Home
ಸುದ್ದಿಜಾಲ

Smart Pants: ಈ ಸ್ಮಾರ್ಟ್‌ಪ್ಯಾಂಟ್‌ನಲ್ಲಿ ಜಿಪ್‌ ಓಪನ್‌ ಆದ್ರೆ ಸಾಕು ಫೋನ್‌ಗೆ ನೋಟಿಫಿಕೇಶನ್‌ ಬರುತ್ತೆ!

ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ ಸೇರಿದಂತೆ ಅನೇಕ ಸ್ಮಾರ್ಟ್‌ಡಿವೈಸ್‌ಗಳನ್ನು ಬಳಕೆ ಮಾಡುತ್ತೇವೆ. ಈ ಸಾಲಿಗೆ ಇನ್ಮುಂದೆ ಸ್ಮಾರ್ಟ್‌ಪ್ಯಾಂಟ್‌ ಸೇರ್ಪಡೆಗೊಳ್ಳಲಿದೆ. ಈ ಸ್ಮಾರ್ಟ್‌ಪ್ಯಾಂಟ್‌ನಿಂದ ನಿಮಗೆ ಆಗುವ ಮುಜುಗರ ಸಹ ತಪ್ಪಲಿದೆ. ಅರೇ ಇದೇನಿದು ಸ್ಮಾರ್ಟ್‌ಪ್ಯಾಂಟ್‌ ಎಂದು ನೀವು ಖಂಡಿತಾ ಅಚ್ಚರಿ ಪಡುತ್ತೀರಾ ಅಲ್ವಾ.?

ಹೌದು, ಹೊಸದಾಗಿ ತಯಾರಿಸಲಾಗಿರುವ ಈ ಸ್ಮಾರ್ಟ್‌ ಪ್ಯಾಂಟ್ (Smart Pants) ನಿಮ್ಮನ್ನು ಮುಜುಗರದಿಂದ ರಕ್ಷಿಸುತ್ತದೆ. ಈ ತಂತ್ರಜ್ಞಾನಕ್ಕೆ ವೈಫ್ಲೈ (WiFly) ಎಂದು ಹೆಸರಿಡಲಾಗಿದ್ದು, ಇದರ ಮೂಲಕ ನಿಮ್ಮ ಜಿಪ್‌ ಅನ್ನು ಮೇಲ್ಪಿಚಾರಣೆ ಮಾಡಲಾಗುತ್ತದೆ. ಹಾಗಿದ್ರೆ, ಏನಿದು ಹೊಸ ತಂತ್ರಜ್ಞಾನ, ಇದು ಹೇಗೆ ಕೆಲಸ ಮಾಡುತ್ತದೆ.? ಇದು ಪ್ಯಾಂಟ್ ಧರಿಸುವವರಿಗೆ ಆಗುವ ಮುಜುಗರವನ್ನು ಹೇಗೆ ತಪ್ಪಿಸಲಿದೆ ಎಂಬಿತ್ಯಾದಿ ವಿಶೇಷ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಲೇಖನ ಓದಿರಿ.

ಈ ಸ್ಮಾರ್ಟ್‌ಪ್ಯಾಂಟ್‌ನಲ್ಲಿ ಜಿಪ್‌ ಓಪನ್‌ ಆದ್ರೆ ಸಾಕು ನೋಟಿಫಿಕೇಶನ್‌ ಬರುತ್ತೆ!

ಸ್ಮಾರ್ಟ್‌ಪ್ಯಾಂಟ್‌: ಗ್ಯಾಜೆಟ್‌ಗಳ ಸಾಲಿಗೆ ಈಗ ಬಟ್ಟೆಗಳೂ ಸಹ ಸೇರ್ಪಡೆ ಆಗುತ್ತಿವೆ. ಅದರಂತೆ ಈಗಾಗಲೇ ಹಲವಾರು ಜನರು ಸ್ಟೀಮ್ ಬಟ್ಟೆಗಳು, NFC-ಸಕ್ರಿಯಗೊಳಿಸಿದ ಶರ್ಟ್‌ಗಳು, ಆರೋಗ್ಯ-ಟ್ರ್ಯಾಕಿಂಗ್ ಬೂಟುಗಳು ಮತ್ತು ಜಾಕ್ವಾರ್ಡ್-ಸಕ್ರಿಯಗೊಳಿಸಿದ ಜಾಕೆಟ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ನಡುವೆ ಸ್ಮಾರ್ಟ್‌ಪ್ಯಾಂಟ್‌ ಸಹ ಮುನ್ನೆಲೆಗೆ ಬಂದಿದೆ. ಈ ವಿಭಾಗದಲ್ಲಿ ನಿಮ್ಮ ಪ್ಯಾಂಟ್‌ನ ಜಿಪ್‌ ನಿಮಗೆ ಅರಿವಿಲ್ಲದೆ ಕೆಳಗೆ ಜಾರಿದ್ದರೆ ನಿಮ್ಮನ್ನು ಎಚ್ಚರಿಸುತ್ತದೆ.

