ಬೆಂಗಳೂರ ಹುಡುಗನಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ

Posted By:

ಬೆಂಗಳೂರಿನ ಪತ್ರಿಕೋದ್ಯಮ ವಿದ್ಯಾರ್ಥಿ ಶ್ರವಣ್ ರಿಗ್ರೇಟ್ ಅಯ್ಯರ್ ಅವರು ಮೊಬೈಲ್ ಬಳಸಿ ಚಿತ್ರೀಕರಿಸಿದ ಸಾಕ್ಷ್ಮಚಿತ್ರಕ್ಕೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಸ್ಟಾಪ್ ಮೋಷನ್ ಅನಿಮೇಷನ್ ತಂತ್ರಜ್ಞಾನ ಬಳಕೆ ಮಾಡಿ ಮೊಬೈಲ್ ಮೂಲಕ ಇರುಳಿಗ ಜನಾಂಗದ ಬಗ್ಗೆ ಶ್ರವಣ್ ಸಾಕ್ಷ್ಯಚಿತ್ರ ತೆಗೆದಿದ್ದರು. ನೋಯಿಡಾದಲ್ಲಿ ನಡೆದ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ಈ ಸಾಕ್ಷ್ಯಚಿತ್ರ ಪ್ರದರ್ಶನಗೊಂಡು ಆಯ್ಕೆದಾರರ ಮೆಚ್ಚುಗೆ ಗಳಿಸಿತ್ತು.

ಗಿಜ್ಬಾಟ್‌ ಈ ಹಿಂದೆಯೇ ಶ್ರವಣ್ ರಿಗ್ರೇಟ್ ಅಯ್ಯರ್ ಸಾಧನೆಯ ಬಗ್ಗೆ ವರದಿ ಮಾಡಿತ್ತು.ರಾಮನಗರದ ಬುಡಕಟ್ಟು ಜನಾಂಗ ಇರುಳಿಗರ ಜೀವನಶೈಲಿ ಬಗ್ಗೆ ಹೇಳುವ ಮೊಬೈಲ್ ಸಾಕ್ಷ್ಯಚಿತ್ರಕ್ಕೆ ಮೊಬೈಲ್ ವಿಭಾಗದ ಅತ್ಯುತ್ತಮ ಚಿತ್ರ ಎಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಆದರೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೋಯಿಡಾದಲ್ಲಿ ನಡೆದಿದ್ದರಿಂದ ಶ್ರವಣ್ ಅವರು ನೇರವಾಗಿ ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲವಂತೆ. ಆದರೆ, ನೂರಾರು ಸಾಕ್ಷ್ಯಚಿತ್ರಗಳ ನಡುವೆ ಸ್ಪರ್ಧಿಸಿ 'ಕತ್ತಲಲ್ಲಿ ಇರುಳಿಗರು' ಪ್ರಶಸ್ತಿ ಗಳಿಸಿರುವುದು ಖುಷಿಕೊಟ್ಟಿದೆ ಎಂದು ಶ್ರವಣ್ ಹೇಳಿದ್ದಾರೆ.ಹೀಗಾಗಿ ಇಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಸಾಕ್ಷ್ಯಚಿತ್ರ ಮತ್ತು ಶ್ರವಣ್‌ ನಿರ್ದೇಶನದ ಕೆಲವು ಸಾಕ್ಷ್ಯಚಿತ್ರಗಳ ಕೆಲವು ವೀಡಿಯೋಗಳಿವೆ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ

ಇದನ್ನೂ ಓದಿ : ಈ ಕಲಾವಿದನ ಪ್ರತಿಭೆಗೆ ಒಂದು ಸಲಾಂ ಹೇಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಕತ್ತಲಲ್ಲಿ ಇರುಳಿಗರು

ಬೆಂಗಳೂರ ಹುಡುಗನಿಗೆ ದಾದಾ ಸಾಹೇಬ್‌ ಪ್ರಶಸ್ತಿ

ರಾಮನಗರದ ಬುಡಕಟ್ಟು ಜನಾಂಗ ಇರುಳಿಗರ ಜೀವನಶೈಲಿ ಬಗ್ಗೆ ಹೇಳುವ ಮೊಬೈಲ್ ಸಾಕ್ಷ್ಯಚಿತ್ರ

ಹಾದಿ

ಬೆಂಗಳೂರ ಹುಡುಗನಿಗೆ ದಾದಾ ಸಾಹೇಬ್‌ ಪ್ರಶಸ್ತಿ

ತಂಬಾಕು ಸೇವನೆ ಮತ್ತು ಧೂಮಪಾನ ದುಷ್ಪಾರಿಣಾಮ ಕುರಿತ ಸಾಕ್ಷ್ಯಚಿತ್ರ

ರೆಕ್ಕೆ ಮುರಿದ ಹಕ್ಕಿ ನಾನು

ಬೆಂಗಳೂರ ಹುಡುಗನಿಗೆ ದಾದಾ ಸಾಹೇಬ್‌ ಪ್ರಶಸ್ತಿ

ಮನುಷ್ಯರ ದುರಾಸೆಯಿಂದ ಹೇಗೆ ಪರಿಸರ ಮಾಲಿನ್ಯವಾಗುತ್ತಿದೆ ಎಂಬ ಸಂದೇಶವನ್ನು ಸಾರುವ ಸಾಕ್ಷ್ಯ ಚಿತ್ರ

ಕುಡುಗೋಲು ಶಾಪ

ಬೆಂಗಳೂರ ಹುಡುಗನಿಗೆ ದಾದಾ ಸಾಹೇಬ್‌ ಪ್ರಶಸ್ತಿ

ಬಿಳಿಗಿರಿ ರಂಗನ ಬೆಟ್ಟದ ಸೋಲಿಗ ಬುಡಕಟ್ಟು ಜನಾಂಗಕ್ಕೆ ಶಾಪವಾಗಿರುವ ಅನುವಂಶಿಕ ರೋಗ ಸಿಕಲ್ ಸೆಲ್ ಅನೆಮಿಯ ಬಗೆಗಿನ ಕಿರು ಸಾಕ್ಷ್ಯಚಿತ್ರ.

ಗಾಂಧಿ ಸಬರ್‌ಮತಿ ಆಶ್ರಮ

ಬೆಂಗಳೂರ ಹುಡುಗನಿಗೆ ದಾದಾ ಸಾಹೇಬ್‌ ಪ್ರಶಸ್ತಿ

ಗಾಂಧೀಜಿಯ ಆಶ್ರಮದ ಸದ್ಯದ ಪರಿಸ್ಥಿತಿ ಕುರಿತ ಸಾಕ್ಷ್ಯಚಿತ್ರ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot