Home
ಸುದ್ದಿಜಾಲ

ಟ್ರಾಯ್‌ನಿಂದ ಹೊಸ MNP ರೂಲ್ಸ್‌!..ಕೇವಲ 48 ಗಂಟೆಯಲ್ಲಿ ಸಿಮ್‌ ಪೋರ್ಟ್‌!

ಟ್ರಾಯ್‌ (ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ) ಸಂಸ್ಥೆಯು ಸಿಮ್‌ ಪೋರ್ಟೆಬಲ್‌ (MNP ) ಹೊಸ ನಿಯಮವನ್ನು ಘೋಷಿಸಿದ್ದು, ಈ ನಿಯಮದ ಪ್ರಕಾರ ಇನ್ನು ಒಂದು ಟೆಲಿಕಾಂ ಸಂಸ್ಥೆಯಿಂದ ಇನ್ನೊಂದು ಟೆಲಿಕಾಂ ಸಂಸ್ಥೆಗೆ ಸಿಮ್‌ ಪೋರ್ಟೆಬಲ್‌ ಮಾಡಲು ಎರಡು ದಿನಗಳು ಮಾತ್ರ ಸಮಯ ತೆಗೆದುಕೊಳ್ಳಲಾಗುತ್ತದೆ ಹಾಗೂ ಈ ಹೊಸ ನಿಯಮವು ಇದೇ ಡಿಸೆಂಬರ್ 16 ರಿಂದ ಜಾರಿಯಾಗಲಿದೆ ಎಂದು ಟ್ರಾಯ್‌ ತಿಳಿಸಿದೆ.

ಟೆಲಿಕಾಂ ಆಪರೇಟರ್‌

ಹೌದು, ಚಂದಾದಾರರು ಒಂದು ಟೆಲಿಕಾಂ ಆಪರೇಟರ್‌ನಿಂದ ಇನ್ನೊಂದಕ್ಕೆ ಸಿಮ್ ಅನ್ನು ಪೋರ್ಟ್ ಮಾಡಲು ಕನಿಷ್ಠ ಏಳು ದಿನಗಳು ಬೇಕಾಗುತ್ತದೆ. ಆದಾಗ್ಯೂ, ಚಂದಾದಾರರಿಗೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಮತ್ತು ವೇಗವಾಗಿ ಮಾಡಲು ಎಂಎನ್‌ಪಿ ಸೇವಾ ಪೂರೈಕೆದಾರರು ಮತ್ತು ಟೆಲಿಕಾಂ ಆಪರೇಟರ್‌ಗಳು ಅಗತ್ಯವಿರುವ ಈ ಸಮಯವನ್ನು ಕಡಿಮೆ ಮಾಡಲು ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ (ಎಂಎನ್‌ಪಿ) ಗೆ ಸಂಬಂಧಿಸಿದ ಹೊಸ ನಿಯಮವನ್ನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಸೂಚಿಸಿದೆ.

ಡಿಸೆಂಬರ್‌ನಲ್ಲಿ ಹೊಸ ನಿಯಮ ಜಾರಿ

ಡಿಸೆಂಬರ್‌ನಲ್ಲಿ ಹೊಸ ನಿಯಮ ಜಾರಿ

ಟ್ರಾಯ್‌ ಹೊಸ ನಿಯಮವನ್ನು ಇದೇ ಡಿಸೆಂಬರ್‌ 16ರಂದು ಜಾರಿ ಮಾಡಲಿದ್ದು, ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ-, 2018 (ಏಳನೇ ತಿದ್ದುಪಡಿ) ನಿಯಮಗಳು ಅನುಷ್ಠಾನಕ್ಕೆ ಸಮಯವನ್ನು ವಿಸ್ತರಿಸಿದೆ. ಇದೇ ನವೆಂಬರ್ 11, 2019 ರಿಂದ ಡಿಸೆಂಬರ್ 16 ರವರೆಗೆ ಅಪೇಕ್ಷಿತ ಪರೀಕ್ಷೆಗಳಿಗಾಗಿ ಸಮಯಾವಕಾಶ ನಿಗದಿಮಾಡಿದೆ. ಆನಂತರ ವೇಗವಾಗಿ MNPಸಿಮ್‌ ಪೋರ್ಟ್ ಕೆಲಸಗಳು ನಡೆಯಲಿವೆ.

ಹೊಸ ನಿಯಮದ ಪ್ರಯೋಜನಗಳೆನು

ಹೊಸ ನಿಯಮದ ಪ್ರಯೋಜನಗಳೆನು

ಟೆಲಿಕಾಂ ವಲಯದಲ್ಲಿ ಎಮ್‌ಎನ್‌ಪಿ ಸೌಲಭ್ಯವು ಚಂದಾದಾರರಿಗೆ ಉಪಯುಕ್ತವಾಗಿದ್ದು, ಒಂದು ಆಪರೇಟರ್‌ನಿಂದ ಇನ್ನೊಂದು ಟೆಲಿಕಾಂ ಆಪರೇಟರ್‌ಗೆ ಬದಲಾಯಿಸಬಹುದಾಗಿದೆ. ಈ ಎಮ್‌ಎನ್‌ಪಿ ಬದಲಾವಣೆಯು ಯಶಸ್ವಿಯಾಗಲು ಸುಮಾರು ಒಂದು ವಾರ ಆಗುತ್ತದೆ. ಆದ್ರೆ ಹೊಸ ನಿಯಮ ಜಾರಿ ನಂತರ ಎಮ್‌ಎನ್‌ಪಿ ಸಿಮ್‌ ಫೋರ್ಟ್ ಕೆವಲ ಎರಡು ದಿನಗಳಲ್ಲಿ ಆಗಲಿದೆ. ಇಂಟರ್ ಸರ್ಕಲ್ ಎಂಎನ್‌ಪಿಗೆ, ಅಂದರೆ ನಿಮ್ಮ ಸಿಮ್ ಅನ್ನು ಎರಡು ವಲಯಗಳ ನಡುವೆ ಪೋರ್ಟ್ ಮಾಡಲು, ಚಂದಾದಾರರು ಕೇವಲ 5 ದಿನಗಳು ಕಾಯಬೇಕಾಗುತ್ತದೆ.

ಟ್ರಾಯ್‌

ಟ್ರಾಯ್‌ ಸಂಸ್ಥೆಯು ಈ ಹಿಂದೆಯೇ ಈ ನಿಯಮವನ್ನು ಅನುಷ್ಠಾನ ಮಾಡಲು ಯೋಜಿಸಿತ್ತು. ಆದ್ರೆ ಇದೀಗ ಡಿಸೆಂಬರ್‌ 16ರಿಂದ ಹೊಸ ನಿಯಮ ಜಾರಿಯಾಗುವುದಾಗಿ ತಿಳಿಸಿದೆ. ಹೊಸ ಎಮ್‌ಎನ್‌ಪಿ ನಿಯಮದ ಪ್ರಕಾರ ಚಂದಾದಾರರು ಸಿಮ್‌ ಪೋರ್ಟ್‌ ಕಾರ್ಯವು ಎರಡು ದಿನಗಳಲ್ಲಿ ಯಶಸ್ವಿ ಆಗಲಿದೆ.

Best Mobiles in India

English summary
Trai has issued a new notification finalising the date for the implementation of the new MNP rules. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+