ಜಿಪ್ ಓಪನ್‌ ಆದಾಗ ಎಚ್ಚರಿಸುತ್ತದೆ: ಡುಪಾಂಟ್ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಪ್ಯಾಂಟ್‌ನ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ತೋರಿಸುವಂತೆ ಜಿಪ್‌ ಕೆಳಗೆ ಜಾರಿದ್ದ ವೇಳೆ ಬಳಕೆದಾರರ ಸ್ಮಾರ್ಟ್‌ಫೋನ್‌ ಪುಶ್ ನೋಟಿಫಿಕೇಶನ್‌ ಅನ್ನು ಕಳುಹಿಸಲಾಗುತ್ತದೆ. ಇದರಿಂದಾಗಿ ಎಚ್ಚೆತ್ತುಕೊಂಡ ಬಳಕೆದಾರರು ಜಿಪ್‌ ಅನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಈ ಬಗ್ಗೆ ಡುಪಾಂಟ್ ಅವರ ಸ್ನೇಹಿತರೊಬ್ಬರು ಸಲಹೆ ನೀಡಿದ್ದರಿಂದಾಗಿ ಇದನ್ನು ತಯಾರು ಮಾಡಲಾಗಿದೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ಮುಜುಗರದಿಂದ ಪಾರಾಗಬಹುದು: ಸಾಮಾನ್ಯವಾಗಿ ನಿತ್ಯವೂ ಒತ್ತಡದ ಬದುಕನ್ನು ನಡೆಸುವ ಅದೆಷ್ಟೋ ಮಂದಿ ಈ ರೀತಿಯ ಮುಜುಗರಕ್ಕೆ ಒಳಗಾಗುತ್ತಲೇ ಇರುತ್ತಾರೆ. ಯಾಕೆಂದರೆ ಪಕ್ಕದಲ್ಲಿರುವರು ಸಹ ನಿಮ್ಮ ಜಿಪ್‌ ಓಪನ್‌ ಆಗಿದೆ ಎಂದು ಹೇಳಲು ಸಂಕೋಚ ಪಡುವ ಕಾಲ ಇದಾಗಿದೆ. ಈ ಎಲ್ಲಾ ಸಮಸ್ಯೆಯಿಂದಾಗಿ ಈ ಡಿವೈಸ್‌ ಅತ್ಯಂತ ಸಹಕಾರಿಯಾಗಿದೆ. ಯಾಕೆಂದರೆ ಈ ಸೆನ್ಸರ್‌ ಮೂಲಕ ಜಿಪ್‌ ಏನಾದರೂ ಕೊಂಚ ಕೆಳಗೆ ಜಾರಿದರೂ ಸಹ ಎಚ್ಚೆತ್ತುಕೊಂಡು ಮುಜುಗರದಿಂದ ಪಾರಾಗಬಹುದು.

