ಸ್ಕಲ್‌ಕ್ಯಾಂಡಿಯಿಂದ ಭಾರತದಲ್ಲಿ ಹೊಸ ಹೆಡ್‌ಫೋನ್‌ ಅನಾವರಣ!

|

ಪ್ರತಿಷ್ಠಿತ ಹೆಡ್‌ಫೋನ್‌ಗಳ ಸ್ಕಲ್‌ಕ್ಯಾಂಡಿ ಬ್ರ್ಯಾಂಡ್‌ ಸಹ ಪೈಕಿ ಒಂದಾಗಿದೆ. ಸ್ಕಲ್‌ಕ್ಯಾಂಡಿ ಕಂಪನಿಯು ಈಗಾಗಲೇ ಭಿನ್ನ ಶ್ರೇಣಿಯಲ್ಲಿ ಹಲವು ಹೆಡ್‌ಫೋನ್‌ ಮಾಡೆಲ್‌ಗಳನ್ನು ಗ್ರಾಹಕರಿಗೆ ಪರಿಚಯಿಸಿ ಸೈ ಅನಿಸಿಕೊಂಡಿದೆ. ಇದೀಗ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ನೂತನವಾಗಿ Crusher Evo ಹೆಡ್‌ಫೋನ್‌ ಮಾಡೆಲ್‌ ಅನಾವರಣ ಮಾಡಿದ್ದು, ಮ್ಯೂಸಿಕ್ ಪ್ರಿಯರ ಗಮನ ಸೆಳೆದಿದೆ.

ಸ್ಕಲ್‌ಕ್ಯಾಂಡಿ

ಹೌದು, ಸ್ಕಲ್‌ಕ್ಯಾಂಡಿ ಕಂಪನಿಯು ಕ್ರಶರ್ Evo ಹೆಡ್‌ಫೋನ್ ಪರಿಚಯಿಸಿದ್ದು, ಈ ಡಿವೈಸ್‌ ಅತ್ಯುತ್ತಮ ಆಡಿಯೊ ವ್ಯವಸ್ಥೆಯನ್ನು ಒಳಗೊಂಡಿದೆ. ಹಾಗೆಯೇ ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ಪಡೆದಿರುವ ಈ ಡಿವೈಸ್‌ ಕೇಳುಗರಿಗೆ ಹಿಂದಿಗಿಂತಲೂ ಸುಧಾರಿತ ಸೌಂಡ್‌ ಅನುಭವವನ್ನು ಒದಗಿಸಲಿದೆ ಎನ್ನಲಾಗಿದೆ. ಇನ್ನುಳಿದಂತೆ ಈ ಡಿವೈಸ್‌ನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಅಂತರ್ನಿರ್ಮಿತ

ಈ ಉತ್ಪನ್ನವು ಅಂತರ್ನಿರ್ಮಿತ ಟೈಲ್ ಫೈಂಡಿಂಗ್ ತಂತ್ರಜ್ಞಾನ ಹೊಂದಿದೆ. ಒಂದು ವೇಳೆ ಬಳಕೆದಾರರು ಎಂದಾದರೂ ಡಿವೈಸ್‌ ಎಲ್ಲಿಯಾದರೂ ಮರೆದರೇ ಅಥವಾ ಕಳೆದುಹೋದರೆ ಅವುಗಳನ್ನು ಸುಲಭವಾಗಿ ಪತ್ತೆಹಚ್ಚಲು ಹೆಡ್‌ಫೋನ್‌ಗಳನ್ನು ರಿಂಗ್ ಮಾಡಬಹುದಾದ ಸೌಲಭ್ಯವನ್ನು ಈ ಡಿವೈಸ್‌ ಹೊಂದಿದೆ. ಹಾಗೆಯೇ ಆಡಯೋ ವೈಯಕ್ತೀಕರಣ ತಂತ್ರಜ್ಞಾನವಾದ ಸ್ಕಲ್‌ಕ್ಯಾಂಡಿಯ ಪೇಟೆಂಟ್ ಸೆನ್ಸರಿ ಹ್ಯಾಪ್ಟಿಕ್ ಬಾಸ್ ಮತ್ತು ಪರ್ಸನಲ್ ಸೌಂಡ್‌ನ ಆಡಿಯೋ ನಲ್ಲಿ ಸುಧಾರಿತ ಆವೃತ್ತಿಯನ್ನು ಹೊಂದಿದೆ.

ದೀರ್ಘಕಾಲೀನ

ಇನ್ನು ಈ ಹೆಡ್‌ಫೋನ್ ದೀರ್ಘಕಾಲೀನ 40 ಗಂಟೆಗಳ ಬ್ಯಾಟರಿ ಬಾಳಿಕೆ ಮತ್ತು ಕ್ಷಿಪ್ರ ಚಾರ್ಜ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಇದು ಕೇವಲ 10 ನಿಮಿಷಗಳ ಚಾರ್ಜ್‌ನಲ್ಲಿ ನಾಲ್ಕು ಗಂಟೆಗಳ ಆಟವನ್ನು ತಲುಪಿಸುವ ಗುರಿಯನ್ನು ಹೊಂದಿದೆ. ಬಳಕೆದಾರರು ಹೆಡ್‌ಫೋನ್ ಅನ್ನು ಸಹ ಮುಟ್ಟದೆ ಕರೆಗಳನ್ನು ತೆಗೆದುಕೊಳ್ಳಬಹುದು, ಟ್ರ್ಯಾಕ್‌ಗಳನ್ನು ಬದಲಾಯಿಸಬಹುದು, ಪರಿಮಾಣವನ್ನು ಸರಿಹೊಂದಿಸಬಹುದು ಮತ್ತು ಆಡಿಯೋ ಅಸಿಸ್ಟಂಟ್‌ (ಗೂಗಲ್, ಸಿರಿ, ಇತ್ಯಾದಿ) ಸಕ್ರಿಯಗೊಳಿಸಬಹುದು.

ಕಂಪನಿಯು

ಸ್ಕಲ್‌ಕ್ಯಾಂಡಿ ಅಪ್ಲಿಕೇಶನ್ ಆಯ್ಕೆ ಇದೆ. ಬಳಕೆದಾರರಿಗೆ ಇದು ಹೆಚ್ಚಿನ ಅನುಕೂಲ ಒದಗಿಸಲಿದೆ. ಕಂಪನಿಯು ಈ ಹೊಸ ಹೆಡ್‌ಫೋನ್ ಅನ್ನು ಭಾರತದಲ್ಲಿ 12,999ರೂ.ಗಳಿಗೆ ಪರಿಚಯಿಸಿದೆ. ಮಾಡಿದೆ.

Most Read Articles
Best Mobiles in India

English summary
The product comes with built-in Tile finding technology that allows users to easily "ring their headphones" to locate them if ever lost.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X