ಸ್ಕೈಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಈಗಾಗಲೇ ನಿಮ್ಮ ಕಂಪ್ಯೂಟರ್ ಹ್ಯಾಕರ್ ಪಾಲು

|

ದಿನೇ ದಿನೇ ಇಂಟರ್ನೆಟ್ ಮತ್ತು ಕಂಪ್ಯೂಟರ್ ಬಳಕೆ ಅಧಿಕವಾಗುತ್ತಿರುವಂತೆ ನಮ್ಮ ಜೀವನವು ಹೆಚ್ಚಿನ ಅಪಾಯದಲ್ಲಿ ಸಿಲುಕಿಕೊಳ್ಳುತ್ತಿದೆ. ನಮ್ಮ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಗಳು ಯಾವುದೋ ಮೂಲಕದಿಂದ ಹ್ಯಾಕರ್ ಗಳ ಪಾಲಾಗುತ್ತಿದೆ ಎನ್ನಲಾಗಿದೆ.

ಸ್ಕೈಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಈಗಾಗಲೇ ನಿಮ್ಮ ಕಂಪ್ಯೂಟರ್ ಹ್ಯಾಕರ್ ಪಾಲು

ಬಹಳ ಹಿಂದಿನಿಂದಲೂ ನಮ್ಮ ಲ್ಯಾಪ್ ಟಾಪ್ ಮತ್ತು ಕಂಪ್ಯೂಟರ್ ಗಳಲ್ಲಿ ವಿಡಿಯೋ ಕಾಲಿಂಗ್ ಗಾಗಿ ಬಳಕೆ ಮಾಡಿಕೊಳ್ಳುತ್ತಿರುವ ಮೈಕ್ರೋ ಸಾಫ್ಟ್ ಒಡೆತನ ಸ್ಕೈಪ್ ಸೆಕ್ಯೂರಿಟಿ ಲೂಪ್ ಒಳಗೊಂಡಿದೆ ಎನ್ನಲಾಗಿದೆ. ವೈರಸ್ ಹಾಗೂ ಹ್ಯಾಕರ್ ಗಳನ್ನ ನಮ್ಮ ಕಂಪ್ಯೂಟರ್ ಒಳಗೆ ತೂರಿಕೊಳ್ಳಲು ಇದೇ ಕಾರಣ ಎನ್ನವ ಮಾಹಿತಿಯೂ ಬಹಿರಂಗಗೊಂಡಿದೆ.

ಸೆಕ್ಯೂರಿಟಿ ಲೂಪ್:

ಸೆಕ್ಯೂರಿಟಿ ಲೂಪ್:

ಸ್ಕೈಪ್‌ನಲ್ಲಿ ಸೆಕ್ಯೂರಿಟಿ ಲೂಪ್ ಇದೇ ಎನ್ನುವುದು ಮೈಕ್ರೋ ಸಾಫ್ಟ್ ಗೆ ಸಹ ತಿಳಿದಿದ್ದು, ಇನ್ನು ಸಹ ಸರಿ ಮಾಡುವಂತಹ ಪ್ರಯತ್ನಕ್ಕೆ ಮುಂದಾಗಿಲ್ಲ. ಶೀಘ್ರವೇ ಸರಿ ಮಾಡುವ ಸಾಧ್ಯತೆಯೂ ಇದೇ. ಈ ಹಿನ್ನಲೆಯಲ್ಲಿ ಸ್ಕೈಪ್ ಬಳಕೆಯನ್ನು ಕೊಂಚ ಕಡಿಮೆ ಮಾಡುವುದು ಉತ್ತಮವಾಗಿದೆ.

ಎಲ್ಲಾ ಕಂಪ್ಯೂಟರ್ ಗಳಿಗೂ ತೊಂದರೆ:

ಎಲ್ಲಾ ಕಂಪ್ಯೂಟರ್ ಗಳಿಗೂ ತೊಂದರೆ:

ಮ್ಯಾಕ್, ವಿಂಡೋಸ್ ಮತ್ತು ಲುನೆಕ್ಸ್ ಬಳಕೆ ಮಾಡಿಕೊಳ್ಳುತ್ತಿರುವ ಕಂಪ್ಯೂಟರ್ ಗಳಿಗೆ ಸ್ಕೈಪ್ ನಲ್ಲಿರುವ ಸೆಕ್ಯೂರಿಟಿ ಲೂಪ್ ಅನ್ನು ಬಳಕೆ ಮಾಡಿಕೊಂಡು ಹ್ಯಾಕರ್ಸ್ ದಾಳಿ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ನಿಮ್ಮ ಕಂಪ್ಯೂಟರ್ ಹೆಚ್ಚಿನ ತೊಂದರೆಯನ್ನು ಅನುಭವಿಸಲಿದೆ.

ಸಂಪೂರ್ಣ ಕಂಪ್ಯೂಟರ್ ನಿಯಂತ್ರಣ:

ಸಂಪೂರ್ಣ ಕಂಪ್ಯೂಟರ್ ನಿಯಂತ್ರಣ:

ಇದಲ್ಲದೇ ಸ್ಕೈಪ್ ಮೂಲಕ ಎಂಟ್ರಿ ಪಡೆಯುವ ಹ್ಯಾಕರ್ಸ್ ಗಳು ನಿಮ್ಮ ಕಂಪ್ಯೂಟರ್ ನ ಸಂಪೂರ್ಣ ನಿಯಂತ್ರಣವನ್ನು ಪಡೆಯಬಹುದಾಗಿದೆ. ಅಲ್ಲದೇ ಅವರು ನಿಮ್ಮ ಕಂಪ್ಯೂಟರ್ ನಲ್ಲಿರುವ ಮಾಹಿತಿಗಳನ್ನು ತಮ್ಮದಾಗಿಸಿಕೊಳ್ಳುವ ಸಾಧ್ಯತೆಯೂ ಅಧಿಕವಾಗಿದೆ.

ಹೊಸ ಆಪ್ ಡೇಟ್:

ಹೊಸ ಆಪ್ ಡೇಟ್:

ಈ ಸೆಕ್ಯೂಟರಿ ಲೂಪ್ ಅನ್ನು ನಿವಾರಿಸುವ ಸಲುವಾಗಿ ಮೈಕ್ರೋ ಸಾಫ್ಟ್ ಹೊಸದೊಂದು ಆಪ್ ಡೇಟ್ ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಬಗ್ ಗಳನ್ನು ತೆಗೆದು ಹಾಕಿ ನಿಮ್ಮ ಕಂಪ್ಯೂಟರ್ ಅನ್ನು ಸೆಕ್ಯೂರ್ ಮಾಡಲಿದೆ. ಈ ಹಿನ್ನಲೆಯಲ್ಲಿ ಹೊಸ ಆಪ್ ಡೇಟ್ ದೊರೆಯುವ ವರೆಗೂ ಸ್ಕೈಪ್ ಬಳಕೆ ಮಾಡಿಕೊಳ್ಳದೆ ಇರುವುದೇ ಉತ್ತಮ ಎನ್ನಲಾಗಿದೆ.

ಓದಿರಿ: ಮಳುಗಿದ ಟಿವಿ ಮಾರುಕಟ್ಟೆ: ಶಿಯೋಮಿಯಿಂದ 55 ಇಂಚಿನ, 4K UHD ಸ್ಮಾರ್ಟ್ ಟಿವಿ ರೂ.39,999ಕ್ಕೆ..!

Best Mobiles in India

English summary
Skype bug could allow hackers full control of PC. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X