Subscribe to Gizbot

ಬಜೆಟ್‌: ಯುನಿಕೋಡ್ ಕನ್ನಡ ತಂತ್ರಾಂಶಕ್ಕೆ ಒತ್ತು

Posted By:

ಮುಖ್ಯಮಂತ್ರಿಯಾಗಿ ಮೊದಲ ಹಾಗೂ ಒಟ್ಟಾರೆ ಇಂದು 8ನೇ ಬಾರಿ ಬಜೆಟ್ ಸಿದ್ದರಾಮಯ್ಯ ಬಜೆಟ್‌ ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ತಂತ್ರಜ್ಞಾನ ಸಂಬಂಧಿಸಿದಂತೆ ಕೆಲವೊಂದು ಯೋಜನೆಗಳಿಗೆ ಅನುದಾನ ನೀಡಿದ್ದಾರೆ. ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಯಾವ ವಿಚಾರಗಳನ್ನು ತಮ್ಮ ಬಜೆಟ್‌ನಲ್ಲಿ ಮಂಡಿಸಿದ್ದಾರೆ ಎನ್ನುವ ಹೈಲೈಟ್ಸ್‌ ಇಲ್ಲಿದೆ.

ಬಜೆಟ್‌: ಯುನಿಕೋಡ್ ಕನ್ನಡ ತಂತ್ರಾಂಶಕ್ಕೆ ಒತ್ತು

*ಸಾರ್ವಜನಿಕರಿಗೆ ವೈ-ಫೈ ಸೇವೆ ಒದಗಿಸಲು ಬೆಂಗಳೂರಿನ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಪೈಲಟ್ ಯೋಜನೆ ಆರಂಭಿಸಲಾಗುತ್ತದೆ. ನಂತರ ಮಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರುಗಳಲ್ಲಿಯೂ ಈ ಯೋಜನೆ ಜಾರಿಗೊಳಿಸಲಾಗುತ್ತದೆ.

*ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಬಳಕೆ ವ್ಯಾಪಕಗೊಳಿಸಲು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯುನಿಕೋಡ್ ಕನ್ನಡ ತಂತ್ರಾಂಶಕ್ಕೆ ಹೆಚ್ಚಿನ ಒತ್ತು.

*ಧಾರವಾಡದಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಸ್ಥಾಪನೆಗೆ 45 ಕೋಟಿ ಅನುದಾನ.

*ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆಗಾಗಿ ಬಿಬಿಎಂಪಿಗೆ ಪೂರ್ಣ ಸಹಕಾರ. ಇದಕ್ಕಾಗಿ ಆಧುನಿಕ ತಂತ್ರಜ್ಞಾನ ಅಳವಡಿಸಲು 100 ಕೋಟಿ ರೂ. ಅನುದಾನ

*ಎಲ್ಲ ಸರಕಾರಿ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕ.

*ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಪರೀಕ್ಷಾ ಮಾಹಿತಿ ಒದಗಿಸಲು ಉದ್ದೇಶ. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳ ನಿರ್ವಹಣಾ ವ್ಯವಸ್ಥೆಯ ಮರುವಿನ್ಯಾಸಕ್ಕೆ ಯೋಜನೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot