ಸ್ಕಲ್‌ಕ್ಯಾಂಡಿಯಿಂದ ಹೊಸ ನಾಯಿಸ್‌ ಕ್ಯಾನ್ಸಲೇಶನ್ ಇಯರ್‌ಬಡ್ಸ್ ಲಾಂಚ್!

|

ಹೊಸ ಫೋನ್ ಖರೀದಿಸಿದಾಗ ಅದರೊಟ್ಟಿಗೆ ಕೊಡುವ ಹೆಡ್‌ಫೋನ್‌/ಇಯರ್‌ಫೋನಿನಲ್ಲಿ ಮ್ಯೂಸಿಕ್ ಕೇಳುವ ಜಮಾನ ಈಗಿಲ್ಲ ಎನ್ನಬಹುದು. ಏಕೆಂದರೇ ಇಂದಿನ ಬಹುತೇಕ ಸ್ಮಾರ್ಟ್‌ಫೋನ್ ಬಳಕೆದಾರರು ಮ್ಯೂಸಿಕ್ ಕೇಳುವುದಕ್ಕಾಗಿಯೇ ಪ್ರತ್ಯೇಕ ಇಯರ್‌ಫೋನ್‌/ಹೆಡ್‌ಫೋನ್‌ ಖರೀದಿಸುತ್ತಾರೆ. ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ತರಹೇವಾರಿ ಇಯರ್‌ಫೋನ್‌ಗಳು ಲಗ್ಗೆ ಇಡುತ್ತಲೇ ಸಾಗಿವೆ. ಇದೀಗ ಜನಪ್ರಿಯ 'ಸ್ಕಲ್‌ಕ್ಯಾಂಡಿ'"ಆಡಿಯೊ ಡಿವೈಸ್‌ ಸಂಸ್ಥೆ ಹೊಸ ಇಯರ್‌ಬಡ್ಸ್‌ ಬಿಡುಗಡೆ ಮಾಡಿದೆ.

ಸ್ಕಲ್‌ಕ್ಯಾಂಡಿ

ಹೌದು, ಹಲವು ಆಕರ್ಷಕ ಆಡಿಯೊ ಉತ್ಪನ್ನಗಳನ್ನು ಪರಿಚಯಿಸಿರುವ ಸ್ಕಲ್‌ಕ್ಯಾಂಡಿ ಇದೀಗ ಮೇಥಡ್‌(Method ANC) ಇಯರ್‌ಬಡ್ಸ್‌ ಸಾಧನವನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಇಯರ್‌ಬಡ್ಸ್ ಸಾಧನವು ಆಕ್ಟಿವ್‌ ನಾಯಿಸ್‌ ಕ್ಯಾನ್ಸಲೇಶನ್ ಸೌಲಭ್ಯವನ್ನು ಪಡೆದುಕೊಂಡಿದೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಈ ಡಿವೈಸ್‌ ಬೆಲೆಯು 7,999ರೂ.ಗಳಾಗಿದೆ. ಹಾಗಾದರೇ ಸ್ಕಲ್‌ಕ್ಯಾಂಡಿ ಮೇಥಡ್ ಇಯರ್‌ಬಡ್ಸ್‌ ಸಾಧನದ ಫೀಚರ್ಸ್‌ಗಳ ಕುರಿತು ಮುಂದೆ ತಿಳಿಯೋಣ ಬನ್ನಿರಿ.

