Home
ಸುದ್ದಿಜಾಲ

ಹೊಸದಾಗಿ ಬಿಡುಗಡೆ ಆದ ಈ ಅಗ್ಗದ 5G ಫೋನಿಗೆ ಬೊಂಬಾಟ್‌ ಆಫರ್‌!

ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಪ್ರಮುಖ ಆನ್‌ಲೈನ್‌ ಮಾರುಕಟ್ಟೆ ಆಗಿ ಬಿಂಬಿತವಾಗಿದೆ. ಈ ತಾಣವು ಏನಾದರೊಂದು ಡಿಸ್ಕೌಂಟ್‌ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತ ಸಾಗಿದೆ. ಇದೀಗ ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಐಟೆಲ್‌ P55 5G ಸ್ಮಾರ್ಟ್‌ಫೋನ್‌ ಬೊಂಬಾಟ್‌ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ.

ಹೌದು, ಪ್ರಮುಖ ಇ ಕಾಮರ್ಸ್‌ ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ ಐಟೆಲ್‌ P55 5G ಮೊಬೈಲ್‌ ಶೇ. 26% ರಷ್ಟು ರಿಯಾಯಿತಿ ಪಡೆದುಕೊಂಡಿದೆ. ಗ್ರಾಹಕರು ಈ ಫೋನ್‌ ಅನ್ನು 9,999ರೂ. ಗಳ ಬೆಲೆಯಲ್ಲಿ ಖರೀದಿಸಬಹುದು. ಅಲ್ಲದೇ ಲಭ್ಯ ಇರುವ ಎಕ್ಸ್‌ಚೆಂಜ್‌ ಆಫರ್‌, ಬ್ಯಾಂಕ್‌ ಡಿಸ್ಕೌಂಟ್‌ ಹಾಗೂ ಇತರೆ ಕೊಡುಗೆ ಪಡೆದುಕೊಂಡರೆ, 8,999ರೂ. ಗಳಿಗೂ ಖರೀದಿಸಬಹುದು.

ಹೊಸದಾಗಿ ಬಿಡುಗಡೆ ಆದ ಈ ಅಗ್ಗದ 5G ಫೋನಿಗೆ ಬೊಂಬಾಟ್‌ ಆಫರ್‌!

ಐಟೆಲ್‌ P55 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6080 6nm ಪ್ರೊಸೆಸರ್ ಸಾಮರ್ಥ್ಯದೊಂದಿಗೆ ಕೆಲಸ ನಿರ್ವಹಿಸಲಿದ್ದು, ಇದರ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದೆ. ಇನ್ನುಳಿದಂತೆ ಐಟೆಲ್‌ P55 5G ಮೊಬೈಲ್‌ ಫೋನಿನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ ಹೀಗಿದೆ

ಐಟೆಲ್‌ P55 5G ಫೋನ್‌ 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನಾಚ್‌ ಶೈಲಿಯನ್ನು ಒಳಗೊಂಡಿದ್ದು, ಈ ಡಿಸ್‌ಪ್ಲೇ ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆಯು 267 PPI ಆಗಿದೆ.

ಹೊಸದಾಗಿ ಬಿಡುಗಡೆ ಆದ ಈ ಅಗ್ಗದ 5G ಫೋನಿಗೆ ಬೊಂಬಾಟ್‌ ಆಫರ್‌!

ಪ್ರೊಸೆಸರ್‌ ಕಾರ್ಯವೈಖರಿಯ ಮಾಹಿತಿ

ಐಟೆಲ್‌ P55 5G ಮೊಬೈಲ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 6nm ಪ್ರೊಸೆಸರ್ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಬೆಂಬಲ ಸಹ ಪಡೆದಿದೆ. ಹಾಗೆಯೇ 4GB RAM + 64 GB ಹಾಗೂ 6GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ.

ಹೊಸದಾಗಿ ಬಿಡುಗಡೆ ಆದ ಈ ಅಗ್ಗದ 5G ಫೋನಿಗೆ ಬೊಂಬಾಟ್‌ ಆಫರ್‌!

ಡ್ಯುಯಲ್ ಕ್ಯಾಮೆರಾ ಸೆನ್ಸಾರ್ ಸೌಲಭ್ಯ

ಐಟೆಲ್‌ ಸಂಸ್ಥೆಯ ಈ ಮೊಬೈಲ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದ್ದು, ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸರ್ ನಲ್ಲಿದೆ. ಇದರ ದ್ವಿತೀಯ ಕ್ಯಾಮೆರಾ ಬೇಸಿಕ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದರ ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಬೇಸಿಕ್‌ ಎಡಿಟಿಂಗ್ ಆಯ್ಕೆಗಳು ಇವೆ.

ಬಿಗ್ ಬ್ಯಾಟರಿ ಮತ್ತು ಇತರೆ ಸೌಲಭ್ಯ

ಐಟೆಲ್‌ನ ಈ ಅಗ್ಗದ 5G ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, ಇದರ ಜೊತೆಗೆ 18W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಸಹ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್‌ ಸೈಡ್‌ ಮೌಂಟೆಡ್‌ ಫಿಂಗರ್ಪ್ರಿಂಟ್‌ ಸೆನ್ಸಾರ್, ಬ್ಲೂಟೂತ್ 5.1, ಜಿಪಿಎಸ್‌, ಯುಎಸ್‌ಬಿ ಟೈಪ್‌-ಸಿ ಆಯ್ಕೆಗಳನ್ನು ಸಹ ಪಡೆದುಕೊಂಡಿದೆ.

ಮೆಮೊರಿ ಹಾಗೂ ಕಲರ್ ಆಯ್ಕೆಯ ಮಾಹಿತಿ

ಭಾರತದಲ್ಲಿ ಐಟೆಲ್‌ P55 5G ಫೋನ್‌ 6 GB + 128 GB ವೇರಿಯಂಟ್‌ ಹಾಗೂ 4GB + 64 GB ವೇರಿಯಂಟ್‌ ಆಯ್ಕೆ ಪಡೆದುಕೊಂಡಿದೆ. ಇನ್ನು ಈ ಮೊಬೈಲ್‌ ಬ್ಲೂ ಹಾಗೂ ಗ್ರೀನ್‌ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ. ಗ್ರಾಹಕರು ಅಮೆಜಾನ್‌ ತಾಣದಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Significant Price Drop on itel P55 5G on amazon website. Check here deal price and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+