Home
ಸುದ್ದಿಜಾಲ

ನಿಮ್ಮ ಫೋನ್‌ ಹ್ಯಾಕ್ ಆಗಿದೆ ಎಂದು ತಿಳಿಸುವ ಚಿಹ್ನೆಗಳಿವು! ತಕ್ಷಣವೇ ಎಚ್ಚೆತ್ತುಕೊಳ್ಳಿ

ಸ್ಮಾರ್ಟ್‌ಫೋನ್‌ಗಳು (smartphone) ಬಳಕೆದಾರರಿಗೆ ಅಗತ್ಯ ಸೇವೆಗಳನ್ನು ಪಡೆಯಲು ಅನುಕೂಲ ಮಾಡಿಕೊಡುತ್ತಿವೆ. ಅದರಲ್ಲೂ ವ್ಯಕ್ತಿ ಬಳಕೆ ಮಾಡುವ ಸ್ಮಾರ್ಟ್‌ಫೋನ್‌ ಮೂಲಕ ಆತನ ಲಕ್ಷಣವನ್ನೇ ಅಳೆಯುವ ಕಾಲ ಬಂದಾಗಿದೆ. ಸ್ಮಾರ್ಟ್‌ಫೋನ್‌ ನ ಬಳಕೆ ಎಷ್ಟು ಪ್ರಯೋಜನಕಾರಿಯೋ ಅದರ ಅತಿಯಾದ ಬಳಕೆ ಹಾಗೂ ಫೋನ್‌ನಲ್ಲಿ ಎಲ್ಲಾ ವೈಯಕ್ತಿಕ ಮಾಹಿತಿ ಇರಿಸುವುದು ಅಷ್ಟೇ ಡೇಂಜರ್‌.

ಹೌದು, ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ಅವಿಭಾಜ್ಯ ಅಂಗದಂತೆ ಆಗಿಬಿಟ್ಟಿವೆ. ಏನು ಬೇಕಾದರು ಬಿಟ್ಟು ಇರುತ್ತೇನೆ ಆದರೆ ಸ್ಮಾರ್ಟ್‌ಫೋನ್‌ ಬಿಟ್ಟು ಇರುವುದಿಲ್ಲ ಎನ್ನುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಅದರಂತೆ ಮೋಸಗಾರರು ಸಹ ನಮ್ಮ ನಡುವೆಯೇ ಇದ್ದಾರೆ ಎಂಬುದು ನಿಮಗೆ ತಿಳಿದಿರಲಿ. ಇವರು ನಿಮ್ಮ ಅರಿವಿಗೆ ಬಾರದಂತೆ ನಿಮ್ಮ ಫೋನ್‌ ಅನ್ನು ಹ್ಯಾಕ್‌ ಮಾಡಬಹುದು, ಈ ಮೂಲಕ ನಿಮ್ಮ ಖಾಸಗಿ ಮಾಹಿತಿ ಪಡೆದುಕೊಳ್ಳಬಹುದು ಹಾಗೂ ಹಣಕಾಸಿಗೆ ಸಂಬಂಧಿಸಿದಂತೆ ವಂಚನೆ ಮಾಡಬಹುದು. ಹಾಗಿದ್ರೆ, ನಿಮ್ಮ ಫೋನ್‌ ಹ್ಯಾಕ್‌ ಆಗಿದೆ ಎಂದು ಪತ್ತೆ ಮಾಡುವುದು ಹೇಗೆ ಎಂಬುದನ್ನು ನೋಡೋಣ ಬನ್ನಿ.

ನಿಮ್ಮ ಫೋನ್‌ ಹ್ಯಾಕ್ ಆಗಿದೆ ಎಂದು ತಿಳಿಸುವ ಚಿಹ್ನೆಗಳಿವು!

