ರೆಡ್ಮಿಯ ಈ ಮೊಬೈಲ್ ಬೆಲೆಯಲ್ಲಿ ಸಖತ್ ಇಳಿಕೆ; ಈ ಚಾನ್ಸ್ ಬಿಡಬೇಡಿ!
ದೈತ್ಯ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಎನಿಸಿರುವ ಅಮೆಜಾನ್ ಖರೀದಿದಾರರ ನೆಚ್ಚಿನ ಅಡ್ಡಾ ಆಗಿ ಗುರುತಿಸಿಕೊಂಡಿದೆ. ಅಮೆಜಾನ್ ಎಲ್ಲ ವಿಭಾಗದ ವಸ್ತುಗಳಿಗೂ ರಿಯಾಯಿತಿ ನೀಡುತ್ತಾ ಮುನ್ನಡೆದಿದೆ. ಆದ್ರೆ, ಪ್ರಮುಖವಾಗಿ ಮೊಬೈಲ್‌ಗಳಿಗಂತೂ ಅಧಿಕ ರಿಯಾಯಿತಿ ಲಭ್ಯ ಮಾಡಿರುತ್ತದೆ. ಇದೀಗ ರೆಡ್ಮಿ A4 5G (Redmi A4 5G) ಅಮೆಜಾನ್ ವೆಬ್‌ಸೈಟ್‌ನಲ್ಲಿ ಗ್ರಾಹಕರು OMG ಎನ್ನುವಂತಹ ರಿಯಾಯಿತಿ ಪಡೆದುಕೊಂಡಿದೆ.
ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ರೆಡ್ಮಿ A4 5G (Redmi A4 5G) ಫೋನ್ ಶೇ. 20% ರಷ್ಟು ನೇರ ರಿಯಾಯಿತಿ ಪಡೆದಿದೆ. ಈ ಫೋನಿನ 8GB RAM + 128 GB ಸ್ಟೋರೇಜ್ ವೇರಿಯಂಟ್ 14,999ರೂ. ಗಳ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇನ್ನು ಅಮೆಜಾನ್ ತಾಣದಲ್ಲಿ ಸಿಗುವ ಇತರೆ ಬ್ಯಾಂಕ್ ಆಫರ್‌ಗಳನ್ನು ಪಡೆದರೆ, ಮತ್ತಷ್ಟು ರಿಯಾಯಿತಿ ಬೆಲೆಗೆ ಖರೀದಿಸಲು ಅವಕಾಶ ಲಭ್ಯ.

ಇನ್ನು ರೆಡ್ಮಿ A4 5G (Redmi A4 5G) ಮೊಬೈಲ್ 4GB RAM + 64GB ಹಾಗೂ 4GB RAM + 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ. ಇದರೊಂದಿಗೆ 5,160 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಅಮೆಜಾನ್ ತಾಣದಲ್ಲಿ Redmi A4 5G ಅನ್ನು ಸಖತ್ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದು. ಹಾಗಾದರೇ ರೆಡ್ಮಿ A4 5G ಮೊಬೈಲ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.
ಡಿಸ್‌ಪ್ಲೇ ಡಿಸೈನ್ ಮಾಹಿತಿ
ರೆಡ್ಮಿ A4 5G ಮೊಬೈಲ್ 6.52 ಇಂಚಿನ HD+ ಡಿಸ್‌ಪ್ಲೇ ಜೊತೆಗೆ ಅತ್ಯುತ್ತಮ ಪಿಕ್ಸಲ್ ರೆಸಲ್ಯೂಶನ್ ಪಡೆದುಕೊಂಡಿದೆ. ಇನ್ನು ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಸೌಲಭ್ಯವನ್ನು ಸಪೋರ್ಟ್ ಪಡೆದುಕೊಂಡಿದೆ. ಈ ಡಿಸ್‌ಪ್ಲೇಯು 600 nits ಬ್ರೈಟ್ನೆಸ್ ಸಪೋರ್ಟ್ ಪಡೆದುಕೊಂಡಿದೆ. ಇದರೊಂದಿಗೆ ಗೇಮಿಂಗ್ ಮತ್ತು ವೀಡಿಯೊ ಪ್ಲೇಬ್ಯಾಕ್ಗಾಗಿ ಸುಗಮ ದೃಶ್ಯಗಳನ್ನು ನೀಡುತ್ತದೆ.
ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್
ರೆಡ್ಮಿ A4 5G ಮೊಬೈಲ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 4s Gen 2 (Snapdragon 4s Gen 2) ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದ ಪವರ್ ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಬೆಂಬಲ ಇದೆ. ಅಲ್ಲದೇ ಈ ಮೊಬೈಲ್ 4GB RAM + 64 GB ಮತ್ತು 4GB RAM + 128 GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ.
ಡ್ಯುಯಲ್ ಕ್ಯಾಮೆರಾ ಸೆನ್ಸಾರ್
ರೆಡ್ಮಿ A4 5G ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿ ಇದ್ದು, ಎರಡನೇ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸಾಮರ್ಥ್ಯ ಪಡೆದಿದೆ. ಇದರ ಜೊತೆಗೆ ಸೆಲ್ಫಿಗಾಗಿ ಹಾಗೂ ವಿಡಿಯೋ ಕರೆಗಾಗಿ 5 ಮೆಗಾ ಪಿಕ್ಸಲ್ ಸೆನ್ಸಾರ್‌ನ ಕ್ಯಾಮೆರಾ ನೀಡಲಾಗಿದೆ.
ಬಿಗ್ ಬ್ಯಾಟರಿ ಬ್ಯಾಕ್‌ಅಪ್
ರೆಡ್ಮಿ A4 5G ಮೊಬೈಲ್ 5,160 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಪಡೆದಿದ್ದು, ಇದಕ್ಕೆ ಅನುಗುಣವಾಗಿ 33w ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡಾ ಪಡೆದುಕೊಂಡಿದೆ. ಇನ್ನುಳಿದಂತೆ ಈ ಫೋನ್ ಬ್ಲೂಟೂತ್, ವೈ ಫೈ, NAVIC, 3.5mm ಆಡಿಯೋ ಜ್ಯಾಕ್ ಹಾಗೂ 150% ವ್ಯಾಲೂಮ್ ಬೂಸ್ಟ್ ಸೌಲಭ್ಯಗಳನ್ನು ಕಾಣಬಹುದಾಗಿದೆ. ಇನ್ನು ಈ ಫೋನ್ ಬ್ಲ್ಯಾಕ್ ಹಾಗೂ ಪರ್ಪಲ್ ಕಲರ್ ಆಯ್ಕೆಯನ್ನು ಒಳಗೊಂಡಿದೆ.


Click it and Unblock the Notifications








