ಸ್ಕಲ್‌ಕ್ಯಾಂಡಿಯ ಹೊಸ ವಾಯರ್‌ಲೆಸ್‌ ಇಯರ್‌ಬಡ್ಸ್‌ ಲಾಂಚ್!.ಫೀಚರ್ಸ್‌ ಅಧಿಕ, ಬೆಲೆ?

|

ಸ್ಮಾರ್ಟ್‌ಫೋನ್‌ ಜೊತೆಗೆ ಇಯರ್‌ಫೋನ್ ಬಳಸುವ ಮಂದಿಗೆ ಈಗ ವಾಯರ್‌ಲೆಸ್‌ ಬ್ಲೂಟೂತ್ ಆಧಾರಿತ ಇಯರ್‌ಫೋನ್‌ಗಳ ಮತ್ತು ಇಯರ್‌ಬಡ್ಸ್‌ಗಳ ಹೆಚ್ಚು ಆಕರ್ಷಿಸುತ್ತಿವೆ. ಹೀಗಾಗಿ ಮಾರುಕಟ್ಟೆಯಲ್ಲಿಯೂ ತರಹೇವಾರಿ ವಾಯರ್‌ಲೆಸ್‌ ಟ್ರೂ ಇಯರ್‌ಬಡ್ಸ್‌ಗಳು ಲಭ್ಯವಿದ್ದು, ಆದರೆ ಬ್ಯ್ರಾಂಡೆಂಡ್‌ ಕಂಪನಿಯ ಇಯರ್‌ಬಡ್ಸ್‌ಗಳಿಗೆ ಬೇಡಿಕೆ ಅಧಿಕ. ಆ ಪೈಕಿ ಸ್ಕಲ್‌ಕ್ಯಾಂಡಿ ಆಡಿಯೊ ಕಂಪನಿಯು ಒಂದಾಗಿದ್ದು, ಇದೀಗ ಹೊಸ ವಾಯರ್‌ಲೆಸ್‌ ಇಯರ್‌ಬಡ್ಸ್‌ ಲಾಂಚ್ ಮಾಡಿದೆ.

ಸ್ಕಲ್‌ಕ್ಯಾಂಡಿ SESH

ಹೌದು, ಜನಪ್ರಿಯ ಸ್ಕಲ್‌ಕ್ಯಾಂಡಿ ಕಂಪನಿಯು ಹೊಸದಾಗಿ 'ಸ್ಕಲ್‌ಕ್ಯಾಂಡಿ SESH' ಹೆಸರಿನ ಟ್ರೂಲಿ ವಾಯರ್‌ಲೆಸ್‌ ಬ್ಲೂಟೂತ್ ಇಯರ್‌ಬಡ್ಸ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಬಿಗ್ ಬ್ಯಾಟರಿ ಲೈಫ್, ಕಡಿಮೆ ಬೆಲೆ ಮತ್ತು ಬಣ್ಣಗಳ ಆಯ್ಕೆ ಈ ವಾಯರ್‌ಲೆಸ್‌ ಬ್ಲೂಟೂತ್ ಇಯರ್‌ಬಡ್ಸ್‌ನ ಪ್ರಮುಖ ಕೀ ಹೈಲೈಟ್ಸ್‌ಗಳಾಗಿವೆ. ಹಾಗಾದರೇ 'ಸ್ಕಲ್‌ಕ್ಯಾಂಡಿ SESH' ಟ್ರೂಲಿ ವಾಯರ್‌ಲೆಸ್‌ ಬ್ಲೂಟೂತ್ ಇಯರ್‌ಬಡ್ಸ್‌ ಫೀಚರ್ಸ್‌ಗಳೆನು ಮತ್ತು ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಇಯರ್‌ಬಡ್ಸ್‌ ಫೀಚರ್ಸ್‌ಗಳು

