ಏಲಿಯನ್‌ಗಳನ್ನು ಹುಡುಕುತ್ತಾ ಒಂದು ಸತ್ಯಾನ್ವೇಷಣೆ
ಬಾಹ್ಯಾಕಾಶ ವಾಸಿಗಳಾದ ಏಲಿಯನ್‌ಗಳು ಹಾರುವ ತಟ್ಟೆಯಲ್ಲಿ ಭುಮಿಗೆ ಆಗಮಿಸುವ ಸಣ್ಣ ಜೀವಿಗಳು ಎಂದು ನೀವು ಕರೆಯಬಹುದಾದ, ಇದ್ದರೂ ಅಗೋಚರವಾಗಿರುವ ಈ ಜೀವಿಗಳ ಸುತ್ತ ಸತ್ಯ ಘಟನೆಗಳು ಹರಿದಾಡುತ್ತಲೇ ಇರುತ್ತವೆ. ಭೂಮಿಗೆ ಬಂದಿಳಿದಾಗ ಏನಾದರೊಂದು ಕುರುಹನ್ನು ಮಾನವ ಲೋಕಕ್ಕೆ ಬಿಟ್ಟು ಹೋಗುವ ಈ ನಿರುಪದ್ರವಿಗಳು ಇವೆಯೇ ಇದ್ದರೂ ಭೂಮಿಯಲ್ಲಿ ಏಕೆ ವಾಸಿಸುತ್ತಿಲ್ಲ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.
ಓದಿರಿ: ಮಂಗಳ ಗ್ರಹದಲ್ಲಿ ಮಹಿಳೆ!!! ಏನಿದರ ರಹಸ್ಯ
ಆದರೆ ಅನ್ವೇಷಣೆಗಳಿಂದಲೇ ಸತ್ಯಘಟನೆಗಳನ್ನು ಬಯಲು ಮಾಡಬಹುದು ಎಂಬ ಸತ್ಯವನ್ನು ಅರಿತಿರುವ ವಿಜ್ಞಾನಿಗಳು ಈ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿರಂತರ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಈ ಒಳಗುಟ್ಟನ್ನೇ ಅಂದರೆ ಸತ್ಯದ ಅನ್ವೇಷಣೆಯನ್ನು ಸ್ಲೈಡರ್ ಮೂಲಕ ನಾವು ನಿಮಗೆ ತಿಳಿಸುತ್ತಿದ್ದೇವೆ.

ಅಪೋಲೋ 11 ಸೈಟಿಂಗ್
ನಾಸಾದ ಅಪೋಲೋ 11 ಮಿಶನ್‌ನಲ್ಲಿ ತಮ್ಮ ಸ್ಥಳದಿಂದ ಹಾರುವ ವಸ್ತುವೊಂದನ್ನು ನೋಡಿದ್ದಾರೆ. ನಾಸಾದ ವಿಜ್ಞಾನಿಗಳಿಗೆ ತಾವು ನೋಡಿರುವ ವಿಷಯದ ಬಗ್ಗೆ ಅಷ್ಟೊಂದು ಖಾತ್ರಿ ಇರಲಿಲ್ಲ.

ಪುರಾತನ ಗುರುತುಗಳು
ಈಜಿಪ್ಟ್‌ನ್‌ನ ಈ ಚಿತ್ರಕಲೆಗಳಲ್ಲಿ ಹೆಲಿಕಾಪ್ಟರ್ ಚಿತ್ರವನ್ನು ನಾವು ಗಮನಿಸಬಹುದು. ಏಲಿಯನ್‌ಗಳು ಪುರಾತನ ಈಜಿಪ್ಟ್‌ಗೆ ಭೇಟಿ ನೀಡಿದ್ದರು ಎಂಬ ಕುರುಹುಗಾಗಿ ಈ ಚಿತ್ರವನ್ನು ಕೆತ್ತದ್ದಾರೆ ಎಂಬ ಮಾತು ಇದೆ.

ನೆಪೋಲಿಯನ್‌ನ ಮೈಕ್ರೋ ಚಿಪ್
ಫ್ರೆಂಚ್ ಅರಸ ನೆಪೋಲಿಯನ್ ಬೋನಾಪಾರ್ಟೆ ಅಸ್ಥಿಪಂಜರದಲ್ಲಿ ಸೇರ್ಪಡೆಯಾಗಿದ್ದ ಅರ್ಧ ಇಂಚಿನ ವಿದೇಶಿ ವಸ್ತುವೊಂದನ್ನು ನೋಡಿ ವಿಜ್ಞಾನಿಗಳು ನಿಜಕ್ಕೂ ದಿಗ್ಬ್ರಾಂತರಾಗಿದ್ದರು. ಇವರು ಏಲಿಯನ್‌ಗಳನ್ನು ಭೇಟಿಯಾಗಿದ್ದರು ಎಂಬ ವದಂತಿ ಕೂಡ ಇತ್ತು.

