ಎಂಟ್ರಿಯಲ್ಲೇ ಯುವ ಜನರ ಹೃದಯ ಗೆದ್ದ ಬ್ಲೂಟೂತ್ ಸ್ಪೀಕರ್: ಬೆಲೆ ಕೇವಲ 4,999ರೂ.ಮಾತ್ರ!
ಬ್ಲೂಟೂತ್ ಸ್ಪೀಕರ್‌ಗಳು ಈಗಿನ ಜಮಾನದಲ್ಲಿ ಯುವಜನತೆಯನ್ನು ಅತಿ ಹೆಚ್ಚು ಆಕರ್ಷಿಸುತ್ತಿರುವ ಡಿವೈಸ್‌ಗಳೆನಿಸಿಕೊಂಡಿವೆ. ಇದೇ ಕಾರಣಕ್ಕೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ವಿವಿಧ ಮಾದರಿಯ ಬ್ಲೂಟೂತ್ ಸ್ಪೀಕರ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದೀಗ ಸ್ಕೈಬಾಲ್ ಕಂಪೆನಿ ಕೂಡ ಭಾರತದಲ್ಲಿ ಹೊಸ ಬ್ಲೂಟೂತ್ ಸ್ಪೀಕರ್‌ಗಳನ್ನು ಬಿಡುಗಡೆ ಮಾಡಿದೆ.
ಹೌದು, ಸ್ಕೈಬಾಲ್ ಕಂಪೆನಿ ಭಾರತದಲ್ಲಿ ಹೊಸ ಸ್ಕೈಬಾಲ್ ಪಾರ್ಟಿ ಬಾಕ್ಸ್ 400 ಅನ್ನು ಬಿಡುಗಡೆ ಮಾಡಿದೆ. ಈ ಬ್ಲೂಟೂತ್ ಸ್ಪೀಕರ್‌ಗಳು ಅತ್ಯಾಕರ್ಷಕವಾದ ಡಿಸೈನ್ ಹೊಂದಿದ್ದು, ಗಮನಸೆಳೆಯುವ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು 40W ಸೌಂಡ್ ಔಟ್‌ಪುಟ್ ಅನ್ನು ನೀಡುತ್ತದೆ, ಜೊತೆಗೆ ಟ್ರೂ 40W ಸೂಪರ್ ಬಾಸ್ ಧ್ವನಿಯನ್ನು ಹೊಂದಿದೆ. ಇನ್ನುಳಿದಂತೆ ಈ ಹೊಸ ಸ್ಪೀಕರ್ ಯಾವೆಲ್ಲಾ ಫೀಚರ್ಸ್‌ಗಳೊಂದಿಗೆ ಬರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಕೈಬಾಲ್ ಪಾರ್ಟಿ ಬಾಕ್ಸ್ 400 ಫೀಚರ್ಸ್ ಹೇಗಿದೆ?
ಸ್ಕೈಬಾಲ್ ಪಾರ್ಟಿ ಬಾಕ್ಸ್ 400 ಬ್ಲೂಟೂತ್ ಸ್ಪೀಕರ್ ಪೋರ್ಟಬಲ್ ಸ್ಪೀಕರ್ ಆಗಿದೆ. ಇದು 40W ಸೌಂಡ್ ಔಟ್‌ಪುಟ್ ಅನ್ನು ನೀಡಲಿದ್ದು, ಟ್ರೂ 40W ಸೂಪರ್ ಬಾಸ್ ಸೌಂಡ್ ಸಿಸ್ಟಂ ಅನ್ನು ಹೊಂದಿದೆ. ಇನ್ನು ಬ್ಲೂಟೂತ್ ಸ್ಪೀಕರ್ ಡೈನಾಮಿಕ್ ಬೂಸ್ಟ್ ಟೆಕ್ನಾಲಜಿಯಿಂದ ವರ್ಧಿಸಲ್ಪಟ್ಟ 360° ಸರೌಂಡ್ ಸ್ಟಿರಿಯೊ ಸೌಂಡ್ ಸೆಟಪ್ ಪಡೆದುಕೊಂಡಿದೆ. ಜೊತೆಗೆ ಈ ಪೋರ್ಟಬಲ್ ಸ್ಪೀಕರ್ ಉತ್ತಮ ಗುಣಮಟ್ಟದ ಡ್ರೈವರ್‌ಗಳನ್ನು ಹೊಂದಿದ್ದು, ಎರಡು 3-ಇಂಚಿನ ಟ್ವೀಟರ್‌ಗಳನ್ನು ಹೊಂದಿದೆ.
ಸ್ಕೈಬಾಲ್ ಪಾರ್ಟಿ ಬಾಕ್ಸ್ 400 ಬ್ಲೂಟೂತ್ ಸ್ಪೀಕರ್ ಡೈನಾಮಿಕ್ ಮಲ್ಟಿ-ಪಾರ್ಟಿ ಲೈಟ್ ಎಫೆಕ್ಟ್‌ಗಳಿಗಾಗಿ RGB ಲೈಟಿಂಗ್ ಅನ್ನು ಹೊಂದಿದೆ. ಇದರಿಂದ ಸ್ಪೀಕರ್ ಅತ್ಯಾಕರ್ಷಕವಾಗಿ ಕಾಣಲಿದೆ. ಇದಲ್ಲದೆ ದೀರ್ಘಕಾಲಿಕ ಬಾಳಿಕೆ ಹಾಗೂ ನೀರು ಮತ್ತು ಬೆವರಿನಿಂದ ರಕ್ಷಣೆ ನೀಡಲು ಇದು IPX5 ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದಲ್ಲದೆ ಪೋರ್ಟಬಿಲಿಟಿಗೆ ಸೇರಿಸಲು, ಹೊಸ ಸ್ಪೀಕರ್ ಬೆಲ್ಟ್ ಕಾರ್ಯಾಚರಣೆಯ ಬೆಂಬಲದೊಂದಿಗೆ ಡ್ಯುಯಲ್ ಗ್ರಿಪ್ ಹ್ಯಾಂಡಲ್ ಅನ್ನು ಇದರಲ್ಲಿ ಅಳವಡಿಸಲಾಗಿದೆ.