ಇಯರ್‌ಬಡ್ಸ್‌ ಫೀಚರ್ಸ್‌ಗಳು

ಈ ಇಯರ್‌ಬಡ್ಸ್‌ ಡಿವೈಸ್‌ಗಳು ಬ್ಲೂಟೂತ್ 5.0 ಸೌಲಭ್ಯವನ್ನು ಹೊಂದಿದ್ದು, ಸಾಂಗ್, ಸೌಂಡ್, ಪ್ಲೇ ಸೇರಿದಂತೆ ಕ್ವಿಕ್‌ ಮೀಡಿಯಾ ಕಂಟ್ರೋಲ್ ಮಾಡಲು ಒನ್‌ಟಚ್ ಬಟನ್ ಆಯ್ಕೆಯನ್ನು ಹೊಂದಿದೆ. ಹಾಗೆಯೇ ವಾಯಿಸ್‌ ಅಸಿಸ್ಟಂಟ್ ಸೌಲಭ್ಯವನ್ನು ಸಹ ಪಡೆದುಕೊಂಡಿದ್ದು, IP55 ಸಾಮರ್ಥ್ಯದ ಸ್ವೇಟ್‌ ಮತ್ತು ಡಸ್ಟ್‌ ರೆಸಿಸ್ಟಂಟ್‌ ಸೌಲಭ್ಯವನ್ನು ಒಳಗೊಂಡಿದೆ.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ಸ್ಕಲ್‌ಕ್ಯಾಂಡಿ ಕಂಪನಿಯ ಹೊಸ ವಾಯರ್‌ಲೆಸ್‌ ಇಯರ್‌ಬಡ್ಸ್‌ ಅತ್ಯುತ್ತಮ ಬ್ಯಾಟರಿ ಬಾಳಿಕೆ ಒಳಗೊಂಡಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಒಟ್ಟು 10 ಗಂಟೆಗಳ ಬ್ಯಾಟರಿ ಬಾಳಿಕೆ ಹೊಂದಿದೆ. ಇಯರ್‌ಬಡ್ಸ್‌ ಚಾರ್ಜಿಂಗ್ ಕೇಸ್‌ ಸುಮಾರು 7 ಗಂಟೆಗಳ ಚಾರ್ಜಿಂಗ್ ಬೆಂಬಲವನ್ನು ಒದಗಿಸಲಿದೆ. ತನ್ನ ವರ್ಗದಲ್ಲಿಯೇ ಇದು ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್ ಎನ್ನಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಸ್ಕಲ್‌ಕ್ಯಾಂಡಿ SESH ಟ್ರೂಲಿ ವಾಯರ್‌ಲೆಸ್‌ ಬ್ಲೂಟೂತ್ ಇಯರ್‌ಬಡ್ಸ್‌ಗಳ ಇಂಡಿಗೋ, ಡಿಪ್‌ ರೆಡ್ ಮತ್ತು ಫಿಯರ್‌ಲೆಸ್‌ ಬ್ಲ್ಯಾಕ್‌ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ಈ ಡಿವೈಸ್‌ನ ಬೆಲೆಯು 5,999ರೂ.ಗಳು ಆಗಿದ್ದು, ಸ್ಕಲ್‌ಕ್ಯಾಂಡಿಯ ಅಧಿಕೃತ ವೆಬ್‌ತಾಣದ ಮೂಲಕ ಗ್ರಾಹಕರು ಖರೀದಿಸಬಹುದಾಗಿದೆ.

ಸ್ಕಲ್‌ಕ್ಯಾಂಡಿಯ ಇತರೆ ಇಯರ್‌ಬಡ್ಸ್‌

ಸ್ಕಲ್‌ಕ್ಯಾಂಡಿಯ ಇತರೆ ಇಯರ್‌ಬಡ್ಸ್‌

ಸ್ಕಲ್‌ಕ್ಯಾಂಡಿಯು ಭಾರತದಲ್ಲಿ ಎರಡು ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ಗಳನ್ನು ಹೊಂದಿದೆ. ಅವುಗಳು ಒಂದು ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ (Indy truly wireless earbuds) 7,499ರೂ.ಗಳಲ್ಲಿ ದೊರೆಯಲಿದ್ದು, ಹಾಗೆಯೇ ಇನ್ನೊಂದು ( Push truly wireless earbuds ) ಟ್ರೂಲಿ ವಾಯರ್‌ಲೆಸ್‌ ಇಯರ್‌ಬಡ್ಸ್‌ ಬೆಲೆಯು 9,999ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಾಗಲಿದೆ.

Best Mobiles in India

English summary
Skullcandy has introduced new truly wireless Bluetooth earbuds in India. Called Skullcandy SESH. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X