ಲಾಸ್ ಏಂಜಲೀಸ್ ಯುದ್ಧ
ಫೆಬ್ರವರಿ 24, 1942 ರಂದು ಆಗಸದಲ್ಲಿ ಕಣ್ಣು ಕೋರೈಸುವ ಬೆಳಕಿನ ಕಿಡಿಯೊಂದು ಹಠಾತ್ತಾಗಿ ಕಾಣಿಸಿಕೊಂಡಿತ್ತು. ಈ ಬೆಳಕು ಎಲ್ಲಿಂದ ಬರುತ್ತಿದೆ ಎಂಬುದೇ ಜನರನ್ನು ಭಯಭೀತಗೊಳಿಸಿತ್ತು. ಆದರೆ ಇದು ಹೇಗೆ ಕಾಣಿಸಿಕೊಂಡಿತೋ ಹಾಗೆಯೇ ಅದೃಶ್ಯವಾಯಿತು. ಯಾವುದೇ ಹಾನಿಯನ್ನುಂಟು ಮಾಡಿಲ್ಲ.

ವೀನಸ್ ಸ್ಕೋರ್ಪಿಯನ್
ವೀನಸ್ ಗ್ರಹದಿಂದ ತೆಗೆದ ಚಿತ್ರ ಇದಾಗಿದ್ದು ರಷ್ಯಾದ ವಿಜ್ಞಾನಿ ಲಿಯೋನಿಯಡ್ ಸ್ಯಾನ್‌ಫಾರ್ಮಲಿಟಿ ಸೆರೆಹಿಡಿದಿದ್ದಾರೆ. ಗ್ರಹದಲ್ಲಿ ಈ ಜೀವಿ ಇರುವ ಚಿತ್ರವನ್ನು ಇವರು ಭೂಮಿಗೆ ಕಳುಹಿಸಿದ್ದಾರೆ.

ವಾವ್ ಚಿಹ್ನೆ
220 ಮಿಲಿಯನ್ ಜ್ಯೋತಿವರ್ಷಗಳಿಂದಾಚೆಗೆ ಸಿಗ್ನಲ್ ಒಂದು ಬಂದಿರುವುದಾಗಿ ಒಹಿಯೊ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇದು ಹೆಚ್ಚು ಬಲಯುತವಾಗಿತ್ತು ಮತ್ತು ಯಾವುದೇ ತಂತ್ರಜ್ಞಾನದ ಬಳಕೆಯಿಲ್ಲದೆ ಇದು ಅವರನ್ನು ತಲುಪಿತ್ತು.

ಏಲಿಯನ್ ಆಕಾರ
ದಿನದಿಂದ ದಿನಕ್ಕೆ ತಮ್ಮ ಪ್ರಸ್ತುತಿಯನ್ನು ಸಾರುತ್ತಿರುವ ಏಲಿಯನ್‌ಗಳು ಇಂತಹುದೇ ಆಕಾರವನ್ನು ಹೊಂದಿದೆ ಎಂದು ಹೇಳಲಾಗುವುದಿಲ್ಲ. ವೆಟ್ರನ್ ಪೈಲೆಟ್ ಮತ್ತು ಆತನ ಅಧಿಕಾರಿ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ "ಡೆಲ್ಟಾ ಮಾದರಿಯ" ವಸ್ತುವೊಂದು ಅವರತ್ತ ಬರುತ್ತಿರುವುದನ್ನು ನೋಡಿದ್ದಾರೆ. ನಂತರ ಅದು ಅಗೋಚರವಾಯಿತು .

ಜ್ಯುಪಿಟರ್ ಮೂನ್
2001 ರ ಅಧ್ಯಯನ ಹೇಳುವಂತೆ ಜ್ಯುಪಿಟರ್ ರೆಡ್ ಮೂನ್ ಯುರೋಪಾವನ್ನು ಫ್ರೋಜನ್ ಮತ್ತು ಬ್ಯಾಕ್ಟೀರಿಯಾದಿಂದ ನಿರ್ಮಿಸಲಾಗಿದೆ. ಬಾಹ್ಯಾಕಾಶದಲ್ಲಿ ಜನ್ಮತಾಳುವ ಸುಧಾರಿತ ಬದುಕನ್ನು ಎತ್ತಿ ತೋರಿಸುವ ಚಿಹ್ನೆ ಇದಾಗಿದೆ.

ಏಲಿಯನ್ಸ್ ಪಳೆಯುಳಿಕೆಗಳು
ಮಂಗಳ ಗ್ರಹ ನಿವಾಸಿಗಳ ಪಳೆಯುಳಿಕೆಗಳನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಬಿಲಿಯಗಟ್ಟಲೆ ವರ್ಷಗಳ ಹಿಂದೆ ಅವರು ಬಿಟ್ಟುಹೋದ ಗುರುತು ಇದಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಮಾರ್ಸ್ ಮಿಥೇನ್
2004 ಕ್ಕಿಂತಲೂ ಮೊದಲು, ಮೂರು ಸ್ವತಂತ್ರ ಗುಂಪುಗಳು ಮಂಗಳನ ವಾತಾವರಣದಲ್ಲಿ ಹೆಚ್ಚು ಪ್ರಮಾಣದ ಮಿಥೇನ್ ಇರುವುದಾಗಿ ವರದಿ ಮಾಡಿದ್ದಾರೆ. ಮೂಲಗಳ ಪ್ರಕಾರ ಜೀವ ಇರುವ ವಸ್ತುಗಳು ಮಾತ್ರವೇ ಮಿಥೇನ್ ಅನ್ನು ನಿರ್ಮಾಣ ಮಾಡಬಹುದಾಗಿದೆ.


Click it and Unblock the Notifications