ಸಂಭವನೀಯ ಹ್ಯಾಕಿಂಗ್‌ ಚಿಹ್ನೆಗಳೇನು?:
ಹಸಿರು ಲೈಟ್‌ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇನಲ್ಲಿ ಕಾಣಿಸಿಕೊಂಡರೆ ಕ್ಯಾಮರಾ ಅಥವಾ ಮೈಕ್ರೊಫೋನ್ ಗೆ ಯಾರೋ ಅನಾಮಿಕರು ಎಂಟ್ರಿ ಪಡೆದಿದ್ದಾರೆ ಎಂದು ಊಹಿಸಬಹುದು. ಇದು ಸಂಭವನೀಯ ಹ್ಯಾಕಿಂಗ್ ಚಟುವಟಿಕೆಯನ್ನು ಸೂಚಿಸುತ್ತದೆ. ಇದರೊಂದಿಗೆ ವಾಯ್ಸ್‌ ಮೆಸೆಜ್‌ಗಳನ್ನು ರೆಕಾರ್ಡ್ ತಂತಾನೆ ಆಗುವುದು ಅಥವಾ ಕ್ಯಾಮೆರಾ ಆನ್‌ ಆಗುವುದು ಹಾಗೂ ಲೈಟ್‌ ಸಹ ತಂತಾನೆ ಆನ್‌ ಅಗುತ್ತಿದ್ದರೆ ಇದೂ ಸಹ ಫೋನ್‌ ಹ್ಯಾಕಿಂಗ್‌ ಆಗಿದೆ ಎಂಬ ಮುನ್ಸೂಚನೆಯಾಗಿದೆ.

ಅದರಲ್ಲೂ ನಿಮ್ಮ ಫೋನ್‌ನಲ್ಲಿನ ಲೈಟ್‌ ಆನ್ ಆಗುತ್ತಲೇ ಇದ್ದರೆ, ಯಾರೋ ನಿಮ್ಮ ಕ್ಯಾಮರಾವನ್ನು ನಿರಂತರವಾಗಿ ಬಳಕೆ ಮಾಡಲು ಮುಂದಾಗುತ್ತಿದ್ದಾರೆ ಎಂದರ್ಥ ಅಥವಾ ನಿಮ್ಮ ಡಿಸ್‌ಪ್ಲೇ ಚಟುವಟಿಕೆಗಳನ್ನು ರೆಕಾರ್ಡ್ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬಹುದು. ಇದು ಸಂಭವನೀಯ ಭದ್ರತಾ ಉಲ್ಲಂಘನೆಯನ್ನು ಸೂಚಿಸುತ್ತದೆ ಎಂಬುದು ನಿಮಗೆ ತಿಳಿದಿರಲಿ.

ಅದರಲ್ಲೂ ನೀವು ಹೆಚ್ಚು ಬಳಸದೇ ಇದ್ದರೂ ಸಹ ನಿಮ್ಮ ಫೋನ್‌ನ ಬ್ಯಾಟರಿ ಬಾಳಿಕೆ ಹಠಾತ್ತನೆ ಗಮನಾರ್ಹವಾಗಿ ಕಡಿಮೆಯಾದರೆ, ಇದು ದುರುದ್ದೇಶಪೂರಿತ ಆಪ್‌ಗಳು ಅಥವಾ ಪ್ರಕ್ರಿಯೆಗಳು ಹಿನ್ನೆಲೆಯಲ್ಲಿ ರನ್ ಆಗುತ್ತಿರುವ ಸಂಕೇತವಾಗಿರಬಹುದು. ಇದರೊಂದಿಗೆ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಡೇಟಾ ಬಳಕೆಯಲ್ಲಿ ಹಠಾತ್ ಹೆಚ್ಚಳವನ್ನು ನೀವು ಗಮನಿಸಿದರೆ, ನಿಮ್ಮ ಫೋನ್ ಅನಧಿಕೃತ ಮೂಲಗಳಿಗೆ ಡೇಟಾವನ್ನು ಕಳುಹಿಸುತ್ತಿದೆ ಎಂದು ಇದು ಸೂಚಿಸುತ್ತದೆ.

ಹಾಗೆಯೇ ನಿಮ್ಮ ಫೋನ್ ಗಮನಾರ್ಹವಾಗಿ ನಿಧಾನವಾಗಿದ್ದರೆ, ಅಥವಾ ನಿಮ್ಮ ಆಜ್ಞೆಗಳಿಗೆ ಪ್ರತಿಕ್ರಿಯಿಸುವಲ್ಲಿ ವಿಳಂಬವಾದರೆ ಇದು ಮಾಲ್‌ವೇರ್ ಸಮಸ್ಯೆಗೆ ಗುರಿಯಾಗಿದೆ ಎಂದುಕೊಳ್ಳಬಹುದು. ಮತ್ತು ನಿರಂತರ ಪಾಪ್-ಅಪ್ ಜಾಹೀರಾತುಗಳು ಅಥವಾ ನೋಟಿಫಿಕೇಶನ್‌ಗಳು, ವಿಶೇಷವಾಗಿ ನೀವು ಯಾವುದೇ ಆಪ್‌ ಅನ್ನು ಬಳಕೆ ಮಾಡಿದೆ ಇದ್ದರು ಜಾಹೀರಾತು ಕಾಣಿಸಿಕೊಂಡರೆ ಮಾಲ್‌ವೇರ್ ಅಥವಾ ಆಯ್ಡ್‌ವೇರ್ ನಿಮ್ಮ ಫೋನ್‌ಮೇಲೆ ದಾಳಿ ಮಾಡಿದೆ ಎಂದುಕೊಳ್ಳಬಹುದಾಗಿದೆ.

