Home
ಸುದ್ದಿಜಾಲ

ಒಮ್ಮೆ ರೀಚಾರ್ಜ್‌ ಮಾಡಿದ್ರೆ 6 ತಿಂಗಳ ವರೆಗೆ ಚಿಂತೆ ಮಾಡಬೇಕಿಲ್ಲ! ಯಾವುದು ಈ ಪ್ಲ್ಯಾನ್‌?

ಟೆಲಿಕಾಂ ವಲಯದಲ್ಲಿ ಏರ್‌ಟೆಲ್‌, ಜಿಯೋ (Airtel, Jio) ಸಮಾನವಾಗಿ ಸ್ಪರ್ಧಿಸಿದ್ರೆ ವಿ ಟೆಲಿಕಾಂ (vodafone idea) ತನ್ನದೇ ಆದ ರೀತಿಯಲ್ಲಿ ವಿವಿಧ ಪ್ರಯೋಜನಗಳನ್ನು ನೀಡುವ ಮೂಲಕ ಸಾಕಷ್ಟು ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಈ ನಡುವೆ ವಿ ಟೆಲಿಕಾಂ (Vi Telecom) ದೀರ್ಘ ದಿನದ ಮಾನ್ಯತೆ ಇರುವ ಪ್ಲ್ಯಾನ್‌ ನೀಡುವ ಇತರೆ ಟೆಲಿಕಾಂಗಳಿಗಿಂತ ವಿಭಿನ್ನ ಎನಿಸಿಕೊಂಡಿದೆ.

ಹೌದು, ಭಾರತದಲ್ಲಿ ಸಾಕಷ್ಟು ಜನರು ವಿ ಟೆಲಿಕಾಂ ಅನ್ನು ಸೆಕೆಂಡರಿ ಸಿಮ್‌ ಆಗಿ ಬಳಕೆ ಮಾಡುತ್ತಾರೆ. ಜೊತೆಗೆ ಇನ್ನೂ ಹಲವು ಇದನ್ನು ಪ್ರಮುಖ ಸಿಮ್‌ ಆಗಿ ಬಳಕೆ ಮಾಡುತ್ತಿದ್ದು, ಇವರಿಗೆಲ್ಲಾ ಅನುಕೂಲ ಆಗುವ ವಿವಿಧ ರೀಚಾರ್ಜ್‌ ಪ್ಲ್ಯಾನ್‌ ಅನ್ನು ಪರಿಚಯಿಸಿದೆ. ಅದರಲ್ಲೂ, ಜಿಯೋ ಕಡಿಮೆ ವೆಚ್ಚದ ಮತ್ತು ಹೆಚ್ಚು ಲಾಭದಾಯಕ ಕಂಪನಿಯಾಗಿದೆ ಎಂದು ಹೇಳಿಕೊಂಡರೂ ಸಹ ವೊಡಾಫೋನ್-ಐಡಿಯಾ ಜಿಯೋ ಸಹ ನೀಡಲು ಸಾಧ್ಯವಾಗದ ಅನೇಕ ವಿಶೇಷ ಪ್ಲ್ಯಾನ್‌ಗಳನ್ನು ನೀಡುತ್ತಿದೆ.

ಒಮ್ಮೆ ರೀಚಾರ್ಜ್‌ ಮಾಡಿದ್ರೆ 6 ತಿಂಗಳ ವರೆಗೆ ಚಿಂತೆ ಮಾಡಬೇಕಿಲ್ಲ!

ವಿ ಪ್ರಿಪೇಯ್ಡ್ ರೀಚಾರ್ಜ್ ಯೋಜನೆ : ವೊಡಾಫೋನ್-ಐಡಿಯಾ ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿದ್ದು, ಇದರ ಆರು ತಿಂಗಳ ಮಾನ್ಯತೆ ಇರುವ ಪ್ಲ್ಯಾನ್‌ ಬಹಳ ಸದ್ದು ಮಾಡುತ್ತಿದೆ. ಇದರ ಬೆಲೆ 949ರೂ.ಗಳಾಗಿದ್ದು, ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಸೀಮಿತ ಡೇಟಾ ಪ್ರಯೋಜನ, ವಾಯ್ಸ್‌ ಕರೆ ಸೌಲಭ್ಯ ಮತ್ತು ಎಸ್‌ಎಮ್‌ಎಸ್‌ ಪ್ರಯೋಜನಗಳಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.