ರಚನೆ ಮತ್ತು ಸೌಂಡ್‌

ರಚನೆ ಮತ್ತು ಸೌಂಡ್‌

ಸ್ಕಲ್‌ಕ್ಯಾಂಡಿಯ ಹೊಸ ಮೇಥಡ್‌ ಇಯರ್‌ಬಡ್ಸ್‌ ಡಿಸೈನ್ ಆಕರ್ಷಕವಾಗಿದ್ದು, ಇಯರ್‌ಬಡ್ಸ್‌ಗಳೆರಡು ಮ್ಯಾಗ್ನೇಟಿಕ್ ರಚನೆಯನ್ನು ಪಡೆದುಕೊಂಡಿವೆ. ಮುಖ್ಯವಾಗಿ ಈ ಸಾಧನವು ಹಗುರವಾದ ರಚನೆಯನ್ನು ಹೊಂದಿದ್ದು, ಬಳಕೆದಾರರಿಗೆ ಕಂಫರ್ಟ್‌ ಅನಿಸುವ ಡಿಸೈನ್ ಹೊಂದಿದೆ. ಇನ್ನು ಉತ್ತಮ ಸೌಂಡ್‌ ಗಾಗಿ ಆಡಿಯೊ ಡ್ರೈವರ್ಸ್‌ಗಳಿಗೆ ಒತ್ತನ್ನು ನೀಡಲಾಗಿದೆ.

ವಿಶೇಷ ಫೀಚರ್ಸ್‌ ಏನಿವೆ

ವಿಶೇಷ ಫೀಚರ್ಸ್‌ ಏನಿವೆ

ಸ್ಕಲ್‌ಕ್ಯಾಂಡಿಯ ಹೊಸ ಮೇಥಡ್‌ ಇಯರ್‌ಬಡ್ಸ್‌ ಪ್ರಮುಖ ಆಕರ್ಷಣೆಯೇ ANC- ಆಕ್ಟಿವ್‌ ನಾಯಿಸ್‌ ಕ್ಯಾನ್ಸಲೇಶನ್ ಸೌಲಭ್ಯ. ಇದರೊಂದಿಗೆ IPX4 ಸಾಮರ್ಥ್ಯದ ವಾಟರ್‌ ಮತ್ತು ಸ್ವೆಟ್‌ ರೆಸಿಸ್ಟೆನ್ಸ್‌ ಸೌಲಭ್ಯವನ್ನು ಪಡೆದುಕೊಂಡಿದೆ. FitFin ಇಯರ್‌ಜೆಲ್ ಮಾದರಿ ಇದ್ದು, ಕಿವಿಗಳಿಗೆ ಕಂಫರ್ಟ್‌ ಆಗಿ ಫಿಟ್ ಆಗುವ ವ್ಯವಸ್ಥೆಯನ್ನು ಹೊಂದಿದೆ. ಹಾಗೆಯೇ ಬಿಲ್ಟ್‌ಇನ್‌ Tile ಟ್ರಾಕರ್‌ ಇದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಸ್ಕಲ್‌ಕ್ಯಾಂಡಿಯ ಮೇಥಡ್‌(Method ANC) ಇಯರ್‌ಬಡ್ಸ್‌ ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸುಮಾರು ಆರು ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸಲಿದೆ. ಇನ್ನು ಕೆವಲ 10 ನಿಮಿಷದ ಚಾರ್ಜ್ ಸುಮಾರು ಎರಡು ಗಂಟೆಗಳ ಬ್ಯಾಟರಿ ಲೈಫ್‌ ಅನ್ನು ನೀಡುವ ಸಾಮರ್ಥ್ಯ ಹೊಂದಿದ ಎಂದು ಕಂಪನಿಯು ಹೇಳಿಕೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತೀಯ ಮಾರುಕಟ್ಟೆಗೆ ರಿಲೀಸ್‌ ಆಗಿರುವ ಸ್ಕಲ್‌ಕ್ಯಾಂಡಿಯ ಹೊಸ ಮೇಥಡ್‌ ಇಯರ್‌ಬಡ್ಸ್‌ 7,999ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಸಾಧನವನ್ನು ಗ್ರಾಹಕರು ಕ್ರೋಮ್‌ ಮತ್ತು ಅಮೆಜಾನ್ ತಾಣಗಳಲ್ಲಿ ಖರೀದಿಸಬಹುದಾಗಿದೆ. ಹಾಗೆಯೇ ರೀಟೈಲರ್ ಮತ್ತು ಅಧಿಕೃತ ಸ್ಕಲ್‌ಕ್ಯಾಂಡಿ ತಾಣದಲ್ಲಿ ಖರೀದಿಸಬಹುದು.

Most Read Articles
Best Mobiles in India

English summary
Skullcandy Method ANC earbuds is currently available at Skullcandy.in and retailers including Croma and Amazon India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X