ಪ್ರಮುಖವಾಗಿ ನಿಮ್ಮ ಫೋನ್‌ನ ಸೆಟ್ಟಿಂಗ್‌ಗಳಾದ ವೈ-ಫೈ, ಬ್ಲೂಟೂತ್ ಅಥವಾ ಲೊಕೇಶನ್‌ ಸೇವೆಗಳನ್ನು ನಿಮ್ಮ ಇನ್‌ಪುಟ್ ಇಲ್ಲದೆ ಆನ್ ಅಥವಾ ಆಫ್ ಮಾಡಲಾಗುತ್ತಿದ್ದರೆ, ಅದು ಹ್ಯಾಕ್‌ನ ಸಂಕೇತವಾಗಿರಬಹುದು. ಅದೆಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಫೋನ್ ಸ್ಲೀಪ್ ಮೋಡ್‌ನಲ್ಲಿರುವಾಗಲೂ ಡೇಟಾ ಖಾಲಿಯಾಗುತ್ತಿದ್ದರೆ, ಬ್ಯಾಟರಿ ಸಾಮರ್ಥ್ಯ ಕಡಿಮೆ ಆಗುತ್ತಿದ್ದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ.

ದುರ್ಬಲ ಭದ್ರತೆ ಅಥವಾ ಅಪ್‌ಡೇಟ್‌ಗಳ ಕೊರತೆಯಿರುವ ಕೆಲವು ಆಪ್‌ಗಳು ಹ್ಯಾಕರ್‌ಗಳಿಗೆ ಸ್ಮಾರ್ಟ್‌ಫೋನ್‌ನ ಕ್ಯಾಮರಾ ಮತ್ತು ಮೈಕ್ರೊಫೋನ್ ವಿಭಾಗಕ್ಕೆ ಸುಲಭವಾಗಿ ಎಂಟ್ರಿ ನೀಡಲು ಸಹಕರಿಸುತ್ತವೆ ಆದ್ದರಿಂದ ನಿರಂತರವಾಗಿ ಬೆಳಗುವ ಲೈಟ್‌ ಅಥವಾ ಕ್ಷಿಪ್ರ ಬ್ಯಾಟರಿ ಡಿಸ್ಚಾರ್ಜ್‌ನಂತಹ ಅಸಾಮಾನ್ಯ ಚಿಹ್ನೆಗಳ ಬಗ್ಗೆ ಸದಾ ಎಚ್ಚರವಾಗಿರುವುದು ಮುಖ್ಯ.

ನಿಮ್ಮ ಫೋನ್‌ ಹ್ಯಾಕ್ ಆಗಿದೆ ಎಂದು ತಿಳಿಸುವ ಚಿಹ್ನೆಗಳಿವು!

ಇದಕ್ಕಾಗಿ ನಿಮ್ಮ ಫೋನ್‌ನಲ್ಲಿ ಇರುವ ಆಪ್‌ ಅನ್ನು ನಿಯಮಿತವಾಗಿ ನವೀಕರಿಸಿ ಮತ್ತು ಸ್ಮಾರ್ಟ್‌ಫೋನ್ ಹ್ಯಾಕಿಂಗ್ ಅಪಾಯವನ್ನು ಕಡಿಮೆ ಮಾಡಲು ಬಲವಾದ ಭದ್ರತಾ ಕ್ರಮಗಳನ್ನು ಬಳಕೆ ಮಾಡಿಕೊಳ್ಳಿ. ಈ ಮೂಲ ನಿಮ್ಮ ವೈಯಕ್ತಿಕ ಮಾಹಿತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯಾವಾಗಲೂ ಜಾಗರೂಕರಾಗಿರಿ. ಇದರಿಂದ ಮುಂದಾಗುವ ಸಮಸ್ಯೆಗಳಿಂದ ಪಾರಾಗಬಹುದು.
Best Mobiles in India

English summary
Smartphones have become an integral part of users. There are so many people among us who say that they will leave everything but never leave their smartphone. Likewise, know that there are also deceivers among us. They can hack your phone without your knowledge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+