ಈ ವಿಶೇಷ ಪ್ಲ್ಯಾನ್‌ ನಿಮಗೆ ಹೆಚ್ಚಿನ ಡೇಟಾ ನೀಡುವುದಿಲ್ಲ. ಬದಲಾಗಿ ಇದರಲ್ಲಿ ನೀವು 12GB ಡೇಟಾವನ್ನು ಮಾತ್ರ ಬಳಕೆ ಮಾಡಬಹುದಾಗಿದೆ. ನೀವು ಈ ಡೇಟಾವನ್ನು ಒಂದೇ ದಿನದಲ್ಲಿ ಅಥವಾ ಸಂಪೂರ್ಣ ಮಾನ್ಯತೆಯ ಅವಧಿಗೆ ಬಳಕೆ ಮಾಡಬಹುದಾಗಿದೆ. ಜೊತೆಗೆ ಕರೆ ಹಾಗೂ ಮೆಸೆಜ್‌ ಹೊರತುಪಡಿಸಿ ಈ ಯೋಜನೆಯಲ್ಲಿ ಯಾವುದೇ ಹೆಚ್ಚುವರಿ ಪ್ರಯೋಜನಗಳಿಲ್ಲ. ಸಾಮಾನ್ಯವಾಗಿ, ವಿ ಹೀರೋ ಅನಿಯಮಿತ ಪ್ರಯೋಜನಗಳೊಂದಿಗೆ 299 ರೂ. ರಿಂದ ಪ್ರಾರಂಭವಾಗುವ ಪ್ರಿಪೇಯ್ಡ್ ಪ್ಲ್ಯಾನ್‌ಗಳೊಂದಿಗೆ ಬರುತ್ತದೆ. ಆದರೆ, ಈ ಪ್ಲ್ಯಾನ್‌ನಲ್ಲಿ ಅದ್ಯಾವುದೂ ಸಹ ಇಲ್ಲ.ಈ ಕಾರಣಕ್ಕೆ ಸೆಕೆಂಡರಿ ಸಿಮ್‌ ಆಗಿ ಬಳಕೆ ಮಾಡುವವರಿಗೆ ಇದು ಅದ್ಭುತ ಯೋಜನೆಯಾಗಿದೆ.

ಒಮ್ಮೆ ರೀಚಾರ್ಜ್‌ ಮಾಡಿದ್ರೆ 6 ತಿಂಗಳ ವರೆಗೆ ಚಿಂತೆ ಮಾಡಬೇಕಿಲ್ಲ!

ಈ ಪ್ಲ್ಯಾನ್‌ಗೆ ಪೂರಕವಾಗಿ ವಿ ನೀಡುವ ಹಲವು ಡೇಟಾ ವೋಚರ್‌ಗಳು 17 ರೂ.ರಿಂದ ಪ್ರಾರಂಭವಾಗುತ್ತವೆ. ಈ ಪ್ಲ್ಯಾನ್‌ನೊಂದಿಗೆ ಯಾವುದೇ ಉಚಿತ 5G ಕೊಡುಗೆ ಸಹ ಇರುವುದಿಲ್ಲ. ವಿಷಯ ಏನೆಂದರೆ ಇತರ ಖಾಸಗಿ ಟೆಲಿಕಾಂಗಳಲ್ಲಿ ನೀವು ಪ್ರಿಪೇಯ್ಡ್ ಪ್ಲ್ಯಾನ್‌ನಲ್ಲಿ ಇಷ್ಟು ಹಣವನ್ನು ಖರ್ಚು ಮಾಡಿದ್ದೇ ಆದರೆ ಅನಿಯಮಿತ 5G ಡೇಟಾ ಪಡೆಯಬಹುದಾಗಿದೆ. ಆದರೆ ವಿ ಇನ್ನೂ 5G ಸೇವೆ ನೀಡಿಲ್ಲ ಎಂಬುದು ನಿಮ್ಮ ಗಮನಕ್ಕೆ ಇರಲಿ.

