ಭಾರತದಲ್ಲಿ 15000ರೂ ಒಳಗೆ ಖರೀದಿಸಬಹುದಾದ 30-40 ಇಂಚಿನ ಅತ್ಯುತ್ತಮ ಸ್ಮಾರ್ಟ್‌ಟಿವಿಗಳು!
ಟಿವಿ ಮಾರುಕಟ್ಟೆಯಲ್ಲಿ 30-40 ಇಂಚಿನ ಸ್ಮಾರ್ಟ್‌ಟಿವಿಗಳಿಗೆ ಉತ್ತಮ ಬೇಡಿಕೆಯಿದೆ. ಈ ಸಾಲಿನಲ್ಲಿ ಪ್ರಮುಖ ಬ್ರ್ಯಾಂಡ್‌ಗಳಾದ ಥಾಮ್ಸನ್, ಸ್ಯಾಮ್‌ಸಂಗ್ ನಂತಹ ಸ್ಮಾರ್ಟ್‌ಟಿವಿಗಳು ಬಜೆಟ್ ಬೆಲೆಯ ಪ್ರೈಸ್‌ಟ್ಯಾಗ್‌ನಲ್ಲಿ ಬರಲಿವೆ. ಇನ್ನು ಈ ಸ್ಮಾರ್ಟ್‌ಟಿವಿಗಳು LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ 2023 ಆವೃತ್ತಿ ಕೂಡ ಸೇರಿದೆ.
ಹೌದು, ಮಧ್ಯಮ ಶ್ರೇಣಿಯ ಬೆಲೆ ವಿಭಾಗದಲ್ಲಿ ಹಲವು ಸ್ಮಾರ್ಟ್‌ಟಿವಿಗಳು ಸಾಕಷ್ಟು ಸದ್ದು ಮಾಡುತ್ತಿವೆ. ಇವುಗಳಲ್ಲಿ ಥಾಮ್ಸನ್ ಬ್ರ್ಯಾಂಡ್ ಟಿವಿಗಳು ಹೆಚ್ಚು ಸೌಂಡ್ ಮಾಡುತ್ತಿದ್ದು, ಗ್ರಾಹಕರ ಗಮನಸೆಳೆದಿವೆ. ಈ ನಿಟ್ಟಿನಲ್ಲಿ ಥಾಮ್ಸನ್ FA ಸರಣಿ 80 cm, ಥಾಮ್ಸನ್ ಆಲ್ಫಾ 100cm, ಸ್ಮಾರ್ಟ್‌ಟಿವಿಗಳು ಕೂಡ ಬಜೆಟ್ ಬೆಲೆಯಲ್ಲಿ ದೊರೆಯುತ್ತಿವೆ. ಹಾಗಾದ್ರೆ ನೀವು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಸ್ಮಾರ್ಟ್‌ಟಿವಿಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಥಾಮ್ಸನ್ FA ಸರಣಿ 80 cm (32 ಇಂಚು)
ಈ ಸ್ಮಾರ್ಟ್‌ಟಿವಿಯು ಬಜೆಟ್ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಟಿವಿಗಳಲ್ಲಿ ಒಂದಾಗಿದೆ. ಇದರ ಮೂಲ ಬೆಲೆಯು 17,999ರೂ ಆಗಿದ್ದು, 44% ಡಿಸ್ಕೌಂಟ್ ಪಡೆದುಕೊಂಡಿದೆ. ಇದರಿಂದ ಸ್ಮಾರ್ಟ್‌ಟಿವಿಯು ನಿಮಗೆ ಕೇವಲ 9,999ರೂ ಬೆಲೆಯಲ್ಲಿ ದೊರೆಯಲಿದೆ. ಇದು ಗ್ರಾಹಕರನ್ನು ಬೆರಗುಗೊಳಿಸುವ ಹೈ-ಡೆಫಿನಿಷನ್ ದೃಶ್ಯಗಳು ಮತ್ತು HDR ತಂತ್ರಜ್ಞಾನದೊಂದಿಗೆ ಬರಲಿದೆ. ಜೊತೆಗೆ ಡಾಲ್ಬಿ ಡಿಜಿಟಲ್ ಪ್ಲಸ್‌ನಿಂದ 30W ಸೌಂಡ್ ಔಟ್‌ಪುಟ್ ನೀಡಲಿದೆ. ಇದಲ್ಲದೆ ವಿವಿಧ ಅಪ್ಲಿಕೇಶನ್‌ಗಳಿಗೆ ಕನೆಕ್ಟಿವಿಟಿಯನ್ನು ಸಹ ಬೆಂಬಲಿಸಲಿದೆ.