ಸ್ಕೈಬಾಲ್ ಪಾರ್ಟಿ ಬಾಕ್ಸ್ 400 ಸ್ಪೀಕರ್ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದರ ಬ್ಯಾಟರಿ ಪ್ಯಾಕ್ ಈ ಪೋರ್ಟಬಲ್ ಪಾರ್ಟಿ ಸ್ಪೀಕರ್‌ಗೆ ಶಕ್ತಿ ನೀಡುತ್ತದೆ. ಇದು 5 ಗಂಟೆಗಳವರೆಗೆ ಮ್ಯೂಸಿಕ್ ಪ್ಲೇ ಬ್ಯಾಕ್ ಅನ್ನು ನೀಡಲಿದೆ. ಜೊತೆಗೆ ಚಾರ್ಜ್ ಮಾಡಲು USB ಟೈಪ್-C ಪೋರ್ಟ್ ಅನ್ನು ಸಹ ಬೆಂಬಲಿಸಲಿದೆ. ಇನ್ನು ಈ ಬ್ಲೂಟೂತ್ ಸ್ಪೀಕರ್ 30m ವ್ಯಾಪ್ತಿಯನ್ನು ನೀಡುತ್ತದೆ. ಇದು ದೃಢವಾದ ಕನೆಕ್ಟಿವಿಟಿ ಆಯ್ಕೆಗಳು ಮತ್ತು ವಿಶಿಷ್ಟ ವಿನ್ಯಾಸದೊಂದಿಗೆ ಬರಲಿದೆ.
ಸ್ಕೈಬಾಲ್ ಪಾರ್ಟಿ 400 ಬೆಲೆ ಮತ್ತು ಲಭ್ಯತೆ
ಸ್ಕೈಬಾಲ್ ಪಾರ್ಟಿ 400 ಬ್ಲೂಟೂತ್ ಸ್ಪೀಕರ್‌ಗಳು ಭಾರತದಲ್ಲಿ 9,999 ರೂ ಬೆಲೆಯನ್ನು ಹೊಂದಿದೆ. ಇದು ಪ್ರಸ್ತುತ ಅಮೆಜಾನ್ ಮತ್ತು ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯವಿದೆ. ಆದರೆ ಕಂಪನಿಯು ಇದನ್ನು ಲಾಂಚ್ ಆಫರ್‌ನಲ್ಲಿ ಕೇವಲ 4,999ರೂ ಬೆಲೆಗೆ ಮಾರಾಟ ಮಾಡುತ್ತಿದೆ.
ಇನ್ನು ಇತ್ತೀಚಿನ ದಿನಗಳಲ್ಲಿ ಬ್ಲೂಟೂತ್ ಸ್ಪೀಕರ್‌ಗಳು ಸಾಕಷ್ಟು ಗಮನಸೆಳೆದಿವೆ. ಈ ಕಾರಣಕ್ಕೆ ಹಲವು ರೀತಿಯ ಬ್ಲೂಟೂತ್ ಸ್ಪೀಕರ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಆದರಿಂದ ನೀವು ಉತ್ತಮವಾದ ಬ್ಲೂಟೂತ್ ಸ್ಪೀಕರ್‌ಗಳನ್ನು ಖರೀದಿಸುವಾಗ ಹಲವು ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ನೀವು ಪ್ರಮುಖವಾಗಿ ಸ್ಪೀಕರ್‌ನ ಫೀಚರ್ಸ್‌ಗಳನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಆದರಿಂದ ಖರೀದಿಸುವ ಸಮಯದಲ್ಲಿ ಬ್ಲೂಟೂತ್ ಸ್ಪೀಕರ್‌ನಲ್ಲಿ ನೀಡುರುವ ಫೀಚರ್ಸ್‌ಗಳ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಿ ಮತ್ತು ಅದರ ವಿಶೇಷತೆಯೆನು ಎಂಬುದನ್ನು ಅರಿಯಿರಿ.
ಇನ್ನು ಬ್ಲೂಟೂತ್ ಸ್ಪೀಕರ್ಸ್ ತರಗಾಂತರಗಳ ಅಳತೆಯನ್ನು ಹರ್ಡ್ಜ್‌ನಲ್ಲಿ ಹೇಳುತ್ತಾರೆ ಸಾಮಾನ್ಯವಾಗಿ 100Hz - 20,000Hz ಅಂತರದಲ್ಲಿ ತರಗಾಂತರಗಳು ಇರುತ್ತದೆ. ಹೆಚ್ಚಿನ ಅಂತರದ ತರಗಾಂತರಗಳು ಕೇಳಲು ಅಷ್ಟಾಗಿ ಉತ್ತಮ ಎನಿಸುವುದಿಲ್ಲ. ಹೀಗಾಗಿ ನೀವು ಖರೀದಿಸುವ ಬ್ಲೂಟೂತ್ ಸ್ಪೀಕರ್ ಸಂಗೀತ ಸ್ಪಷ್ಟವಾಗಿ ಕೇಳುವಂತಿರುವ ತರಗಾಂತರದ ಅಂತರದಲ್ಲಿರಲಿ.


Click it and Unblock the Notifications