ಇದು ಹೇಗೆ ಕೆಲಸ ಮಾಡುತ್ತದೆ? : ಇದೇ ಟ್ವಿಟ್ಟರ್‌ ಬಳಕೆದಾರರು ಮತ್ತೊಂದು ಟ್ವೀಟ್‌ನಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ ಎಂದು ವಿವರಿಸಿದ್ದಾರೆ. ಅದರ ಪ್ರಕಾರ ಹಾಲ್ ಎಫೆಕ್ಟ್ ಸೆನ್ಸಾರ್‌ಗೆ ಕೆಲವು ಸುರಕ್ಷತಾ ಪಿನ್‌ಗಳನ್ನು ಅಂಟಿಸಿದ್ದಾರಂತೆ, ಜೊತೆಗೆ ಪವರ್ ಮ್ಯಾಗ್ನೆಟ್ ಅನ್ನು ಜಿಪ್ ಅನ್ನು ಬಳಕೆ ಮಾಡಲಾಗಿದ್ದು, ಇದು ಪಾಕೆಟ್‌ನಲ್ಲಿರುವ ESP-32 ಗೆ ಸಂಪರ್ಕಿಸುವ ತಂತಿಗಳನ್ನು ಒಳಗೊಂಡಿರಲಿದ್ದು, ಹಾಲ್ ಎಫೆಕ್ಟ್ ಸೆನ್ಸರ್ ಕೆಲವು ಸೆಕೆಂಡುಗಳ ಕಾಲ ಆನ್ ಆಗಿರುವಾದ ಅಂದರೆ ಜಿಪ್‌ ಓಪನ್ ಆಗಿರುವಾಗ ನೋಟಿಫಿಕೇಶನ್‌ಗಳನ್ನು ಕಳುಹಿಸುತ್ತದೆ.

ಇದರಿಂದ ಸಮಸ್ಯೆಯೂ ಇದೆ: ಈ ರೀತಿಯ ಸ್ಮಾರ್ಟ್ ಅಲರ್ಟ್ ಸೇವೆಯ ದೊಡ್ಡ ಸಮಸ್ಯೆ ಏನೆಂದರೆ ಈ ಡಿವೈಸ್‌ ಅಳವಡಿಕೆ ಮಾಡಿರುವ ಪ್ಯಾಂಟ್‌ಗಳನ್ನು ತೊಳೆಯುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಏಕೆಂದರೆ ನೀರಿನಿಂದಾಗಿ ಎಲೆಕ್ಟ್ರಾನಿಕ್ ಡಿವೈಸ್‌ಗಳು ಮತ್ತು ಸೆನ್ಸರ್‌ಗಳು ಖಂಡಿತಾ ಹಾನಿಗೆ ಒಳಗಾಗುತ್ತವೆ. ಅದರಲ್ಲೂ ಸೆನ್ಸರ್‌ ಮತ್ತು ESP-32 ಫೋನ್‌ಗೆ ಯಾವಾಗಲೂ ಸಂಪರ್ಕವನ್ನು ಹೊಂದಿರುವುದರಿಂದಾಗಿ ಇದು ಫೋನ್‌ನ ಬ್ಯಾಟರಿ ಬ್ಯಾಕಪ್‌ ಮೇಲೆಯೂ ಪರಿಣಾಮ ಬೀರುತ್ತದೆ.

ಈ ಸ್ಮಾರ್ಟ್‌ಪ್ಯಾಂಟ್‌ನಲ್ಲಿ ಜಿಪ್‌ ಓಪನ್‌ ಆದ್ರೆ ಸಾಕು ನೋಟಿಫಿಕೇಶನ್‌ ಬರುತ್ತೆ!

ಏನೇ ಆದರೂ ಈ ರೀತಿಯ ಹೊಸ ಹೊಸ ಆವಿಷ್ಕಾರಗಳು ಸಮಾಜಕ್ಕೆ ಒಂದಲ್ಲಾ ಒಂದು ಕೊಡುಗೆ ನೀಡುತ್ತವೆಯಾದರೂ ಅದರಲ್ಲಿ ಸಮಸ್ಯೆಗಳೂ ಸಹ ಇರುವುದನ್ನು ನಾವು ಕಾಣಬಹುದು. ಅದಾಗ್ಯೂ ಈ ರೀತಿಯ ಸ್ಮಾರ್ಟ್‌ಪ್ಯಾಂಟ್‌ಗಳನ್ನು ಎಷ್ಟು ಜನರು ಖರೀದಿ ಮಾಡಲು ಮುಂದಾಗುತ್ತಾರೋ ಕಾದುನೋಡಬೇಕಿದೆ. ಅದಾಗ್ಯೂ ಇದನ್ನು ಖರೀದಿ ಮಾಡಲು ಅಲ್ಲಿ ಇಲ್ಲಿ ಸರ್ಚ್‌ ಮಾಡಲು ಹೋಗಬೇಡಿ, ಯಾಕೆಂದರೆ ಇದನ್ನು ಇನ್ನೂ ಮಾರಾಟಕ್ಕೆ ಮುಕ್ತ ಮಾಡಿಲ್ಲ.

Best Mobiles in India

English summary
This newly designed smartpants will save you from embarrassment. It is called WiFly and will monitor your pant zip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+