ಥಾಮ್ಸನ್ ಆಲ್ಫಾ 100 cm (40 ಇಂಚು)
ಥಾಮ್ಸನ್ ಆಲ್ಫಾ 100 cm (40 ಇಂಚು) ಫುಲ್ ಹೆಚ್‌ಡಿ LED ಸ್ಮಾರ್ಟ್ ಲಿನಕ್ಸ್ ಟಿವಿ 2023 ಆವೃತ್ತಿಯೊಂದಿಗೆ ಬರಲಿದೆ. ಈ ಸ್ಮಾರ್ಟ್‌ಟಿವಿಯು ಫ್ಲಿಪ್‌ಕಾರ್ಟ್‌ನಲ್ಲಿ 22% ರಿಯಾಯಿತಿ
ಪಡೆದುಕೊಂಡಿದೆ ಆದರಿಂದ 17,999ರೂ ಮೂಲಬೆಲೆಯ ಸ್ಮಾರ್ಟ್‌ಟಿವಿ ನಿಮಗೆ ಕೇವಲ 13,999ರೂ ಬೆಲೆಯಲ್ಲಿ ದೊರೆಯಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ನಿಮ್ಮ ಮನೆಯ ಸೌಕರ್ಯದಲ್ಲಿ ಸಿನಿಮಾ ತರಹದ ಅನುಭವವನ್ನು ನೀಡಲಿದೆ. ಇದರಲ್ಲಿರುವ HD-ರೆಸಲ್ಯೂಶನ್ ನಿಮ್ಮ ವೀಕ್ಷಣಾ ಅನುಭವವನ್ನು ಸುಧಾರಿಸಲಿದೆ. ಜೊತೆಗೆ ನಿಮ್ಮ ಲಿವಿಂಗ್ ರೂಮಿನ ವಿನ್ಯಾಸಕ್ಕೆ ದೃಷ್ಟಿಗೆ ಇಷ್ಟವಾಗುವ ಜೊತೆಗೆ ಆಕರ್ಷಕವಾದ ಬೆಜೆಲ್-ಲೆಸ್ ಸ್ಕ್ರೀನ್ ಅನ್ನು ಹೊಂದಿದೆ.
SAMSUNG 80 cm (32 ಇಂಚು)
SAMSUNG 80 cm (32 ಇಂಚು) ಸ್ಮಾರ್ಟ್‌ಟಿವಿಯು ಮಿಡ್‌ರೇಂಜ್ ಪ್ರೈಸ್‌ಟ್ಯಾಗ್‌ನಲ್ಲಿ ಬರಲಿದೆ. ಈ ಸ್ಮಾರ್ಟ್‌ಟಿವಿಯು ಬೆಜೆಲ್-ಮುಕ್ತ ವಿನ್ಯಾಸದೊಂದಿಗೆ ಬರಲಿದೆ. ಇದು ಫ್ಲಿಪ್‌ಕಾರ್ಟ್‌ನಲ್ಲಿ 20% ಡಿಸ್ಕೌಂಟ್ ಪಡೆದುಕೊಂಡಿದೆ. ಇದರಿಂದ 18,900ರೂ ಬೆಲೆ ಬದಲಿಗೆ ಕೇವಲ 14,990ರೂ ಬೆಲೆಯಲ್ಲಿ ದೊರೆಯಲಿದೆ. ಈ ಸ್ಮಾರ್ಟ್‌ಟಿವಿಯು ನಿಮಗೆ ಹೋಮ್ ಥಿಯೇಟರ್ ಅನುಭವವನ್ನು ನೀಡುತ್ತದೆ. ಈ ಟಿವಿಯ HD ದೃಶ್ಯ ಗುಣಮಟ್ಟದೊಂದಿಗೆ, ನೀವು ರೋಮಾಂಚಕ ಚಲನಚಿತ್ರ ದೃಶ್ಯಗಳನ್ನು ಆನಂದಿಸಬಹುದು. ಇದಲ್ಲದೆ, ಈ ಟಿವಿಯಲ್ಲಿನ ಕಾಂಟ್ರಾಸ್ಟ್ ವರ್ಧಕವು ಕಾಂಟ್ರಾಸ್ಟ್ ಅನ್ನು ಸುಧಾರಿಸುತ್ತದೆ.
MOTOROLA 80 cm (32 ಇಂಚು)
MOTOROLA 80 cm (32 ಇಂಚು) ಸ್ಮಾರ್ಟ್‌ಟಿವಿಯು ಫ್ಲಿಪ್‌ಕಾರ್ಟ್‌ನಲ್ಲಿ 45% ರಿಯಾಯಿತಿಯನ್ನು ಪಡೆದುಕೊಂಡಿದೆ. ಇದರಿಂದ 20,000ರೂ ಮೂಲ ಬೆಲೆಯ ಬದಲಿಗೆ ಕೇವಲ 10,999ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್‌ಟಿವಿಯು ಬೆಜೆಲ್-ಲೆಸ್ ಡಿಸ್‌ಪ್ಲೇಯಲ್ಲಿ ಅತ್ಯುತ್ತಮ ವೀಕ್ಷಣೆಯನ್ನು ನೀಡಲಿದೆ. ಇದು HDR10 TV ಸ್ಫಟಿಕ-ಸ್ಪಷ್ಟ ಪ್ರದರ್ಶನವನ್ನು ನೀಡಲಿದ್ದು, 16.7 ಮಿಲಿಯನ್ ರೋಮಾಂಚಕ ಬಣ್ಣಗಳನ್ನು ಹೊಂದಿದೆ. ಇದು 178 ಡಿಗ್ರಿ ಅಗಲದ ವ್ಯೂ ಆಂಗಲ್ ನೀಡಲಿದೆ. ಜೊತೆಗೆ ಡಾಲ್ಬಿ ತಂತ್ರಜ್ಞಾನವನ್ನು ಹೊಂದಿದ್ದು, 20 ವ್ಯಾಟ್ ಸ್ಪೀಕರ್‌ಗಳನ್ನು ಸಹ ಒಳಗೊಂಡಿದೆ.


Click it and Unblock the Notifications