ಇನ್ನು ದೇಶದ ಆಯ್ದ ಪ್ರದೇಶಗಳಲ್ಲಿ ವಿ ತನ್ನ 5G ಸೇವೆಯನ್ನು ಹೊರತರುವ ನಿರೀಕ್ಷೆಯಿದೆ. ವೊಡಾಫೋನ್ ಐಡಿಯಾ ದೆಹಲಿ ಮತ್ತು ಪುಣೆಯಲ್ಲಿ ಲೈವ್ 5G ಕ್ಲಸ್ಟರ್‌ಗಳನ್ನು ಈಗಾಗಲೇ ಹೊಂದಿದೆ. ಆದರೆ, ಆಂತರಿಕ ಪರೀಕ್ಷೆಗಾಗಿ ಮಾತ್ರ ಇದನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಏರ್‌ಟೆಲ್ ಮತ್ತು ಜಿಯೋದಂತಹ ಕಂಪನಿಗಳು 250ರೂ. ಗಿಂತ ಹೆಚ್ಚು ರೀಚಾರ್ಜ್ ಮಾಡುವ ಬಳಕೆದಾರರಿಗೆ ಉಚಿತ 5G ಪ್ರಯೋಜನಗಳನ್ನು ನೀಡುತ್ತಿದ್ದು, ಈ ಮೂಲಕ ಸಾಕಷ್ಟು ಗ್ರಾಹಕರನ್ನು ಸೆಳೆಯುತ್ತಿವೆ.

ಇನ್ನು ಇದೇ ರೀತಿಯ ಪ್ಲ್ಯಾನ್‌ 1799ರೂ.ಗಳಲ್ಲಿ ಲಭ್ಯ ಇದೆ. ಇದರಲ್ಲೂ ಸಹ ಅನಿಯಮಿತ ಕರೆ ಸೌಲಭ್ಯ ಹಾಗೂ ನಿತ್ಯವೂ 100 ಎಸ್‌ಎಮ್‌ಎಸ್‌ ಆಯ್ಕೆ ಸೇರಿದಂತೆ ಸೀಮಿತ ಪ್ರಯೋಜನಗಳು ಸಿಗಲಿವೆ. ಅಂದರೆ ನಿಮಗೆ ಈ ಪ್ಲ್ಯಾನ್‌ನಲ್ಲಿ ಒಟ್ಟಾರೆ 24GB ಡೇಟಾ ಸಿಗಲಿದೆ. ಇದು 365 ದಿನದ ಮಾನ್ಯತೆಯೊಂದಿಗೆ ಬರಲಿದ್ದು, ಇದರೊಂದಿಗೆ ವಿ ಮೂವಿಸ್ ಮತ್ತು ಟಿವಿ ಬೇಸಿಕ್‌ಗೆ ಎಂಟ್ರಿ ಪಡೆದುಕೊಳ್ಳಬಹುದು. ಹಾಗೆಯೇ ಡೇಟಾ ಟಾರಿಫ್‌ ಮುಗಿದರೆ 50p/MB ನಲ್ಲಿ ಡೇಟಾ ಬಳಕೆ ಮಾಡಬಹುದಾಗಿದೆ.

ಒಮ್ಮೆ ರೀಚಾರ್ಜ್‌ ಮಾಡಿದ್ರೆ 6 ತಿಂಗಳ ವರೆಗೆ ಚಿಂತೆ ಮಾಡಬೇಕಿಲ್ಲ!

ಆದರೆ ನಿಮಗೆ ನಿತ್ಯವೂ ಡೇಟಾ ಬೇಕು ಎಂದರೆ 2899ರೂ.ಗಳ ಪ್ಲ್ಯಾನ್‌ ಆಯ್ಕೆ ಮಾಡಿಕೊಳ್ಳಬಹುದು ಇದರಲ್ಲಿ ನೀವು ಹೆಚ್ಚುವರಿ 50 GB ಡೇಟಾ ಪ್ರಯೋಜನದೊಂದಿಗೆ ನಿತ್ಯವೂ 1.5gb ಸೌಲಭ್ಯ ಸಿಗಲಿದೆ. ಇದರೊಂದಿಗೆ ನಿತ್ಯವೂ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಉಳಿದಂತೆ ವಿ ಸಿನಿಮಾ ಮತ್ತು ಟಿವಿ ಕ್ಲಾಸಿಕ್‌ಗೆ ಪ್ರವೇಶ ಪಡೆಯಬಹುದಾಗಿದ್ದು, 12am ನಿಂದ 6am ವರೆಗೆ ಅನಿಯಮಿತ ರಾತ್ರಿ ಡೇಟಾವನ್ನು ಪಡೆಯಬಹುದಾಗಿದೆ.

Best Mobiles in India

English summary
Vodafone-Idea is India's third largest telecom operator and its six-month validity plan is making a lot of noise. It is priced at Rs 949.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+