕ್ಸ್, ಸೌಂದರ್ಯ ಸಂಬಂಧಿ ವಸ್ತುಗಳು, ಉಡುಪು, ಕನ್ನಡಕ, ಔಷಧೀಯ ವಸ್ತುಗಳು, ಮನೆ ಮತ್ತು ಸಾಕುಪ್ರಾಣಿಗಳು ಸೇರಿದಂತೆ ಹಲವು ವಿಭಾಗಗಳಿಗೆ ಸಂಬಂಧಿಸಿದೆ ಎನ್ನಲಾಗಿದೆ. ಇದರಿಂದಾಗಿ ನೀವು ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಫೋನ್, ಬಟ್ಟೆ ಅಥವಾ ಇನ್ನಿತರೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಬೇಕು ಎಂದರೆ ಈಗ ನೀಡುವುದಕ್ಕಿಂತೆ ಇನ್ನೂ ಹೆಚ್ಚಿನ ಬೆಲೆಯನ್ನು ನೀಡಿ ಖರೀದಿ ಮಾಡಬೇಕಾಗುತ್ತದೆ.

ನಮ್ಮ ವಾರ್ಷಿಕ ಪ್ರಕ್ರಿಯೆಯ ಭಾಗವಾಗಿ ಇತ್ತೀಚೆಗೆ ಶುಲ್ಕ ಪರಿಷ್ಕರಣೆಗಳನ್ನು ಘೋಷಿಸಿದ್ದೇವೆ. ಇದು ಮೇ 31, 2023 ರಿಂದ ಜಾರಿಗೆ ಬರಲಿದೆ. ಮಾರಾಟಗಾರರ ಶುಲ್ಕ ಪರಿಷ್ಕರಣೆಗಳು ಮಾರುಕಟ್ಟೆ ಡೈನಾಮಿಕ್ಸ್ ಮತ್ತು ವಿವಿಧ ಸ್ಥೂಲ ಆರ್ಥಿಕ ಅಂಶಗಳನ್ನು ಆಧರಿಸಿವೆ. ಅದರಲ್ಲೂ ಇತ್ತೀಚಿನ ಶುಲ್ಕ ಪರಿಷ್ಕರಣೆಯ ಭಾಗವಾಗಿ ನಾವು ನಮ್ಮ ಶುಲ್ಕ ದರ ಕಾರ್ಡ್‌ಗೆ ಕೆಲವು ಬದಲಾವಣೆಗಳನ್ನೂ ಸಹ ಮಾಡಿದ್ದೇವೆ. ಹಾಗೆಯೇ ಕೆಲವು ವಿಭಾಗಗಳಲ್ಲಿ ಶುಲ್ಕವನ್ನು ಕಡಿತ ಸಹ ಮಾಡಿದ್ದೇವೆ ಎಂದು ಅಮೆಜಾನ್ ತಿಳಿಸಿದೆ.
ಇನ್ನು ಅಮೆಜಾನ್ ಸೇರಿದಂತೆ ಇತರೆ ಇ-ಕಾಮರ್ಸ್ ಸೈಟ್‌ಗಳು ಯಾವಾಗಲೂ ಆದಾಯದಲ್ಲಿರಲು ಇಚ್ಚೆ ಪಡುತ್ತವೆ. ಈ ಕಾರಣಕ್ಕಾಗಿಯೇ ವಿವಿಧ ಆಫರ್‌ಗಳನ್ನು ನೀಡುವ ಮೂಲಕ ಸಾಕಷ್ಟು ಗ್ರಾಹಕರನ್ನು ಸೆಳೆಯತ್ತಿರುತ್ತವೆ. ಇದರೊಂದಿಗೆ ಮಾರಾಟಗಾರರಿಗೆ ಇತರ ಶುಲ್ಕಗಳನ್ನು ವಿಧಿಸುವ ಮೂಲಕ ಆದಾಯವನ್ನು ಗಳಿಸಲು ಮುಂದಾಗುತ್ತವೆ. ಅದರಲ್ಲೂ ಮಾರುಕಟ್ಟೆಯ ಬೇಡಿಕೆಗಳ ಆಧಾರದ ಮೇಲೆ ಕಾಲಕಾಲಕ್ಕೆ ಈ ಶುಲ್ಕಗಳಲ್ಲಿ ಮಾರ್ಪಾಡುಗಳು ಸಹ ಜರುಗುತ್ತವೆ.

ಅದರಂತೆ ಅಮೆಜಾನ್ ವಿಚಾರಕ್ಕೆ ಬಂದಾಗ ಅಮೆಜಾನ್ ಇತರೆ ವೆಚ್ಚವನ್ನು ಉಳಿಸಲು ಜಾಗತಿಕ ಮಟ್ಟದಲ್ಲಿ ಹಲವಾರು ಉದ್ಯೋಗಿಗಳನ್ನು ಈಗಾಗಲೇ ವಜಾ ಮಾಡಿದೆ. ಜೊತೆಗೆ ಅಲ್ಲಲ್ಲಿ ಇದ್ದ ಇತರೆ ಸೇವೆಗಳನ್ನೂ ಸ್ಥಗಿತಗೊಳಿಸಿದೆ. ಇದೀಗ ಮಾರಾಟಗಾರರಿಗೆ ವಿಧಿಸಿದ ಶುಲ್ಕ ಹೆಚ್ಚಳದ ಪರಿಣಾಮ ವಸ್ತುಗಳ ಬೆಲೆಯೂ ಸಹ ಹೆಚ್ಚಾಗಲಿದೆ. ಈ ಪ್ಲ್ಯಾನ್ ಸಹ ಅಮೆಜಾನ್‌ನ ವೆಚ್ಚ ಕಡಿತದ ಉಪಕ್ರಮವಾಗಿದೆ


Click it and Unblock the Notifications








